ಆಶಾ ಕಾರ್ಯಕರ್ತೆಯರು ಮತ್ತು ಬಿಸಿಯೂಟ ಸಿಬ್ಬಂದಿಯ ವೇತನ ಹೆಚ್ಚಳ ಸೇರಿದಂತೆ ಇತರೆ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಬಗೆಹರಿಸಲು ಪ್ರಾಮಾಣಿಕವಾಗಿ ಯತ್ನಿಸುತ್ತೇನೆ ಎಂದು ಶಾಸಕ ಕೆ. ಮಹದೇವ್ ಹೇಳಿದರು.
ಪಿರಿಯಾಪಟ್ಟಣ :ಆಶಾ ಕಾರ್ಯಕರ್ತೆಯರು ಮತ್ತು ಬಿಸಿಯೂಟ ಸಿಬ್ಬಂದಿಯ ವೇತನ ಹೆಚ್ಚಳ ಸೇರಿದಂತೆ ಇತರೆ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಬಗೆಹರಿಸಲು ಪ್ರಾಮಾಣಿಕವಾಗಿ ಯತ್ನಿಸುತ್ತೇನೆ ಎಂದು ಶಾಸಕ ಕೆ. ಮಹದೇವ್ ಹೇಳಿದರು.
ಪಟ್ಟಣದಲ್ಲಿ ಜಿಪಂಇಲಾಖೆ, ತಾಪಂ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಬಿಸಿಯೂಟ ತಯಾರಕರ ಹಾಗೂ ಆಶಾ ಕಾರ್ಯಕರ್ತೆಯರ ಒಂದು ದಿನದ ತರಬೇತಿ ಮತ್ತು ಕುಂದುಕೊರತೆ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
undefined
ಕೊರೋನಾ ಸಂಕಷ್ಟಕಾಲದಲ್ಲಿ ತಾವು ಸಲ್ಲಿಸಿದ ಸೇವೆ ಅನನ್ಯವಾದದ್ದು, ಅನೇಕ ಮತ್ತು ಆಶಾ ಕಾರ್ಯಕರ್ತರಿಗೆ ಸ್ವಂತ ಮನೆ ಇಲ್ಲದವರು ಅರ್ಜಿ ಸಲ್ಲಿಸಿದರೆ ಪ್ರಥಮ ಆದ್ಯತೆ ಮೇಲೆ ಅಂತವರಿಗೆ ಮನೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗುವುದು ತಮ್ಮಗಳ ಇಲಾಖೆ ಸಂಬಂಧ ಸಮಸ್ಯೆಗಳಿದ್ದರೆ ನೇರ ನನ್ನ ಗಮನಕ್ಕೆ ತನ್ನಿ ಬಗೆಹರಿಸಲು ಯತ್ನಿಸುತ್ತೇನೆ ಎಂದರು.
ತಾಪಂ ಇಒ ಸಿ.ಆರ್. ಕೃಷ್ಣಕುಮಾರ್ ಮಾತನಾಡಿ, ಸಮಾಜದ ಕಟ್ಟಕಡೆಯ ನಮ್ಮ ಎಲ್ಲ ಅಕ್ಷರ ದಾಸೋಹದ ಅಡುಗೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರ ಕುಂದುಕೊರತೆ ಆಲಿಸುವ ಸಭೆ ಎಲ್ಲಿಯು ನಡೆದಿಲ್ಲ ಶಾಸಕ ಕೆ. ಮಹದೇವ್ ಅವರು ಇಂತಹ ಕೆಲಸಕ್ಕೆ ಮುಂದಾಗಿರುವುದು ಶ್ಲಾಘನೀಯ, ಇವರ ಕೆಲಸ ದಿನ ಪೂರ್ತಿಯಾದರು ಕಡಿಮೆ ಸಂಬಳ ಬರುತ್ತಿದೆ, ತಾಯಿ ಬಿಟ್ಟರೆ ಸಮಾಜದಲ್ಲಿ ಆ ಸ್ಥಾನ ತುಂಬುತ್ತಿರುವುದು ಇವರೇ ಅಗಿದ್ದಾರೆ ಎಂದರು.
