Viral Video: ಹೊಲದಲ್ಲಿ ಅಡ್ಡಾಡುತ್ತಿದ್ದ ಚಿರತೆ, ಈ ಮನುಷ್ಯನ ಧೈರ್ಯ ನೋಡಿ ಇಡೀ ವಿಶ್ವ ದಂಗಾಯ್ತು

By Contributor AsianetFirst Published Apr 12, 2024, 8:04 AM IST
Highlights

ಕಾಡುಪ್ರಾಣಿಗಳ ಜತೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸುವುದು ಮೂರ್ಖತನವಾಗಬಹುದು, ಜೀವಕ್ಕೇ ಅಪಾಯ ಎದುರಾಗಬಹುದು ಎನ್ನುವ ಅರಿವಿದ್ದರೂ ಎಷ್ಟೋ ಜನ ಅದಕ್ಕೆ ಮುಂದಾಗುತ್ತಾರೆ. ತನ್ನ ಹೊಲದಲ್ಲಿ ಅಡ್ಡಾಡುತ್ತಿದ್ದ ಚಿರತೆಯೊಂದಿಗೆ ಸೆಲ್ಫಿ ತೆಗೆದುಕೊಂಡ ಯುವಕನ ನಡೆಗೆ ಎಲ್ಲೆಡೆ ಅಚ್ಚರಿ, ಮೆಚ್ಚುಗೆಯೂ ವ್ಯಕ್ತವಾಗಿದೆ.

ಕಾಡುಪ್ರಾಣಿಗಳೊಂದಿಗೆ ಮುಖಾಮುಖಿಯಾಗುವುದು ಭಾರತದಲ್ಲಿ ಅಪರೂಪದ ಘಟನೆಯೇನೂ ಅಲ್ಲ. ಬೆಂಗಳೂರಿನಂತಹ ಜನನಿಬಿಡ ಪ್ರದೇಶದ ಅಂಚಿನಲ್ಲೂ  ಚಿರತೆಗಳು ಕಂಡುಬಂದ ಉದಾಹರಣೆಗಳು ಸಾಕಷ್ಟಿವೆ. ಮೈಸೂರಿನ ಸುತ್ತಮುತ್ತ, ಮಲೆನಾಡು ಭಾಗಗಳಲ್ಲಿ ಆನೆ, ಚಿರತೆಯಂತಹ ಕಾಡುಪ್ರಾಣಿಗಳು ಆಗಾಗ ಮನೆಯ ಬುಡಕ್ಕೇ ಬಂದುನಿಲ್ಲುತ್ತವೆ. ಕಾಡುಪ್ರಾಣಿಗಳಿಂದ ಬೆಳೆಹಾನಿ ಆಗುವುದು ಅತಿ ಸಾಮಾನ್ಯ ಘಟನೆ. ಕೆಲವು ಪ್ರದೇಶಗಳಲ್ಲಿ ಅವುಗಳಿಂದ ಜೀವಹಾನಿಯೂ ಸಂಭವಿಸಿದ್ದಿದೆ. ಒಟ್ಟಿನಲ್ಲಿ ಕಾಡುಪ್ರಾಣಿಗಳು ಹತ್ತಿರದಲ್ಲಿ ಎಲ್ಲೋ ಇವೆ ಎಂದು ತಿಳಿದರೂ ಸಾಕು, ಎಲ್ಲರೂ ಭಾರೀ ಹುಷಾರಾಗಿರಲು ಯತ್ನಿಸುತ್ತಾರೆ. ಆದರೆ, ಎಲ್ಲಾದರೂ ಅನಿರೀಕ್ಷಿತವಾಗಿ ಕಾಡುಪ್ರಾಣಿಗಳು ಮುಖಾಮುಖಿಯಾಗಿ ಬಿಡುತ್ತವೆ. ಅಂತಹ ಸಮಯದಲ್ಲಿ ಹೇಗಾದರೂ ಜೀವ ಉಳಿಸಿಕೊಳ್ಳಬೇಕೆಂದು ಭಯ ಪಡುವವರೇ ಹೆಚ್ಚು. ಒಂದೊಮ್ಮೆ ನಿಮ್ಮ ಹೊಲಕ್ಕೆ ಚಿರತೆ ಬಂದು, ನೀವು ಆ ಸಮಯದಲ್ಲಿ ಹೊಲದಲ್ಲೇ ಇದ್ದರೆ ಏನು ಮಾಡುತ್ತೀರಿ? ಖಂಡಿತವಾಗಿ ಅಲ್ಲಿಂದ ಮರಳಿ ಬರಲು ಯತ್ನಿಸುತ್ತೀರಿ. ಆದರೆ, ಒಬ್ಬ ಯುವಕ ಹಾಗೆಲ್ಲ ದೂರ ಓಡಿ ಹೋಗಿಲ್ಲ. ಬದಲಿಗೆ, ಅದರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾನೆ.

