ನಿಮ್ಮ ಮಕ್ಕಳ ಬೌದ್ಧಿಕ ಬೆಳವಣಿಗೆ ಅಗತ್ಯವಾದ ಪೋಷಕಾಂಶಗಳಿವು

First Published Jun 6, 2018, 5:31 PM IST
Highlights

ಮಗುವಿನ ಆರನೇ ವಯಸ್ಸಿನಲ್ಲಿ ಮೆದುಳಿನ ಗ್ರಹಿಸುವ ಶಕ್ತಿ ಅಧಿಕವಾಗಿರುತ್ತದೆ. ಈ ವಯಸ್ಸಿನಲ್ಲಿ ಮಕ್ಕಳಿಗೆ ಪೌಷ್ಠಿಕಾಂಶದ ಅಗತ್ಯವಿರುತ್ತದೆ. ಮೆದುಳಿನ ಬೆಳವಣಿಗೆಗೆ, ಕಲಿಕಾನುಭವಕ್ಕಾಗಿ ಈ ವಯೋಮಾನದ ಮಕ್ಕಳಿಗೆ ಪೌಷ್ಠಿಕಾಂಶದ ಅಗತ್ಯವಿರುತ್ತದೆ. ಮೆದುಳಿನ ಬೆಳವಣಿಗೆಗೆ ಅಗತ್ಯವಿರುವ ಪೌಷ್ಠಿಕಾಂಶಗಳು ಯಾವುವು ಎಂದು ನಾವು ನೋಡೋಣ...

ನೀವೆಂದಾದರೂ ನಿಮ್ಮ ಮಗು ಹಿರಿಯರ ಮಾತನ್ನು ಅನುಕರಣೆ ಮಾಡುವುದನ್ನೊ, ಹಿರಿಯರೆದುರು ಸಂಕೋಚವಿಲ್ಲದೇ ನೃತ್ಯ ಮಾಡುವುದನ್ನು ಅಥವಾ ಅನಾಮಿಕರೆದುರು ಆತ್ಮವಿಶ್ವಾಸದಿಂದ ಮಾತನಾಡುವುದನ್ನು ನೋಡಿದ್ದೀರಾ..? 
ವಯಸ್ಕರು ಕೆಲ ಸಂದರ್ಭದಲ್ಲಿ ಸಂಕೋಚ ಪಡುವುದುಂಟು. ಆದರೆ ಮಕ್ಕಳಲ್ಲಿ ಯಾವುದೇ ಹಿಂಜರಿಕೆ ಇರುವುದಿಲ್ಲ. ಯಾಕೆ ಹೀಗೆಂದು ನೀವು ಯೋಚಿಸಿದ್ದೀರಾ..?

ಸಂಶೋಧನೆಯೊಂದರ ಪ್ರಕಾರ ಮಕ್ಕಳ ಮೆದುಳು, ವಯಸ್ಕರ ಮೆದುಳಿಗಿಂತ ಹೆಚ್ಚು ಚಟುವಟಿಯಿಂದ ಕೂಡಿರುತ್ತದೆ. ಹೀಗಾಗಿ ಮಕ್ಕಳು ಹೊಸ ವಿಷಯಗಳನ್ನು ಬೇಗ ಕಲಿಯುತ್ತಾರೆ. ಮೆದುಳು ಬೆಳವಣಿಗೆಯಾಗುತ್ತಿದ್ದಂತೆ, ಮೆದುಳಿನ ನರಮಂಡಲಗಳು ಬೆಳವಣಿಗೆಯಾಗುತ್ತವೆ. ಮಗುವಿನ ಆರನೇ ವಯಸ್ಸಿನಲ್ಲಿ ಮೆದುಳಿನ ಗ್ರಹಿಸುವ ಶಕ್ತಿ ಅಧಿಕವಾಗಿರುತ್ತದೆ. ಆ ಬಳಿಕ ಮೆದುಳಿನ ಬೆಳವಣಿಗೆ ದರ ವರ್ಷದಿಂದ ವರ್ಷಕ್ಕೆ ಕಡಿಯಾಗುತ್ತಾ ಬರುತ್ತದೆ. ಶೇಖಡ 90ರಷ್ಟು ಮೆದುಳಿನ ಬೆಳವಣಿಗೆ ಮಗುವಿನ ಆರನೇ ವಯಸ್ಸಿನಲ್ಲೇ ಆಗಿರುತ್ತದೆ.

