ಮೈಸೂರು (ನ.17): ಮಕ್ಕಳಲ್ಲಿ ನ್ಯೂಮೋಕಾಲ್ಸ್ ಬ್ಯಾಕ್ಟೀರಿಯಾದಿಂದ ಉಂಟಾಗುವ ನ್ಯೂಮೋನಿಯಾ ಮತ್ತು ಮೆನಿಂಜೈಟಿಸ್ ಕಾಯಿಲೆಗಳನ್ನು ತಡೆಗಟ್ಟುವ ನ್ಯೂಮೋಕಾಕಲ್ ಕಾಂಜುಗೇಟ್ ( pneumococcal conjugate ) ಲಸಿಕೆಗೆ (vaccine) ಮೈಸೂರಿನ (Mysuru) ಸೇಠ್ ಮೋಹನ್ ದಾಸ್ ತುಳಿಸಿದಾಸಪ್ಪ (ತಾಯಿ ಮತ್ತು ಮಕ್ಕಳ) ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (Health And family welfare Department) ಡಾ.ಕೆ.ಎಚ್. ಪ್ರಸಾದ್ ಚಾಲನೆ ನೀಡಿದರು.
ಬಳಿಕ ಡಾ.ಕೆ.ಎಚ್. ಪ್ರಸಾದ್ ಮಾತನಾಡಿ, ಈ ಲಸಿಕೆಯ ಒಂದು ಡೋಸಿಗೆ 3 ಸಾವಿರವಾಗುತ್ತಿತ್ತು. ಹೀಗೆ 3 ಡೋಸ್ ಪಡೆದುಕೊಳ್ಳಲು 9 ರಿಂದ 10 ಸಾವಿರ ಆಗುತ್ತಿತ್ತು. ಈಗ ಲಸಿಕೆಯನ್ನು ಸರ್ಕಾರದಿಂದ (karnataka Govt) ಉಚಿತವಾಗಿ (Free) ನೀಡಲಾಗುತ್ತಿದ್ದು, ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (Primeru Hea;th Centre) ನೀಡಲಾಗುತ್ತದೆ. ಈ ಸೌಲಭ್ಯವನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
undefined
ಲಸಿಕೆಯನ್ನು ಮಗುವಿಗೆ ಒಂದೂವರೆ ತಿಂಗಳಿಗೆ, ಮೂರುವರೆ ತಿಂಗಳಿಗೆ ಹಾಗೂ 9ನೇ ತಿಂಗಳಿಗೆ ನೀಡಲಾಗುತ್ತದೆ. ಮಕ್ಕಳು (baby) ಈ ಲಸಿಕೆಯನ್ನು ಯಾವುದೇ ಭಯವಿಲ್ಲದೆ ಪಡೆದುಕೊಳ್ಳಬಹುದು. ಸಾರ್ವಜನಿಕರು ತಪ್ಪದೇ ತಮ್ಮ ನವಜಾತ ಶಿಶುಗಳಿಗೆ (infants) ಪಿಸಿವಿ (PCV) ಲಸಿಕೆ ಹಾಕಿಸಬೇಕು. ಒಂದು ವರ್ಷದಲ್ಲಿ ಜನಿಸುವ ಮಕ್ಕಳಲ್ಲಿ ಸರಾಸರಿ ಶೇ.15 ಮಕ್ಕಳು ನ್ಯೂಮೋನಿಯಾದಿಂದ (Numonia) ಬಳಲುತ್ತಾರೆ. ನ್ಯೂಮೋನಿಯಾಕ್ಕೆ ತುತ್ತಾದ ಶಿಶುಗಳನ್ನು ಮೆದಳ ಜ್ವರ ಕೂಡ ಬಾಧಿಸುತ್ತದೆ. ಇದರಿಂದ ಶಿಶುಗಳನ್ನು ರಕ್ಷಿಸಲು ಕಡ್ಡಾಯವಾಗಿ ಶಿಶುಗಳಿಗೆ ಪಿಸಿವಿ ಕೊಡಿಸಬೇಕು. ಲಸಿಕೆ ಹಾಕಿಸುವುದರಿಂದ ನವಜಾತ ಶಿಶುಗಳ ಪ್ರಮಾಣ ಕಡಿಮೆ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.
