Gadag: ಕನ್ನಡ ಸಾರಸ್ವತ ಲೋಕಕ್ಕೆ ತೋಂಟದಾರ್ಯ ಮಠದ ಕೊಡುಗೆ ಅಪಾರ: ಡಾ.ನಂದೀಶ ಹಂಚೆ

By Girish GoudarFirst Published Apr 19, 2022, 5:28 PM IST
Highlights

*  ಲಿಂಗಾಯತ ಮಠ, ಮಾನ್ಯಗಳು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿವೆ
*  ಸಾಹಿತ್ಯ ಕೃಷಿಯಲ್ಲೂ ಅವುಗಳ ಸಾಧನೆ ದೊಡ್ಡದಿದೆ
*  ಜಾತ್ರೆಯಲ್ಲೂ ಪುಸ್ತಕ ಬಿಡುಗಡೆಗೆ ವಿಶೇಷ ಆದ್ಯತೆ ನೀಡಿರುವುದು ಅಭಿನಂದನೀಯ 

ಗದಗ(ಏ.19):  ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಸರ್ಕಾರಗಳಿಗೆ ಸಮನಾಗಿ ಪುಸ್ತಕ ಪ್ರಕಟಣೆಗೈದಿರುವ ತೋಂಟದಾರ್ಯ ಮಠವು ಕನ್ನಡ ಸಾಹಿತ್ಯ(Kannada Literature) ಲೋಕಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್ ನಂದೀಶ ಹಂಚೆ(Dr MN Nadish) ಹೇಳಿದ್ದರು.

ಅವರು ಇತ್ತೀಚೆಗೆ ನಗರದ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಪುಸ್ತಕೋತ್ಸವ ಕಾರ್ಯಕ್ರಮದಲ್ಲಿ ಡಾ.ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆಯಿಂದ ಪ್ರಕಟಗೊಂಡ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು,  ಲಿಂಗಾಯತ ಮಠ(Lingayat Matha), ಮಾನ್ಯಗಳು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದು, ಸಾಹಿತ್ಯ ಕೃಷಿಯಲ್ಲೂ ಅವುಗಳ ಸಾಧನೆ ದೊಡ್ಡದಿದೆ. ಜಾತ್ರೆಯಲ್ಲೂ ಪುಸ್ತಕ(Book) ಬಿಡುಗಡೆಗೆ ವಿಶೇಷ ಆದ್ಯತೆ ನೀಡಿರುವುದು ಅಭಿನಂದನೀಯವಾಗಿದ್ದು, ಲಿಂಗೈಕ್ಯ ಡಾ.ತೋಂಟದ ಶ್ರೀಗಳು ಪುಸ್ತಕದ ಸ್ವಾಮೀಜಿಗಳೆಂದೇ ಹೆಸರಾಗಿದ್ದರು. 

Gadag: ಮಠದ ಹಣವನ್ನೂ ಕಿತ್ತುಕೊಳ್ಳುವ ಇವರನ್ನ ದೇವರೇ ಕಾಪಾಡಬೇಕು: ಹೆಚ್.ಕೆ.ಪಾಟೀಲ್

ಲೇಖಕರು ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಂಡು ಕೃತಿಗಳನ್ನು ರಚಿಸಬೇಕಿದ್ದು, ಅಕ್ಷರ ಲೋಕಕ್ಕೆ ಚ್ಯುತಿ ಬರುವಂಥ ಕೃತಿ ರಚನೆಗೆ ಮುಂದಾಗಬಾರದು ಎಂದು ಕರೆ ನೀಡಿದ್ದರು. 

