Bengaluru: ಕಸದ ಬುಟ್ಟಿಯಲ್ಲಿ ಡೌನ್ಲೋಡ್, ಸರ್ಚ್ ಕನ್ಫ್ಯೂಸ್ ಆದ ಜನರು

By Suvarna NewsFirst Published Jul 13, 2023, 2:46 PM IST
Highlights

ತಂತ್ರಜ್ಞಾನ ಮುಂದುವರೆದಂತೆ ಜನರ ಆಲೋಚನೆ ಕೂಡ ಬದಲಾಗ್ತಿದೆ. ಜನರ ಮನಸ್ಥಿತಿಗೆ ತಕ್ಕಂತೆ ಪರಿಸರದಲ್ಲಿ ಬದಲಾವಣೆಯಾಗ್ತಿದೆ. ಈಗ ಕಸದ ಡಬ್ಬ ಗಮನ ಸೆಳೆದಿದೆ. ಡಿಜಿಟಲ್ ಹೆಸರುಗಳು ಜನರಲ್ಲಿ ನಾನಾ ಪ್ರಶ್ನೆ ಹುಟ್ಟುಹಾಕಿವೆ.
 

ತಂತ್ರಜ್ಞಾನ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಇಂಟರ್ನೆಟ್, ತಂತ್ರಜ್ಞಾನವಿಲ್ಲದೆ ನಮ್ಮ ಜೀವನ ಇಲ್ಲ ಎನ್ನುವಂತಾಗಿದೆ. ಸಣ್ಣ ಸಣ್ಣ ವಿಷ್ಯವನ್ನೂ ಜನರು ಇಂಟರ್ನೆಟ್ ನಲ್ಲಿ ಸರ್ಚ್ ಮಾಡ್ತಾರೆ. ಅಗತ್ಯವಿರುವ ಫೋಟೋ, ವಿಡಿಯೋಗಳನ್ನು ಡೌನ್ಲೋಡ್ ಮಾಡ್ತಾರೆ. ಸರ್ಚ್, ಅನ್ ಲಾಕ್, ಡೌನ್ಲೋಡ್, ಡಿಲಿಟ್ ಹೀಗೆ ತಂತ್ರಜ್ಞಾನದ ಪದಗಳು ಜನರ ದಿನಬಳಕೆ ಮಾತುಗಳಲ್ಲಿ ಸೇರಿಕೊಂಡಿವೆ. 

ಮನಸ್ಸಿನಿಂದ ಈ ವಿಷ್ಯವನ್ನು ಡಿಲಿಟ್ (Delete) ಮಾಡು, ಅದೇನು ಅಂತಾ ಒಮ್ಮೆ ಮೈಂಡ್ ನಲ್ಲಿ ಸರ್ಚ್ ಮಾಡು, ಇಷ್ಟವಾದ್ರೆ ಇದನ್ನು ಡೌನ್ಲೋಡ್ (Download) ಮಾಡು ಹೀಗೆ ಯುವಜನರ  ಬಾಯಲ್ಲಿ ನೀವು ಈ ಡಿಜಿಟಲ್ ಪದಗಳನ್ನು ಕೇಳ್ಬಹುದು. ಬರಿ ಪದಬಳಕೆ ಮಾತ್ರವಲ್ಲ ಜನರು ತಮ್ಮ ಪ್ರತಿಯೊಂದು ಕೆಲಸದಲ್ಲೂ ತಂತ್ರಜ್ಞಾನದ ಬೆಂಬಲವನ್ನು ಪಡೆದುಕೊಳ್ಳಲು ಆರಂಭಿಸಿದ್ದಾರೆ. ತಂತ್ರಜ್ಞಾನವಿಲ್ಲದೆ ನಮ್ಮ ಜೀವನ (Life) ಶೂನ್ಯವೆಂದ್ರೆ ಅತಿಶಯೋಕ್ತಿ ಆಗಲಾರದು. 

Latest Videos

ಮರದ ಟ್ರೆಡ್‌ಮಿಲ್ ತಯಾರಿಸಿದ ಕೇರಳದ ವ್ಯಕ್ತಿ, ಇದರಲ್ಲಿ ಓಡೋಕೆ ವಿದ್ಯುತ್, ಬ್ಯಾಟರಿ ಯಾವ್ದೂ ಬೇಡ!