ಟಿಎಚ್‌ಒ ಡಾ. ಶರತ್‌ಬಾಬು ಮಾತನಾಡಿ, ತಾಲೂಕಿನಲ್ಲಿ 50 ಸಾವಿರ ಜನಕ್ಕೆ ಬೂಸ್ಟರ್ ಡೋಸ್ ಕೊಡುವುದು ಬಾಕಿಯಿದೆ, ವ್ಯಾಕ್ಸಿನೇಷನ್ ಪಡೆದರೆ ಹೃದಯಾಘಾತ ಮತ್ತಿತರ ತೊಂದರೆ ಉಂಟಾಗುತ್ತದೆ ಎಂಬ ತಪ್ಪು ಕಲ್ಪನೆ ಸಾರ್ವಜನಿಕರಲ್ಲಿ ಇರುವುದು ಸತ್ಯಕ್ಕೆ ದೂರವಾದ ಸಂಗತಿ ಇದಕ್ಕೆ ಯಾರು ಇಂಬು ಕೊಡಬೇಡಿ ಮುಂದಿನ ದಿನಗಳಲ್ಲಿ ಎಲ್ಲರೂ ಬೂಸ್ಟರ್ ಡೋಸ್ ಪಡೆದುಕೊಳ್ಳಿ ಎಂದರು.
ಬಿಇಒ ಬಸವರಾಜು ಮಾತನಾಡಿ, ಅಕ್ಷರ ದಾಸೋಹ ಜನಪ್ರಿಯವಾಗಿದೆ ಸಿಬ್ಬಂದಿ ರುಚಿ ಮತ್ತು ಶುಚಿಗೆ ಆದ್ಯತೆ ನೀಡಬೇಕು, ಬೆಂಕಿಯೊಂದಿಗೆ ಕೆಲಸ ನಿರ್ವಹಿಸುವುದರಿಂದ ಮುನ್ನೆಚ್ಚರಿಕೆ ವಹಿಸಬೇಕು, ಮಕ್ಕಳನ್ನು ಅಡುಗೆ ಮನೆಯಿಂದ ದೂರ ಇರುವಂತೆ ನೋಡಿಕೊಳ್ಳಿ ಅಹಾರ ಸಾಮಗ್ರಿಗಳ ಸುರಕ್ಷತೆ ವಹಿಸಬೇಕು ಸರಬರಾಜಾದ ಆಹಾರವನ್ನು ಸಂರಕ್ಷಣೆ ಮಾಡಿ ಇಡಬೇಕು ಎಂದರು.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಪ್ರಶಾಂತ್ ಅವರು ರೂಪಿಸಿರುವ ಅನ್ನಯಜ್ಞ ಬ್ಲಾಗ್‌ಗೆ ಶಾಸಕ ಕೆ. ಮಹದೇವ್ ಚಾಲನೆ ನೀಡಿದರು.
ಟಿಬೆಟಿಯನ್ ಆಶಾ ಕಾರ್ಯತರ್ಕೆಯರು ಸೇರಿದಂತೆ ಹಲವರು ಮಾಡಿದ ವಿವಿಧ ನೃತ್ಯ ಗಮನ ಸೆಳೆಯಿತು. ಶಾಸಕರು ಆಶಾ ಮತ್ತು ಅಕ್ಷರ ದಾಸೋಹ ಸಿಬ್ಬಂದಿಗಳಿಗೆ ಉಚಿತವಾಗಿ ಸೀರೆ ವಿತರಣೆ ಮಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಶರತ್‌ಬಾಬು ಅವರ ಹುಟ್ಟುಹಬ್ಬ ಅಂಗವಾಗಿ ವೇದಿಕೆಯಲ್ಲಿ ಕೇಕ್ ಕತ್ತರಿಸಿ ಶುಭ ಕೋರಲಾಯಿತು.
ಪುರಸಭೆ ಅಧ್ಯಕ್ಷ ಕೆ. ಮಹೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಮಹಿಳಾ ಘಟಕ ಅಧ್ಯಕ್ಷೆ ಪ್ರೀತಿಅರಸ್, ತಾಪಂ ಮಾಜಿ ಸದಸ್ಯ ಎ.ಟಿ. ರಂಗಸ್ವಾಮಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಶಾಂತ್, ಬೆಟ್ಟದತುಂಗ ಗ್ರಾಪಂ ಅಧ್ಯಕ್ಷ ದೇವರಾಜು, ಮುಖಂಡ ಇಲಿಯಾಸ್, ತಾಲೂಕು ಅರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ ಲತಾ, ಹಿರಿಯ ನಿರೀಕ್ಷಣಾಧಿಕಾರಿ ಕೆ.ಆರ್. ಪ್ರಕಾಶ್, ಹಿರಿಯ ಸುರಕ್ಷಾಧಿಕಾರಿ ಶಾಂತಕುಮಾರಿ ಹಾಗೂ ಆರೋಗ್ಯ ಮತ್ತು ಶಿಕ್ಷಣ ಇಲಾಖೆ ವಿವಿಧ ಅಧಿಕಾರಿ ಸಿಬ್ಬಂದಿ ಇದ್ದರು.