ಕೋಲಾರ (ಸೆ.29): ಕೆಲ ದಿನಗಳ ಹಿಂದಷ್ಟೇ ಶಿವಮೊಗ್ಗದಲ್ಲಿ (Shivamogga) ನಾಯಿಗಳ (Dogs) ಮಾರಣಹೋಮಾ ನಡೆದಿದ್ದು ಇದೀಗ ಕೋಲಾರದಲ್ಲಿ (Kolar) ಕೋತಿಗಳ (Monkey) ಮಾರಣಹೋಮ ನಡೆದಿದೆ.
20 ಕ್ಕೂ ಹೆಚ್ಚು ಕೋತಿಗಳಿಗೆ ವಿಷ ಉಣಿಸಿ ಕೊಂದು ವಿಕೃತಿ ಮೆರೆಯಲಾಗಿದೆ. ಆಹಾರದಲ್ಲಿ (Food) ವಿಷ ಉಣಿಸಿ ಕೋತಿಗಳನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸತ್ತ ಕೋತಿಗಳನ್ನು ಚೀಲದಲ್ಲಿ ತುಂಬಿ ರಸ್ತೆ ಬದಿ ಬಿಸಾಡಿ ಹೋಗಿದ್ದು, ಚೀಲದಲ್ಲಿ ಕೋತಿಗಳ ಶವವಿಂದು ಪತ್ತೆಯಾಗಿದೆ.
undefined
ಕೋಲಾರ ಹೊರವಲಯದ ಟಮಕ ರಸ್ತೆ ಬಳಿ ಸತ್ತ ಕೋತಿಗಳನ್ನು ತುಂಬಿದ ಮೂಟೆಯನ್ನು ಬಿಸಾಡಿ ದುರುಳರು ಪರಾರಿಯಾಗಿದ್ದಾರೆ.
ಕೋತಿಗಳ ಸಾವಿಗೆ ಕಾರಣ ತಿಳಿಯಲು ಅರಣ್ಯ ಇಲಾಖಾ ಸಿಬ್ಬಂದಿ (Forest Officers) ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ. ಈ ಸಂಬಂಧ ಇದೀಗ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಹಾಸನದಲ್ಲಿಯೂ 2 ತಿಂಗಳ ಹಿಂದೆ ಸಾಮೂಹಿಕವಾಗಿ ಕೋತಿಗಳನ್ನು ಹತ್ಯೆ ಮಾಡಲಾಗಿತ್ತು. ಬಳಿಕ ತನಿಖೆ ನಡೆದು ಕೋತಿಗಳ ಹತ್ಯೆಕೋರರನ್ನು ಅರೆಸ್ಟ್ ಮಾಡಲಾಗಿತ್ತು. ಇದೀಗ ಇಂತಹದ್ದೇ ಘಟನೆ ಕೋಲಾರದಲ್ಲಿ ನಡೆದಿದೆ.
22 ಕಿಮೀ ದೂರ ಬಿಟ್ಟು ಬಂದರೂ ದ್ವೇಷ ತೀರಿಸಿಕೊಳ್ಳಲು ಬಂದ ವಾನರ..!
ಕೋತಿಗಳು ಆಹಾರವನ್ನು ಅರಸಿ ಊರುಗಳಿಗೆ ಪ್ರವೇಶ ಮಾಡುತ್ತಿದ್ದು, ಆಹಾರ, ಬೆಳೆಗಳ ಮೇಲೆ ದಾಳಿ ಮಾಡುತ್ತವೆ. ಇದರಿಂದ ತಪ್ಪಿಸಿಕೊಳ್ಳಲು ಕೋತಿಗಳನ್ನು ಹತ್ಯೆ ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.
ಕಲಬುರಗಿ; ಊರಿನ ಪ್ರೀತಿಗೆ ಪಾತ್ರವಾಗಿದ್ದ ಮಂಗನಿಗೆ ಸಂಪ್ರದಾಯ ಅಂತ್ಯಸಂಸ್ಕಾರ
ಹಾಸನದಲ್ಲಿ ಮಾರಣಹೋಮ
ಹಾಸನ ಜಿಲ್ಲೆಯಲ್ಲೊಂದು ದಾರುಣ ಘಟನೆ ನಡೆದಿತ್ತು. ಮೂಕ ಪ್ರಾಣಿ ಮಂಗಗಳ ಮಾರಣ ಹೋಮ ಮಾಡಲಾಗಿದೆ. 30 ಮಂಗಗಳು ಸಾವನ್ನಪ್ಪಿದ್ದವು.
ರಾತ್ರೋ ರಾತ್ರಿ ಮಂಗಗಳನ್ನು ಕೊಂದು ರಸ್ತೆಯಲ್ಲಿ ಬಿಸಾಡಿದ್ದರು. ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಬಿಕ್ಕೋಡು ಸಮೀಪದ ಚೌಡನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿತ್ತು. ಮಂಗಗಳನ್ನ ಕೊಂದು ನಡು ರಾತ್ರಿ ಕಾರಿನಲ್ಲಿ ತಂದು ಬಿಸಾಡಿ ಹೋಗಿದ್ದರು. ಮೂಕ ಪ್ರಾಣಿಗಳ ದಾರುಣ ಹತ್ಯೆ ಕಂಡು ಜನರು ಬೆಚ್ಚಿ ಬಿದ್ದಿದ್ದರು. ನಿತ್ರಾಣಗೊಂಡಿರೋ ಮಂಗಗಳಿಗೆ ಸ್ಥಳೀಯರು ಆರೈಕೆ ನೀಡಿ, ಚಿಕಿತ್ದೆ ಕೊಡಿಸಲಾಗಿತ್ತು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ದೂರು ದಾಖಲಿಸಿ ಕೊನೆಗೆ ಹಂತಕರ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.