ಸಾವು ಸಮೀಪಿಸುವಾಗ ಕಣ್ಣೀರೇಕೆ ಬರುತ್ತೆ? ಹಿಂದಿದೆ ಹಲವು ವೈಜ್ಞಾನಿಕ ಕಾರಣ

By Anusha Kb  |  First Published Sep 21, 2024, 8:52 PM IST

ಓರ್ವ ವ್ಯಕ್ತಿ ಸಾವಿನ ಕೊನೆಕ್ಷಣವನ್ನು ಅನುಭವಿಸುತ್ತಿರುವಾಗ ಆತನ ಕಣ್ಣುಗಳಲ್ಲಿ ನೀರು ಬರಲು ಆರಂಭವಾಗುತ್ತದೆ. ಅದು ಸಹಜವಾದ ನೈಸರ್ಗಿಕ ಪ್ರತಿಕ್ರಿಯೆ ಎನಿಸಿದರು ಕೂಡ ಅದರ ಹಿಂದೆ ಕೆಲವು ಆಳವಾದ ಹಾಗೂ ದೊಡ್ಡದಾದ ಕಾರಣವಿದೆ. ಅವುಗಳೇನು ಎಂಬ ಬಗ್ಗೆ ಇಲ್ಲಿದೆ ಡಿಟೇಲ್ ಸ್ಟೋರಿ


ಜೀವನದ ಕೊನೆಕ್ಷಣವನ್ನು ಒಂದಲ್ಲ ಒಂದು ದಿನ ಎಲ್ಲರೂ ಅನುಭವಿಸಲೇಬೇಕು. ಸಾವು ಎಂಬುದು ತುಂಬಾ ಭಾವುಕವಾದ ಕ್ಷಣ ಹಾಗೂ ಅದು ಸಾಯುವವನಿಗೆ ಮಾತ್ರವಲ್ಲ, ಆತನ ಜೊತೆಗೆ ಉತ್ತಮ ಒಡನಾಟ ಹೊಂದಿರುವ ಪ್ರೀತಿಪಾತ್ರರಿಗೂ ಅದೊಂದು ಕಷ್ಟದ ಕ್ಷಣ. ಓರ್ವ ವ್ಯಕ್ತಿ ಸಾವಿನ ಕೊನೆಕ್ಷಣವನ್ನು ಅನುಭವಿಸುತ್ತಿರುವಾಗ ಆತನ ಕಣ್ಣುಗಳಲ್ಲಿ ನೀರು ಬರಲು ಆರಂಭವಾಗುತ್ತದೆ. ಅದು ಸಹಜವಾದ ನೈಸರ್ಗಿಕ ಪ್ರತಿಕ್ರಿಯೆ ಎನಿಸಿದರು ಕೂಡ ಅದರ ಹಿಂದೆ ಕೆಲವು ಆಳವಾದ ಹಾಗೂ ದೊಡ್ಡದಾದ ಕಾರಣವಿದೆ. ಅವುಗಳೇನು ಎಂಬ ಬಗ್ಗೆ ಇಲ್ಲಿದೆ ಡಿಟೇಲ್ ಸ್ಟೋರಿ


ಭಾವನಾತ್ಮಕ ಒತ್ತಡ
ಸಾವು ಸಮೀಪಿಸಿದಾಗ ಒರ್ವ ವ್ಯಕ್ತಿ  ಭಯ ಬೇಸರ, ಹತಾಶೆ, ಹಾಗೂ ಕೆಲವೊಮ್ಮೆ ಸಮಾಧಾನ ಸೇರಿದಂತೆ ಹಲವು ಭಾವನೆಗಳನ್ನು ಅನುಭವಿಸುತ್ತಾನೆ. ಈ ಎಲ್ಲಾ ಭಾವನೆಗಳು ಒಟ್ಟಾಗಿ ಒಂದು ತೀವ್ರವಾದ ಮಾನಸಿಕ ಒತ್ತಡವನ್ನು ಸೃಷ್ಟಿಸುತ್ತವೆ. ಇವೇ ಕಣ್ಣೀರಿನ ರೂಪದಲ್ಲಿ ಹೊರಗೆ ಬರುತ್ತವೆ. ಸಾವು ಸಮೀಪ ಬರುತ್ತಿದ್ದಂತೆ ವ್ಯಕ್ತಿ ತನ್ನ ಜೀವನದ ಅನುಭವಗಳು, ಸಂಬಂಧಗಳು ಹಾಗೂ ಆತ ಕಳೆದುಕೊಂಡ ವಸ್ತುಗಳು ಬಿಟ್ಟು ಹೋಗುತ್ತಿರುವ ವಸ್ತುಗಳು ಹೀಗೆ ಎಲ್ಲದರ ಬಗ್ಗೆ ಯೋಚನೆ ಮಾಡುತ್ತಾನೆ ಇವೆಲ್ಲ ಯೋಚನೆಗಳು ಕಣ್ಣೀರಿನ ಮೂಲಕ ಹೊರ ಬರುತ್ತವೆ. 

