ರಾಜಸ್ಥಾನದ ಹಲ್ಲಿಮಾಂಸ ತಿಂದು ಮಂಚ ಏರಿದ್ರೆ ನಿಜಕ್ಕೂ 'ಆ' ಸಾಮರ್ಥ್ಯ ಹೆಚ್ಚುತ್ತಾ?

By Suvarna NewsFirst Published Dec 12, 2019, 8:54 PM IST
Highlights

ಕೋರಮಂಗಲದ ಪಬ್ನಲ್ಲಿ ಬಲೆಗೆ ಬಿದ್ದ ಹಲ್ಲಿ ಮಾರಾಟಗಾರರು/ ಅಷ್ಟಕ್ಕೂ ಹಲ್ಲಿ ಮಾಂಸವನ್ನು ಯಾಕೆ ಬಳಕೆ ಮಾಡ್ತಾರೆ?/ ಹಲ್ಲಿ ಮಾಂಸದಿಂದ ನಿಜಕ್ಕೂ ಸೆಕ್ಸ್ ಲೈಫ್ ಚೆನ್ನಾಗಿ ಆಗುತ್ತಾ?

ಬೆಂಗಳೂರು:  ರಾಜಸ್ಥಾನದಲ್ಲಿ ದೊರೆಯುವ ಸ್ಪೈನಿ ಬಾಲದ ಹಲ್ಲಿಯ ಮಾಂಸ ಸೇವಿಸಿದರೆ ಲೈಂಗಿಕ ಶಕ್ತಿ ವೃದ್ಧಿಯಾಗುತ್ತದೆಯೇ? ಹಲ್ಲಿಗಳನ್ನು ಇಟ್ಟುಕೊಂಡರೆ ಅದೃಷ್ಟ ಜಾಸ್ತಿಯಾಗಿ ಅಷ್ಟ ಐಶ್ವರ್ಯ ಮನೆಯಲ್ಲಿ ತುಂಬಿಕೊಳ್ಳುವುದೆ? ಸತ್ಯ-ಮಿಥ್ಯಗಳು ಏನೇ ಇರಲಿ ಹಲ್ಲಿ ಸ್ಮಗ್ಲರ್ ಮಾಡುವ ಜಾಲ ಮಾತ್ರ ಬೆಳೆದುಕೊಂಡಿದೆ.

ಎಲ್ಲಿಂದ ಈ ಊಹಾಪೋಹಗಳು, ಗೊಡ್ಡು ನಂಬಿಕೆಗಳು ಹುಟ್ಟಿಕೊಂಡವೋ ಗೊತ್ತಿಲ್ಲ. ಫ್ಯಾಂಟಸಿ ಪಡೆಯಲು ಒಂದು ಕಾಡು ಹಲ್ಲಿಗೆ 50 ಸಾವಿರ ನೀಡಲು ಮುಂದೆ ಬರುವವರಿದ್ದಾರೆ. ಕೋರಮಂಗಲ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ರಾಜಸ್ಥಾನದ ಹಲ್ಲಿಗಳನ್ನು ಬೆಂಗಳೂರಿಗೆ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದವರನ್ನು ಬಂಧಿಸಿರುವುದು ಸುದ್ದಿ.

ಪುರುಷರು ಎಷ್ಟು ದಿನಕ್ಕೊಮ್ಮೆ ವೀರ್ಯ ಬಿಡುಗಡೆ ಮಾಡಬೇಕು?

ಯಾರೂ ಏನೇ ಹೇಳಲಿ ತಮಿಳುನಾಡು ಮತ್ತು ರಾಜಸ್ಥಾನದ ಹಲ್ಲಿಗಳಿಗೆ ಬೆಂಗಳೂರಿನಲ್ಲಿ ಗೊತ್ತಿಲ್ಲದೇ ಒಂದು ಮಾರುಕಟ್ಟೆ ನಿರ್ಮಾಣ ಆಗಿಹೋಗಿದೆ. ರಿಯಲ್ ಎಸ್ಟೇಟ್ ಉದ್ದಿಮೆದಾರರು ಮತ್ತು ಸಾಫ್ಟವೇರ್ ಕುಳಗಳು ಹಲ್ಲಿಯ ಹಿಂದೆ ಬಿದ್ದಿದ್ದಾರೆ.

