ಬೆಂಗಳೂರು ಗ್ರಾಮಾಂತರ Elections 2024; ಸಂಜೆ 5 ಗಂಟೆವರೆಗೆ ಶೇ. 61.78 ವೋಟಿಂಗ್

By Sathish Kumar KH  |  First Published Apr 26, 2024, 10:41 AM IST

Karnataka Lok Sabha Election 2024 ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ.ಬ್ರದರ್ಸ್‌ಗೆ ಟ್ರಬಲ್ ಕೊಟ್ಟ ಡಾ.ಸಿ.ಎನ್. ಮಂಜುನಾಥ್
 


ಬೆಂಗಳೂರು ಗ್ರಾಮಾಂತರ (ಏ.26): ರಾಜ್ಯದ ಅತ್ಯಂತ ಸೂಕ್ಷ್ಮ ಲೋಕಸಭಾ ಕ್ಷೇತ್ರವಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವು ಡಿ.ಕೆ. ಬ್ರದರ್ಸ್‌ ಭದ್ರಕೋಟೆ ಆಗಿದೆ. ಇಲ್ಲಿ ಕಳೆದ ಮೂರು ಬಾರಿ ಪ್ರಭಲ ಪೈಪೋಟಿ ಇಲ್ಲದೇ ಗೆಲುವು ಸಾಧಿಸಿದ್ದ ಸಂಸದ ಡಿ.ಕೆ. ಸುರೇಶ್‌ಗೆ ನಿವೃತ್ತ ವೈದ್ಯ ಡಾ.ಸಿ.ಎನ್. ಮಂಜುನಾಥ್ ದೊಡ್ಡ ಟ್ರಬಲ್ ಕೊಡಲು ಬಂದಿದ್ದಾರೆ.

ಕಾಂಗ್ರೆಸ್‌ ಭದ್ರಕೋಟೆ ಆಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಳೆದ 15 ವರ್ಷಗಳಿಂದ ಸತತ ಮೂರು ಬಾರಿ ಡಿ.ಕೆ. ಸುರೇಶ್ ಅವರು ಗೆಲುವು ಸಾಧಿಸಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹೋದರರೂ ಆಗಿದ್ದು, ಪ್ರತಿಷ್ಠೆಯ ಕಣವಾಗಿದೆ. ಪ್ರತಿಬಾರಿ ಯಾವುದೇ ಪ್ರಭಲ ಪೈಪೋಟಿ ಇಲ್ಲದೇ ಲೀಲಾಜಾಲವಾಗಿ ಗೆಲ್ಲುತ್ತಿದ್ದ ಡಿ.ಕೆ. ಬ್ರದರ್ಸ್‌ಗೆ ಟ್ರಬಲ್ ಕೊಡಲು ಈಗ ನಿವೃತ್ತ ವೈದ್ಯರಾದ ಡಾ.ಸಿ.ಎನ್. ಮಂಜುನಾಥ್ ಬಂದಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನವೇ  ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳುತ್ತಾ ಡಿ.ಕೆ. ಸುರೇಶ್ ವಿವಾದ ಮೈಮೇಲೆ ಎಳದುಕೊಂಡಿದ್ದರು. ಆದರೆ, ಅವರ ಸಹೋದರ ಡಿ.ಕೆ. ಶಿವಕುಮಾರ್ ಅವರು ಮನವೊಲಿಕೆ ಮಾಡಿ ಪುನಃ ಸ್ಪರ್ಧೆಗೆ ಸಜ್ಜುಗೊಳಿಸಿದ್ದಾರೆ.

Tap to resize

Latest Videos

ಕರ್ನಾಟಕ Election 2024 Live: ಬೆಳಗ್ಗೆ 9ರ ಹೊತ್ತಿಗೆ ರಾಜ್ಯಾದ್ಯಂತ ಶೇ.9.21ರಷ್ಟು ಮತದಾನ...

ಜಯದೇವ ಹೃದ್ರೋಗ ಆಸ್ಪತ್ರೆಯ ಮಾಜಿ ನಿರ್ದೇಶಕರೂ ಆಗಿರುವ ಡಾ. ಮಂಜುನಾಥ್ ಅವರಿಗೆ ರಾಜಕೀಯದ ಅನುಭವ ಇಲ್ಲದಿದ್ದರೂ ನಮ್ಮ ರಾಜ್ಯದಿಂದ ಪ್ರಧಾನಮಂತ್ರಿ ಆಗಿರುವ ಏಕೈಕ ವ್ಯಕ್ತಿ ಹೆಚ್.ಡಿ.ದೇವೇಗೌಡ ಅವರ ಅಳಿಯನಾಗಿದ್ದಾರೆ. ಮುಖ್ಯವಾಗಿ ರಾಮನಗರದಲ್ಲಿ ರಾಜಕೀಯ ಹುಟ್ಟು ಕಂಡುಕೊಂಡು ರಾಜ್ಯದ ಮುಖ್ಯಮಂತ್ರಿ ಆಗಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಭಾವ ಆಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ನ ಪ್ರತಿಷ್ಠೆಯ ಕಣವಾಗಿದೆ. ಈ ಕ್ಷೇತ್ರವನ್ನು ಚುನಾವಣಾ ಆಯೋಗದಿಂದ ಸೂಕ್ಷ್ಮವೆಂದು ಪರಿಗಣಿಸಲಾಗಿದೆ. ಹೀಗಾಗಿ, ಕಳೆದ ಬಾರಿಗಿಂದ ಈ ಬಾರಿ ಡಬಲ್‌ ಸೆಕ್ಯೂರಿಟಿ ಮತ್ತು ಶೇ.100 ವೆಬಗ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ.

