ನೀಲಿಚಿತ್ರ ನೋಡೋದ್ರಿಂದ ಧಾರ್ಮಿಕ ಭಾವನೆ ಹೆಚ್ಚುತ್ತಂತೆ!

By Web DeskFirst Published Oct 14, 2018, 4:47 PM IST
Highlights

ನೀಲಿಚಿತ್ರಗಳನ್ನು ನೋಡುವುದರಿಂದ ಧಾರ್ಮಿಕ ಭಾವನೆ ಹೆಚ್ಚಾಗುತ್ತಂತೆ ! | ನೀಲಿಚಿತ್ರ ವೀಕ್ಷಣೆ ಪಾಪಪ್ರಜ್ಞೆಯಿಂದ  ಹೊರಬರುವ ಮಾರ್ಗವಾಗಿ ಧಾರ್ಮಿಕ ಆಚರಣೆ ಮೊರೆ ಹೋಗುತ್ತಾರೆ. ಧಾರ್ಮಿಕ ಮನೋಭಾವವನ್ನು ಹೆಚ್ಚು ರೂಢಿಸಿಕೊಳ್ಳುತ್ತಾರೆ ಎನ್ನಲಾಗಿದೆ. 

ಬೆಂಗಳೂರು (ಅ. 14): ತೀರಾ ಧಾರ್ಮಿಕ ಮನೋಭಾವ ಉಳ್ಳವರು ನೀಲಿಚಿತ್ರ ಎಂದರೆ ಮಾರು ದೂರ ಓಡಬಹುದು. ಹೆಸರು ಕೇಳಿದರೂ ಮಹಾಪಾಪ ಎಂದುಕೊಳ್ಳಬಹುದು. ಆದರೆ ಅಂಥವರ ಕುರಿತಾದ ವಿಚಿತ್ರ ಸಂಗತಿಯೊಂದು ಸಮೀಕ್ಷೆಯಲ್ಲಿ ಬಯಲಾಗಿದೆ.

ಅದೇನೆಂದರೆ ನೀಲಿ ಚಿತ್ರ ನೋಡುವುದರಿಂದ ಧಾರ್ಮಿಕ ಮನೋಭಾವ ಹೆಚ್ಚುತ್ತಂತೆ! ನೀಲಿಚಿತ್ರ ಹಾಗೂ ಧಾರ್ಮಿಕ ಮನೋಭಾವ ಎರಡೂ ತದ್ವಿರುದ್ಧವಾದವು. ಆದರೆ ಸಾಮಾನ್ಯವಾಗಿ ನೀಲಿ ಚಿತ್ರವನ್ನು ಒಬ್ಬಂಟಿಯಾಗಿ
ವೀಕ್ಷಿಸುತ್ತಾರೆ. ಹೀಗಾಗಿ ಕೆಲವರಿಗೆ ಅಪರಾಧಿ ಪ್ರಜ್ಞೆ ಕಾಡತೊಡಗುತ್ತದೆ. ಇದರಿಂದ ಹೊರಬರಬೇಕು ಎಂಬ ಭಾವನೆಗೆ ಬರುತ್ತಾರೆ. ಹೊರಬರುವ ಮಾರ್ಗವಾಗಿ ಧಾರ್ಮಿಕ ಆಚರಣೆ ಮೊರೆ ಹೋಗುತ್ತಾರೆ. ಧಾರ್ಮಿಕ ಮನೋಭಾವವನ್ನು ಹೆಚ್ಚು ರೂಢಿಸಿಕೊಳ್ಳುತ್ತಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಅಮೆರಿಕದ ಓಕ್ಲಹಾಮಾ ವಿಶ್ವವಿದ್ಯಾಲಯದ ಸಂಶೋಧಕರು ಈ ಸಮೀಕ್ಷೆ ನಡೆಸಿದ್ದಾರೆ. 6 ವರ್ಷಗಳ ಕಾಲ 1,314 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು ಆ ಪ್ರಕಾರ, ನೀಲಿಚಿತ್ರ ವೀಕ್ಷಣೆ ಬಳಿಕ ಹಲವರು ತಮಗೆ ಧಾರ್ಮಿಕತೆಯತ್ತ ಮನಸ್ಸಾಗಿದೆ ಎಂದು ಹೇಳಿದ್ದಾರೆ. ವಾರಕ್ಕೊಮ್ಮೆ ನೀಲಿಚಿತ್ರ ನೋಡುವ ಅಭ್ಯಾಸ ಇರುವವರಲ್ಲಿ ಹೆಚ್ಚಾಗಿ ಅಪರಾಧಿ ಪ್ರಜ್ಞೆ ಕಾಡಿದೆಯಂತೆ. ಎಲ್ಲರಲ್ಲೂ ಅಪರಾಧಿ ಪ್ರಜ್ಞೆ ಮೂಡಲ್ಲ.

ಕೆಲವೊಮ್ಮೆ ನೀಲಿಚಿತ್ರ ನೋಡುವ ಅಭ್ಯಾಸ ಹಾಗೇ ಮುಂದುವರಿಯುವ ಸಾಧ್ಯತೆಯೂ ಇದೆ. ಆದರೆ ಧಾರ್ಮಿಕತೆಯತ್ತ ಮನಸ್ಸಾದ ಸಂಗತಿಗಳು ಹೆಚ್ಚು ಕಂಡುಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.  

click me!