ಚಿತ್ರದುರ್ಗ 2024 Elections ಜಿಲ್ಲೆಯಲ್ಲಿ ಮತದಾನದ ಪ್ರಮಾಣ 5 ವರೆಗೆ ಶೇ.67 ದಾಖಲು

By Santosh Naik  |  First Published Apr 26, 2024, 10:42 AM IST

ಚಿತ್ರದುರ್ಗದಲ್ಲಿ ಮತದಾನ ಬಿರುಸು ಪಡೆದುಕೊಂಡಿದೆ. ಈ ಕ್ಷೇತ್ರದಲ್ಲಿ ಬಿಜೆಪಿಯ ಹಿರಿಯ ನಾಯಕ ಗೋವಿಂದ ಕಾರಜೋಳ ಅವರ ವಿರುದ್ಧ ಕಾಂಗ್ರೆಸ್‌ ಬಿಎನ್‌ ಚಂದ್ರಪ್ಪ ಅವರನ್ನು ಕಣಕ್ಕಿಳಿಸಿದೆ.


ಚಿತ್ರದುರ್ಗ (ಏ.26): ಮಧ್ಯಕರ್ನಾಟಕದ ಚಿತ್ರದುರ್ಗದಲ್ಲೂ ಮತದಾನ ಬಿರುಸು ಪಡೆದುಕೊಂಡಿದೆ.  ಚುನಾವಣಾ ಆಯೋಗ ಮಾಹಿತಿ ನೀಡಿರುವ ಪ್ರಕಾರ ಸಂಜೆ 5 ಗಂಟೆವರೆಗೆ ಶೇ.67 ರಷ್ಟು ಮತದಾನ ದಾಖಲಾಗಿದೆ.  ಮಧ್ಯಾಹ್ನ ಮೂರು ಗಂಟೆಯ ವೇಳೆಗೆ ಶೇ. 52.14ರಷ್ಟು ಮತದಾನವಾಗಿತ್ತು. ಮಧ್ಯಾಹ್ಮ 1 ಗಂಟೆಯ ವೇಳೆಗೆ ಈ ಕ್ಷೇತ್ರದಲ್ಲಿ ಶೇ. 39.05ರಷ್ಟು ಮತದಾನವಾಗಿತ್ತು. ಬೆಳಗ್ಗೆ 9 ಗಂಟೆಯ ವೇಳೆಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಶೇ. 7.73ರಷ್ಟು ಮತದಾನವಾಗಿದೆ. ರಾಜ್ಯದಲ್ಲಿ ಅತೀ ಕಡಿಮೆ ಮತದಾನವಾದ ಕ್ಷೇತ್ರದಲ್ಲಿ ಚಿತ್ರದುರ್ಗ ಕೂಡ ಒಂದಾಗಿತ್ತು.  ಬೆಳಗ್ಗೆ 11 ಗಂಟೆಯ ವೇಳೆಗೆ ಚಿತ್ರದುರ್ಗದಲ್ಲಿ ಶೇ. 21.75ರಷ್ಟು ಮತದಾನವಾಗಿತ್ತು.

ಲೋ ಬಿಪಿಯಿಂದಾಗಿ ಮತಗಟ್ಟೆ ಸಿಬ್ಬಂದಿ ಸಾವು: ಮತಗಟ್ಟೆ ಸಿಬ್ಬಂದಿ 55 ವರ್ಷದ ಯಶೋಧಮ್ಮ ಲೋ ಬಿಪಿಯಿಂದಾಗಿ ಸಾವು ಕಂಡಿದ್ದಾರೆ. ಚಿತ್ರದುರ್ಗ ಜಿಲ್ಲೆ‌ ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಲೋ ಬಿಪಿಯಿಂದಾಗಿ ಯಶೋಧಮ್ಮ ಅಸ್ವಸ್ಥರಾಗಿದ್ದರು. ಚಳ್ಳಕೆರೆ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಯಶೋಧಮ್ಮ ಸಾವು ಕಂಡಿದ್ದಾರೆ. ಇವರು ಚಳ್ಳಕೆರೆ ಪಟ್ಟಣದ ವಿಠಲ ನಗರ ಮೂಲದವರಾಗಿದ್ದಾರೆ. ಚಳ್ಳಕೆರೆ ಆಸ್ಪತ್ರೆಗೆ ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ.