ಆರ್‌ಸಿಎಚ್ (RCH) ಅಧಿಕಾರಿ ಡಾ.ಎಂ.ಎಸ್. ಜಯಂತ್, ತಾಲೂಕು ವೈದ್ಯಾಧಿಕಾರಿ ಡಾ. ಮಹದೇವ ಪ್ರಸಾದ್, ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಚಂದ್ರಶೇಖರ್, ವಿಶ್ವ ಆರೋಗ್ಯ ಸಂಸ್ಥೆ ವೈದ್ಯಕೀಯ ಸರ್ವೇಕ್ಷಣಾ ಅಧಿಕಾರಿ ಸುಧೀರ್ ನಾಯಕ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಮುನಿಂದ್ರಮ್ಮ, ಪದ್ಮಾವತಿ ಮೊದಲಾದವರು ಇದ್ದರು.
ಡೆಂಘೀ ಮುನ್ನಚ್ಚರಿಕೆ ಕ್ರಮ
ಮಳೆಯ ನಂತರ ಡೆಂಘೀ (Dengue) ಹಾಗೂ ಇತರೆ ಸಾಂಕ್ರಾಮಿಕ ಕಾಯಿಲೆಗಳ ಹಾವಳಿ ಹೆಚ್ಚಾಗುವುದನ್ನು ತಡೆಗಟ್ಟಲು ಇಲಾಖೆ ಸಜ್ಜಾಗಿದೆ. ಮೈಸೂರಿನಲ್ಲಿ (Mysuru) 28 ಮಂದಿಗೆ ಡೆಂಘೀ ಸೋಂಕು ತಗುಲಿತ್ತು. ಈಗ ಎಲ್ಲರು ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್. ಪ್ರಸಾದ್ ತಿಳಿಸಿದರು.
ಸಾಮಾನ್ಯವಾಗಿ ಮಳೆಯ ನಂತರ ಸೊಳ್ಳೆಗಳು ಹೆಚ್ಚಾಗುವುದರಿಂದ ಸಾಂಕ್ರಾಮಿಕ ಕಾಯಿಲೆಯೂ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ನಮ್ಮ ಇಲಾಖೆಯಿಂದ ಆಶಾ ಕಾರ್ಯಕರ್ತರ ಮೂಲಕ ಮನೆ ಮನೆ ಸಮೀಕ್ಷೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಮನೆ ಸುತ್ತಮುತ್ತ ನೀರು ನಿಲ್ಲದಂತೆ ಹಾಗೂ ಸೊಳ್ಳೆಗಳು ಸಂತಾನೋತ್ಪತಿ ಮಾಡದಂತೆ ಶುಚಿಯಾಗಿಟ್ಟುಕೊಳ್ಳಲು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದರು.
22 ಲಕ್ಷ ಮಂದಿಗೆ ಮೊದಲ ಡೋಸ್ ಕೋವಿಡ್ ನಿರೋಧಕ ಲಸಿಕೆ ನೀಡಲಾಗಿದ್ದು, 13 ಲಕ್ಷ ಮಂದಿ 2ನೇ ಡೋಸ್ ನೀಡಲಾಗಿದೆ. ಆರೋಗ್ಯ ಇಲಾಖೆ ಹಾಗೂ ಆಶಾ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ ಲಸಿಕೆ ಪಡೆಯದವರನ್ನು ಲಸಿಕೆ ಪಡೆದುಕೊಳ್ಳುವಂತೆ ಪ್ರೇರೆಪಿಸುತ್ತಿದ್ದಾರೆ ಎಂದರು.