ಸೋಷಿಯಲ್ ಮೀಡಿಯಾ (Social Media) ಇನ್ ಸ್ಟಾಗ್ರಾಮ್ ನಲ್ಲಿ @ಘಂಟಾ ಎನ್ನು ಖಾತೆಯಿಂದ ವೀಡಿಯೋವೊಂದನ್ನು (Video) ಪೋಸ್ಟ್ ಮಾಡಲಾಗಿದೆ. ಅದರಲ್ಲಿರುವ ಸನ್ನಿವೇಶ (Situation) ಇಡೀ ವಿಶ್ವದ ನೆಟ್ಟಿಗರನ್ನು (Users) ಆಘಾತ, ಅಚ್ಚರಿಗೆ ದೂಡಿದೆ. ಆಕಸ್ಮಿಕವಾಗಿ ಹೊಲಕ್ಕೆ (Farm Land) ಬಂದ ಚಿರತೆಯೊಟ್ಟಿಗೆ (Leopard) ಯುವಕನೊಬ್ಬ ಸೆಲ್ಫಿ (Selfie) ತೆಗೆದುಕೊಳ್ಳುವುದು ಅದರಲ್ಲಿ ಸೆರೆಯಾಗಿದ್ದು, ಹೊಲದಲ್ಲಿ ಚಿರತೆಯೊಂದು ಅಡ್ಡಾಡುತ್ತಿದ್ದ ಸಮಯದಲ್ಲಿ ಯುವಕ ಅದರ ಬಳಿಗೆ ಭಯವಿಲ್ಲದೆ, ಆರಾಮಾಗಿ ಹೋಗಿ ನಿಂತಿದ್ದೂ ಅಲ್ಲದೆ, ಸೆಲ್ಫಿ ತೆಗೆದುಕೊಳ್ಳುತ್ತಾನೆ.

ಬಾಲಕನ ಮೇಲೆ ಫಿಟ್ಬುಲ್ ನಾಯಿ ದಾಳಿ: ನೋಡುತ್ತಾ ನಿಂತ ಜನ, ರಕ್ಷಣೆಗೆ ಬಂದ ಬೀದಿನಾಯಿಗಳು .. ವೀಡಿಯೋ

ಚಿರತೆಯೂ ಸಹ ಗಾಬರಿಗೆ ಬೀಳದೆ, ಓಡಿ ಹೋಗದೆ, ದಾಳಿ ಮಾಡಲು ಮುಂದಾಗದೇ ತನ್ನ ಪಾಡಿಗೆ ತಾನು ಎಂಬಂತೆ ಸುಮ್ಮನೆ ಕುಳಿತುಕೊಂಡಿರುವುದು ಕಂಡುಬರುತ್ತದೆ. ಇಲ್ಲಿ ಚಿರತೆಯ ವರ್ತನೆ ಕೂಡ ಅಚ್ಚರಿ ಮೂಡಿಸುತ್ತದೆ. ಸಾಮಾನ್ಯವಾಗಿ ಕಾಡುಪ್ರಾಣಿಗಳು (Wild Animals) ಮನುಷ್ಯರು ಹತ್ತಿರ ಬಂದಾಗ ಓಡಿ ಹೋಗುತ್ತವೆ ಅಥವಾ ದಾಳಿ ಮಾಡುತ್ತವೆ. ಆದರೆ, ಇಲ್ಲಿ ಚಿರತೆ ಹಾಗೆ ಮಾಡಿಲ್ಲ. ಬಹುಶಃ ಆ ಯುವಕ ಕೂಡ ಗಾಬರಿಗೆ ಬೀಳದೆ ವರ್ತಿಸಿದ್ದರಿಂದ ಅದು ಕೂಡ ಸಹಜವಾಗಿತ್ತೇನೋ ಗೊತ್ತಿಲ್ಲ. ಬೇರೊಬ್ಬರು ದೂರದಲ್ಲಿ ನಿಂತು ಈ ವೀಡಿಯೋ ಮಾಡಿರುವುದು ತಿಳಿದುಬರುತ್ತದೆ. ಬಳಿಕ, ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ (Post) ಮಾಡಲಾಗಿದೆ.

