Jul 28, 2018, 7:11 PM IST
ಬೆಂಗಳೂರು(ಜು.28): ಟೋಲ್ ಸುಂಕ ಕೇಳಿದ್ದಕ್ಕೆ ಸಿಬ್ಬಂದಿಗಳ ಮೇಲೆ ಚಾಲಕ ಜೀಪು ಚಲಾಯಿಸಿರುವ ಘಟನೆ ಬೆಂಗಳೂರಿನ ನೆಲಮಂಗಲದ ನವಯುಗ ಟೋಲ್ ನಲ್ಲಿ ನಡೆದಿದೆ. ಟೋಲ್ ಹಣವನ್ನು ಕೇಳಿದ್ದಕ್ಕೆ ಚಾಲಕರಿಬ್ಬರು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, 15 ದಿನದ ಹಿಂದೆ ನಡೆದಿರುವ ಗಲಾಟೆ ತಡವಾಗಿ ಬೆಳಕಿಗೆ ಬಂದಿದೆ. KA-02 AG 1407 ನಂಬರಿನ ಗೂಡ್ಸ್ ವಾಹನದ ಚಾಲಕರು ಹಲ್ಲೆ ನಡೆಸಿದ್ದು, ಅವರ ಮೇಲೆ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಯೋ ನೋಡಿ..