ಲೈಂಗಿಕ ಶಕ್ತಿ ಹೆಚ್ಚಳವಾಗುತ್ತದೆಯಾ? ಹಲ್ಲಿಯ ರಕ್ತವನ್ನು ರಮ್ಗೆ ಮಿಕ್ಸ್ ಮಾಡಿ ಕುಡಿಯುವುದರಿಂದ ಅಥವಾ ರಾಜಸ್ಥಾನದ ಹಲ್ಲಿಗಳ ಮಾಂಸ ಸೇವನೆಯಿಂದ ಲೈಂಗಿಕ ಶಕ್ತಿ ಹೆಚ್ಚಳವಾಗುತ್ತದೆ ಎಂಬ ಗೊಡ್ಡು ನಂಬಿಕೆಯೇ ಈ ಮಾರಾಟಗಾರರ ಬಂಡವಾಳ. ಅದು ಯಾರಿಗೆ ಯಾವಾಗ ಲಾಭ ತಂದಿದೆಯೋ ಗೊತ್ತಿಲ್ಲ. ಹಲ್ಲಿ ತಂದು ಮಾರುವವರ ಜೇಬಿಗೆ ಕಾಸು ಬಿದ್ದಿದ್ದು ನಿಜ. 

ಇದೇ ಹಲ್ಲಿ ಸಾಗಾಟ ಒಂದು ದಂಧೆಯಾಗಿ ಮಾರ್ಪಾಡುಹೊಂದಿದೆ. ಸಂಭೋಗದಲ್ಲಿ ಹೆಚ್ಚಿನ ಸಮಯ ಕಾಯ್ದುಕೊಳ್ಳಬಹುದು ಎಂಬ ಮಾತು ಬಾಯಿಂದ ಬಾಯಿಗೆ ಹರಿದಾಡಿದೆ. 'ನೀನು ರಾಜಸ್ಥಾನದ ಹಲ್ಲಿ ತಿಂದಿಲ್ವಾ, ತಿಂದು ನೋಡು ಆಮೇಲೆ ಮಜಾನೆ ಬೇರೆ ಇರುತ್ತೆ' ಸ್ನೇಹಿತರ ನಡುವಿನ ಈ ಮಾತುಗಳೆ ಇದೊಂದು ಕರಾಳ ದಂಧೆಗೆ ಮೂಲ.

ರಾಜಸ್ಥಾನದ ಹಲ್ಲಿ ಮಾರಾಟಗಾರರ ಬಳಿ ಸಿಕ್ಕಿದ್ದೇನು?

ಅದೃಷ್ಟ ಹೆಚ್ಚಾಗುತ್ತಾ? ತಮಿಳುನಾಡಿನ ಹಲ್ಲಿಗಳನ್ನು ತಂದಿಟ್ಟುಕೊಂಡರೆ ನಿಮ್ಮ ಅದೃಷ್ಟವೇ ಬದಲಾಗಿ ಹೋಗಲಿದೆ. ಮನೆಯಲ್ಲಿ ಲಕ್ಷ್ಮೀ ಕಾಲು ಮುರಿದುಕೊಂಡು ಬಿದ್ದಿರುತ್ತಾಳೆ ಎಂದು ಕೆಲ ಟೊಳ್ಳು ಜ್ಯೋತಿಷಿಗಳು ನೀಡುವ ಸಲಹೆಗೆ ತಲೆದೂಗುವವರು ಹಲ್ಲಿಯ ಹಿಂದೆ ಬೀಳುತ್ತಾರೆ.

