New Year: ಬದಲಾಗೋದು ಕ್ಯಾಲೆಂಡರ್, ಜೀವನ ಬದಲಾಗಲು ನೀವು ಬದಲಾಗಿ ಮೊದಲು!

By Contributor AsianetFirst Published Jan 4, 2023, 2:19 PM IST
Highlights

ಹೊಸ ವರ್ಷದ ಪಾರ್ಟಿ ಮೂಡ್ ನಿಂದ ಬಹುತೇಕ ಎಲ್ಲರೂ ಹೊರಗೆ ಬಂದಿದ್ದಾರೆ. ದಿನದ ಕೆಲಸ, ಒತ್ತಡದ ಜೀವನ ಮತ್ತೆ ಶುರುವಾಗಿದೆ. ಈ ವರ್ಷವೂ ಹಿಂದಿನ ವರ್ಷದಂತೆ ನೀರಸವಾಗಿರಬಾರದು ಅಂದ್ರೆ ಈಗ್ಲೇ ಅದಕ್ಕೆ ಪರಿಹಾರ ಕಂಡುಕೊಳ್ಳಿ.
 

2022ಕ್ಕೆ ವಿದಾಯ ಹೇಳಿ ಆಗಿದೆ. 2023ಕ್ಕೆ ಕಾಲಿಟ್ಟಾಗಿದೆ. ವರ್ಷಾಂತ್ಯ, ಹೊಸ ವರ್ಷದ ಆಗಮನ, ಪಾರ್ಟಿ, ಸಮಾರಂಭ ಹೀಗೆ ಎಲ್ಲವನ್ನೂ ಮುಗಿಸಿ ಮತ್ತೆ ಸಾಮಾನ್ಯ ಜೀವನಕ್ಕೆ ಜನರು ಮರಳುತ್ತಿದ್ದಾರೆ. ಹ್ಯಾಪಿ ನ್ಯೂ ಇಯರ್ ಎಂದು ಸಿಕ್ಕವರಿಗೆಲ್ಲ ವಿಶ್ ಕೂಡ ಮಾಡ್ತಿದ್ದೇವೆ. ಆದ್ರೆ ನಮ್ಮ ಲೈಫ್ ಸ್ಟೈಲ್ ಮಾತ್ರ ಇನ್ನೂ ಹೊಸದಾಗೇ ಇಲ್ಲ. ಅದೇ 2022ರಲ್ಲಿ ಮಾಡಿದ ಕೆಲಸವನ್ನೇ ನಾವು ಇಂದೂ ಮಾಡ್ತಿದ್ದೇವೆ. ದಿನ, ಸಮಯಗಳು ಸರಿದು ಹೋಗ್ತವೆ. ಒಂದೇ ಬದುಕಿನಲ್ಲಿ ಮಿಂದೆದ್ದು ನಾವು ಜೀವನ ಮುಗಿಸ್ತೇವೆ. ಕಳೆದ ದಿನಗಳು ಮತ್ತೆ ಬರಲು ಸಾಧ್ಯವಿಲ್ಲ. ಇನ್ನು ಮುಂದಿರುವ ಜೀವನವನ್ನು ಸದುಪಯೋಗಪಡಿಸಿಕೊಳ್ಳಲು ನೋಡೋಣ.

ಹೊಸ ವರ್ಷವನ್ನು ನೀವು ಹೊಸದಾಗಿ ಮಾಡಲು ಬೇರೆಯವರ ಅಗತ್ಯ ಬೇಕಿಲ್ಲ. ಜನರು, ಸಮಾಜವನ್ನು ನೀವು ದೂರಬೇಕಾಗಿಲ್ಲ. ಮೊದಲು ನೀವು ಬದಲಾಗುವುದು ಮುಖ್ಯ. ನಿಮ್ಮಲ್ಲಿ ಬದಲಾವಣೆ ಬಂದ್ರೆ ತಾನಾಗಿಯೇ ಸಮಾಜ ನಿಮ್ಮೊಂದಿಗೆ ಹೆಜ್ಜೆ ಹಾಕಲು ಶುರು ಮಾಡುತ್ತದೆ. ನಿಮ್ಮಲ್ಲಿ ಬದಲಾವಣೆ ತರಬೇಕೆಂದ್ರೆ ನಿಮಗೆ ನೀವೇ ಕೆಲ ಪ್ರಶ್ನೆಗಳನ್ನು ಕೇಳಿಕೊಂಡು ಅದಕ್ಕೆ ಉತ್ತರ ಕಂಡು ಹಿಡಿಯುವ ಪ್ರಯತ್ನ ನಡೆಸಬೇಕು. ನಾವಿಂದು ಒಂದಿಷ್ಟು ಪ್ರಶ್ನೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಅದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿ.

ದೌರ್ಜನ್ಯವೆಂದರೆ ಮಹಿಳೆಯರೇ ಹೆಚ್ಚಾಗಿ ನೋವು ಅನುಭವಿಸೋದೇಕೆ?

