ಮಲೆನಾಡು ಜಿಲ್ಲೆಯಾಗಿರುವ ಕೊಡಗಿನಲ್ಲಿ ಮಳೆಗಾಲಕ್ಕೂ ಮೊದಲೇ ಕುಡಿಯುವ ನೀರಿಗೂ ಆಹಾಕಾರ ಆರಂಭವಾಗಿದೆ. ಅರೆಮಲೆನಾಡಿನಂತೆ ಇರುವ ಕುಶಾಲನಗರ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಜೀವ ಜಲಕ್ಕೂ ಬರಗಾಲದ ಎಫೆಕ್ಟ್ ಎದುರಾಗಿದೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಸೆ.04): ಮಲೆನಾಡು ಜಿಲ್ಲೆಯಾಗಿರುವ ಕೊಡಗಿನಲ್ಲಿ ಮಳೆಗಾಲಕ್ಕೂ ಮೊದಲೇ ಕುಡಿಯುವ ನೀರಿಗೂ ಆಹಾಕಾರ ಆರಂಭವಾಗಿದೆ. ಅರೆಮಲೆನಾಡಿನಂತೆ ಇರುವ ಕುಶಾಲನಗರ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಜೀವ ಜಲಕ್ಕೂ ಬರಗಾಲದ ಎಫೆಕ್ಟ್ ಎದುರಾಗಿದೆ. ಕುಶಾಲನಗರ ಪುರಸಭೆ ವ್ಯಾಪ್ತಿಗೆ ಒಳಪಡುವ ಗೊಂದಿ ಬಸವನಹಳ್ಳಿಯಲ್ಲಿ 150 ಕ್ಕೂ ಹೆಚ್ಚು ಕುಟುಂಬಗಳಿವೆ. ಈ ಗ್ರಾಮಕ್ಕೆ ಐದು ದಿನಗಳಿಗೆ ಒಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಕುಡಿಯುವ ನೀರು ಸೇರಿದಂತೆ ದಿನಬಳಕೆಗೆ ಬೇಕಾಗಿರುವ ಅಗತ್ಯ ನೀರಿಗಾಗಿ ಜನರು ಪರದಾಡುತ್ತಿದ್ದಾರೆ.
undefined
ಐದು ದಿನಗಳಿಗೆ ಒಮ್ಮೆ ನೀರು ಪೂರೈಕೆ ಆಗುತ್ತಿದ್ದರೂ ಅದು ಸಹ ಅಗತ್ಯವಾದಷ್ಟು ಪ್ರಮಾಣದಲ್ಲಿ ನೀರು ಸಿಗುತ್ತಿಲ್ಲ. ಇದಕ್ಕೆಲ್ಲಾ ಮುಖ್ಯ ಕಾರಣ ಮಳೆ ಪ್ರಮಾಣ ಸಾಕಷ್ಟು ಕೊರತೆಯಾಗಿರುವುದು. ಹೀಗಾಗಿ ಅಂತರ್ಜಲ ಕಡಿಮೆಯಾಗಿ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಐದು ದಿನಗಳಿಗೆ ಒಮ್ಮೆ ನೀರು ಪೂರೈಸಲಾಗುತ್ತಿದೆ. ಪ್ರತೀ ವರ್ಷ ಕನಿಷ್ಠ ಐದು ತಿಂಗಳ ಕಾಲ ಸುರಿಯುತ್ತಿದ್ದ ಮಳೆ ಈ ಬಾರಿ ಕೇವಲ 1 ತಿಂಗಳಷ್ಟೇ ಸುರಿಯಿತು. ಹೀಗಾಗಿ ವಾಡಿಕೆಗಿಂತ ಶೇ 55 ರಷ್ಟು ಮಳೆ ಕೊರತೆಯಾಗಿದೆ. ಇದರಿಂದ ಅಂತರ್ಜಲ ಕುಗ್ಗಿದ್ದು, ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಿದೆ.
