ಸೋಲೋ ಟ್ರಿಪ್ ಈಗೀಗ ಟ್ರೆಂಡ್ ಆಗ್ತಾ ಇದೆ. ಒಬ್ಬೊಬ್ಬರೇ ಬ್ಯಾಗೇರಿಸಿಕೊಂಡು ಹೊರಟು ಬಿಡುವುದು ಹೆಚ್ಚಾಗಿದೆ. ನಟಿ ಸಿಂಧು ಲೋಕನಾಥ್ ರಾಜಸ್ಥಾನಕ್ಕೆ ಸೋಲೋ ಟ್ರಿಪ್ ಹೋಗಿ ಬಂದಿದ್ದಾರೆ. ಅವರ ಅನುಭವಗಳನ್ನು 'ಕನ್ನಡ ಪ್ರಭ'ದೊಂದಿಗೆ ಹಂಚಿಕೊಂಡಿದ್ದು ಹೀಗೆ.
ನಟ, ನಟಿಯರು ದೇಶ ವಿದೇಶ ಸುತ್ತುವುದು ಸಾಮಾನ್ಯ. ಆದರೆ ಒಬ್ಬಂಟಿಯಾಗಿ ಗೊತ್ತಿಲ್ಲದ ಸ್ಥಳಕ್ಕೆ ಹೋಗಿ ವಾರಗಟ್ಟಲೆ ಸುತ್ತಾಡಿ ಬರುವುದು ಅನುಪಮ. ಅಂತಹ ಅನುಪಮವಾದ ಅನುಭವವನ್ನು ನಟಿ ಸಿಂಧೂ ಲೋಕ್‌ನಾಥ್ ಗಳಿಸಿಕೊಂಡು ಬಂದಿದ್ದಾರೆ.
ರಾಜಸ್ಥಾನದ ಪ್ರಮುಖ ನಗರ, ಪಟ್ಟಣ, ಹಳ್ಳಿ ಹಳ್ಳಿಗಳ ಗಲ್ಲಿ ಗಲ್ಲಿಗಳನ್ನು ಅವರು ಸುತ್ತಾಡಿ ತಮ್ಮ ಬಹು ದಿನಗಳ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ಅದರ ಬಗ್ಗೆ ಅವರಿಲ್ಲಿ ಮಾತನಾಡಿದ್ದಾರೆ.
undefined
ಇಷ್ಟು ಮೊತ್ತ ನಿಮ್ಮ ಕೈಯ್ಯಲ್ಲಿದ್ರೆ ನಿತ್ಯಾನಂದನಂತೆ ನೀವೂ ಖರೀದಿಸ್ಬಹುದು ದ್ವೀಪ!
‘ನನಗೆ ತುಂಬಾ ಚಿಕ್ಕ ವಯಸ್ಸಿನಿಂದಲೂ ರಾಜಸ್ಥಾನ್ ನೋಡಬೇಕು ಎನ್ನುವ ಆಸೆ ಇತ್ತು. ಆದರೆ ಅದಕ್ಕೆ ತಕ್ಕ ಅವಕಾಶಗಳು ಸಿಕ್ಕಿರಲಿಲ್ಲ. ಕಳೆದ ಮೂರು ವರ್ಷದಿಂದ ಈ ಬಯಕೆ ಅತಿಯಾಯಿತು. ಫ್ಯಾಮಿಲಿ ಜೊತೆಗೆ ಹೋಗೋಣ ಎಂದು ಸಿದ್ಧತೆ ಮಾಡಿಕೊಂಡರೂ ಕಡೆ ಕ್ಷಣದಲ್ಲಿ ಮತ್ತ್ಯಾರಿಗೋ ಅನಾನುಕೂಲವಾಗಿ, ಏನೋ ಒಂದು ಸಮಸ್ಯೆಯಾಗಿ ಪ್ರಸಾಸ ರದ್ದಾಗುತ್ತಿತ್ತು. ಈ ಭಾರಿ ಹೀಗೆ ಆಗುವುದು ಬೇಡ. ನನ್ನ ಆಸೆಯನ್ನು ಪೂರ್ಣ ಮಾಡಿಕೊಳ್ಳಬೇಕು ಎಂದುಕೊಂಡು ನಾನೊಬ್ಬಳೇ ಹೊರಟು ಬಂದೆ.