 
 
 
 
 
 
 
 
 
 
 
 
 
 
 

A post shared by ghantaa (@ghantaa)

 

ಸೆಲ್ಫಿ ತಜ್ಞರ ಭಾರತ

ನೆಟ್ಟಿಗರು ಈ ವೀಡಿಯೋಕ್ಕೆ ಸಖತ್ ಶಾಕ್ ಆಗಿದ್ದಾರೆ. ಹಲವರು ಇದಕ್ಕೆ ಸಾಕಷ್ಟು ತಮಾಷೆಯನ್ನೂ ಮಾಡಿದ್ದಾರೆ.  ಹಲವರು ಮೆಚ್ಚುಗೆ ಸೂಸಿದ್ದಾರೆ. ಒಬ್ಬರು, “ಭಾರತ ಆರಂಭಿಕರ ಸ್ಥಳವಲ್ಲ (Place)’ ಎಂದು ಈ ಸವಾಲಿನ ಅನುಭವವನ್ನು ಎತ್ತರಕ್ಕೆ ಏರಿಸಿದ್ದಾರೆ. ಮತ್ತೊಬ್ಬರು, “ಚಿರತೆಯಂತೆ ಇರಬೇಕು, ನನ್ನ ಭಯವೆಲ್ಲ ಹೊರಟು ಹೋಯಿತು’ ಎಂದಿದ್ದಾರೆ. ಚಿರತೆ ಜತೆಗೆ ಸೆಲ್ಫಿ ತಗೊಳ್ಳುವ ಯುವಕನ ಬಗ್ಗೆ “ಭಾರತ ದೇಶ ತಜ್ಞರಿಗೂ (Experts) ಹೇಳಿ ಮಾಡಿಸಿದ ಸ್ಥಳವಲ್ಲ’ ಎಂದು ತಮಾಷೆ ಮಾಡಿದ್ದು, ಇಂಥದ್ದೊಂದು ಎಕ್ಸ್ ಟ್ರಾ ಆರ್ಡಿನರಿ ಸನ್ನಿವೇಶದ ಬಗ್ಗೆ ಮೆಚ್ಚುಗೆ ಸೂಸಿದ್ದಾರೆ. ಮತ್ತೊಬ್ಬರು “ಕ್ಯಾಮರಾಮ್ಯಾನ್ ಹೇಗಿದ್ದರೂ ಸಾಯುವುದಿಲ್ಲ ಎನ್ನುವುದು ಬ್ರೋ ಗೆ ಗೊತ್ತು’ ಎಂದು ತಮಾಷೆ ಮಾಡಿದ್ದಾರೆ.

ಹೆಚ್ಚು ಮಕ್ಕಳಿರೋರಿಗೆ ಆಸ್ತಿ ಹಂಚಿ! ಕೋಟ್ಯಾಧಿಪತಿ ವಿಲ್ ನೋಡಿ ಸರ್ಕಾರವೇ ದಂಗು

ಒಟ್ಟಿನಲ್ಲಿ ಈ ವೀಡಿಯೋ ಸಾಕಷ್ಟು ಅಚ್ಚರಿ ಹುಟ್ಟುಹಾಕುವುದರಲ್ಲಿ ಅನುಮಾನವಿಲ್ಲ. ಮನುಷ್ಯ (Man) ಎಂತಹ ಅಪಾಯವನ್ನಾದರೂ ಎದುರಿಸಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸುತ್ತಾನೆ ಎನ್ನುವುದು ಸಹ ಅಚ್ಚರಿದಾಯಕ ವಿಚಾರವೇ ಹೌದು.

click me!