ಕಂಟಕ ತರುವ ಬ್ರಾ ಬೇಕಿಲ್ಲ, ಸ್ತನ ಕ್ಯಾನ್ಸರ್‌ನ 7 ಲಕ್ಷಣಗಳು

By Web DeskFirst Published Oct 13, 2018, 10:47 PM IST
Highlights

ಅಕ್ಟೋಬರ್ 13 ನೋ ಬ್ರಾ ಡೇ.. ಹೌದು ಸ್ತನ ಕ್ಯಾನ್ಸರ್ ಜಾಗೃತಿಗೆ ಇಂಥದ್ದೊಂದು ದಿನ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.

ಇಡೀ ಅಕ್ಟೋಬರ್ ತಿಂಗಳನ್ನು ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳನ್ನಾಗಿ ಆಚರಿಸಲಾಗುತ್ತಿದೆ. ಅಕ್ಟೋಬರ್ 13 ಸ್ತನಗಳು ಸ್ವಾತಂತ್ರ್ಯ ಅನುಭವಿಸುವ ದಿನ ಮಾತ್ರವಲ್ಲ, ಪ್ರತಿಯೊಬ್ಬ ಮಹಿಳೆಯೂ ನಿಯಮಿತವಾಗಿ ಸ್ತನಗಳ ಪರೀಕ್ಷೆ ಮಾಡಿಸಿಕೊಂಡು, ಸ್ತನ ಕ್ಯಾನ್ಸರ್ ಬಗ್ಗೆ ಎಚ್ಚರವಹಿಸುವುದು ಕೂಡ ಅಷ್ಟೇ ಅಗತ್ಯ ಎಂದು ಸಾರಲಾಗುತ್ತದೆ. 

ನೋಬ್ರಾ ಡೇಗೆ ಆಚರಣೆ ಮಾಡಿದ್ದೇವೆ ಎಂದು ಕೆಲ ಸೆಲೆಬ್ರಿಟಿಗಳು, ಕ್ರೀಡಾ ಪಟುಗಳು ತಮ್ಮ ಮೇಲುಡುಪು ಕಿತ್ತೆಸೆದು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. 

ಸ್ತನ ಕ್ಯಾನ್ಸರ್ ನ ಈ 7 ಲಕ್ಷಣಗಳ ಬಗ್ಗೆಯೂ ತಿಳಿದುಕೊಳ್ಳಲೇಬೇಕಾಗುತ್ತದೆ

1. ಸ್ತನಗಳಲ್ಲಿ ಉಬ್ಬು ಅಥವಾ ಗಂಟು ತರಹ ಕಾಣಿಸಿಕೊಳ್ಳುವುದು

2. ಸ್ತನದ ಮೇಲಿನ ಚರ್ಮದದಲ್ಲಿ ಬದಲಾವಣೆ

3. ಸ್ತನದ ಆಕಾರ ಮತ್ತು ಗಾತ್ರದಲ್ಲಿ ಬದಲಾವಣೆ

4.ಸ್ತನದ ಒಂದೊಂದು ಕಡೆ ದಪ್ಪವಾದಂತೆ ಭಾಸವಾಗುವುದು

5. ಸ್ತನದ ತೊಟ್ಟುಗಳ ಆಕಾರದಲ್ಲಿ ಬದಲಾವಣೆ

6. ಸ್ತನದ ತೊಟ್ಟುಗಳ ಮೇಲೆ ಗೀರು ಕಂಡುಬರುವುದು

7. ಸ್ತನಗಳಲ್ಲಿ ಸಣ್ಣ ನೋವು

ಈ ರೀತಿಯ ಲಕ್ಷಣ ಕಂಡುಬಂದರೆ ತಕ್ಷಣ ವೈದ್ಯರ ಬಳಿ ತೆರಳುವುದು ಎಲ್ಲ ಮಹಿಳೆಯರ ಮೊದಲ ಆದ್ಯತೆಯಾಗಬೇಕು. 

pic.twitter.com/pxMYb34Nn4

— Poonam Pandey (@iPoonampandey)
click me!