ಇಲಿ ಕಂಡ್ರೆ ವಾಕರಿಕೆ ಬರುತ್ತೆ ಅಂತದ್ರಲ್ಲಿ ಅದನ್ನು ತಿನ್ನೋಕೆ ಆಗುತ್ತಾ ಅಂತ ಕೇಳ್ಬೇಡಿ. ಇಲಿಯನ್ನು ಹುರಿದು ತಿನ್ನುವ ಜನರಿದ್ದಾರೆ. ಅದನ್ನು ಅವರು ಆರೋಗ್ಯಕರ ಅಂತ ನಂಬ್ತಾರೆ.
ಮನೆ ಪಕ್ಕದ ಓಣಿಯಲ್ಲಿ ಇಲಿ (Rat) ಮರಿ ಕಂಡ್ರೆ ಮೈ ಜುಮ್ ಎನ್ನುತ್ತದೆ. ಕೆಲವರು ಇಲಿ ಅಂದ್ರೆ ಮಾರು ದೂರ ಓಡ್ತಾರೆ. ಅಲ್ಲಿ ಇಲ್ಲಿ ಬಿಲ ಮಾಡ್ಕೊಂಡು ಮನುಷ್ಯನಿಗೆ ಕಾಟ ಕೊಡ್ತಾ, ಬೆಳೆ ಹಾಳು ಮಾಡುವ ಈ ಇಲಿಗಳು ಮನೆಗೆ ಬಂದ್ರೆ ದೊಡ್ಡ ತಲೆನೋವು. ನಾಯಿ, ಬೆಕ್ಕಿಗೆ ಆಹಾರವಾಗುವ ಈ ಇಲಿಗಳು ರಸ್ತೆ ಮಧ್ಯದಲ್ಲಿ ಕೊಳೆತು ಬಿದ್ದಿದ್ರೆ, ವಾಕರಿಕೆ ಬರುತ್ತೆ. ಅಂತದ್ರಲ್ಲಿ ಈ ಇಲ್ಲಿಯನ್ನು ತಿನ್ನುವ ಮನುಷ್ಯರು ನಮ್ಮಲ್ಲಿದ್ದಾರೆ ಅಂದ್ರೆ ನೀವು ನಂಬ್ಲೇಬೇಕು. ನಮ್ಮಲ್ಲಿ ಪಾನಿಪುರಿ, ಮೊಮೊ, ಕಬಾಬ್, ಚಿಕನ್ ಮಾರಾಟವಾದಂತೆ ಒಂದು ದೇಶದಲ್ಲಿ ಬೀದಿ ಬದಿಯಲ್ಲಿ ಇಲಿಗಳ ಮಾರಾಟ ನಡೆಯುತ್ತೆ.
ಇಲಿಗಳೇ ಈ ಜನರಿಗೆ ಉಪಹಾರ : ನಾವು ಇಲಿ ಓಡಿಸೋದು ಹೇಗೆ ಅಂತ ಪ್ಲಾನ್ ಮಾಡಿದ್ರೆ ಇವರು ಇಲಿ ಹಿಡಿದು ತಿನ್ನೋಕೆ ತಯಾರಿ ನಡೆಸ್ತಾರೆ. ಆಫ್ರಿಕಾ (Africa)ದ ಮಲಾವಿ (Malawi) ಜನರಿಗೆ ಇಲಿ ಫೇವರೆಟ್ ಉಪಹಾರ (Breakfast). ಜನರು ಬೆಳಿಗ್ಗೆ ಮತ್ತೆ ಸಂಜೆ ಇಲಿಯನ್ನು ಉಪಹಾರದ ರೀತಿಯಲ್ಲಿ ಸೇವನೆ ಮಾಡ್ತಾರೆ. ಹುರಿದ ಇಲಿಗಳಿಗೆ ಇಲ್ಲಿ ಬಹಳ ಬೇಡಿಕೆ ಇದೆ.
ಜಗತ್ತಿನಲ್ಲಿ ಅತಿ ಹೆಚ್ಚು ಆಹಾರ ವ್ಯರ್ಥ ಮಾಡುವ ಟಾಪ್ 10 ದೇಶಗಳು; ಭಾರತಕ್ಕೆ ಎಷ್ಟನೇ ಸ್ಥಾನ?
ಹುರಿದ ಇಲಿ (Fried Rat) ಬೀದಿ ಆಹಾರ. ಭಾರತೀಯ ಮಾರುಕಟ್ಟೆಯಲ್ಲಿ ಸೌತೆಕಾಯಿ, ಕಡಲೆಪುರಿ ಮಾರಾಟ ಮಾಡಿದಂತೆ ಇಲ್ಲಿ ಇಲಿಯನ್ನು ಹುರಿದು ಮಾರಾಟ ಮಾಡ್ತಾರೆ. ನೀವು ಮಲಾವಿ ಹೆದ್ದಾರಿಯುದ್ದಕ್ಕೂ ಇದ್ದನ್ನು ನೋಡ್ಬಹುದು. ಇಲ್ಲಿನ ಜನರು ಇಲಿಯನ್ನು ಪ್ರೋಟೀನ್ ಮೂಲ ಎಂದು ಭಾವಿಸಿದ್ದಾರೆ. ಹೆಚ್ಚಿನ ಪ್ರೋಟೀನ್ (Protein) ಗಾಗಿ ಅವರು ಹುರಿದ ಇಲಿಯನ್ನು ತಿನ್ನುತ್ತಾರೆ.