ಹಲ್ಲಿ ಮಾಂಸ ವಯಾಗ್ರದಂತೆ ಕೆಲಸ ಮಾಡುತ್ತದೆ. ಸಂಗಾತಿಗೆ ಅದ್ಭುತ ಕ್ಷಣಗಳನ್ನು ನೀಡಬಹುದು. ಒಮ್ಮೆ ಸೇವಿಸಿದರೆ ಪರಿಣಾಮ ತುಂಬಾ ದಿನಗಳವರೆಗೂ ಇರುತ್ತದೆ ಎಂಬೆಲ್ಲ ಪುಕ್ಕಟೆ ನಂಬಿಕೆಗಳಿಗೆ ಇಂದಿರಾನಗರ ಮತ್ತು ಕೋರಮಂಗಲದ ಪಬ್‌ಗಳೆ ಸಾಕ್ಷಿ!

ಹಲ್ಲಿ ಎಂದರೆ ಮನೆಯಲ್ಲಿ ಕಿಚ-ಪಿಚ ಮಾಡುವ ಹಲ್ಲಿ ಮಾತ್ರ ಎಂದು ಪರಿಗಣಿಸಬೇಡಿ. ಓತಿಕ್ಯಾತ, ಊಸರವಳ್ಳಿ, ಸ್ಪೈನಿ ಬಾಲ, ತಮಿಳುನಾಡು ಮೂಲ, ರಾಜಸ್ಥಾನ ಮರುಭೂಮಿ ಮೂಲ..ಹೀಗೆ ವಿಜ್ಞಾನಿಗಳೇ ತಲೆ ಮೇಲೆ ಕೈಹೊತ್ತುಕೊಳ್ಳುವಷ್ಟು ಭಿನ್ನ ತಳಿಗಳು ಹಲ್ಲಿ ಮಾರಾಟಗಾರರಿಗೆ ಗೊತ್ತಿದೆ.

ಯಾರೂ ಏನೇ ಹೇಳಿದರೂ ಈ ನಂಚಿಕೆಗಳಿಗೆ ವೈಜ್ಞಾನಿಕವಾಗಿ ಯಾವ ಆಧಾರ ಇಲ್ಲ. ಹಲ್ಲಿ ಮಾಂಸ ತಿನ್ನುವುದು ಬಿಡುವುದು ಅವರವರಿಗೆ ಬಿಟ್ಟಿದ್ದು. ಹಲ್ಲಿ ಮಾರಾಟಗಾರರು ಪೊಲೀಸರ ಬಲೆಗೆ ಬಿದ್ದರೆ ಮಾತ್ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಜೈಲುವಾಸ ಅನುಭವಿಸಬೇಕಾದದ್ದು ಕಾನೂನಿನ ಅನಿವಾರ್ಯ.

ಆಂಗ್ಲಭಾಷೆಯಲ್ಲಿ ಓದುವವರಿಗೂ ಆಯ್ಕೆ

ಕೆಲವು ಮನುಷ್ಯನ ಅರ್ಥವಿಲ್ಲದ ನಂಬಿಕೆಗಳಿಂದೆ ವನ್ಯ ಜೀವಿಗಳು ತಮ್ಮ ಜೀವ ತೆರಬೇಕಾಗಿ ಬರುವುದು ಮಾತ್ರ ದುರಂತೆ. ಇಂಥದ್ದೆ ಕೆಲವು ನಂಬಿಕೆಗಳಿಂದ ಚೀನಾ ವೆಟ್ ಶಾಪ್‌ಗಳು ಸಕ್ರಿಯವಾಗಿದ್ದು, ಅಲ್ಲಿ ಯಾವ ಪ್ರಾಣಿ, ಪಕ್ಷ ಮಾಂಸ ಬೇಕಾದರೂ ಲಭ್ಯವಿದ್ದು, ತಿನ್ನಲು ಜನರು ಸಾಯುತ್ತಾರೆ. ಅಪರೂಪದ ಪ್ರಾಣಿಗಳನ್ನು ಸಾಯಿಸಿ, ತಿನ್ನುವುದರಿಂದ ಅನೇಕ ಹೊಸ ರೋಗಗಳಿಗೆ ದಾರಿ ಮಾಡಿಕೊಡುತ್ತಿರುವುದೂ ಹೌದು ಎಂಬುವುದು ಇದೀಗ ಜಗಜ್ಜಾಹೀರವಾಗಿದೆ. 

click me!