ಗೊತ್ತಿಲ್ದೇ ಇರೋ ಹುಡುಗಿಗೆ ತಾಳಿ ಕಟ್ತೀವಿ, ಆಗ ಪ್ರೀತಿ ಅನ್ನೋದೇ ಇರಲ್ಲ... ಜೀವನದ ಬಗ್ಗೆ ಸುದೀಪ್​ ಹೇಳಿದ್ದೇನು?

By Suchethana D  |  First Published Nov 4, 2024, 9:41 PM IST

ಪರಿಚಯವೇ ಇಲ್ಲದ ಹುಡುಗಿಗೆ ತಾಳಿ ಕಟ್ಟಿ ಆಕೆಯ ಜೊತೆ ಬಾಳಬೇಕು... ಜೀವನದ ಕುತೂಹಲದ ಬಗ್ಗೆ ಸುದೀಪ್​ ಹೇಳಿದ್ದೇನು?
 


ಸುದೀಪ್​ ಅವರು ಸದ್ಯ ಬಿಗ್​ಬಾಸ್​ 11ನೇ ಸೀಸನ್​ನಲ್ಲಿ ಬಿಜಿ ಆಗಿದ್ದಾರೆ. ಇದರ ಜೊತೆಗೆ ಹಲವಾರು ಪ್ರಾಜೆಕ್ಟ್​ಗಳನ್ನೂ ನಿಭಾಯಿಸುತ್ತಿದ್ದಾರೆ. ಇನ್ನು ಇವರ ಕೌಟುಂಬಿಕ ಜೀವನದ ಕುರಿತು ಹೇಳುವುದಾದರೆ,  ಇವರ ಪತ್ನಿ ಪ್ರಿಯಾ. ಮದುವೆಯಾಗಿ 23 ವರ್ಷಗಳಾಗಿವೆ.  2001ರ ಅಕ್ಟೋಬರ್ 18 ರಂದು ಇವರ ಮದುವೆಯಾಗಿದೆ.  ಮದುವೆ ಆಗಿ ಮೂರು ವರ್ಷದ ಬಳಿಕ ಈ ಜೋಡಿಗೆ ಮಗಳು ಹುಟ್ಟಿದ್ದು, ಅವರ ಹೆಸರು ಸಾನ್ವಿ. ಸುಖಮಯ ದಾಂಪತ್ಯ ಜೀವನ ನಡೆಸುತ್ತಿರುವ ಸುದೀಪ್​ ಅವರು ಬದುಕಿನ ಒಂದು ಸತ್ಯವನ್ನು ಹೇಳಿದ ಹಳೆಯ ವಿಡಿಯೋ ಇದೀಗ ಮತ್ತೆ ವೈರಲ್​ ಆಗುತ್ತಿದೆ. ಜೀವನ ಎಂದರೇನು ಎನ್ನುವುದನ್ನು ಇದರಲ್ಲಿ ಅವರು ಹೇಳಿದ್ದಾರೆ. ಈಗ ಸಾಮಾನ್ಯವಾಗಿ ಲವ್​ ಮ್ಯಾರೇಜ್​ಗಳು ಹೆಚ್ಚಾಗಿದ್ದರೂ, ಅರೆಂಜ್ಡ್​​ ಮ್ಯಾರೇಜ್​ಗಳು ಕೂಡ ಪ್ರೇಮ ವಿವಾಹಕ್ಕಿಂತಲೂ ಹೆಚ್ಚಾಗಿಯೇ ಇವೆ. ಅಂಥ ಸಂದರ್ಭಗಳಲ್ಲಿ ಗೊತ್ತಿಲ್ಲದೇ ಇರುವ ಹುಡುಗಿಯ ಜೊತೆ ಹೇಗೆ ಲೈಫ್​ ನಡೆಸಬೇಕು, ಜೀವನ ಎನ್ನುವ ವಿಚಿತ್ರ ಹೇಗಿದೆ ಎನ್ನುವ ಬಗ್ಗೆ ಸುದೀಪ್​ ಈ ವಿಡಿಯೋದಲ್ಲಿ ಮಾತನಾಡಿದ್ದಾರೆ. 

ಕೆಲ ವರ್ಷಗಳ ಹಿಂದಿನ ಈ ವಿಡಿಯೋ ಅನ್ನು ಅರಿವು ಕನ್ನಡ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಲಾಗಿದೆ. ಇದರಲ್ಲಿ ಸುದೀಪ್​ ಅವರು, ಯಾವುದೋ ಗೊತ್ತಿಲ್ಲದ ಹುಡುಗಿಗೆ ತಾಳಿ ಕಟ್ಟುವ ಜೀವನದ ಕುತೂಹಲ ಹಾಗೂ ವಿಚಿತ್ರ ಸನ್ನಿವೇಶವನ್ನು ಶೇರ್ ಮಾಡಿದ್ದಾರೆ. ಯಾವುದೋ ಗೊತ್ತಿಲ್ಲದ ಹುಡುಗಿಗೆ ತಾಳಿ ಕಟ್ಟುತ್ತೇವೆ. ತಾಳಿ ಕಟ್ಟುವ ಸಮಯದಲ್ಲಿ  ನಮ್ಮಿಬ್ಬರ ಮಧ್ಯೆ ಪ್ರೀತಿ ಅನ್ನೋದೇ ಇರಲ್ಲ.  ಏಕೆಂದ್ರೆ ಆಕೆ ಪರಿಚಯವಾಗಿದ್ದೇ ಮದುವೆ ಅಕ್ಕ-ಪಕ್ಕದ ದಿನಗಳಲ್ಲಿ ಆಗಿರತ್ತೆ. ಇದು ಶೇಕಡಾ 90ರಷ್ಟು ಜನರ ಜೀವನದಲ್ಲಿ ನಡೆಯುವಂಥ ಕಟು ಸತ್ಯ ಎಂದಿದ್ದಾರೆ ಸುದೀಪ್​. 

