* ರಾಜ್ಯದಾದ್ಯಂತ ಬಕ್ರೀದ್ ಹಬ್ಬ ಆಚರಣೆ
* ಪರಸ್ಪರ ಶುಭಾಶಯ ಹಂಚಿಕೊಂಡ ಮುಸ್ಲಿಂ ಬಾಧವರು
* ದಾವಣಗೆರೆಯಲ್ಲಿ ಮೊದಲ ಬಾರಿಗೆ ಗೋ ಹತ್ಯೆ ಇಲ್ಲದೇ ಬಕ್ರೀದ್ ಆಚರಣೆ
ವರದಿ - ವರದರಾಜ್
ದಾವಣಗೆರೆ (ಜುಲೈ 10): ಮುಸ್ಲಿಂ ಬಾಂಧವರು ಇಂದು(ಭಾನುವಾರ) ರಾಜ್ಯದಾದ್ಯಂತ ಬಕ್ರೀದ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ತ್ಯಾಗ ಬಲಿದಾನದ ಸಂಕೇತವಾದ ಹಬ್ಬದಲ್ಲಿ ಮುಸ್ಲಿಂ ಬಾಂಧವರು ತಮ್ಮ ಸ್ನೇಹಿತರೊಡಗೂಡಿ ಪರಸ್ಪರ ಶುಭಾಶಯ ಹಂಚಿಕೊಂಡರು.
ಬಕ್ರೀದ್ ಹಬ್ಬದಲ್ಲಿ ಆಡು ಅಥವಾ ಕುರಿಯೊಂದನ್ನು ಬಲಿಕೊಟ್ಟು ಅದರಲ್ಲಿ ಮೂರು ಭಾಗಗಳನ್ನಾಗಿ ಮಾಡಿ ಬಡವರಿಗೆ ಒಂದು ಭಾಗ ಸ್ನೇಹಿತರಿಗೆ ಒಂದು ಭಾಗ ಸಂಬಂಧಿಗಳಿಗೆ ಮತ್ತೊಂದು ಭಾಗ ನೀಡುವುದು ಸಂಪ್ರದಾಯ. ಅದರಂತೆ ಮಾಂಸ ನೀಡಿ ವಿಶೇಷ ಖಾದ್ಯ ತಯಾರಿಸಿ ಸಾಂಪ್ರದಾಯಿಕ ಹಬ್ಬವನ್ನು ಆಚರಿಸಲಾಗಿದೆ.
undefined
ಗೋಹತ್ಯೆ ಕಾನೂನು ಉಲ್ಲಂಘಿಸದೆ ಬಕ್ರೀದ್ ಬಲಿಗೆ ಸರ್ಕಾರ ಸೂಚನೆ
ಬಕ್ರೀದ್ ಹಬ್ಬದಲ್ಲಿ ಈ ಬಾರಿ ಕುರಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಈ ಬಾರಿ ಮುಸ್ಲಿಂ ಬಂಧುಗಳು ಹೆಚ್ಚಾಗಿ ಮಾಂಸಾಹಾರಕ್ಕಾಗಿ ಆಡು ಹಾಗು ಕುರಿಯನ್ನೇ ಬಳಸಿದ್ದಾರೆ. ಕಳೆದ ಒಂದು ವಾರಗಳಿಂದ ಕುರಿ ಖರೀದಿಯ ಭರಾಟೆ ಜೋರಾಗಿತ್ತು. ಕನಿಷ್ಠ10 ಸಾವಿರದಿಂದ 25,30,40 ಸಾವಿರದವರೆಗು ಮಾರುಕಟ್ಟೆಯಲ್ಲಿ ಕುರಿ ಖರೀದಿ ನಡೆದಿದೆ.