ಮತ ಚಲಾಯಿಸಿದ ಮುನಿರತ್ಮ
ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ದೇಶದ ಭದ್ರತೆಗೆ ಚುನಾವಣೆಯಲ್ಲಿ ಮತ ಹಾಕಬೇಕು. ಪ್ರತಿಯೊಬ್ರೂ ಮತ ಹಾಕಬೇಕು. ಎಲ್ರೂ ದೇಶದ ಭವಿಷ್ಯಕ್ಕೆ ಮತ ಹಾಕಬೇಕು.  ಒಳ್ಳೆಯವರು, ವಿದ್ಯಾವಂತರು, ಹೃದಯವಂತರು, ಸಮಾಜಕ್ಕೆ ಗೌರವ ತರುವ ವ್ಯಕ್ತಿಗೆ ಮತ ಹಾಕಬೇಕು.
- ಮುನಿರತ್ನ, ಶಾಸಕ, ಆರ್.ಆರ್. ನಗರ

ಮತ ಚಲಾಯಿಸಿದ ಡಾ.ಸಿ.ಎನ್. ಮಂಜುನಾಥ್: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ. ಎನ್. ಮಂಜುನಾಥ್ ಪದ್ಮನಾಭನಗರದಲ್ಲಿ ಮತದಾನ ಮಾಡಿ ಮಾಧ್ಯಮದೊಂದಿಗೆ ಮಾತನಾಡಿದರು. ಇದು ಪ್ರಜಾಪ್ರಭುತ್ವ ಅತಿದೊಡ್ಡ ಹಬ್ಬ. ನಾನು ಮತ್ತು ಶ್ರೀಮತಿ, ಮಕ್ಕಳು ಎಲ್ಲಾ ಮತ ಹಾಕಿದ್ದೆವೆ. ಎಲ್ಲಾ ದಾನಕ್ಕಿಂತ ಮತದಾನ ಮಹತ್ವದ್ದು. ಇದಕ್ಕೆ ಎಲ್ಲರೂ ಸಮಯ ನೀಡಬೇಕು. ನಮಗೆ ಬೇಕಾದ ಸರ್ಕಾರ ತರಲು ಇದೊಂದು ಅವಕಾಶ. ವೀಕೆಂಡ್ ಅಂತ ಬೆಂಗಳೂರು ಬಿಟ್ಟು ಹೋಗಬಾರದು. ಇಂದು ಕ್ಷೇತ್ರದಲ್ಲೇ ಇದ್ದು ಮತಹಾಕಿ. ವೋಟ್ ಹಾಕದಿದ್ದರೇ ಟೀಕೆ ಮಾಡುವ ಹಕ್ಕಿರಲ್ಲ.

Breaking: ಮತದಾನ ಮಾಡಿ ಬಂದ ವ್ಯಕ್ತಿ ಹೃದಯಾಘಾತದಿಂದ ಸಾವು: ಬೆಂಗಳೂರು ಮಹಿಳೆಗೆ ಹೃದಯ ಸ್ತಂಭನ

ಗ್ಯಾರಂಟಿ ಕಾರ್ಡ್‌ ಜೊತೆಗೆ ಕೂಪನ್ ಹಂಚಿಕೆ: ಕನಕಪುರದಲ್ಲಿ ಕೂಪನ್ ಹಂಚಿಕೆ ವಿಚಾರದ ಬಗ್ಗೆ ಮಾತನಾದಿ, ನಮ್ಮ ಕ್ಷೇತ್ರದಲ್ಲಿ ರಾತ್ರಿ ಕೆಲವು ಘಟನೆ ಆಗಿದೆ. ಗ್ಯಾರಂಟಿ ಕಾರ್ಡ್ ಹಾಗೂ ಕೂಪನ್ ಕೊಡಲಾಗುತ್ತಿದೆ. ಮತ ಹಾಕಿದ ನಂತರ ಕೂಪನ್ ಬಳಸಿ ನಿಮಗೆ ಬೇಕಾದನ್ನ ಖರೀದಿಸಿ ಅಂತಿದ್ದಾರೆ. ಇದು ಅಪವಿತ್ರ ಪ್ರಕ್ರಿಯೆ.ಇದನ್ನ ಚುನಾವಣಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಕನಕಪುರದಲ್ಲಿ ಪ್ರತಿಭಟನೆ ಕೂಡ ಆಗಿದೆ. ಮೂರು ನಾಲ್ಕು ಸಾವಿರ ಕೂಪನ್ ಹಿಡಿದು ಕೆಲವರು ಹೋಗಿದ್ದಾರೆ., ಚುನಾವಣೆ ಹೀಗೆ ಆಗಬಾರದು ಎಂದು ಹೇಳುತ್ತೆನೆ. ನಮ್ಮ ಕಾರ್ಯಕರ್ತರು ಚೆನ್ನಾಗಿ ಕೆಲಸ ಮಾಡ್ತಿದ್ದಾರೆ. ಹೀಗಾಗಿ ನನ್ನ ವಿಶ್ವಾಸ ಹೆಚ್ಚಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಹೇಳಿದರು.

ಮತದಾನದ ವಿವರ:
ಅಭ್ಯರ್ಥಿಗಳು: 15
ಮತದಾರರು: 28,02,580
ಮಧ್ಯಾಹ್ನ 3 ಗಂಟೆವೆರೆಗ ಶೇ.69.62 ಮತದಾನವಾಗಿದೆ.

click me!