ಏಳು ದಿನಗಳ ಕಾಲ ರಾಜಸ್ಥಾನವನ್ನು ಸುತ್ತುತ್ತಾ, ಹೊಸದನ್ನು ಕಾಣುತ್ತಾ, ಮನದ ಮೂಲೆಯಲ್ಲಿ ಅಡಗಿದ್ದ ಆಸೆಯನ್ನು ಈಡೇರಿಸಿಕೊಂಡು ವಾಪಸ್ಸಾದೆ’ ಎಂದು ಹೇಳುವ ಸಿಂಧೂ ಹುಟ್ಟು ಪ್ರವಾಸ ಪ್ರಿಯೆ. ಚಾನ್ಸ್ ಸಿಕ್ಕಾಗೆಲ್ಲಾ ಫ್ಯಾಮಿಲಿ ಜೊತೆಗೋ, ಒಬ್ಬಂಟಿಯಾಗಿಯೋ ಅಲ್ಲಲ್ಲಿ ಸುತ್ತಾಡಿ ಬರುತ್ತಾರೆ. ಕರ್ನಾಟಕದ ಸಾಕಷ್ಟುಜಾಗಗಳಿಗೆ ಸೋಲೋ ಟ್ರಿಪ್ ಮಾಡಿ ಬಂದಿದ್ದಾರೆ. ಹಿಮಾಲಯವನ್ನು ಹತ್ತಿ ಇಳಿದು ಬಂದಿದ್ದಾರೆ.
ಮೋದಿ ಕ್ಷೇತ್ರ ಎಂಬ ಕಾರಣದಿಂದಲ್ಲ, ಇಷ್ಟೆಲ್ಲಾ ನೋಡುವುದಿದೆ ವಾರಣಾಸಿಯಲ್ಲಿ!
ಚಳಿಗಾಲವೇ ಸೂಕ್ತ
‘ಮಳೆಗಾಲ ಮತ್ತು ಬೇಸಿಗೆಯಲ್ಲಿ ಉತ್ತರಭಾರತ ಪ್ರವಾಸ ಅಷ್ಟೊಂದು ಸೂಕ್ತವಲ್ಲ. ಅದರಲ್ಲಿಯೂ ರಾಜಸ್ಥಾನ ಪ್ರವಾಸ ಮಾಡುವುದು ತುಂಬಾ ಕಷ್ಟ. ಬೇಸಿಗೆಯ ಬಿಸಿಗೆ ಇಲ್ಲಿನ ಮರಳು ತುಂಬಾ ಕಾದಿರುತ್ತದೆ. ತುಂಬಾ ಬಿಸಿಲು ಇರುವ ಕಾರಣಕ್ಕೆ ಓಡಾಟವೂ ಸುಲಭವಲ್ಲ. ಅದಕ್ಕಾಗಿಯೇ ಎಲ್ಲಾ ಪ್ರವಾಸಿಗರೂ ಚಳಿಗಾಲವನ್ನು ಆಯ್ಕೆ ಮಾಡಿಕೊಳ್ಳುವುದು. ನಾನು ಇಲ್ಲಿಗೆ ಬರುವ ಮುಂಚೆ ಸಾಕಷ್ಟುಸಿದ್ಧತೆ ಮಾಡಿಕೊಂಡಿದ್ದೆ. ಎಲ್ಲರೂ ಚಳಿಗಾಲವೇ ಸೂಕ್ತ ಎಂದು ಸಲಹೆ ನೀಡಿದ್ದರು. ಅದಕ್ಕಾಗಿಯೇ ಮೂರು ವರ್ಷಗಳ ಕಾಲ ಕಾದು ಇಲ್ಲಿಗೆ ಬಂದೆ’ ಎನ್ನುವ ಸಿಂಧೂ ಇಲ್ಲಿಗೆ ಬರುವ ಮೊದಲು ಗೂಗಲ್, ಆಪ್ತರು, ವಿವಿಧ ವೆಬ್‌ಸೈಟ್‌ಗಳನ್ನು ಜಾಲಾಡಿ ಹೆಣ್ಣು ಮಗಳೊಬ್ಬರು ಹೀಗೆ ಸೋಲೋ ಟ್ರಿಪ್‌ಗೆ ಹೋಗಬೇಕಾದಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು, ಪೂರ್ವ ತಯಾರಿಗಳನ್ನು ಮಾಡಿಕೊಂಡೇ ಬಂದಿದ್ದಾರೆ.