ತ.ನಾಡಿನ ನಟೋರಿಯಸ್ ರೌಡಿ, ಡಿಎಂಕೆ ಮುಖಂಡ ಅಳಗಿರಿ ಆಪ್ತನ ಮೇಲೆ ಬೆಂಗಳೂರಲ್ಲಿ ಡೆಡ್ಲಿ ಅಟ್ಯಾಕ್!
ಬೆಳಿಗ್ಗೆ 7 ಗಂಟೆಯಿಂದ 8 ಗಂಟೆಯವರೆಗೆ ಮಾತ್ರವೇ ಒಂದು ಗಂಟೆ ಸಮಯ ನೀರು ಬರುತ್ತದೆ. ಈ ಅವಧಿಯಲ್ಲಿ ನೀರು ಹಿಡಿದುಕೊಂಡರೆ ಮಾತ್ರ ಪ್ರತೀ ಮನೆಗೆ 10 ಬಿಂದಿಗೆಯಷ್ಟು ನೀರು ಸಿಗಬಹುದು ಅಷ್ಟೇ. ಇಲ್ಲದಿದ್ದರೆ ಆ ನೀರು ಇಲ್ಲ. 5 ದಿನಗಳಿಗೆ 10 ಬಿಂದಿಗೆ ನೀರು ಎಂದರೆ ಸ್ನಾನ, ಬಟ್ಟೆ ತೊಳೆಯುವುದು, ಕುಡಿಯುವುದಕ್ಕೆ ಏನು ಮಾಡುವುದು ಎನ್ನುವುದು ಜನರ ಪ್ರಶ್ನೆ. ಕೆಲವರ ಮನೆಯಲ್ಲಿ ಮೋಟರ್ ಕೊಳವೆ ಬಾವಿ ಇದೆ. ಆದರೆ ಮಳೆ ಕೊರತೆ ಇರುವುದರಿಂದ ಅವರ ಕೊಳವೆ ಬಾವಿಯಲ್ಲೂ ನೀರಿಲ್ಲದೆ ಇರುವುದರಿಂದ ಅವರಿಗೆ ನೀರು ಸಾಕಾಗುವುದಿಲ್ಲ.
ಹೀಗಿರುವಾಗ ನಿತ್ಯ ಎಷ್ಟು ದಿನಗಳೆಂದು ನಾವು ಅವರ ಮನೆಗಳಲ್ಲಿ ನೀರನ್ನು ಕೇಳುವುದು ಎಂದು ಪ್ರಶ್ನಿಸುತ್ತಿದ್ದಾರೆ. ಗ್ರಾಮವು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವಾಗ ನೀರಿನ ಕೊರತೆ ಎದುರಾದರೂ ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆ ಮಾಡುತ್ತಿದ್ದರು. 6 ತಿಂಗಳ ಹಿಂದೆ ಗ್ರಾಮವು ಕುಶಾಲನಗರ ಪುರಸಭೆ ವ್ಯಾಪ್ತಿಗೆ ಸೇರಿದ ಬಳಿಕ ನಮ್ಮ ಸಮಸ್ಯೆಯನ್ನು ಕೇಳುವವರಿಲ್ಲ ಎಂದು ಮಹಿಳೆಯರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಕುರಿತು ಕೊಡಗಿನ ನಮ್ಮ ಪ್ರತಿನಿಧಿ ಸ್ಥಳದಿಂದ ವರದಿ ನೀಡಿದ್ದಾರೆ.
ಗೃಹಲಕ್ಷ್ಮಿ ಎಫೆಕ್ಟ್: ಬ್ಯಾಂಕ್ ಮುಂದೆ ಮಹಿಳೆಯರನ್ನು ನಿಯಂತ್ರಿಸಲು ಪೊಲೀಸರು, ಸೆಕ್ಯೂರಿಟಿ ಗಾರ್ಡ್ ಹರಸಾಹಸ
ನೀರಿನ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಮಹಿಳೆ ಶೃತಿ ಐದು ದಿನಗಳಿಗೆ ಒಮ್ಮೆ ಬೆಳಿಗ್ಗೆ ಒಂದು ಗಂಟೆ ಮಾತ್ರ ನೀರು ಬಿಡುತ್ತಾರೆ. ಆ ಸಮಯದಲ್ಲಿ ನಾವು ