ನೋ ಕ್ಲಾತ್‌ ಹನಿಮೂನ್‌ಗೆ ಹೋಗೋ ಆಸೆ ಇದ್ಯಾ; ಇಲ್ಲಿದೆ ನೋಡಿ ಅಂಥಾ ಸಿಟಿ, ಇಲ್ಲಿ ಬಟ್ಟೆ ಹಾಕಿದ್ರೆ ಹಾಕ್ತಾರೆ ದಂಡ!

By Santosh NaikFirst Published Aug 8, 2022, 7:48 PM IST
Highlights

ಖಂಡಿತವಾಗಿ ಜಗತ್ತಿನಲ್ಲಿ ಅಂಥದ್ದೊಂದು ನಗರವಿದೆ. ಈ ನಗರದಲ್ಲಿ ಬಟ್ಟೆಗಳನ್ನು ಹಾಕಿಕೊಳ್ಳೋಹಾಗಿಲ್ಲ. ಹಾಗೇನಾದರೂ ನೀವು ಈ ನಗರದಲ್ಲಿ ಬಟ್ಟೆ ಹಾಕಿಕೊಂಡು ತಿರುಗಾಡ್ತೇವೆ, ಬದುಕುತ್ತೇವೆ ಎಂದಾದಲ್ಲಿ ವಿಶೇಷ ತೆರಿಗೆಯನ್ನೂ ಅದಕ್ಕೆ ಪಾವತಿಸಬೇಕಾಗುತ್ತದೆ. ಬಟ್ಟೆಯಿಲ್ಲದೆ ರಜಾದಿನಗಳನ್ನು ಕಳೆಯಬೇಕೆನ್ನುವ, ಹನಿಮೂನ್‌ಗೆ ಹೋಗಬೇಕು ಎನ್ನುವ ವ್ಯಕ್ತಿಗೆಗಳಿಗೆ ಇದು ಸೂಕ್ತ ನಗರವಾಗಿದೆ. ಇನ್ನು ಬಟ್ಟೆ ಹಾಕದೇ ತಿರುಗಾಡಬಹುದು ಎಂದ ಮಾತ್ರಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ರೊಮಾನ್ಸ್‌ ಮಾಡಬಹುದು ಅಂತಲ್ಲ. ಸಾರ್ವಜನಿಕ ಸ್ಥಳದಲ್ಲಿ ರೊಮಾನ್ಸ್‌ ಮಾಡಿದ್ರೆ, 12 ಲಕ್ಷ ರೂಪಾಯಿ ದಂಡ ಕಟ್ಟಬೇಕು!

ಪ್ಯಾರಿಸ್‌ (ಆ.8): ಬಟ್ಟೆಗಳಿದ್ದೆ ಹಾಲಿಡೇಗೆ ಹೋಗುವ, ನಗರದಲ್ಲಿ ಬಟ್ಟೆಗಳೇ ಇಲ್ಲದೆ ಸುತ್ತಾಡಬೇಕು ಎನ್ನುವ ಆಸೆಗಳನ್ನು ಹೊತ್ತ ಜನರ ಸಂಖ್ಯೆಯಲ್ಲಿ ವಿಪರೀತವಾಗಿ ಏರಿಕೆ ಆಗುತ್ತಿದೆ. ನೋ ಕ್ಲಾತ್‌ ಹಾಲಿಡೇ ವಿದೇಶದಲ್ಲಿ ಬಹಳ ಫೇಮಸ್‌. ಉದಾಹರಣೆಗೆ, ಇಂಗ್ಲೆಂಡ್‌ನಲ್ಲಿ ಕ್ಲಾತಿಂಗ್‌ ಟೂರಿಂಸಂ ದೊಡ್ಡ ಮಟ್ಟದಲ್ಲಿ ಏರಿಕೆ ಆಗುತ್ತಿದೆ. ಯಾಕೆಂದರೆ, ಇಲ್ಲಿ ಜನ ಬಟ್ಟೆಗಳಿಲ್ಲದೆ ರಜಾ ದಿನವನ್ನು ಆಚರಣೆ ಮಾಡುತ್ತಾರೆ. ಕೇವಲ ಇಂಗ್ಲೆಂಡ್‌ನ ಜನರು ಮಾತ್ರವಲ್ಲ, ವಿದೇಶದ ನಾಗರೀಕರು ಕೂಡ ಈ ನಗರದಲ್ಲಿ ರಜಾ ದಿನವನ್ನು ಎಂಜಾಯ್‌ ಮಾಡಲು ಬರುತ್ತಾರೆ.  ಇಂಗ್ಲೆಂಡ್‌ ಮಾತ್ರವಲ್ಲ, ವಿಶ್ವದಲ್ಲಿ ಇರುವ ಕೆಲವೊಂದು ದೇಶಗಳಲ್ಲಿ ಜನರು ಬಟ್ಟೆಗಳನ್ನು ಧರಿಸದೇ ತಿರುಗಾಡುತ್ತೇವೆ ಎನ್ನುವುದನ್ನು ನಿರ್ಬಂಧಿಸಲು ಯಾವುದೇ ಕಾನೂನುಗಳಿಲ್ಲ. ಇದರ್ಥ ನೀವು ಬಟ್ಟೆಗಳೇ ಇಲ್ಲದೆ, ರಜೆಗಳನ್ನು ನೀವು ಈ ನಗರಗಳಲ್ಲಿ ಕಳೆಯಬಹುದು. ಆದರೆ, ಇದಕ್ಕಾಗಿ ಇಂಗ್ಲೆಂಡ್‌ನಲ್ಲಿ ಕೆಲ ವಿಶೇಷ ನಗರಗಳನ್ನು ಫಿಕ್ಸ್‌ ಮಾಡಲಾಗಿದೆ. ಇನ್ನು ಫ್ರಾನ್ಸ್‌ನ ಒಂದು ನಗರದಲ್ಲಿ ಬಟ್ಟೆ ಧರಿಸುವುದನ್ನೇ ನಿಷೇಧ ಮಾಡಲಾಗಿದೆ. ಇಲ್ಲಿ ನೀವು ಬಟ್ಟೆ ಇಲ್ಲದೆ ಇಡೀ ನಗರವನ್ನು ಸುತ್ತಬಹುದು. ಶಾಪಿಂಗ್ ಮಾಡಬಹುದು. ಫುಡ್‌ ಕೋರ್ಟ್‌ಗಳಿಗೆ ಯಾವುದೇ ಅಂಜಿಕೆ ಇಲ್ಲದೆ ಹೋಗಬಹುದು. ಬೆತ್ತಲೆಯಾಗಿ ಬ್ಯಾಂಕಿಗೂ ಹೋಗಬಹುದು. ಈ ನಗರದ ಹೆಸರು ಕ್ಯಾಪ್ ಡಿ'ಆಗ್ಡೆ. ತಮ್ಮ ಮಧುಚಂದ್ರವನ್ನು ಆಚರಿಸಲು ದಂಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಹನಿಮೂನ್‌ ಆಚರಿಸಿಕೊಳ್ಳಬೇಕು ಎನ್ನುವವರಿಗೆ, ಪ್ರವಾಸದಲ್ಲಿ ಸೆಕ್ಸ್‌ ಮುಖ್ಯ ಎನ್ನುವ ಟೂರಿಸ್ಟ್‌ಗಳಿಗೆ ಇದು ಜಗತ್ತಿನಲ್ಲಿಯೇ ಬೆಸ್ಟ್‌ ಪ್ಲೇಸ್‌ ಎಂದು ಹೇಳಲಾಗಿದೆ.

ಬಟ್ಟೆಗಳೇ ಇಲ್ಲದೆ ಬದುಕುವ ಬಗ್ಗೆ ಇಲ್ಲಿನ ಜನರು ನೀಡ್ತಾರೆ ಕಾರಣ: ಮೆಡಿಟರೇನಿಯನ್‌ ಸಮುದ್ರದ ದಂಡೆಯ ಮೇಲೆ ಈ ಸುಂದರ (Cap d'Agde) ನಗರವಿದೆ. ಆದರೆ, ಈ ನಗರಕ್ಕೆ ನೀವು ಸಂಪೂರ್ಣ ಕುಟುಂಬದೊಂದಿಗೆ ಹೋಗಲು ಸಾಧ್ಯವಿಲ್ಲ. ಏಕೆಂದರೆ, ನೀವು ಈ ನಗರದಲ್ಲಿ ಎಲ್ಲೆಂದರಲ್ಲಿ ಬೆತ್ತಲೆಯಾಗಿ ತಿರುಗಾಡುವ ಗಂಡು-ಹೆಣ್ಣುಗಳು ಸಿಗುತ್ತಾರೆ. ಆದರೆ, ನಿಮ್ಮ ಸಂಗಾತಿಯೊಂದಿಗೆ ಈ ನಗರಕ್ಕೆ ಹೋಗುವ ಪ್ಲ್ಯಾನ್‌ ಮಾಡಿಕೊಳ್ಳಬಹುದು. 1958ರಲ್ಲಿ ಈ ನಗರವನ್ನು ನಿರ್ಮಾಣ ಮಾಡಲಾಗಿದೆ. 1970ರಲ್ಲಿ ಇಲ್ಲಿನ ಪ್ರಖ್ಯಾತ ಸಮುದ್ರದಂಡೆಯಿಂದ 2 ಕಿಲೋಮೀಟರ್‌ವರೆಗೆ ನೀವು ಯಾವುದೇ ರೀತಿಯ ಬಟ್ಟೆಗಳನ್ನು ಧರಿಸುವಂತಿಲ್ಲ. ಹಾಗೇನಾದರೂ ನೀವು ಬಟ್ಟೆ ಧರಿಸಿ ಈ ಸಮುದ್ರ ದಂಡೆಗೆ ಹೋಗಲು ಬಯಸಿದ್ದಲ್ಲಿ ನೇಕೆಡ್‌ ಟ್ಯಾಕ್ಸ್ ಕಟ್ಟಬೇಕಿದೆ. ಇಲ್ಲಿರುವ ಜನರ ಪ್ರಕಾರ, ಬಟ್ಟೆಗಳಿಲ್ಲದೆ ಇಲ್ಲಿಗೆ ಪ್ರವೇಶಿಸುವುದರಿಂದ ಜನರಿಗೆ ತಮ್ಮ ದೇಹದ ಬಗ್ಗೆ ಮತ್ತಷ್ಟು ವಿಶ್ವಾಸ ತುಂಬಲಿದೆ.  ಇಲ್ಲಿಗೆ ಬರುವ ದಂಪತಿಗಳು ತಮ್ಮೊಳಗೆ ದೇಹದ ಬಗ್ಗೆ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದೂ ಹೇಳುತ್ತಾರೆ.

ಫ್ರಾನ್ಸ್‌ನ ಕ್ಯಾಪ್ ಡಿ'ಆಗ್ಡೆ ನಗರದಲ್ಲಿ ರೆಸಾರ್ಟ್‌ಗಳು ಪ್ರವಾಸಿ ಆಕರ್ಷಣೆಯ ಕೇಂದ್ರವಾಗಿದೆ. ಪ್ರವಾಸಿಗರು ಬೇಸಿಗೆಯ ದಿನಗಳಲ್ಲಿ ಇಲ್ಲಿಗೆ ಬರಲು ಇಷ್ಟಪಡುತ್ತಾರೆ. ಕ್ಯಾಪ್ ಡಿ'ಆಗ್ಡೆ ತನ್ನ ವಿಶಿಷ್ಟ ಜೀವನಶೈಲಿಗೆ ಹೆಸರುವಾಸಿಯಾಗಿದೆ. ಹೆಚ್ಚಿನ ದಂಪತಿಗಳು ಪ್ರವಾಸಿಗರಾಗಿ ಕ್ಯಾಪ್ ಡಿ'ಆಗ್ಡೆ ನಗರಕ್ಕೆ ಬರುತ್ತಾರೆ ಎಂಬುದು ಗಮನಿಸಬೇಕಾದ ಸಂಗತಿ. ಬಟ್ಟೆ ಧರಿಸದೇ ಇದ್ದರೆ ಆತ್ಮವಿಶ್ವಾಸ ಹೆಚ್ಚುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ. ಒಂದು ಅಂದಾಜಿನ ಪ್ರಕಾರ, ಬೇಸಿಗೆ ಕಾಲದಲ್ಲಿ ಸುಮಾರು 50 ಸಾವಿರ ಪ್ರವಾಸಿಗರು ಕ್ಯಾಪ್ ಡಿ'ಆಗ್ಡೆ ನಗರಕ್ಕೆ ಭೇಟಿ ನೀಡುತ್ತಾರೆ ಮತ್ತು ಇಲ್ಲಿನ ವಿಶಿಷ್ಟ ಜೀವನಶೈಲಿಯನ್ನು ಆನಂದಿಸುತ್ತಾರೆ.

