ಪಶ್ಚಿಮಘಟ್ಟದಲ್ಲಿ ಘಟಿಯಾನ ದ್ವಿವರ್ಣ ಏಡಿ ಪತ್ತೆ

By Kannadaprabha NewsFirst Published Aug 18, 2022, 8:43 AM IST
Highlights

ಪಶ್ಚಿಮ ಘಟ್ಟದ ಶ್ರೇಣಿಯಲ್ಲಿ ವನ್ಯಜೀವಿ ವಿಜ್ಞಾನಿಗಳು ಘಟಿಯಾನ ದ್ವಿವರ್ಣ ಏಡಿಯನ್ನು ಪತ್ತೆ ಹಚ್ಚಿದ್ದಾರೆ. ಈ ಏಡಿಯನ್ನು ಯಲ್ಲಾಪುರದ ಗೋಪಾಲಕೃಷ್ಣ ಹೆಗಡೆ, ಅರಣ್ಯ ಇಲಾಖೆಯ ಅಧಿಕಾರಿ ಪರಶುರಾಮ ಭಜಂತ್ರಿ ಸಂಶೋಧಿಸಿದ್ದಾರೆ.

ಯಲ್ಲಾಪುರ (ಆ.18) : ಪಶ್ಚಿಮ ಘಟ್ಟದ ಶ್ರೇಣಿಯಲ್ಲಿ ವನ್ಯಜೀವಿ ವಿಜ್ಞಾನಿಗಳು ಘಟಿಯಾನ ದ್ವಿವರ್ಣ ಏಡಿಯನ್ನು ಪತ್ತೆ ಹಚ್ಚಿದ್ದಾರೆ. ಈ ಏಡಿಯನ್ನು ಯಲ್ಲಾಪುರದ ಗೋಪಾಲಕೃಷ್ಣ ಹೆಗಡೆ, ಅರಣ್ಯ ಇಲಾಖೆಯ ಅಧಿಕಾರಿ ಪರಶುರಾಮ ಭಜಂತ್ರಿ ಸಂಶೋಧಿಸಿದ್ದಾರೆ. ಜಿಲ್ಲೆಯ ಜೀವ ವೈವಿಧ್ಯಕ್ಕೆ ದಾಖಲಾಗಿದೆ. ಸಂಶೋಧಿತಗೊಂಡ ಈ ಏಡಿಗೆ ಇದೀಗ ಘಾಟಿಯಾನ ದ್ವಿವರ್ಣ ಎಂದು ಬ್ರೆಜಿಲ್‌ನ ಅಂತರಾಷ್ಟ್ರೀಯ ಸಂಸ್ಥೆ ಮತ್ತು ಜಿಯೋಲಾಜಿಕಲ್‌ ಸರ್ವೇ ಆಫ್‌ ಇಂಡಿಯಾ ಅಧಿಕೃತ ಮಾನ್ಯತೆ ನೀಡಿದೆ.

ಸಮುದ್ರ ಆಳದಲ್ಲಿ 14 ಕಾಲಿನ ಹೊಸ ಜೀವಿ ಪತ್ತೆ!

ಈ ಪ್ರಭೇದದ ಏಡಿಗಳು ವಿಶೇಷವಾಗಿ ವರ್ಣಗಳಿಂದ ಕೂಡಿದ್ದು, ಆಕರ್ಷಣೀಯವಾಗಿರುತ್ತವೆ. ಈಗ ಪತ್ತೆಯಾಗಿರುವ ಏಡಿಯ ದೇಹದ ವರ್ಣ ಬಿಳಿ ಮತ್ತು ಕಾಲುಗಳು ಚಾಕಲೇಟ್‌ ವರ್ಣಗಳಿಂದ ಕೂಡಿದೆ. ಪಶ್ಚಿಮ ಘಟ್ಟದ ಬಂಡೆಗಳಲ್ಲಿನ ಅಡಿಯಲ್ಲಿನ ರಂಧ್ರಗಳಲ್ಲಿ ಈ ಏಡಿಗಳು ವಾಸಿಸುತ್ತವೆ. ಸಣ್ಣಪುಟ್ಟಹುಳುಗಳು ಮತ್ತು ಪಾಚಿಯೇ ಇವುಗಳ ಆಹಾರವಾಗಿದೆ.

ಪರಿಸರ ವ್ಯವಸ್ಥೆ ಸಮತೋಲನ:

ಆಹಾರ ಸರಪಳಿಯಲ್ಲಿ ಏಡಿಗಳು ಮಹತ್ವದ ಪಾತ್ರ ವಹಿಸುವುದರ ಮೂಲಕ ಪರಿಸರ ವ್ಯವಸ್ಥೆಯ ಸಮತೋಲನ ಕಾಯ್ದುಕೊಳ್ಳಲು ಸಹಾಯಕವಾಗುತ್ತದೆ. ಆವಾಸ ಸ್ಥಾನ ನಾಶದಿಂದಾಗಿ ಹಲವಾರು ಪ್ರಭೇದದ ಜೀವಿಗಳು ವಿನಾಶದಂಚು ತಲುಪುತ್ತಿವೆ. ಇವುಗಳ ಉಳಿವಿಗೆ ಪಶ್ಚಿಮಘಟ್ಟದ ಸಂರಕ್ಷಣೆ ಆಗಬೇಕು ಎನ್ನುತ್ತಾರೆ ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್‌. ನಾಯಕ.

ಆಶ್ಚರ್ಯವಾದರೂ ಆರೋಗ್ಯಕಾರಿ ಜಿರಲೆ ಹಾಲು

ಸಂಶೋಧನೆ ಸಿಬ್ಬಂದಿಗೆ ಪ್ರೇರಣೆ: ಪಶ್ಚಿಮ ಘಟ್ಟವು ವಿಶಿಷ್ಟವಾದ ಅಸಂಖ್ಯಾತ ಜೀವರಾಶಿ ಹೊಂದಿದೆ. ವಿಶ್ವದ ಪ್ರಖ್ಯಾತ ಜೀವವೈವಿಧ್ಯ ತಾಣವಾಗಿದೆ. ಇನ್ನು ಹೆಚ್ಚಿನ ಸಂಶೋಧನೆಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕಾರ್ಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತೊಡಗಿದ್ದಾರೆ. ಸಂಶೋಧನೆಯು ಇಲಾಖೆಯ ಸಿಬ್ಬಂದಿಗೆ ಪ್ರೇರಣೆಯಾಗಿದೆ ಎನ್ನುತ್ತಾರೆ ಕೆನರಾ ವೃತ್ತದ ಸಿಸಿಎಫ್‌ ವಸಂತ ರಡ್ಡಿ. ಯಲ್ಲಾಪುರದ ತಾಲೂಕಿನ ಬಾರೆ ಗ್ರಾಮದ ಗೋಪಾಲಕೃಷ್ಣ ಹೆಗಡೆ ಅಡಿಕೆ ಕೃಷಿ ಮತ್ತು ಹರ್ಬಲ್‌ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಅನ್ವೇಷಣೆಗಳು ನಡೆದು, ಪಶ್ಚಿಮ ಘಟ್ಟದ ಜೀವ ವೈವಿಧ್ಯ ಇಡೀ ವಿಶ್ವಕ್ಕೆ ಕಾಣುವಂತಾಗಲಿ ಎಂಬುದು ನಿಸರ್ಗ ಪ್ರಿಯರ ಬಯಕೆಯಾಗಿದೆ.

click me!