ಊಟ, ಉಪವಾಸ ಮತ್ತು ಆರೋಗ್ಯ

By Kannadaprabha News  |  First Published Sep 11, 2018, 4:57 PM IST

ನಾನು ತಿನ್ನುವ ಆಹಾರ ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಅಥವಾ ಧನಾತ್ಮಕ ಪರಿಣಾಮ ಬೀರುತ್ತದೆ. ಉಪವಾಸ ಮಾಡೋದು, ಕೆಲವು ಆಹಾರಗಳನ್ನು ತಿನ್ನುವುದರಿಂದ ದೇಹದ ವೈರಸ್ ಮೇಲೂ ಪರಿಣಾಮ ಬೀರುತ್ತದೆ ಎಂಬ ಸಂಶೋದನೆಯೊಂದು ನಡೆದಿದೆ.


ಉಪವಾಸ ಎಂದರೆ ನಮಗಷ್ಟೇ ಅಲ್ಲ, ವೈರಸ್‌ಗಳಿಗೆ ಸಹ ಎಂದು ವ್ಯಾಖ್ಯಾ ಸುತ್ತಾರೆ ಇಂಡಿಯಾನಾದಲ್ಲಿ ಇಂಡಿಯಾನ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸನ್‌ನ ತಜ್ಞ ಡಾ. ರಿಚರ್ಡ್ಸ್ ಎಫ್ ಗ್ರಿಫಿತ್ ತಮ್ಮ 3-4 ರೋಗಿಗಳ ಆಹಾರ ಕ್ರಮವನ್ನು 20 ವರ್ಷ ಕಾಲ ನಿರಂತರವಾಗಿ ಅಧ್ಯಯನ ಮಾಡಿ ದಾರೆ ಅವರು. ಅವರ ಹೇಳಿಕೆಯ ತಾತ್ಪರ್ಯವೂ ನಾವು ಏನು ಆಹಾರ ತೆಗೆದುಕೊಳ್ಳುತ್ತೇವೆಯೊ ಅದು ವೈರಸ್‌ಗಳ ಮೇಲೂ ಪ್ರಭಾವ ಬೀರುತ್ತದೆ ಎನ್ನುವುದೇ ಆಗಿದೆ. 

Read more!

ಆಹಾರ ಎನ್ನುವುದು ಅತ್ಯಂತ ಸೂಕ್ಷ 3-4 ಸಂಗತಿಗಳನ್ನು ಒಳಗೊಂಡ ವಿಜ್ಞಾನವೂ ಹೌದು. ಆಹಾರದ ಪ್ರತಿ ಕಣದಲ್ಲಿನ ಅತಿಸಣ್ಣ ಪ್ರಮಾಣದಲ್ಲಿರುವ ರಾಸಾಯನಿಕವೂ ಆರೋಗ್ಯದ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ಪರಿಣಾಮ ಬೀರುತ್ತಲೇ ಇರುತ್ತದೆ. ಸರ್ಪಸುತ್ತಿಗೆ ಕಾರಣವಾಗುವ ವೈರಸ್‌ಗಳಿಗೆ ಚಿಗಿತುಕೊಳ್ಳಲು ಅಗತ್ಯವಿರುವ ಪದಾರ್ಥಗಳು ಆಹಾರದಿಂದ ಸಿಕ್ಕಾಗ ತಮ್ಮ 3-4 ಪ್ರತಾಪ ತೋರಲು ಆರಂಭಿಸುತ್ತವೆ. 

Tap to resize

Latest Videos

ಈ ಪ್ರಕ್ರಿಯೆ ಒಂದೇ ದಿನ ಅಥವಾ ತಿಂಗಳಿನಲ್ಲಿ ನಡೆಯುವಂತಹದಲ್ಲ. ಈ ವೈರಸ್‌ಗಳು ಸರ್ಪಸುತ್ತು ರೀತಿ ಪ್ರಕಟಗೊಳ್ಳಲು ವರ್ಷಗಟ್ಟಲೆ ಕಾಲಾವಣಿ ತೆಗೆದುಕೊಳ್ಳುತ್ತವೆ.ಅದನ್ನೇ ಗ್ರಿಫಿತ್ ಇನ್ನೊಂದು ರೀತಿಯಲ್ಲಿ ಅರ್ಥೈಸಿ, ವೈರಸ್‌ಗಳ ಉಪವಾಸ ಎಂದು ಕರೆದಿರುವುದು.

ಕುತೂಹಲದ ವಿಷಯ ಎಂದರೆ 1950ರ ದಶಕದಲ್ಲಿಯೇ ಈ ಕುರಿತು ಸಾಕಷ್ಟು ಸಂಶೋಧನೆಗಳು ನಡೆದಿದ್ದವು ಎನ್ನುವುದು. ಆಹಾರದಲ್ಲಿನ ಅಮಿನೊ ಆಮ್ಲಗಳು ಹಪ್ರಿಸ್ ಸಿಂಪ್ಲೆಕ್ಸ್ ವೈರಸ್‌ಗಳು ಬಲ ಪಡೆದುಕೊಳ್ಳುವುದಕ್ಕೆ ನೆರವಾಗುತ್ತವೆ ಎನ್ನುವುದು ಆಗಲೇ ಸಾಬೀತಾಗಿತ್ತು. ನಿರಂತರವಾಗಿ ಅಮಿನೊ ಆಮ್ಲಗಳು ಸಿಕ್ಕರಂತೂ ಎಷ್ಟು ವೇಗವಾಗಿ  ಬೆಳೆಯುತ್ತ, ಹರಡಿಕೊಳ್ಳುತ್ತ ಹೋಗುತ್ತವೆ ಎಂದರೆ ಅದನ್ನು ಊಹಿಸಿಕೊಳ್ಳುವುದೂ ಕಷ್ಟ. ಕೋಶಗಳ ಭದ್ರ ರಕ್ಷಾ ಕವಚಗಳನ್ನು ಭೇದಿಸಿ ಮುನ್ನುಗ್ಗಲು ಅಮಿನೊ ಆಮ್ಲಗಳು ನೆರವಾಗುತ್ತವೆ ಎನ್ನುವ ವಾದವಿದೆ. ಅಮಿನೊ ಆಮ್ಲಗಳು ಶರೀರಕ್ಕೆ ಬೇಕು ಎನ್ನುವುದೂ ನಿಜ, ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾದರೆ ಇಂತಹ ತೊಂದರೆಗಳೂ ಕಾಣಿಸಿಕೊಳ್ಳುತ್ತವೆ.

ಕನ್ನಡ ಪ್ರಭದಲ್ಲಿ ಪ್ರಕಟವಾದ ಸದಾನಂದ ಮಯ್ಯ ಅವರ ಬೆಳ್ಳಿ ತಟ್ಟೆ ಅಂಕಣದ ಭಾಗ

click me!