ಹೋಗುವುದಕ್ಕೂ ಮೊದಲು ಭಯವಿತ್ತು
‘ಸಹಜವಾಗಿ ಗೊತ್ತಿಲ್ಲದೇ ಇರುವ ಜಾಗಕ್ಕೆ ಹೋಗುವಾಗ, ಅದರಲ್ಲಿಯೂ ಒಂಟಿ ಹೆಣ್ಣು ಮಗಳು ಹೋಗುವಾಗ ಭಯ ಇದ್ದೇ ಇರುತ್ತದೆ. ಅದೇ ರೀತಿಯ ಭಯ ಸಿಂಧೂ ಅವರಲ್ಲಿಯೂ ಇತ್ತು. ‘ನಾನು ರಾಜಸ್ಥಾನಕ್ಕೆ ಹೋಗುವ ಮೊದಲು ಭಯ ಇತ್ತು. ಆದರೆ ಅಲ್ಲಿನ ಜನರು, ಅವರ ಮುಗ್ಧತೆ ಕಂಡು ಅದೆಲ್ಲಾ ಮಾಯ. ಅಲ್ಲಿನ ಹಳ್ಳಿಗಾಡುಗಳು ಇನ್ನೂ ಅಷ್ಟೇನು ಅಭಿವೃದ್ಧಿಯಾಗಿಲ್ಲ. ನಮ್ಮಲ್ಲಿನ ಬುಡಕಟ್ಟು ಜನರಂತೆ ಅಲ್ಲಿಯೂ ಬುಡಕಟ್ಟುಗಳಿವೆ. ಅವರಲ್ಲಿ ಇನ್ನೂ ಮುಗ್ಧತೆ ಇದೆ.
ರಾಜಸ್ಥಾನದಲ್ಲೊಂದು Solo Ride; 1846 ಕಿಮೀ ಸುತ್ತಿದ ಅಜಿತರ ಅನುಭವ ಕಥನ !
ಅವರನ್ನೆಲ್ಲಾ ನೋಡುವಾಗ ನನಗೆ ಯಾವ ಭಯವೂ ಆಗಲಿಲ್ಲ. ಬದಲಾಗಿ ಅವರ ಬಗ್ಗೆ ಪ್ರೀತಿ, ಕಾಣದ ಕಾಳಜಿ ಮನದಲ್ಲಿ ಹುಟ್ಟುತ್ತಿತ್ತು’ ಎನ್ನುವ ಸಿಂಧೂ ದಡ್ಡ ಅನುಭವಗಳನ್ನು ರಾಜಸ್ಥಾನದ ಜೈಪುರ್, ಜೈಸಲ್ಮೇರ್, ಜೋದ್‌ಪುರ್, ಉದಯಪುರ್‌ಗಳ ಸುತ್ತಮುತ್ತಲಿನಿಂದ ಹೊತ್ತು ತಂದಿದ್ದಾರೆ.
ಇಷ್ಟವಾದವು ಕೋಟೆಗಳು
‘ಇಡೀ ರಾಜಸ್ಥಾನದ ದಿನಗಳಲ್ಲಿ ನಾನು ನಿತ್ಯವೂ ಕೋಟೆಗಳನ್ನು ನೋಡುತ್ತಿದ್ದೆ. ಒಂದೊಂದು ಕೋಟೆಯನ್ನು ಪೂರ್ಣವಾಗಿ ನೋಡಲು ದಿನಗಟ್ಟಲೆ ಸಮಯ ಬೇಕು. ಅಷ್ಟುದೊಡ್ಡದಾಗಿ ಇವೆ. ಆದರೆ ನನಗೆ ಇದ್ದ ಸಮಯದ ಕೊರತೆಯಿಂದ ಮೇಲೆ ಮೇಲೆ ಕಣ್ಣಾಡಿಸಿ ಬಂದರೂ ಕೋಟೆಗಳು ನನಗೆ ತುಂಬಾ ಇಷ್ಟವಾದವು. ಜೊತೆಗೆ ಅಲ್ಲಿನ ಸ್ಥಳೀಯ ಸರಕಾರ ಕೋಟೆಗಳ ರಕ್ಷಣೆಯನ್ನು ಚೆನ್ನಾಗಿ ಮಾಡಿವೆ. ಪ್ರವಾಸಿಗರಿಗೆ ಅಲ್ಲಿ ಒಳ್ಳೆಯ ವ್ಯವಸ್ಥೆ ಇದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಥಳೀಯ ಸಂಸ್ಕೃತಿಯ ಪರಿಚಯ ಮಾಡಿಸುವ ನಿಟ್ಟಿನಲ್ಲಿ ಒಳ್ಳೆಯ ಪರಿಕಲ್ಪನೆ ಇಟ್ಟುಕೊಂಡಿದ್ದಾರೆ’ ಎಂದು ಸಿಂಧೂ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಹೇಳುತ್ತಾರೆ.