ಬೆಂಗಳೂರು, ದೆಹಲಿ, ಇಂದೋರ್, ಜೈಪುರ, ಕೋಲ್ಕತ್ತಾ, ಲಕ್ನೋ, ಅಹಮದಾಬಾದ್, ಪುಣೆ, ಇತ್ಯಾದಿ ನಗರಗಳನ್ನು ಒಳಗೊಂಡಿರುವ ಭಾರತದ ಮೆಟ್ರೋಪಾಲಿಟನ್ ನಗರಗಳಿಂದ ಹಳ್ಳಿಗಳವರೆಗೆ ಬಹುತೇಕ ಎಲ್ಲರೂ ಡಿಜಿಟಲೀಕರಣಗೊಂಡಿದ್ದಾರೆ. ಭಾರತದ ಮೂಲೆ ಮೂಲೆಗಳಿಗೆ ಇಂಟರ್ನೆಟ್ ಸಂಪರ್ಕವಿದ್ದು, ಜನರು ಅದ್ರಲ್ಲಿ ಮುಳುಗೇಳ್ತಿದ್ದಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ಒಂದಿಷ್ಟು ಫೋಟೋಗಳು ಹರಿದಾಡ್ತಿವೆ. ಅವು ಜನಸಾಮಾನ್ಯರನ್ನು ಅಚ್ಚರಿಗೊಳಿಸಿವೆ. ತ್ಯಾಜ್ಯ ಹಾಗೂ ತಂತ್ರಜ್ಞಾನಕ್ಕೆ ನಂಟಿದೆಯಾ ಎಂಬ ಪ್ರಶ್ನೆಯನ್ನು ಇದು ಹುಟ್ಟುಹಾಕಿದೆ. 

ಭಾರತದ ಬೀದಿ ಬೀದಿಗಳಲ್ಲಿ ನಾವು ಕಸದ ತೊಟ್ಟಿಯನ್ನು ನೋಡ್ಬಹುದು. ಕೆಲವು ಕಡೆ ಕಸದತೊಟ್ಟಿ ಆಕರ್ಷಣೀಯವಾಗಿರುತ್ತದೆ. ವಿಭಿನ್ನ ಶೈಲಿಯ ಕಸದ ತೊಟ್ಟಿಗಳನ್ನು ಮಾಲ್ ಸೇರಿದಂತೆ ಬೀದಿ ಬದಿಯಲ್ಲಿ ಹಾಕಿರ್ತಾರೆ. ಈಗ ಬೆಂಗಳೂರು, ದೆಹಲಿ, ಇಂದೋರ್, ಜೈಪುರ, ಕೋಲ್ಕತ್ತಾ, ಲಕ್ನೋ, ಅಹಮದಾಬಾದ್, ಪುಣೆ ಸೇರಿದಂತೆ ಭಾರತದ ಕೆಲ ನಗರಗಳಲ್ಲಿನ ಸಾರ್ವಜನಿಕ ಕಸದ ತೊಟ್ಟಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆ ಕಸದ ತೊಟ್ಟಿಯಲ್ಲಿ ಕಂಡು ಬಂದ ದೃಶ್ಯ ಜನರ ಕುತೂಹಲ ಹೆಚ್ಚಿಸಿದೆ. ಕಸದ ತೊಟ್ಟಿಯನ್ನು ಜನರು ಬಗ್ಗಿ ನೋಡುವಂತಾಗಿದೆ. ಕಸದತೊಟ್ಟಿಯಲ್ಲಿ ನೀವು `ಡೌನ್‌ಲೋಡ್', 'ಅನ್‌ಲಾಕ್' ಮತ್ತು 'ಸರ್ಚ್' ಬಟನ್‌ಗಳು ಕಾಣಬಹುದಾಗಿದೆ.  

ನೀವು ತಿನ್ನೋ ಸ್ಟೈಲ್ ನಿಮ್ಮ ಪರ್ಸನಾಲಿಟಿ ಹೆಂಗಿದೆ ಅಂತ ಹೇಳುತ್ತೆ!