Tap to resize

Latest Videos

undefined

ನವದಂಪತಿಯಿಂದ ಮತದಾನ: ವಿಜಾಪುರದ ಮತಗಟ್ಟೆ ಸಂಖ್ಯೆ 13ರಲ್ಲಿ ನವ ದಂಪತಿ ಮತದಾನ. ಚಿತ್ರದುರ್ಗ ತಾಲೂಕಿನ ವಿಜಾಪುರ ಗ್ರಾಮದಲ್ಲಿ ಮತದಾನ .ಮಾಂಗಲ್ಯ ಧಾರಣೆ ಬಳಿಕ ಮತಗಟ್ಟೆಗೆ ಆಗಮಿಸಿ ಮತ ಚಲಾವಣೆ. ವಿಜಾಪುರದ ಅರುಣ್-ಕಾವ್ಯ ಮತ‌ಚಲಾಯಿಸಿದ ನವದಂಪತಿ

ಚಿತ್ರದುರ್ಗದಲ್ಲಿ ಕೈ ಅಬ್ಯರ್ಥಿ ಬಿ ಎನ್ ಚಂದ್ರಪ್ಪ ನೀತಿ ಸಂಹಿತೆ ಉಲ್ಲಂಘನೆ?: ಮತದಾನಕ್ಕೆ ಆಗಮಿಸಿದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಬಿಎನ್‌ ಚಂದ್ರಪ್ಪ ನೀತಿ ಸಂಹಿತೆ ಉಲ್ಲಂಘಿಸಿದ ಘಟನೆ ನಡೆದಿದೆ. ಬಿಎನ್ ಚಂದ್ರಪ್ಪ ಪರ ಅವರ ಕಾರ್ಯಕರ್ತರು ಜಯಘೋಷ ಮೊಳಗಿಸಿದ್ದಾರೆ. ಇನ್ನು ಬಿಎನ್‌ ಚಂದ್ರಪ್ಪ, ಹಸ್ತ ಚಿಹ್ನೆಯಿರುವ ಶಾಲು ಹಾಕಿಕೊಂಡು ಬಂದಿದ್ದರು. ಹಸ್ತ ಚಿಹ್ನೆಯ ಶಾಲು ಧರಿಸಿಯೇ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ. ಕಾಂಗ್ರೆಸ್‌ ಚಿನ್ಹೆ ಇರುವ ಶಾಲು ಧರಿಸಿ ಬೆಂಬಲಿಗರ ಜತೆ ಮತಗಟ್ಟೆ ಪ್ರವೇಶಿಸಿದ್ದರು. ಈ ವೇಳೆ ಮಾತನಾಡಿದ ಅವರು, 'ಕುಟುಂಬ ಸಮೇತವಾಗಿ ಆಗಮಿಸಿ ಮತದಾನ ಮಾಡಿದ್ದೇವೆ. ಎಲ್ಲೆಡೆ ಉಲ್ಲಾಸ,ಉತ್ಸಾಹದಿಂದ ಮತದಾನ ಪ್ರಕ್ರಿಯೆ ನಡೆದಿದೆ. ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿಕೆಶಿ ನಾಯಕತ್ವದ ಗ್ಯಾರಂಟಿ ಭಾಗ್ಯ ನಮಗೆ ರಕ್ಷಾ ಕವಚವಾಗಿದೆ. ಕಳೆದ‌10 ವರ್ಷಗಳಿಂದ ಕ್ಷೇತ್ರದಲ್ಲಿನ ನನ್ನ ಒಡನಾಟ, ಜನಸಂಪರ್ಕ ನನಗೆ ಶ್ರೀರಕ್ಷೆ. ನಾನು ಲೋಕಲ್‌ ಅಂತ ಜನ ಗುರುತಿಸಿ ಬೆಂಬಲಿಸ್ತಿದ್ದಾರೆ' ಎಂದು ಹೇಳಿದ್ದಾರೆ.ಈ ವೇಳೆ ಪತ್ನಿ ಕಾವ್ಯಾ, ಪುತ್ರ ಉತ್ಸವ್, ಪುತ್ರಿ ಡಾ.ದೃಷ್ಟಿ ಕೂಡ ಚಂದ್ರಪ್ಪ ಅವರ ಜೊತೆಯಲ್ಲಿದ್ದರು.   ನಗರದ ಬಿ.ವಿ‌.ಕೆಸ್ ಬಡಾವಣೆಯ ಬರಗೇರಮ್ಮ ಫ್ರೌಢಶಾಲೆಯಲ್ಲಿಮತಗಟ್ಟೆ ಸಂಖ್ಯೆ 143ರಲ್ಲಿ ಅವರು ಮತದಾನ ಮಾಡಿದರು.