Latest Videos

undefined

ದೇಹದಲ್ಲಾಗುವ ಬದಲಾವಣೆ

ಸಾವು ಸಮೀಪಿಸುತ್ತಿದ್ದಂತೆ ದೇಹದಲ್ಲೂ ಅನೇಕ ಬದಲಾವಣೆಗಳಾಗುತ್ತವೆ.. ಹಾರ್ಮೋನ್ ಮಟ್ಟಬದಲಾದಂತೆ, ಮೆದುಳಿನಲ್ಲಿರುವ ರಾಸಾಯನಿಕಗಳ ಸಮತೋಲನವು ಏರುಪೇರಾಗುತ್ತದೆ. ಮತ್ತು ದೇಹದ ಸ್ನಾಯುಗಳು ಒತ್ತಡಕ್ಕೆ ಒಳಗಾಗುತ್ತವೆ. ಈ ದೈಹಿಕ ಬದಲಾವಣೆಗಳು ಮಾನಸಿಕ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತವೆ. ದೇಹವು ಒತ್ತಡದಲ್ಲಿದ್ದಾಗ, ಅದು ಕಣ್ಣೀರನ್ನು ಉತ್ಪಾದಿಸುತ್ತದೆ. ಇದು ಒಂದು ರೀತಿಯ ನೈಸರ್ಗಿಕ ಪ್ರತಿಕ್ರಿಯೆಯಾಗಿದೆ, ಇದು ನೋವು ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸತ್ತವರ ಚಿನ್ನ, ಬಂಗಾರ ಬಳಸಬಹುದೇ.. ಗರುಡ ಪುರಾಣ ಏನು ಹೇಳುತ್ತದೆ

ಜೀವಮಾನದ ನೆನಪುಗಳು

ಸಾವಿನ ಸಮಯದಲ್ಲೇ ವ್ಯಕ್ತಿಗೆ ತಾನು ಕಳೆದ ತನ್ನಿಡಿ ಜೀವನವೂ ಒಮ್ಮೆ ಕಣ್ಣ ಮುಂದೆ ಹಾದು ಹೋಗುತ್ತದೆ.  ಒಬ್ಬ ವ್ಯಕ್ತಿಯು ತನ್ನ ಜೀವನದ ಪ್ರಮುಖ ಸಂಬಂಧಗಳು ಮತ್ತು ನೆನಪುಗಳ ಬಗ್ಗೆ ಯೋಚಿಸುತ್ತಾನೆ. ತನ್ನ ಪ್ರೀತಿಪಾತ್ರರಿಂದ ದೂರಾ ಹೋಗುವ ಆಲೋಚನೆಯು ವ್ಯಕ್ತಿಯಲ್ಲಿ ಮತ್ತಷ್ಟು ಆಳವಾದ ಭಾವನೆಯನ್ನು ಸೃಷ್ಟಿಸುತ್ತದೆ. ಇದು ನೈಸರ್ಗಿಕವವೇ ಆದರೂ ಆತ ತನ್ನ ಜೀವನದಲ್ಲಿ ಎಷ್ಟು ಪ್ರೀತಿ ಮತ್ತು ವಾತ್ಸಲ್ಯವನ್ನು ಅನುಭವಿಸಿದೆ ಎಂಬುದನ್ನು ಆತನಿಗೆ ನೆನಪು ಮಾಡುತ್ತದೆ. ಇದು ಕಣ್ಣೀರಿನ ರೂಪದಲ್ಲಿ ಬಂದು ತನ್ನೊಂದಿಗೆ ಜೀವನವನ್ನು ಕಳೆದವರಿಗೆ ಗೌರವ ಸಲ್ಲಿಸಬಹುದು ಎನ್ನಲಾಗುತ್ತದೆ.

ಸಂಕಟ ಮತ್ತು ದುಃಖ

ಹೆಚ್ಚಿನ ಸಂದರ್ಭಗಳಲ್ಲಿ, ಒಬ್ಬ ವ್ಯಕ್ತಿಯು ಸಾವಿಗೆ ಹತ್ತಿರವಾದಾಗ, ಅವನು ಖಿನ್ನತೆ ಮತ್ತು ವಿಷಾದ ಮತ್ತು ದುಃಖಕ್ಕೆ ಒಳಗಾಗುತ್ತಾನೆ. ಈ ಸ್ಥಿತಿಯು ಆಗಾಗ್ಗೆ ವ್ಯಕ್ತಿಯನ್ನು ಭಾವನಾತ್ಮಕವಾಗಿ ದುರ್ಬಲಗೊಳಿಸುತ್ತದೆ. ಇದರಿಂದಾಗಿ ಅವನು ಸುಲಭವಾಗಿ ಅಳಬಹುದು. ಈ ಕಣ್ಣೀರು ಕೇವಲ ದುಃಖದ ಸಂಕೇತವಲ್ಲ, ಒಂದು ರೀತಿಯಲ್ಲಿ ಭಾವನೆಗಳನ್ನು ವ್ಯಕ್ತಪಡಿಸುವುದಾಗಿದೆ. ವ್ಯಕ್ತಿಯು ತನ್ನೊಳಗೆ ನಡೆಯುತ್ತಿರುವ ಭಾವನೆಗಳನ್ನು ವ್ಯಕ್ತಪಡಿಸಲು ಪ್ರಯತ್ನಿಸುತ್ತಿರುವುದನ್ನು ಇದು ತೋರಿಸುತ್ತದೆ.

ಮೃತ್ಯುವಿನ ನಂತ್ರ ಎಲ್ಲಿಗೆ ಹೋಗುತ್ತೆ ಆತ್ಮ? ಎಷ್ಟು ದಿನದ ನಂತ್ರ ಪುನರ್ಜನ್ಮ ಪಡೆಯುತ್ತೆ?

click me!