ಈ ವಯಸ್ಸಿನಲ್ಲಿ ಮಕ್ಕಳಿಗೆ ಪೌಷ್ಠಿಕಾಂಶದ ಅಗತ್ಯವಿರುತ್ತದೆ. ಮೆದುಳಿನ ಬೆಳವಣಿಗೆಗೆ, ಕಲಿಕಾನುಭವಕ್ಕಾಗಿ ಈ ವಯೋಮಾನದ ಮಕ್ಕಳಿಗೆ ಪೌಷ್ಠಿಕಾಂಶದ ಅಗತ್ಯವಿರುತ್ತದೆ. ಮೆದುಳಿನ ಬೆಳವಣಿಗೆಗೆ ಅಗತ್ಯವಿರುವ ಪೌಷ್ಠಿಕಾಂಶಗಳು:

1. DHA- ಇದು ಮೆದುಳಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದರ ಕೊರತೆಯುಂಟಾದರೆ ಉದ್ವೇಗ, ಕೋಪೋದ್ರೇಕ, ಪ್ರಚೋದನೆ ನ್ಯೂನ್ಯತೆ ಮುಂತಾದ ಸಮಸ್ಯೆಗಳುಂಟಾಗುತ್ತದೆ.
2. ಕೋಲಿನ್ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.
3. ಪಾಂಟೊಥೆನಿಕ್ ಆಸಿಡ್ ಎಂದು ಕರೆಯಲ್ಪಡುವ ಬಿ5 ವಿಟಮಿನ್ ಮೆದುಳಿನ ನರಕೋಶದ ಬೆಳವಣಿಗೆಗೆ ಸಹಕಾರಿಯಾಗಿದೆ.
4. ಐರನ್[ಕಬ್ಬಿಣಾಂಶ]-ಕಬ್ಬಿಣಾಂಶ ಕೂಡಾ ಮೆದುಳಿನ ಬೆಳವಣಿಗೆಗೆ ಅಗತ್ಯವಾಗಿರುವ ಮತ್ತೊಂದು ಅಂಶವಾಗಿದೆ.
5. ಅಯೋಡಿನ್- ಥೈರಾಯಿಡ್ ಹಾರ್ಮೋನ್ ಬೆಳವಣಿಗೆಗೆ ಅಯೋಡಿನ್ ಅಗತ್ಯವಾಗಿ ಬೇಕು. ಅದೇ ರೀತಿ ಮೆದುಳಿನ ಬೆಳವಣಿಯಲ್ಲೂ ಅಯೋಡಿನ್ ಪ್ರಮುಖ ಪಾತ್ರವಹಿಸುತ್ತದೆ.
6. ಜಿಂಕ್ [ಸತು]- ಇದೊಂದು ಖನಿಜಾಂಶವಾಗಿದ್ದು, ನೆನಪಿನ ಶಕ್ತಿ ಹೆಚ್ಚಿಸಲು ಪ್ರಮುಖ ಪಾತ್ರವಹಿಸುತ್ತದೆ.

ಈ ಎಲ್ಲಾ ಪೌಷ್ಠಿಕಾಂಶಗಳು ನಾವು ಸೇವಿಸುವ ದೈನಂದಿನ ಆಹಾರದಲ್ಲಿ ಸಿಗುವುದು ಅತಿ ವಿರಳ. ಯಾಕೆಂದರೆ ನಮ್ಮ ಪೋಷಕರಿಗೆ ಪೌಷ್ಠಿಕಾಂಶದ ಸಮ ಪ್ರಮಾಣದ ಅಗತ್ಯತೆಯ ಅರಿವಿರುವುದಿಲ್ಲ. ಅಲ್ಲದೇ ಮಕ್ಕಳೂ ಕೂಡಾ ಇಂತಹ ಪೌಷ್ಠಿಕಾಂಶಯುಕ್ತ ಆಹಾರ ಸೇವಿಸುವಲ್ಲಿ ಹಿಂದೇಟು ಹಾಕುತ್ತಾರೆ. ಜತೆಗೆ ನಮ್ಮ ಕ್ರಮಬದ್ದ ಡಯೆಟ್'ನಲ್ಲೂ DHA ಯಂತಹ ಅಗತ್ಯ ಪೌಷ್ಠಿಕಾಂಶ ಸಿಗೋದು ಕಷ್ಟ. 

ಜೂನಿಯರ್ ಹಾರ್ಲಿಕ್ಸ್ ವೈಜ್ಞಾನಿಕವಾಗಿ ಅಭಿವೃದ್ದಿಪಡಿಸಲಾಗಿದ್ದು, ಇದರಲ್ಲಿ 2-6 ವರ್ಷದ ಮಕ್ಕಳಿಗೆ ಅಗತ್ಯವಾಗಿ ಬೇಕಾದ DHA ಹಾಗೂ ಮೆದುಳಿನ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳು ಒಳಗೊಂಡಿದೆ. ಇದು ಮೆದುಳಿನ ಬೆಳವಣಿಗೆ ಜತೆಗೆ ದೈಹಿಕ ಬೆಳವಣಿಗೆಗೆ ಉಪಯುಕ್ತವಾಗಿದೆ.

ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಜೂನಿಯರ್ ಹಾರ್ಲಿಕ್ಸ್ ಕಳೆದ ಮೇ ತಿಂಗಳಿನಲ್ಲಿ ಹೊಸ ಅಭಿಯಾನಕ್ಕೆ ಚಾಲನೆ ನೀಡಿದೆ.  ಅದನ್ನು ನೀವಿಲ್ಲಿ ನೋಡಬಹುದು...

 

click me!