ಬೆಂಗಳೂರು ಜಲಮಂಡಳಿ ನೀರಿನ ಗುಣಮಟ್ಟ ಭಾರತದಲ್ಲೇ ಬೆಸ್ಟ್; ಬಿಐಎಸ್‌ ಪ್ರಮಾಣ ಪತ್ರ ಪಡೆದ ಏಕೈಕ ಮಂಡಳಿ!

Published : Mar 13, 2025, 07:52 PM ISTUpdated : Mar 13, 2025, 08:00 PM IST
ಬೆಂಗಳೂರು ಜಲಮಂಡಳಿ ನೀರಿನ ಗುಣಮಟ್ಟ ಭಾರತದಲ್ಲೇ ಬೆಸ್ಟ್; ಬಿಐಎಸ್‌ ಪ್ರಮಾಣ ಪತ್ರ ಪಡೆದ ಏಕೈಕ ಮಂಡಳಿ!

ಸಾರಾಂಶ

ಬೆಂಗಳೂರು ಜಲಮಂಡಳಿಯು 'ಪೈಪ್ ಮೂಲಕ ಕುಡಿಯುವ ನೀರು ಸರಬರಾಜು ನಿರ್ವಹಣಾ ವ್ಯವಸ್ಥೆ'ಗಾಗಿ ಬಿಐಎಸ್ ಪ್ರಮಾಣಪತ್ರ ಪಡೆದಿದೆ. ಈ ಪ್ರಮಾಣಪತ್ರ ಪಡೆದ ದೇಶದ ಮೊದಲ ಜಲಮಂಡಳಿ ಇದಾಗಿದೆ. ನೀರಿನ ಗುಣಮಟ್ಟ ಮತ್ತು ಸುರಕ್ಷತೆಗಾಗಿ ಜಲಮಂಡಳಿ ಅಂತರಾಷ್ಟ್ರೀಯ ಮಾನದಂಡಗಳನ್ನು ಅಳವಡಿಸಿಕೊಂಡಿದೆ. ಬಿಐಎಸ್ ತಂಡವು ನೀರಿನ ಮಾದರಿಗಳನ್ನು ಪರಿಶೀಲಿಸಿ, ಗುಣಮಟ್ಟವನ್ನು ಖಚಿತಪಡಿಸಿಕೊಂಡಿದೆ. ಇದು ನಗರದ ಜನರಿಗೆ ಶುದ್ಧ ನೀರು ಒದಗಿಸುವಲ್ಲಿ ಮಹತ್ವದ ಮೈಲಿಗಲ್ಲು ಎಂದು ಸಚಿವರು ಹೇಳಿದ್ದಾರೆ.

ಬೆಂಗಳೂರು (ಮಾ.13): ಬೆಂಗಳೂರು ಜಲಮಂಡಳಿಯ 'ಪೈಪ್ ಮೂಲಕ ಕುಡಿಯುವ ನೀರು ಸರಬರಾಜು ನಿರ್ವಹಣಾ ವ್ಯವಸ್ಥೆ' ಈ ದೇಶಕ್ಕೆ ಮಾದರಿಯಾಗಿದೆ. ಕುಡಿಯುವ ನೀರಿನ ಸರಬರಾಜು ಹಾಗೂ ಗುಣಮಟ್ಟದ ಬಗ್ಗೆ ದೇಶದಲ್ಲೇ ಮೊದಲ ಬಾರಿಗೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ನಿಂದ ಪ್ರಮಾಣ ಪತ್ರ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಇಂತಹ ಪ್ರಮಾಣ ಪತ್ರ ಪಡೆದ ದೇಶದ ಮೊದಲ ಹಾಗೂ ಏಕೈಕ ಜಲಮಂಡಳಿಯಾಗಿ ಹೊರಹೊಮ್ಮಿದೆ. 