ಕಾರ್ಯಕ್ರಮದ ಸಮ್ಮುಖವಹಿಸಿದ್ದ ಭಾಲ್ಕಿಯ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಮಾತನಾಡಿ, ಭಾಲ್ಕಿಯ ಹಿರೇಮಠಕ್ಕೂ ಗದುಗಿನ ತೋಂಟದಾರ್ಯ ಮಠಕ್ಕೂ(Tontadarya Matha) ಅವಿನಾಭಾವ ಸಂಬಂಧವಿದ್ದು, ಲಿಂಗೈಕ್ಯ ಸಿದ್ಧಲಿಂಗ ಮಹಾಸ್ವಾಮಿಗಳು ನಮಗೆ ಮಾರ್ಗದರ್ಶಿಯಾಗಿದ್ದರು. ಬಸವಣ್ಣನವರ ವಿಚಾರಧಾರಗಳನ್ನು ಗಟ್ಟಿಯಾಗಿ ನಂಬಿದ್ದ ಲಿಂಗ್ಯಕ್ಯ ಗುರುಗಳು ಅಭಿನವ ಬಸವಣ್ಣ(Basavanna), ದ್ವೀತಿಯ ಅಲ್ಲಮ ಎಂದೇ ಖ್ಯಾತಿ ಪಡೆದಿದ್ದರು. ಪುಸ್ತಕಗಳನ್ನು ಬಿಡುಗಡೆಗೊಳಿಸಿ ಜ್ಞಾನಾರ್ಚನೆಗೈಯುತ್ತಿರುವ ಇಂಥ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನಮ್ಮ ಸುಕೃತವಾಗಿದೆ ಎಂದು ತಿಳಿಸಿದ್ದರು.

Karnataka Politics: ಕಾಂಗ್ರೆಸ್‌ ಪಾದಯಾತ್ರೆ ಯಾವ ಪುರುಷಾರ್ಥಕ್ಕೆ?: ಸಿಎಂ ಬೊಮ್ಮಾಯಿ 

ಸಂಡೂರ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು, ಆಲಮೇಲದ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು, ಅತ್ತಿವೇರಿಯ ಬಸವೇಶ್ವರಿ ಮಾತಾಜಿ ಸಮ್ಮುಖ ವಹಿಸಿದ್ದರು. ಸಾನಿಧ್ಯ ವಹಿಸಿದ್ದ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹಾಗೂ ಶಿವಾನಂದ ಮಠದ ಸದಾಶಿವಾನಂದ ಭಾರತೀ ಮಹಾಸ್ವಾಮಿಗಳು ಆಶೀರ್ವಚನ ನೀಡಿದ್ದರು. 

ಡಾ.ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆಯಿಂದ ಪ್ರಕಟಗೊಂಡ ಗ್ರಂಥಗಳನ್ನು ಬಿಡುಗಡೆಗೊಳಿಸಲಾಯಿತು. ಡಾ.ರಮೇಶ ಕಲ್ಲನಗೌಡರ ಗ್ರಂಥಗಳನ್ನು ಪರಿಚಯಿಸಿದರು. ರೇವಣಸಿದ್ಧಯ್ಯ ಮರಿದೇವರಮಠ ವಚನ ಸಂಗೀತ ನೀಡಿದರು. ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಅಮರೇಶ ಅಂಗಡಿ, ಉಪಾಧ್ಯಕ್ಷ ದಾನಯ್ಯ ಗಣಾಚಾರಿ, ಮೈಲಾರಪ್ಪ ಅರಣಿ, ಬಸವರಾಜ ಹೀರೆಹಡಗಲಿ, ಶಿವಲೀಲಾ ಅಕ್ಕಿ, ಕಾರ್ಯದರ್ಶಿ ಕೊಟ್ರೇಶ ಮೆಣಸಿನಕಾಯಿ, ಸಹ ಕಾರ್ಯದರ್ಶಿ ಮಲ್ಲಿಕಾರ್ಜುನ ಚಂದಪ್ಪನವರ, ಚಂದ್ರಕಾಂತ ಚವ್ಹಾಣ, ಸಂಘಟನಾ ಕಾರ್ಯದರ್ಶಿಗಳಾದ ಅಶೋಕ ಕುಡತಿನಿ, ಕಿರಣ ತಿಪ್ಪಣ್ಣವರ, ಕೋಶಾಧ್ಯಕ್ಷ ವೀರಣ್ಣ ಜ್ಯೋತಿ, ಸಹ ಕೋಶಾಧ್ಯಕ್ಷ ಸುರೇಶ ಮರಳಪ್ಪನವರ, ತೋಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್.ಎಸ್ ಪಟ್ಟಣಶೆಟ್ಟಿ, ವ್ಯವಸ್ಥಾಪಕ ಎಂ.ಎಸ್ ಅಂಗಡಿ, ಶಿವನಗೌಡ ಗೌಡರ ಮುಂತಾದವರು ಉಪಸ್ಥಿತರಿದ್ದರು.
 

click me!