ಆ.1ರಿಂದ ಇಲ್ಲಿ ಇಂದಿರಾ ಕ್ಯಾಂಟೀನ್‌ ಬಂದ್‌?

By Web DeskFirst Published Jul 15, 2019, 9:33 AM IST
Highlights

ಈ ಜಿಲ್ಲೆಯಲ್ಲಿ ಇದೇ ಆಗಸ್ಟ್ ಒಂದರಿಂದ ಇಂದಿರಾ ಕ್ಯಾಂಟೀನ್ ಬಂದ್ ಆಗುತ್ತಿದೆ. ಅದಕ್ಕೆ ಕಾರಣ ಇಲ್ಲಿದೆ. 

ಧಾರ​ವಾಡ [ಜು.15]: ಸರ್ಕಾ​ರ​ದಿಂದ ಹಣ ಬರ​ದಿ​ರುವ ಕಾರ​ಣ​ ಗುತ್ತಿ​ಗೆ​ದಾ​ರರು ಆ.1ರಿಂದ ಹುಬ್ಬಳ್ಳಿ- ಧಾರವಾಡದಲ್ಲಿರುವ 9 ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈ​ಸದಿರಲು ನಿರ್ಧ​ರಿ​ಸಿ​ದ್ದಾರೆ. ಹೀಗಾಗಿ ಕ್ಯಾಂಟೀನ್‌ಗಳು ಬಾಗಿಲು ಮುಚ್ಚುವ ಸಾಧ್ಯತೆ ಇದೆ.

ಕ್ಯಾಂಟೀನ್‌ ಆರಂಭಗೊಂಡು ಹತ್ತು ತಿಂಗಳು ಕಳೆದರೂ ಇದುವರೆಗೂ ಗುತ್ತಿಗೆದಾರರ ಹಣವನ್ನು ನೀಡಿಲ್ಲ. ಒಟ್ಟು .2.90 ಕೋಟಿ ಹಣವನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಆಗಸ್ಟ್‌ 1ರಿಂದ ಅವಳಿ ನಗರದಲ್ಲಿರುವ ಒಂಬತ್ತು ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ನಿಲ್ಲಿಸುತ್ತೇವೆ ಎಂದು ಸರ್ಕಾರಕ್ಕೆ ಹಾಗೂ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವುದಾಗಿ ಗುತ್ತಿಗೆದಾರ ಮೋಹನ ಮೊರೆ ಪತ್ರಿ​ಕೆಗೆ ತಿಳಿಸಿದ್ದಾರೆ.

ಪತ್ರ ಬರೆದ ತಕ್ಷಣ ಜಿಲ್ಲಾಧಿಕಾರಿ ದೀಪಾ ಚೋಳನ್‌ .35 ಲಕ್ಷ ನೀಡಿದ್ದಾರೆ. ಆದರೆ, ಇದು ಬಕಾ​ಸು​ರನ ಹೊಟ್ಟೆಗೆ ಅರೆ​ಕಾ​ಸಿನ ಮಜ್ಜಿ​ಗೆಯಂತಾಗಿದೆ. ಪೂರ್ತಿ ಹಣ ನೀಡಿದರೆ ಮಾತ್ರ ಆಹಾರ ಪೂರೈಕೆ ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.

click me!