ಇರಾನ್‌ನಲ್ಲಿ ಹಿಜಾಬ್ ವಿರುದ್ಧ ಪ್ರತಿಭಟಿಸಿದ ಮಹಿಳೆಯೊಬ್ಬರು ನಾಪತ್ತೆಯಾಗಿದ್ದು, ಅವರ ಗುರುತು ಪತ್ತೆಯಾಗಿಲ್ಲ. ವರದಿಗಳ ಪ್ರಕಾರ, ಅರೆಸೇನಾ ಪಡೆಗಳು ಆಕೆಯ ಮೇಲೆ ಹಲ್ಲೆ ನಡೆಸಿ, ಬಟ್ಟೆ ಹರಿದಿವೆ.
ತೆಹ್ರಾನ್: ಇರಾನ್ ಸರ್ಕಾರದ ಕಟ್ಟುನಿಟ್ಟಿನ ಹಿಜಾಬ್ ನಿಯಮ ಹಾಗೂ ನೈತಿಕ ಪೊಲೀಸ್‌ಗಿರಿಯ ವಿರುದ್ಧ ತುಂಡುಡುಗೆ ಧರಿಸಿ ಪ್ರತಿಭಟಿಸಿದ್ದ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದ್ದು, ಈಗ ಆಕೆಯ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿ ಲಭಿಸುತ್ತಿಲ್ಲ. ಜೊತೆಗೆ ಆಕೆಯ ಗುರುತು ಕೂಡ ಪತ್ತೆಯಾಗಿಲ್ಲ. ಕೆಲ ವರದಿಗಳ ಪ್ರಕಾರ ಇಸ್ಲಾಮಿಕ್ ಆಜಾದ್ ವಿವಿಯಲ್ಲಿ ಅರೆಸೇನಾ ಪಡೆಗಳು ಆಕೆಯ ಮೇಲೆ ಹಲ್ಲೆ ನಡೆಸಿದ್ದು, ಶಿರವಸ್ತ್ರ ಹಾಗೂ ಬಟ್ಟೆ ಹರಿಯಲಾಗಿದೆ.
ಅನ್ಯಾಯ ಆಗುತ್ತಿದೆ: ಕೋರ್ಟಲ್ಲಿ ಇಮ್ರಾನ್ ಪತ್ನಿ ಬೀಬಿ ಕಣ್ಣೀರು
ಇಸ್ಲಾಮಾಬಾದ್: ಸದ್ಯ ಬಂಧನದಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜಾಮೀನು ದೊರಕಿಸಲು ನ್ಯಾಯಾಲಯಕ್ಕೆ ಬಂದಿದ್ದ ಅವರ ಪತ್ನಿ ಬುಶ್ರಾ ಬೀಬಿ ಅಸಹಾಯಕರಾಗಿ ನ್ಯಾಯಾಲಯದಲ್ಲೇ ಕಣ್ಣೀರಿಟ್ಟ ಘಟನೆ ನಡೆದಿದೆ. 'ನ್ಯಾಯವನ್ನು ಒದಗಿಸಬೇಕಾದವರಿಂದಲೇ ನನಗೆ ಕಳೆದ 9 ತಿಂಗಳಿಂದ ಅನ್ಯಾಯವಾಗುತ್ತಿದೆ. ನನಗೆ ಹಾಗೂ ನನ್ನ ಪತಿಗೆ ಅನ್ಯಾಯವಾಗಿ ಶಿಕ್ಷೆ ವಿಧಿಸಲಾಗಿದೆ. ನಾನಿಲ್ಲಿ ನ್ಯಾಯ ಕೇಳಲು ಬಂದಿಲ್ಲ. ನಮ್ಮ ಪರವಾಗಿ ವಾದ ಮಂಡಿಸುವ ವಕೀಲರು ಕೂಡ ಕೇವಲ ಕಾಲಹರಣ ಮಾಡುತ್ತಿದ್ದಾರೆ ಎನ್ನುತ್ತಾ ಬೀಬಿ ಇಸ್ಲಾಮಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಹನಿಗಣ್ಣಾಗಿದ್ದಾರೆ.
ಮದರಸಾ ಕಾಯ್ದೆಯ ಸಂವಿಧಾನ ಸಿಂಧುತ್ವ: ಇಂದು ಸುಪ್ರೀಂ ತೀರ್ಪು
ನವದೆಹಲಿ: ಮದರಸಾಗಳ ಕುರಿತ 2004ರ ಉತ್ತರ ಪ್ರದೇಶದ ಕಾನೂನನ್ನು ಅಸಂವಿಧಾನಿಕ ಎಂದು ಘೋಷಿಸಿದ್ದ ಅಲಹಾಬಾದ್ ಹೈಕೋರ್ಟ್ ತೀರ್ಪ ನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ತೀರ್ಪನ್ನು ನ. 5ರಂದು ಸುಪ್ರೀಂ ಕೋರ್ಟ್ ಪ್ರಕಟಿಸಲಿದೆ. ಮಾ.22 ರಂದು, ಅಲಹಾಬಾದ್ ಹೈಕೋರ್ಟ್ ಈ ಕಾನೂನನ್ನು 'ಅಸಂವಿಧಾನಿಕ' ಮತ್ತು ಜಾತ್ಯತೀತತೆ ತತ್ವವನ್ನು ಉಲ್ಲಂಘಿಸುತ್ತದೆ ಎಂದು ಘೋಷಿಸಿತ್ತು ಮತ್ತು ಔಪಚಾರಿಕ ಶಾಲಾ ವ್ಯವಸ್ಥೆಯಲ್ಲಿ ಮದರಸಾ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸು ವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಏ.5 ರಂದು ಸಿಜೆಐ ನೇತೃತ್ವದ ಪೀಠ ಈ ತೀರ್ಪಿಗೆ ತಡೆ ನೀಡಿ 17 ಲಕ್ಷ ವಿದ್ಯಾರ್ಥಿಗಳಿಗೆ ರಿಲೀಫ್ ನೀಡಿತ್ತು.