2023ರಲ್ಲಿ ಕೇಳಿಕೊಳ್ಳಿ ಈ ಪ್ರಶ್ನೆ (Question) :
1. ಹಳೆಯ ಗುರಿ (Target) ಏನಿತ್ತು? ಅದನ್ನು ಸಾಧಿಸಿದ್ದೀರಾ?
2. 2022ರಲ್ಲಿ ನೀವು ಹೆಮ್ಮೆಪಡುವಂತಹ ಯಾವುದಾದರೂ ಒಂದು ಕೆಲಸ (Work) ವನ್ನು ನೀವು ಮಾಡಿದ್ದೀರಾ?
3. ನೀವೀಗ ಯಾವ ಜೀವನ (Life) ನಡೆಸುತ್ತಿದ್ದೀರಿ ಆ ಜೀವನದಲ್ಲಿ ನಿಮಗೆ ಸಂತೋಷವಿದ್ಯಾ? 
4.  ಹೊಸ ವರ್ಷದಲ್ಲಿ ನಿಮ್ಮ ಹೊಸ ಗುರಿ ಯಾವುದು? 
5. ದೀರ್ಘಾವದಿಯ ಗುರಿ ಯಾವುದು ಎಂಬುದನ್ನು ಇಂದೇ ಪಟ್ಟಿ ಮಾಡಿ.  
6.  ನೀವು ಈಗ ಮಾಡ್ತಿರುವ ಕೆಲಸ ನಿಮ್ಮ ಉತ್ಸಾಹ ಹೆಚ್ಚಿಸಿದ್ಯಾ ಇಲ್ಲ ಕುಗ್ಗಿಸಿದ್ಯಾ?   
7. ಜೀವನದಲ್ಲಿ ಬದಲಿಸಬೇಕಾದ ಮುಖ್ಯ ಸಂಗತಿ ಏನು?  
8.  ನಿಮ್ಮ ದೇಹದ ಆಕಾರ ನಿಮಗೆ ಮುಜುಗರ ತರಿಸಿದ್ಯಾ? 
9. ಹಿಂದಿನ ವರ್ಷ ಯಾವ ಅಭ್ಯಾಸ (Practice) ದಲ್ಲಿ ಹೆಚ್ಚು ವ್ಯತ್ಯಾಸವಾಗಿದೆ? ಮತ್ತೆ ಯಾಕೆ?  
10. ನಿಮ್ಮ ಜೀವನದ ಮೇಲೆ ನಿಮ್ಮ ಯಾವ ಹವ್ಯಾಸ ಹೆಚ್ಚು ಪ್ರಭಾವ ಬೀರಿದೆ? 
11. ನಿಮಗಾಗಿ ನೀವು ಸಮಯ ನೀಡುತ್ತಿದ್ದೀರಾ? 
12. ಕುಟುಂಬ (Family) ದ ಜೊತೆ ಎಷ್ಟು ಸಮಯ ಕಳೆಯುತ್ತಿದ್ದೀರಿ? 
13. ಹಿಂದಿನ ವರ್ಷ ನಡೆದ ಮಧುರ ಕ್ಷಣ ಯಾವುದು? 
14. ಕಳೆದ ವರ್ಷ ಏನೆಲ್ಲ ನೀವು ಕಲಿತಿದ್ದೀರಿ? ಈ ವರ್ಷ ಏನೇನು ಕಲಿಯಬೇಕಿದೆ? 
15. ಹಿಂದಿನ ವರ್ಷ ಅರ್ಧಕ್ಕೆ ಬಿಟ್ಟ ಜವಾಬ್ದಾರಿ ಯಾವುದು?
16. ನಿಮ್ಮ ಸುತ್ತಲಿನ ಪರಿಸರ ನಿಮಗೆ ಸಂತೋಷ ನೀಡ್ತಿದೆಯಾ? 
17. ಬೇರೆಯವರಿಗೆ ನೀವು ವಿಷಕಾರಿಯಾಗಿದ್ದೀರಾ ಇಲ್ಲ ಸಿಹಿಯಾಗಿದ್ದೀರಾ?
18. ಸಂಬಂಧ ನಿಮಗೆ ಸಂತೋಷ ನೀಡ್ತಿದೆಯಾ?
19. ನಿಮ್ಮನ್ನು ನೀವು ಚೆನ್ನಾಗಿ ನೋಡಿಕೊಳ್ತಿದ್ದೀರಾ?
20. ಕೆಲಸದ ಒತ್ತಡ (Stress) ದಲ್ಲಿ ಹವ್ಯಾಸ ಮರೆತಿದ್ದೀರಾ?
21. ನಿಮ್ಮ ಒತ್ತಡ ಪ್ರಮಾಣ ಎಷ್ಟು? ಅದ್ರಲ್ಲಿ ಬದಲಾವಣೆ ಅವಶ್ಯಕತೆಯಿದೆಯೇ? 
22.  ನಿಮ್ಮ ಆತ್ಮವಿಶ್ವಾಸ ಕುಂದಿದೆಯೇ?
23. ನಿಮ್ಮ ಆರೋಗ್ಯದಲ್ಲಿ ಏನೆಲ್ಲ ಏರುಪೇರಾಗ್ತಿದೆ? 

ಮದ್ವೆ ಯಾರಿಗೆ ಬೇಕು ಎಂದ ಈ ಬಾಲಿವುಡ್​ ಜೋಡಿಯ ಹೊಸ ವರ್ಷದ ರೆಸಲ್ಯೂಷನ್​ ನೋಡಿ!

ಈ ಪ್ರಶ್ನೆಗಳು ನಿಮಗೆ ಸಾಮಾನ್ಯ ಎನ್ನಿಸಬಹುದು. ಆದ್ರೆ ಇದು ಸಾಕಷ್ಟು ಅರ್ಥವನ್ನು ಹೊಂದಿದೆ. ಇವೆಲ್ಲಕ್ಕೆ ಉತ್ತರ ಕಂಡುಕೊಂಡು ಆಂತರಿಕವಾಗಿ ಖುಷಿಯಾಗಿರಲು ಪ್ರಯತ್ನಿಸಿ. ಹೊಸ ವರ್ಷ ಬರೀ ಪಾರ್ಟಿಗೆ ಮೀಸಲಾಗಿರಬಾರದು ಎಂಬುದು ನೆನಪಿರಲಿ. 

click me!