ಮೊದಲ ಬಾರಿ ಈ ಡಬ್ಬ, ಐಟಿ ಹಬ್, ನಮ್ಮ ಬೆಂಗಳೂರಿನಲ್ಲಿ ಕಾಣಿಸಿಕೊಂಡಿತ್ತು. ಅದು ಏನು ಅಂತಾ ಜನರು ಕುತೂಹಲದಿಂದ ನೋಡಿದ್ದಾರೆ. ಇದಾದ್ಮೇಲೆ ಒಂದೊಂದೇ ನಗರಗಳಿಂದ ಫೋಟೋ ಬರ್ತಿದೆ.  ಸ್ವಪ್ನ ಸಿಂಗ್ ಎನ್ನುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಇದ್ರ ವಿಡಿಯೋ ಹಂಚಿಕೊಂಡಿದ್ದಾರೆ. ಹೇ ಬೆಂಗಳೂರು! ನಿಮ್ಮ ನಗರದಲ್ಲಿ ಏನು ನಡೆಯುತ್ತಿದೆ? ನಾನು ನಿಮ್ಮ ನಗರಕ್ಕೆ ಬಂದಾಗ ಕಸದ ತೊಟ್ಟಿಗಳಲ್ಲಿ ಅನ್‌ಲಾಕ್, ಡೌನ್‌ಲೋಡ್ ಮತ್ತು ಸರ್ಚ್ ಬಟನ್‌ಗಳನ್ನು ನೋಡಿದೆ. ಅದೇನು ದಯವಿಟ್ಟು ವಿವರಿಸಿ ಎಂದು ಶೀರ್ಷಿಕೆ ಹಾಕಿದ್ದಾರೆ.  ಇಷ್ಟೇ ಅಲ್ಲ ಬಲರಾಮ್ ಶರ್ಮಾ ಸೇರಿದಂತೆ ಅನೇಕರು ತಮ್ಮ ಖಾತೆಯಲ್ಲಿ ಈ ಕಸದಡಬ್ಬಿಯ ವಿಡಿಯೋ ಹಂಚಿಕೊಂಡಿದ್ದಾರೆ. ಈ ನಗರಗಳು ಡಿಜಿಟಲ್ ಡಿಟಾಕ್ಸ್ ಅನ್ನು ಪರಿಗಣಿಸುತ್ತಿವೆಯೇ? ಅಥವಾ ತ್ಯಾಜ್ಯ ಮತ್ತು ತಂತ್ರಜ್ಞಾನದ ನಡುವೆ ಸಂಪರ್ಕವಿದೆಯೇ? ಎಂಬ ಪ್ರಶ್ನೆ ಜನರನ್ನು ಕಾಡ್ತಿದೆ.

ಈ ಡಬ್ಬಗಳ ಉಪಯೋಗವೇನು, ಇದನ್ನು ಯಾಕೆ ಬಳಸಬೇಕು ಎನ್ನುವ ಬಗ್ಗೆ ಜನರಲ್ಲಿ ಚರ್ಚೆ ನಡೆಯುತ್ತಿದೆ. ಜನರ ಕುತೂಹಲವನ್ನು ಇದು ಹೆಚ್ಚಿಗೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ (Social Media) ಅನೇಕ ಊಹಾಪೋಹಗಳು ಕೇಳಿ ಬರ್ತಿವೆ. ಡಿಜಿಟಲ್ ವಸ್ತುಗಳಿಂದ (Digital Items) ವಿರಾಮ ತೆಗೆದುಕೊಳ್ಳಲು  ಹೊಸ ಮಾರ್ಗವನ್ನು ಪ್ರಯತ್ನಿಸುತ್ತಿದೆ ಎಂದು ಕೆಲವರು ಹೇಳಿದ್ರೆ ಮತ್ತೆ ಕೆಲವರು ಡಿಜಿಟಲ್ ತಂತ್ರಜ್ಞಾನದಲ್ಲಿ ಹೊಸ ಮತ್ತು ದೊಡ್ಡ ಹೆಜ್ಜೆ, ಪ್ರಗತಿಯ ಸಂಕೇತವಾಗಿ ಎನ್ನಲಾಗ್ತಿದೆ. 
 

Hey Bangalore! What's going on in your city? I am traveling to your city and what do I see the unlock, download, and search buttons in garbage bins! Sigh. Explain please. pic.twitter.com/K8MitUa11n

— Sapana Singh (@Sapanasinghj)
click me!