ಮತ್ತೆ ಜೆಡಿಎಸ್ ಬ್ಯಾನರ್‌ನಲ್ಲಿ ರಾರಾಜಿಸಿದ ಅಂಬರೀಶ್

Jul 15, 2018, 9:21 PM IST

ಜೆಡಿಎಸ್ ಸಚಿವರೊಬ್ಬರ ಬ್ಯಾನರ್ ನಲ್ಲಿ ಮತ್ತೆ ರೆಬಲ್ ಸ್ಟಾರ್ ಅಂಬರೀಶ್ ಸ್ಥಾನ ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಮುಖಂಡ ಅಂಬರೀಶ್ ಬ್ಯಾನರ್ ಈ ಬಾರಿ ದೊಡ್ಡದಾಗಿ ರಾರಾಜಿಸಿದೆ.  ಜಿಲ್ಲೆಯ ಪಾಂಡವಪುರ ಪಟ್ಟಣದಲ್ಲಿ ನಟ ಅಂಬರೀಶ್ ಫೋಟೋಗಳು ಜೆಡಿಎಸ್ ನಾಯಕರ ಫ್ಲೆಕ್ಸ್ ನಲ್ಲಿ ರಾರಾಜಿಸುತ್ತಿವೆ. ಸಾರ್ವಜನಿಕ ಆಸ್ಪತ್ರೆಯ ಸೌಲಭ್ಯ ಸಂಕೀರ್ಣ ಮಳಿಗೆ ಉದ್ಘಾಟನೆ ಸಮಾರಂಭಕ್ಕೆ ಫ್ಲೆಕ್ಸ್ ಹಾಕಲಾಗಿತ್ತು. ಅದರಲ್ಲಿ ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಪ್ಲೆಕ್ಸ್ ಜೊತೆ ಅಂಬರೀಶ್ ಭಾವಚಿತ್ರ ಹಾಕಲಾಗಿದ್ದು ಅಂಬರೀಶ್ ಜೆಡಿಎಸ್ ಕಡೆ ಹೆಜ್ಜೆ ಇಟ್ಟಿದ್ದಾರಾ? ಎಂಬ ಅನುಮಾನಗಳಿಗೆ ಮತ್ತಷ್ಟು ಪುಷ್ಠಿ ಬಂದಿದೆ.