ಗೋ ಹತ್ಯೆ ಇಲ್ಲದೇ ಬಕ್ರೀದ್ ಆಚರಣೆ
ರಾಜ್ಯ ಸರ್ಕಾರ ಗೋ ಹತ್ಯೆ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿರುವುದರಿಂದ ಗೋ ಹತ್ಯೆ ಸರಾಸರಿ ಪ್ರಮಾಣದಲ್ಲಿ ಕಡಿಮೆಯಾಗಿದೆ. ಜಿಲ್ಲಾ ಪೊಲೀಸ್ ಇಲಾಖೆ , ದಾವಣಗೆರೆ ಮಹಾನಗರ ಪಾಲಿಕೆ ಕಸಾಯಿ ಖಾನೆಗಳಲ್ಲಿ ಗೋ ಹತ್ಯೆ ಮಾಡುವಂತಿಲ್ಲ. ಅಕ್ರಮ ಕಸಾಯಿ ಖಾನೆಗಳಿಗೆ ಕಡಿವಾಣ ಹಾಕಿದ್ದರಿಂದ ಈ ಬಾರಿ ಜಿಲ್ಲೆಯಾದ್ಯಂತ ಆ ಪ್ರಮಾಣದ ಗೋ ವಧೆಯಾಗಿಲ್ಲ.
ಅಷ್ಟೇ ಅಲ್ಲದೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮುಸ್ಲಿಂ ಸಮಾಜದ ಮುಖಂಡರನ್ನು ಕರೆಸಿ ಗೋ ಹತ್ಯೆ ಕಾನೂನಿನ ಬಗ್ಗೆ ಮನವರಿಕೆ ಮಾಡಿ ಗೋ ಹತ್ಯೆಯನ್ನು ನಿಲ್ಲಿಸಬೇಕೆಂದು ಮನವರಿಕೆ ಮಾಡಿದ ಹಿನ್ನಲೆಯಲ್ಲಿ ಗೋ ಹತ್ಯೆಗೆ ಬ್ರೇಕ್ ಬಿದ್ದಿದೆ.
ಗೋ ವಧೆಗೆ ಅವಕಾಶವಿಲ್ಲದಿದ್ದರಿಂದ ಸಹಜವಾಗಿ ಮುಸ್ಲಿಂ ಬಂಧುಗಳು ಈ ಬಾರಿ ಎಂದಿಗಿಂತ ಕುರಿಗಳನ್ನು ಹೆಚ್ಚಾಗಿ ವಧೆ ಮಾಡಿದ್ದಾರೆ. ಸಾಮಾನ್ಯವಾಗಿ ಈ ಹಬ್ಬದಲ್ಲಿ ಸಾಂಪ್ರದಾಯಿಕ ವಾಗಿ ಶಾಸ್ತ್ರಕ್ಕಷ್ಟೇ ಕುರಿಗಳನ್ನು ವಧೆ ಮಾಡುತ್ತಿದ್ದರು. ಆದ್ರೆ ಈ ಬಾರಿ ಗೋ ವಧೆಗೆ ಬ್ರೇಕ್ ಬಿದ್ದಿರುವುದರಿಂದ ಕುರಿಗಳನ್ನು ಹೆಚ್ಚು ವಧೆ ಮಾಡಲಾಗಿದೆ ಎಂದು ಮುಸ್ಲಿಂ ಸಮಾಜದವರೇ ಮಾಹಿತಿ ನೀಡಿದ್ದಾರೆ. ಕಳೆದು ಒಂದು ವಾರದಿಂದ ದಾವಣಗೆರೆ ಜಿಲ್ಲೆಯಲ್ಲಿ ಕುರಿಗೆ ಎಲ್ಲಿಲ್ಲದ ಡಿಮ್ಯಾಂಡ್ ಬಂದಿದ್ದು ಕುರಿ ಮಾಲೀಕರಿಗೆ ಒಳ್ಳೆ ರೊಕ್ಕದ ಕಲೆಕ್ಷನ್ ಆಗಿದೆ .
ಬಕ್ರೀದ್ ಹಬ್ಬದ ದಿನದ ಸಾಮೂಹಿಕ ಪ್ರಾರ್ಥನೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು, ಗೋಹತ್ಯೆ ನಿಷೇಧ ಕಾಯ್ದೆ ಉಲ್ಲಂಘನೆಯಾಗದಂತೆ ಖುರ್ಬಾನಿಯನ್ನು (ಪ್ರಾಣಿ ಬಲಿದಾನ) ನೆರವೇರಿಸಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿತ್ತು.