ಈ ವರ್ಷ ಬಂಪರ್ ಲಾಭ ಪಡೆದು ಹೆಚ್ಚಿನ ಲಾಭದ ನಿರೀಕ್ಷೆ ಭಾರೀ ಬಂಡವಾಳ ಹೂಡಿದ್ದ ಈರುಳ್ಳಿ ಬೆಳೆಗಾರರ ಕಣ್ಣಲ್ಲಿ ಈಗ ನೀರು ಬರುತ್ತಿದೆ. ಇದಕ್ಕೆ ಕಾರಣ..?
ಸದಾನಂದ ದೇಶಭಂಡಾರಿ
ಕುಮಟಾ (ಫೆ.28]: ಉತ್ತಮ ಬೆಳೆಯ ನಿರೀಕ್ಷೆಯಲ್ಲಿ ಈರುಳ್ಳಿ ಬಿತ್ತಿದ್ದ ರೈತರ ಕಣ್ಣಾಲಿಗಳು ತುಂಬಿ ಬರುತ್ತಿದ್ದು, ಬೆಳೆದ ಈರುಳ್ಳಿ ಬೆಳೆ ಕೈಕೊಡಬಹುದೆಂಬ ಆತಂಕ ಅವರನ್ನು ಕಾಡುತ್ತಿದೆ. ಇದಕ್ಕೆ ಕಾರಣ ಎಲೆ ಸುರುಳಿ ರೋಗ. ತಾಲೂಕಿನಲ್ಲಿ ಈ ಬಾರಿ 40 ರಿಂದ 50 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾ ಗುತ್ತಿದೆ. ಆದರೆ ಈರುಳ್ಳಿ ಗಡ್ಡೆ ಕಟ್ಟುವ ಮುನ್ನವೇ ಎಲೆ ಸುರುಳಿ ರೋಗಕ್ಕೆ ತುತ್ತಾಗಿದೆ. ಹೀಗಾಗಿ ರೈತ ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಸ್ಥಿತಿಗೆ ಬಂದಿದ್ದಾನೆ.
undefined
ಒಂದು ಎಕರೆ ಪ್ರದೇಶದಲ್ಲಿ ಉತ್ತಮವಾಗಿ ಬೆಳೆದ ಈರುಳ್ಳಿ ಇಳುವರಿ 120 ಕ್ವಿಂಟಲ್‌ಗಿಂತ ಅಧಿಕವಾದರೆ, ರೋಗ ಬಾಧೆಗೆ ತುತ್ತಾದಾಗ ಇಳುವರಿ 100 ಕ್ವಿಂಟಲ್‌ಗೆ ಇಳಿಕೆಯಾಗುತ್ತದೆ. ವಿಪರ್ಯಾಸವೆಂದರೆ ರೋಗಕ್ಕೆ ತುತ್ತಾದ ಈರುಳ್ಳಿಯ ಬೆಲೆ ಕಡಿಮೆಯಾಗುತ್ತಿದೆ.
ಉತ್ತರ ಕರ್ನಾಟಕದಲ್ಲೀಗ ಜೋಳದ ಸೀತೆನಿ ಸಂಭ್ರಮ; ಆ ಕಡೆಗೆ ಹೋದವರು ತಿನ್ನದೇ ಬರಬೇಡಿ!...
ಬಾಧೆ ಹೇಗಿದೆ? ಈರುಳ್ಳಿಯ ಹಸಿರು ಗಿಡದ ಎಲೆಗಳನ್ನು ಕೀಟ ತಿಂದು, ಗಿಡ ಸುರುಳಿಯಾಗಿ ಬೇಗ ಒಣಗುವಂತೆ ಮಾಡುವುದು. ಪರಿಹಾರವೇನು? ಎಟ್ರಾ, ಕಾಂಟೇಕ್, ಪೋಟಾಸ್ ನೈಟ್ರೆರೇಟ್ ರಿಚ್ ಬೋರಾಮಿನ್ ಔಷಧಿ ಸಿಂಪಡಿಸುವುದರಿಂದ ರೋಗ ನಿಯಂತ್ರಣ ಸಾಧ್ಯ. ತಾಲೂಕಿನಲ್ಲಿ ಹಂದಿಗೋಣ, ಅಳ್ವೆಕೋಡಿ, ಕಡೆಕೋಡಿ, ಹಂದಿಗೋಣ, ಗೋಕರ್ಣ, ವನ್ನಳ್ಳಿ ಇನ್ನಿತರ ಪ್ರದೇಶಗಳಲ್ಲಿ ಈರುಳ್ಳಿ ಬೆಳೆಯಲಾಗತ್ತಿದೆ.
ಉಪಬೆಳೆ: ಸಾಮಾನ್ಯವಾಗಿ ಮಳೆಗಾಲ ಮುಗಿದು ಬತ್ತದ ಕೊಯ್ಲು ಆದ ನಂತರದಲ್ಲಿ ಉಪ ಬೆಳೆಯಾಗಿ ಬೆಳೆಯಲಾಗುತ್ತಿದೆ. ಸಾಮಾನ್ಯವಾಗಿ ಈರುಳ್ಳಿ ಬೆಳೆಯಲು ಸುಮಾರು 90 ರಿಂದ 100 ದಿನ ಬೇಕು. ಆದರೆ ತಾಲೂಕಿನ ರೈತರು 75 ರಿಂದ 80 ದಿನದಲ್ಲಿ ಈರುಳ್ಳಿ ಕೀಳುತ್ತಾರೆ. ರೋಗ ಬಾಧೆಗೆ ತುತ್ತಾದಾಗ ಕೇವಲ ಎರಡೂವರೆ ತಿಂಗಳಲ್ಲಿ ಈರುಳ್ಳಿ ಕೀಳಲಾಗುತ್ತಿದೆ. ರೋಗ ಬಾಧೆಯಂತ ವ್ಯತಿರಿಕ್ತ ಸಮಸ್ಯೆಗಳು ಬರುವುದರಿಂದ ಈರುಳ್ಳಿ ಇಳುವರಿ ಕಡಿಮೆಯಾಗಿ ರೈತ ಹಾನಿ ಅನುಭವಿಸುವಂತಾಗಿದೆ.
ಹೈರಾಣಾಗುತ್ತಿರುವ ರೈತ: ದುಬಾರಿ ಬೀಜ, ಊಳುವ ಯಂತ್ರದ ಮೀತಿಮೀರಿದ ಬಾಡಿಗೆ, ಮಾನವ ಶ್ರಮ, ಕೀಟಬಾಧೆ ಹಾಗೂ ಅನುಭವದ ಕೊರತೆಯಿಂದ ನಿರೀಕ್ಷಿತ ಆದಾಯ ಬರಲಾರದು.