ಚಿತ್ರದುರ್ಗ ಮಠದಹಟ್ಚಿ ಮತಗಟ್ಟೆಯಲ್ಲಿ ಮತದಾನ ಮಾಡಿದ ಮಠಾಧೀಶರು: ಇನ್ನು ಚಿತ್ರದುರ್ಗದಿಂದ ಮಠಾಧೀಶರು ಮತ ಚಲಾಯಿಸಿದ್ದಾರೆ.  ಕುಂಚಿಟಿಗ ಮಹಾ ಸಂಸ್ಥಾನದ ಶ್ರೀ ಶಾಂತವೀರ ಸ್ವಾಮೀಜಿ , ಯಾದವ ಗುರುಪೀಠದ  ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ, ಭೋವಿ ಗುರುಪೀಠದ  ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮಾದರ ಗುರುಪೀಠದ  ಶ್ರೀ ಮಾದರ ಚನ್ನಯ ಸ್ವಾಮೀಜಿ, ಶ್ರೀ, ಮೇದಾರ ಗುರುಪೀಠದ ಶ್ರೀ ಕೇತೇಶ್ವರ  ಸ್ವಾಮೀಜಿ, ಬಂಜಾರ ಗುರುಪೀಠದ ಶ್ರೀ ಸೇವಾಲಾಲ್ ಸ್ವಾಮೀಜಿ ಮತ ಹಾಕಿದರು.

ಕರ್ನಾಟಕ Election 2024 Live: ಮತದಾನ ನಿಮ್ಮ ಹಕ್ಕು, ಬೇಗ ಹೋಗಿ ಚಲಾಯಿಸಿ ...

ಬಿಜೆಪಿ ಈ ಎಲ್ಲಾ ಸ್ಥಾನಗಳಲ್ಲಿ ಗೆಲ್ಲಲಿದೆ: ಚಿತ್ರದುರ್ಗದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಮಾತನಾಡಿದ್ದು,'ಮೊದಲಿಗೆ ನನ್ನೆಲ್ಲಾ ಕಾರ್ಯಕರ್ತರಿಗೆ  ಅಭಿನಂದನೆಗಳು ಸಲ್ಲಿಸುತ್ತೇನೆ. ರಾಜ್ಯದಲ್ಲಿ ಮೊದಲ ಹಂತದ ೧೪ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಬೆಳಗ್ಗೆಯಿಂದ ಬಹಳ ಉತ್ಸಾಹದಿಂದ ಮತದಾರರು ಮತ ಚಲಾಯಿಸ್ತಿದ್ದಾರೆ. ಈ ಉತ್ಸಾಹ ನೋಡಿದ್ರೆ 14 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ದೇಶದ ಅಭಿವೃದ್ಧಿ, ಭ್ರಷ್ಟಾಚಾರ ನಿರ್ಮೂಲನೆ ಆಗಬೇಕು ಎನ್ನುವುದು ಮೋದಿ ಕನಸು. ಮೋದೀಜಿ ಅವರ ಕನಸು ನನಸು ಮಾಡಲು ಜನ ಕಾಯ್ತಿದ್ದಾರೆ. ಕಾಂಗ್ರೆಸ್ ನವರದ್ದು ಮೋಸದ ಗ್ಯಾರಂಟಿ. 50 ಲಕ್ಷ ಕೋಟಿ ಗ್ಯಾರಂಟಿ ಅನುಷ್ಠಾನಕ್ಕೆ ಖರ್ಚಾಗುತ್ತೆ. ದೇಶದ ಬಜೆಟ್ ಗಾತ್ರ ಇರುವುದೇ 47ಲಕ್ಷ ಕೋಟಿ' ಎಂದು ಹೇಳಿದ್ದಾರೆ.

LIVE: ಬೆಂಗಳೂರು ದಕ್ಷಿಣ 2024 Elections; ಬೆಳಗ್ಗೆ 9 ಗಂಟೆ ವೇಳೆಗೆ ಶೇ.9.80 ಮತದಾನ

click me!