ಸೋಲೋ ಟ್ರಿಪ್‌ಗೆ ಬೆಸ್ಟ್ ಪ್ಲೇಸ್ ಇವು...

By Web DeskFirst Published Jul 27, 2018, 4:52 PM IST
Highlights

ಈಗಂತೂ ಯುವಕರು ಟ್ರಿಪ್ ಪ್ಲ್ಯಾನ್ ಮಾಡುತ್ತಲೇ ಇರುತ್ತಾರೆ. ವೀಕೆಂಡ್ ಎಂದರೆ ಒಂದು ಪ್ಲೇಸ್‌ಗೆ ಹೋಗಲು ಪ್ಲ್ಯಾನ್ ಮಾಡ್ತಾರೆ. ನಾಲ್ಕು ಜನರು ಹೋಗಬೇಕೆಂದರೆ ಕಪ್ಪೆಯನ್ನು ಹಿಡಿದು ತಕ್ಕಡಿಯಲ್ಲಿ ಹಾಕಿದಂಗೆ. ಅದರ ಬದಲು ನೀವೋಬ್ಬರೇ ಹೊರಟರೆ ಹೇಂಗೆ?

ಇನ್ನೊಬ್ಬರ ಮೇಲೆ ಡಿಪಿಂಡ್ ಆಗದಂತೆ, ಒಬ್ಬರೇ ಸಹ ಜೀವನವನ್ನೂ ಎಂಜಾಯ್ ಮಾಡಬಹುದು. ನಿಮ್ಮೊಳಗಿನ ಟ್ರಾವೆಲರ್‌ನನ್ನು ಜಾಗೃತಗೊಳಿಸಿ. ಒಬ್ಬಂಟಿಯಾಗಿ ದೇಶ ಸುತ್ತಿ ಬನ್ನಿ. 

ಸೋಲೋ ಟ್ರಿಪ್ ಮಾಡಲು ಹೇಳಿ ಮಾಡಿಸಿದ ಹಲವಾರು ತಾಣಗಳು ನಮ್ಮ ದೇಶದಲ್ಲಿವೆ. ಇಲ್ಲಿ ಒಂಟಿಯಾಗಿದ್ದರೂ, ಒಬ್ಬಂಟಿ ಎನಿಸಿದಂಥ ಪರಿಸರವಿದೆ. ಅಂತಹ ಕೆಲವು ತಾಣಗಳು ಇಲ್ಲಿವೆ...

ರಾಜಸ್ಥಾನದಲ್ಲಿ ಸೋಲೋ ಟ್ರಿಪ್ ಮಾಡಿದ ಸಿಂಧು ಲೋಕನಾಥ್

ಪಾಂಡಿಚಿರಿ: ಮಿನಿ ಫ್ರಾನ್ಸ್ ಎನ್ನುವ ಪಾಂಡಿಚೆರಿಯಲ್ಲಿ ಶಾಂತವಾದ ವಾತಾವರಣವಿದೆ. ಟ್ರಿಪ್ ಮೋಜಿನಿಂದ ಕೂಡಿರಲು ಸಾಧ್ಯ. ಬೇಕಿದ್ದರೆ ಬಾಡಿಗೆ ಸೈಕಲ್ ಪಡೆದು, ಫ್ರೆಂಚ್ ಶೈಲಿಯಲ್ಲಿ ನಿರ್ಮಿತವಾದ ನಗರವನ್ನು ಸುತ್ತಬಹುದು.

ಖಜ್ಜಿಯಾರ್: ಇದು ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿರುವ ಪ್ರಾಕೃತಿಕ ಸೌಂದರ್ಯವನ್ನು ಹೊದ್ದು ಮಲಗಿರುವ ಸುಂದರ ತಾಣ. ಆ ಕಾರಣದಿಂದಲೇ ಇದನ್ನು ಮಿನಿ ಸ್ವಿಜರ್ ಲ್ಯಾಂಡ್ ಎನ್ನುತ್ತಾರೆ. ಇಲ್ಲಿ ಸುಂದರ ಜಲಪಾತಗಳು, ಬೆಟ್ಟಗಳು, ಕಾಡುಗಳಿದ್ದು, ನಯನಮನೋಹರ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.

ಕಸೋಲ್: ಹಿಮಾಚಲ ಪ್ರದೇಶದಲ್ಲಿರುವ ಅತ್ಯಂತ ಸುಂದರ ಮತ್ತು ಶಾಂತಿ ಊರಿದು. ಇಲ್ಲಿ ಒಂದು ಬಾರಿ ಹೋಗಿ ಬಂದರೆ ಎಂದೂಮರೆಯಲಾರಗದಂಥ ತಾಣವಿದು. ನಮ್ಮನ್ನೇ ಮರೆಸುವಂಥ ಪ್ರಕೃತಿ ಮಡಿಲು ಇಲ್ಲಿದೆ. 

ಮಥುರಾ- ವೃಂದಾವನ: ಇದು ಕೇವಲ ಧಾರ್ಮಿಕ ತಾಣ ಮಾತ್ರವಲ್ಲ. ಇಲ್ಲಿನ ಕಲ್ಲು ಮಣ್ಣು ಸಹ ಕೃಷ್ಣನ ಪ್ರೀತಿಯನ್ನು ತಿಳಿಸುತ್ತದೆ. ಇಲ್ಲಿನ ಸುಂದರ ಮಂದಿರಗಳು ಅಲ್ಲಿನ ಕಲಾಕೃತಿಗಳು, ಅಲ್ಲಿನ ನಿಧಿವನ, ಶ್ರೀ ಕೃಷ್ಣನ ಜನ್ಮ ಭೂಮಿ, ಗೋಕುಲ, ಬ್ರಿಜ್ ಎಲ್ಲವೂ ವಿಶೇಷತೆಯನ್ನು ಸಾರುತ್ತದೆ. ಹೋಳಿ ಹಬ್ಬವನ್ನು ಎಂಜಾಯ್ ಮಾಡಬೇಕೆಂದರೆ ಇಲ್ಲಿಗೆ ಹೋಗಬೇಕು.

ಮತ್ತಷ್ಟು ಪ್ರವಾಸಿ ಸಂಬಂಧಿ ಸುದ್ದಿಗಳು...

ಈ ಬಾವಿ ನೀರು ತಾಗಿದ ವಸ್ತುಗಳು ಕಲ್ಲಾಗುತ್ತಂತೆ

ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಕನ್ನಡಿಗನ ಸಾಕ್ಷ್ಯಚಿತ್ರ

ಭಯಂಕರ ಸಮುದ್ರವಿದು

ಭಾರತದ ಮೋಸ್ಟ್ ಹಾಂಟೆಂಡ್ ತಾಣಗಳಿವು

ಅಜಿತ್ ಅವರ ಸೋಲೋ ರೈಡ್

click me!