ಕಳೆದ ಆರು ತಿಂಗಳಿನಿಂದ ವಿವಿಧ ಹಂತಗಳಲ್ಲಿ ನಡೆದ ಪರೀಕ್ಷೆಗಳಲ್ಲಿ ನೀರು ಸರಬರಾಜು ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿರುವ ಅಂತರಾಷ್ಟ್ರೀಯ ಮಾನದಂಡಗಳ ಬಗ್ಗೆ ಬಿಐಎಸ್‌ ತಂಡ ಶ್ಲಾಘಿಸಿದ್ದು, ಬಿಐಎಸ್‌ ನ ಕಠಿಣ ಪರೀಕ್ಷೆಯಲ್ಲಿ ಬೆಂಗಳೂರು ಜಲಮಂಡಳಿ ಪಾಸ್‌ ಆಗಿದೆ. ಪೈಪ್ ಮೂಲಕ ಸ್ವಚ್ಛ, ಆರೋಗ್ಯಕರ ನೀರು ಸರಬರಾಜು ಮಾಡುತ್ತಿರುವ ಹಿನ್ನೆಲೆಯಲ್ಲಿ ಜಲ ಮಂಡಳಿಗೆ ಈ ಪ್ರಮಾಣ ಪತ್ರ ದೊರೆತಿದ್ದು ಇಂತಹ ಪ್ರಮಾಣ ಪತ್ರ ಪಡೆದಿರುವ ದೇಶದ ಏಕೈಕ ನೀರು ಸರಬರಾಜು ಮಂಡಳಿಯಾಗಿ ಹೊರಹೊಮ್ಮಿದೆ. 
ಈ ಕುರಿತಂತೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , 'ನಗರದ ಜನರಿಗೆ ಶುದ್ಧ ಮತ್ತು ಸುರಕ್ಷಿತ ನೀರು ಒದಗಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಬಿಐಎಸ್ ಪ್ರಾಮಾಣೀಕರಣ ಪಡೆದ ದೇಶದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಜಲ ಮಂಡಳಿಯದ್ದಾಗಿರುವುದು ಹೆಮ್ಮೆಯ ವಿಚಾರ' ಎಂದು ಹೇಳಿದ್ದಾರೆ.

'ನಾವು ನೀರಿನ ಗುಣಮಟ್ಟ ಮತ್ತು ಸುರಕ್ಷತೆಗೆ ವಿಶೇಷ ಮಾನದಂಡ ಹೊಂದಿದ್ದೇವೆ. ಇದು ಸಾರ್ವಜನಿಕ ಸೇವೆಗಳು ಮತ್ತು ನಗರ ಸುಸ್ಥಿರತೆಯಲ್ಲಿ ಅತ್ಯುನ್ನತ ಮಾನದಂಡಗಳನ್ನು ಅಳವಡಿಸಿಕೊಳ್ಳುವ ನಗರವಾಗಿ ಬ್ರ್ಯಾಂಡ್ ಬೆಂಗಳೂರು ಉಪಕ್ರಮಕ್ಕೆ ಇನ್ನಷ್ಟು ಶಕ್ತಿ ನೀಡಲಿದೆ.  ಸುಸ್ಥಿರ ನೀರಿನ ನಿರ್ವಹಣೆ ಮತ್ತು ಗುಣಮಟ್ಟದ ಜೀವನಕ್ಕಾಗಿ ಬೆಂಗಳೂರನ್ನು ಮಾದರಿ ನಗರವಾಗಿ ರೂಪಿಸಲು ನಾವು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತೇವೆ. ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಅಂತರಾಷ್ಟ್ರೀಯ ಮಾನದಂಡಗಳನ್ನು ಅಳವಡಿಸಿಕೊಂಡು ಗುಣಮಟ್ಟವನ್ನು ಕಾಯ್ದುಕೊಂಡಿರುವ ಬೆಂಗಳೂರು ಜಲಮಂಡಳಿಯ ಎಲ್ಲರೂ ಅಭಿನಂದನೆಗೆ ಅರ್ಹರು' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮನೆಯ ಮುಂದೆ ಕಾರು, ಬೈಕ್ ತೊಳೆದವರಿಗೆ 5.6 ಲಕ್ಷ ದಂಡ ಹಾಕಿದ ಜಲಮಂಡಳಿ!

ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷರಾದ ಡಾ.ರಾಮ ಪ್ರಸಾತ್ ಮನೋಹರ್ ಪ್ರತಿಕ್ರಿಯಿಸಿ , ಬೆಂಗಳೂರಿನ ಲಕ್ಷಾಂತರ ನಿವಾಸಿಗಳಿಗೆ ಸೇವೆ ಸಲ್ಲಿಸುತ್ತಿರುವ ಜಲಮಡಳಿಯ ಕಾರ್ಯನಿರ್ವಹಣೆಗೆ ಬಿಐಎಸ್ ಪ್ರಮಾಣಪತ್ರ ಲಭಿಸಿರುವುದು ನಗರದ ನೀರಿನ ಉಪಯುಕ್ತತೆಗೆ ಸಂಬಂಧಿಸಿದಂತೆ ಮಹತ್ವದ ಮೈಲಿಗಲ್ಲಾಗಿದೆ. ನಾಗರಿಕರಿಗೆ ಗುಣಮಟ್ಟದ ಸೇವೆಯನ್ನು ಖಚಿತಪಡಿಸಿಕೊಳ್ಳುವುದನ್ನು ನಮ್ಮ ಆದ್ಯತೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಾಯಕತ್ವವು ನಾವು ಈ ಪ್ರಮಾಣಪತ್ರವನ್ನು ಪಡೆಯಲು ಸಹಾಯ ಮಾಡಿತು. ನಮ್ಮ ಕಾರ್ಯಾಚರಣೆಗಳಲ್ಲಿ ಕಠಿಣ ಗುಣಮಟ್ಟದ ನಿರ್ವಹಣೆಯ ಬದ್ಧತೆಯು ಜಲಮಂಡಳಿಗೆ ಈ ಗೌರವವನ್ನು ತಂದುಕೊಟ್ಟಿದೆ ಎಂದು ಹೇಳಿದರು. 