ಫುಡ್ ಪ್ರಿಯರಿಗೆ ಒಳ್ಳೆಯ ಜಾಗ
‘ಗುಜರಾತ್ ಮತ್ತು ರಾಜಸ್ಥಾನಿಗಳು ಹೆಚ್ಚು ಸಿಹಿ ಪ್ರಿಯರು. ಬೆಳಿಗ್ಗೆ ಬೆಳಿಗ್ಗೆಯೇ ಅವರಿಗೆ ಸಮೋಸ, ಕಚೋರಿ, ಜಿಲೇಬಿ ಬೇಕೇ ಬೇಕು. ತುಂಬಾ ರೀತಿಯ ಸ್ವೀಟ್‌ಗಳನ್ನು ಮಾಡುತ್ತಾರೆ. ಒಂದೊಂದಕ್ಕೂ ಒಂದೊಂದು ಸ್ವಾದ ಇರುತ್ತದೆ. ಇದುವರೆಗೂ ನೋಡಿರದ, ತಿಂದಿರದ ಸ್ವೀಟ್‌ಗಳನ್ನು ಅಲ್ಲಿ ತಿಂದೆ.
ಜೈಪುರದ ಅರಮನೆ ಪ್ರವಾಸಿಗರಿಗೆ ಮುಕ್ತ, ನೀವೂ ಆಗಿ ಏಕ್ ದಿನ್ ಕಾ ಸುಲ್ತಾನ್
ಫುಡ್ ಎಕ್ಸ್‌ಪೆರಿಮೆಂಟ್ ಮಾಡುವವರಿಗೆ ಅದು ಬೆಸ್ಟ್ ಪ್ಲೇಸ್. ಜೊತೆಗೆ ನನಗೆ ಅಲ್ಲಿ ಕ್ಯಾಮಲ್ ಮಿಲ್‌್ಕ ಕುಡಿಯಬೇಕು ಎನ್ನುವ ಆಸೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಚಪಾತಿಯನ್ನು ನಾನಲ್ಲಿ ಹೆಚ್ಚಾಗಿ ತಿನ್ನುತ್ತಿದ್ದೆ’ ಎಂದು ತಮ್ಮ ಊಟೋಪಚಾರದ ಬಗ್ಗೆ ಹೇಳುತ್ತಾರೆ ಸಿಂಧೂ.
ರಾತ್ರಿ ಪ್ರಯಾಣ ಮತ್ತು ಒಂಟೆ ಮೇಲೇರಿ
‘ನಾನು ಮೊದಲೇ ಎಲ್ಲವನ್ನೂ ಪ್ಲ್ಯಾನ್ ಮಾಡಿಕೊಂಡಿದ್ದೆ. ಅದರಂತೆ ಸಾಗುತ್ತಿದ್ದರೂ ಒಂದೆರಡು ಬಾರಿ ವ್ಯತ್ಯಾಸ ಆಗಿದ್ದು ಇದೆ. ರೈಲಿನಲ್ಲಿ, ಬಸ್ಸಿನಲ್ಲಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಓಡಾಡುತ್ತಿದ್ದೆ. ರಾತ್ರಿ ಪ್ರಯಾಣ ಮಾಡಿದ್ದೂ ಇದೆ. ಜೊತೆಗೆ ಅಲ್ಲಿ ಮೊದಲ ಬಾರಿಗೆ ಕ್ಯಾಮಲ್ ರೈಡ್ ಮಾಡಿ ಬೆನ್ನು ನೋವು ತರಿಸಿಕೊಂಡಿದ್ದೂ ಇತ್ತು. ಅಲ್ಲಿನ ತುಂಬಾ ಕಡಿಮೆ ಉಷ್ಣಾಂಶ, ಮೈ ಕೊರೆಯುವ ಚಳಿ, ನಾನು ಸಿನಿಮಾದಲ್ಲಿಯಷ್ಟೇ ಕಂಡಿದ್ದ ಮರಳುಗಾಡು ನನ್ನ ಕಣ್ಣ ಮುಂದೆ ಇದ್ದಾಗ ಸಿಕ್ಕಾಪಟ್ಟೆಸಂತೋಷವಾಗುತ್ತಿತ್ತು.
ನನಗೆ ಕಡೆಯ ದಿನ ವಾಪಸ್ ಬರುವಾಗಲೂ ಇಲ್ಲಿ ನೋಡುವುದು ಇನ್ನೂ ಸಾಕಷ್ಟಿದೆ ಎಂದುಕೊಳ್ಳುತ್ತಿದ್ದೆನಾದರೂ ಅನಿವಾರ್ಯವಾಗಿ ವಾಪಸ್ ಆದೆ. ಟೋಟಲಿ ಐ ಲವ್ ದಿಸ್ ಟ್ರಿಪ್, ಐ ಲವ್ ರಾಜಸ್ಥಾನ್’ ಎಂದು ತಮ್ಮ ಸೋಲೋ ಟ್ರಿಪ್ ಸಂತಸವನ್ನು ಹಂಚಿಕೊಳ್ಳುತ್ತಾರೆ ಸಿಂಧೂ.
ಕೆಂಡಪ್ರದಿ