Tap to resize

Latest Videos

undefined

ಇದು ಕೊನೆ ಮಾತು... ನಾನು ಸತ್ರೆ ನಿಮಗೇ ಶಾಪ ತಟ್ಟೋದು... ಗುರುಪ್ರಸಾದರ ಹಳೆ ವಿಡಿಯೋ ವೈರಲ್​

ಆಕೆ ಯಾರು, ಅವಳ ಟೇಸ್ಟ್​ ಎಂಥದ್ದು ಯಾವುದೂ ಗೊತ್ತಿರುವುದಿಲ್ಲ.  ನಾವಿಬ್ಬರೂ ಒಟ್ಟಿಗೇ ಬದುಕಲು ಆಗತ್ತಾ ಅನ್ನೋದೂ ತಿಳಿದಿರಲಿಲ್ಲ. ಜೀವನ ಪೂರ್ತಿ ಒಟ್ಟಿಗೇ ಇರಬೇಕು. ಒಂದೇ  ರೂಮ್ ಶೇರ್​ ಮಾಡಬೇಕು. ಬಾತ್​ರೂಮ್​, ಬೆಡ್​ರೂಮ್​ ಎಲ್ಲವೂ ಅವಳ ಜೊತೆ ಶೇರ್​ ಮಾಡಬೇಕು. ಅವಳ  ಇಂಟರೆಸ್ಟ್​ ಗೊತ್ತಿರಲ್ಲ, ಯಾವುದರ ಅರಿವೂ ಇರಲ್ಲ. ಅವಳ ವೀಕ್​ನೆಸ್​, ಪ್ಲಸ್​ ಪಾಯಿಂಟ್​ ಏನೂ ಗೊತ್ತಿರಲಿಲ್ಲ. ಆದರೆ ಅವಳು ಹೇಗಿದ್ದಾಳೆ ಹಾಗೆ ಸ್ವೀಕರಿಸಬೇಕು. ಅವಳನ್ನು ಜೀವನ ಪರ್ಯಂತ ಪ್ರೀತಿಸಬೇಕು. ಇದೇ ನಿಜವಾದ ಜೀವನ ಎಂದು ವಿಡಿಯೋದಲ್ಲಿ ಸುದೀಪ್​ ಹೇಳಿದ್ದಾರೆ.

ಇನ್ನು ಸುದೀಪ್​ ಅವರ ಲವ್​ ಸ್ಟೋರಿ ಹೇಳೋದಾದ್ರೆ,  ನಟನೆಯಲ್ಲಿ ಆಸಕ್ತಿ ಹೊಂದಿದ್ದ ಸುದೀಪ್​  ಕಾಲೇಜೊಂದರಲ್ಲಿ ನಾಟಕ ತರಬೇತಿಗೆ ಸೇರಿಕೊಂಡಿದ್ದರು. ಪ್ರಿಯಾ ಕೂಡ ಇದೇ ಕಾಲೇಜಿನಲ್ಲಿ ಓದುತ್ತಿದ್ದರು. ಆಗಲೇ ಪರಿಚಯವಾಗತ್ತೆ. ಇಬ್ಬರಿಗೂ ಪರಸ್ಪರ ಇಷ್ಟವಾಗುತ್ತಾರೆ. ಆಕೆ ಕೇರಳದ ಹುಡುಗಿ, ಇವರು ಮಲೆನಾಡಿನ ಹುಡುಗ. ಪರಸ್ಪರ ಪ್ರೀತಿ ನಿವೇದನೆ ಮಾಡಿಕೊಳ್ಳುತ್ತಾರೆ. ನಂತರ ಮನೆಯವರನ್ನು ಒಪ್ಪಿಸಿ ಮದುವೆಯೂ ಆಗುತ್ತದೆ. ಪ್ರಿಯಾ‌ ಮದುವೆಗೂ ಮುನ್ನ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದರು. ಸುದೀಪ್‌ ಜೀವನದ ಪ್ರತಿ ಹಂತದಲ್ಲೂ ಪ್ರಿಯಾ ಪಾತ್ರ ಬಹಳ ಪ್ರಮುಖವಾಗಿದೆ. ಆದರೆ  2015 ರಲ್ಲಿ ದಂಪತಿ ನಡುವೆ ಬ್ರೇಕಪ್​ ಆಗುತ್ತದೆ ಎನ್ನುವ ಸುದ್ದಿ ಸದ್ದು ಮಾಡಿತ್ತು. ಆದರೆ ಮಗಳಿಗಾಗಿ ಮತ್ತೆ ಒಂದಾದ ಜೋಡಿ ಈಗ ಸುಖ ಸಂಸಾರ ಮಾಡುತ್ತಿದೆ.   ಅಪ್ಪನಂತೆ ಮಗಳು ಸಾನ್ವಿ ಕೂಡ ಪ್ರತಿಭಾವಂತೆ.  

ಸಮಸ್ಯೆ ಒಂದೇ, ಬಗೆಹರಿಸುವ ರೀತಿ ವಿಭಿನ್ನ! ಇಬ್ಬರು ಪುಟಾಣಿಗಳಿಂದ ಜೀವನ ಕಲಿಸಿತು ಪಾಠ...

click me!