ಪ್ರಮಾಣ ಪತ್ರದ ವ್ಯಾಪ್ತಿ: ಬಿಐಎಸ್ ಪ್ರಮಾಣೀಕರಣದ ವ್ಯಾಪ್ತಿಯು ಜಲಮಂಡಳಿಯ ಸಮಗ್ರ ನೀರಿನ ನಿರ್ವಹಣಾ ಕಾರ್ಯಾಚರಣೆಗಳನ್ನು ಒಳಗೊಂಡಿದೆ. ಇದರಲ್ಲಿ ಮೂಲದಿಂದ ನೀರಿನ ಸೇವನೆ, ಸಂಸ್ಕರಣೆ, ಸಂಗ್ರಹಣೆ, ಪಂಪಿಂಗ್, ಜಲಮಂಳಿ ವ್ಯಾಪ್ತಿಯಲ್ಲಿ ಪೈಪ್ ನೆಟ್‌ವರ್ಕ್ ಮೂಲಕ ವಿತರಣೆ, ನಿರ್ವಹಣೆ, ಮೀಟರಿಂಗ್ ಮತ್ತು ಗ್ರಾಹಕರಿಗೆ ಬಿಲ್ಲಿಂಗ್ಅನ್ನು ಒಳಗೊಂಡಿದೆ.  'ಬಿಐಎಸ್ ಪ್ರಮಾಣೀಕರಿಸಿದ ಕುಡಿಯುವ ನೀರು ರೋಗಕಾರಕಗಳು ಮತ್ತು ರಾಸಾಯನಿಕಗಳಿಗೆ ಒಡ್ಡಿಕೊಳ್ಳುವ ಅಪಾಯವನ್ನು ಕಡಿಮೆ ಮಾಡುತ್ತದೆ. ಒಟ್ಟಾರೆ ಆರೋಗ್ಯ ಮತ್ತು ಕ್ಷೇಮವನ್ನುಪ್ರತಿಪಾದಿಸುತ್ತದೆ. ಜಲಮಂಡಳಿ ಪೂರೈಸುವ ನೀರಿನ ಗುಣಮಟ್ಟವು ಉತ್ತಮವಾಗಿದ್ದು, ಜನರಿಗೆ ಅಪಾಯಕಾರಿಯಲ್ಲ ಎಂಬುದರ ಆಧಾರದ ಮೇಲೆ ಈ ಪ್ರಮಾಣಪತ್ರ ಜಲಮಂಡಳಿಗೆ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ: ಬೆಂಗಳೂರು ಅಪಾರ್ಟ್‌ಮೆಂಟ್‌ಗಳಿಗೆ ಕಾವೇರಿ ನೀರಿನ ಸಂಪರ್ಕ ಪ್ರಕ್ರಿಯೆ ಮತ್ತಷ್ಟು ಸರಳ; ರಾಮ್ ಪ್ರಸಾತ್ ಮನೋಹರ್!

ಪ್ರಮಾಣಪತ್ರವನ್ನು ನೀಡುವ ಮುನ್ನ ಬಿಐಎಸ್ ತಂಡವು ನಗರಕ್ಕೆ ನೀಡಿ ನೀರಿನ ಮಾದರಿಗಳನ್ನು ಸಂಗ್ರಹಿಸಿತ್ತು. ಬಳಿಕ ಅವುಗಳನ್ನು ಪರಿಶೀಲಿಸಿ ನೀರಿನಲ್ಲಿ ಕುಡಿಯುವ ನೀರಿಗೆ ಅವಶ್ಯವಿರುವ ಮಾನದಂಡಗಳು ಇವೆ ಎಂಬುದನ್ನು ಖಚಿತಪಡಿಸಿಕೊಂಡಿತು. ಅಲ್ಲದೆ, ಜಲಮಂಡಳಿ ನೀಡಿದ ನೀರಿನ ಗುಣಮಟ್ಟದ ಕುರಿತಾದ ದಾಖಲೆಗಳು, ನೀರು ಪೂರೈಸಲು ಅನುಸರಿಸುವ ಕಾರ್ಯವಿಧಾನಗಳು, ಪರೀಕ್ಷಾ ವಿಧಾನಗಳನ್ನು ಎರಡು ಹಂತಗಳಲ್ಲಿ ಪರಿಶೋಧನೆಗೊಳಪಡಿಸಿತ್ತು. ಅಲ್ಲದೆ, ನಿಯಮಿತವಾಗಿ ಲೆಕ್ಕ ಪರಿಶೋಧನೆಗೊಳಪಡಿಸಿ ಈ ಪ್ರಮಾಣಪತ್ರವನ್ನು ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!