ಇಲಿ ಭೇಟಿ ಇಲ್ಲಿನವರ ಕಸುಬು : ಪೂರ್ವ ಆಫ್ರಿಕಾದ ಮಲಾವಿ ಜನರು ಇಲಿ ಭೇಟಿಯನ್ನು ಉದ್ಯೋಗ ಮಾಡಿಕೊಂಡಿದ್ದಾರೆ. ಅವರು ಜೋಳದ ಗದ್ದೆಗೆ ಹೋಗಿ ಇಲಿಗಳ ಬೇಟಿಯಾಡುತ್ತಾರೆ. ಭೂಮಿಯನ್ನು ಅಗೆದು, ಅದರಲ್ಲಿ ಅಡಗಿರುವ ಇಲಿಯನ್ನು ಅವರು ಹೊರಗೆ ತೆಗೆಯುತ್ತಾರೆ. ನಂತ್ರ ಅದನ್ನು ಒಂದು ಕೋಲಿಗೆ ನೇತುಹಾಕಿ, ಅದನ್ನು ಹುರಿದು ಮಾರಾಟ ಮಾಡುತ್ತಾರೆ. ನಿಮಗೆ ನಾನಾ ರೀತಿಯ ಇಲಿ ಖಾದ್ಯಗಳು ಸವಿಯಲು ಸಿದ್ಧವಿರುತ್ತವೆ. ಅದನ್ನು ಬೇಯಿಸಿ ಇಲ್ಲವೆ ಉಪ್ಪುಹಾಕಿ ಹುಡಿದು ಮಾರಾಟ ಮಾಡಲಾಗುತ್ತದೆ. ಕೆಲವರು ಒಣಗಿಸಿದ ಇಲಿಯನ್ನು ಮಾರಾಟ ಮಾಡುತ್ತಾರೆ. ಬೀದಿ ಬದಿಯಲ್ಲಿ ಸಿಗುವ ಅತ್ಯಂತ ಕಡಿಮೆ ಬೆಲೆಯ ಹಾಗೂ ಆರೋಗ್ಯಕ್ಕೆ ಉತ್ತಮ ಆಹಾರ ಇದೆಂದು ಇಲ್ಲಿನ ಜನರು ನಂಬುತ್ತಾರೆ.
ಎ, ಬಿ, ಸಿ, ಇ, ಕೆ ವಿಟಮಿನ್ ಹೊಂದಿರುವ 'ಹಸಿ ಬಟಾಣಿ' ಸೀಸನ್ ಆರಂಭ!
ಮಲಾವಿಯಲ್ಲಿ ಬೆಳೆ ನಾಶ ಹೆಚ್ಚಾಗುತ್ತಿದೆ. ಇಲ್ಲಿನ ಜನ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಮಲಾವಿಯಲ್ಲಿ ಆರ್ಥಿಕ ದುರ್ಬಲರ ಸಂಖ್ಯೆ ಅತಿ ಹೆಚ್ಚಿನ ಪ್ರಮಾಣದಲ್ಲಿದೆ. ಇಲ್ಲಿನ ಜನರಿಗೆ ದುಬಾರಿ ಬೆಲೆಯ ಆಹಾರವನ್ನು ಖರೀದಿ ಮಾಡಲು ಸಾಧ್ಯವಾಗ್ತಿಲ್ಲ. ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಅವರು ಇಲಿಗಳನ್ನೇ ಆಹಾರವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಬಡವರು ದಿನದ ಎರಡು ಹೊತ್ತು ಇಲಿ ತಿಂದು ತಮ್ಮ ಜೀವನ ಸಾಗಿಸುತ್ತಿದ್ದಾರೆ.
ಇಲ್ಲಿಯೂ ಪ್ರಸಿದ್ಧಿ ಪಡೆದಿದೆ ಒಣಗಿದ ಇಲಿ : ಆಗ್ನೇಯ ಚೀನಾದ ಫುಜಿಯಾನ್ ಪ್ರಾಂತ್ಯದ ಜನರು ಕೂಡ ಒಣಗಿದ ಇಲಿಯನ್ನು ತಿನ್ನುತ್ತಾರೆ. ಗದ್ದೆಯಲ್ಲಿ ಇಲಿ ಕಾಟ ಹೆಚ್ಚಾಗ್ತಿದ್ದಂತೆ ಇಲಿ ಹಿಡಿಯಲು ಮುಂದಾದ ಚೀನಾ ಮಂದಿ ಅದನ್ನು ತಿನ್ನುವ ಅಭ್ಯಾಸ ಮಾಡಿಕೊಂಡ್ರು. ಅತಿ ಹೆಚ್ಚು ಪ್ರೋಟೀನ್ ಇದರಲ್ಲಿದೆ ಎಂದು ಚೀನಾ ಮಂದಿ ಕೂಡ ನಂಬ್ತಾರೆ. ಅಷ್ಟೇ ಅಲ್ಲ ಮಕ್ಕಳಿಗೆ ಒಣಗಿದ ಇಲಿ ನೀಡಿದ್ರೆ ಅವರು ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡೋದಿಲ್ಲ ಎಂದು ಚೀನಾ ಮಂದಿ ನಂಬಿದ್ದಾರೆ.