LIFESTYLE

ಭ್ರಷ್ಟರ ಪಾಲಿನ ಕಾಳಿ: ಡಿ.ರೂಪಾ ಮನದಾಳದ ಮಾತು ಕೇಳಿ!

Aug 22, 2018, 5:56 PM IST

ಬೆಂಗಳೂರು(ಆ.22): ಡಿ. ರೂಪಾ ಅಂದಾಕ್ಷಣ ಭ್ರಷ್ಟರ ಎದೆ ನಡುಗುತ್ತದೆ. ಖಾಕಿ ಬಟ್ಟೆಯಲ್ಲಿ ಈ ಮಹಿಳೆಯನ್ನೊಮ್ಮೆ ನೋಡಿದಾಕ್ಷಣ ನಮ್ಮ ಕೈಗಳು ತಾನೇ ತಾನಾಗಿ ಸೆಲ್ಯೂಟ್ ಹೊಡೆಯುತ್ತವೆ.

ಸದ್ಯ ಹೋಂ ಗಾರ್ಡ್ಸ್ ಹಾಗೂ ಸಿವಿಲ್ ಡಿಫೆನ್ಸ್ ಐಜಿಪಿಯಾಗಿರುವ ಡಿ.ರೂಪಾ, ತಮ್ಮ ಐಪಿಎಸ್ ದಾರಿಯನ್ನು ಸುವರ್ಣನ್ಯೂಸ್ ಜೊತೆಗೆ ಹಂಚಿಕೊಂಡಿದ್ದಾರೆ. ಚಿಕ್ಕಂದಿನಿಂದಲೇ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಕಂಡ ರೂಪಾ, ಅಂದಿನಿಂದಲೇ ಇದಕ್ಕೆ ತಯಾರಿ ನಡೆಸಿದವರು. 

ನಾಗರಿಕ ಸೇವೆ ಮೂಲಕ ದೇಶ ಸೇವೆಗೆ ಮುಂದಾದ ರೂಪಾ, ಆಯ್ದುಕೊಂಡಿದ್ದು ಐಪಿಎಸ್ ನ್ನು. ತಮ್ಮ ಕನಸಿನಂತೆ ಖಾಕಿ ತೊಟ್ಟ ರೂಪಾ, ತಮ್ಮ ನಿಸ್ವಾರ್ಥ ಹಾಗೂ ನಿರ್ಭಿತಿಯ ನಡೆಯ ಮೂಲಕವೇ ಸಮಾಜಘಾತುಕ ಶಕ್ತಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾದವರು. ತೀರ ಇತ್ತೀಚೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮಗಳು ಮತ್ತು ಅದಕ್ಕೆ ವ್ಯವಸ್ಥೆಯ ಒಳಗಿನಿಂದಲೇ ಬೆಂಬಲ ಇರುವುದನ್ನು ಪತ್ತೆ ಹಚ್ಚಿ ದನ್ನು ಧೈರ್ಯವಾಗಿ ಬಯಲಿಗೆಳೆದವರು ಐಜಿಪಿ ರೂಪಾ.


ಐಜಿಪಿ ರೂಪಾ ಅವರ ಸಾಧನೆ, ಅವರು ನಡೆದು ಬಂದ ದಾರಿ, ಅವರ ಜೀವನದ ಕುರಿತು ಸುವರ್ಣನ್ಯೂಸ್ ನ ಗುಡ್ ಟೈಮ್ಸ್ ಜೊತೆಗೆ ಹಂಚಿಕೊಂಡಿದ್ದಾರೆ. ಅದರ ಫುಲ್ ಡಿಟೇಲ್ಸ್ ಇಲ್ಲಿದೆ.