ಪುರುಷರಿಗೆ ಮಾತ್ರ… ಸೆಕ್ಸ್ ಲೈಫ್ ಸುಧಾರಿಸುವ 5 ಮಾರ್ಗಗಳು

ರೊಮಾನ್ಸ್‌ ಮಾಡಿದ್ರೆ ದಂಡ: ಒಂದು ಕಡೆ ಕ್ಯಾಪ್ ಡಿ'ಆಗ್ಡೆಯಲ್ಲಿ ಬಟ್ಟೆ ಇಲ್ಲದೆ ತಿರುಗಾಡುವ ಸ್ವಾತಂತ್ರ್ಯವಿದ್ದರೆ, ಮತ್ತೊಂದೆಡೆ ಸಾರ್ವಜನಿಕ ಸ್ಥಳಗಳಲ್ಲಿ ಸಂಗಾತಿಯೊಂದಿಗೆ ಬಹಿರಂಗವಾಗಿ ಅನ್ಯೋನ್ಯವಾಗಿರುವುದನ್ನು ನಿಷೇಧಿಸಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಯಾರಾದರೂ ಈ ಸ್ಥಿತಿಯಲ್ಲಿ ಸಿಕ್ಕಿಬಿದ್ದರೆ, ಅವರು ಸುಮಾರು 12,860 ಪೌಂಡ್‌ಗಳ ಅಂದರೆ ಸುಮಾರು 12 ಲಕ್ಷ ರೂಪಾಯಿಗಳ ಭಾರೀ ದಂಡವನ್ನು ಹಾಕಲಾಗುತ್ತದೆ. ಇದಲ್ಲದೆ, ಫ್ರಾನ್ಸ್‌ನ ಕ್ಯಾಪ್ ಡಿ'ಆಗ್ಡೆ ನಗರದಲ್ಲಿ ಯಾವುದೇ ರೀತಿಯ ಫೋಟೋಗ್ರಫಿಯನ್ನು ಸಹ ನಿಷೇಧಿಸಲಾಗಿದೆ. ಯಾರಾದರೂ ಹಾಗೆ ಮಾಡಲು ಪ್ರಯತ್ನಿಸಿದರೆ, ಅವರಿಗೆ ದಂಡ ವಿಧಿಸಲಾಗುತ್ತದೆ.

ಪ್ರೀತಿ ಇರ್ಬೇಕು, ಕಾಳಜಿ ಇರ್ಬೇಕು ನಿಜ. ಆದ್ರೆ ಅತಿಯಾದ್ರೆ ಏನ್ ಚಂದ ನೀವೇ ಹೇಳಿ?

ಯುಕೆಯಲ್ಲಿ ಬೆಳೆಯುತ್ತಿರುವ ಪ್ರವೃತ್ತಿ: ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿಯೂ ಸಹ ಸಾರ್ವಜನಿಕ ಸ್ಥಳದಲ್ಲಿ ಬಟ್ಟೆ ಇಲ್ಲದೆ ನಡೆಯುವುದು ಅಪರಾಧವಲ್ಲ. ಕಿರುಕುಳ ನೀಡಲು, ತೊಂದರೆ ನೀಡಲು ಹೀಗೆ ಮಾಡಿರುವುದು ಸಾಬೀತಾದರೆ ಅದು ಅಪರಾಧದ ವ್ಯಾಪ್ತಿಗೆ ಬರುತ್ತದೆ.

click me!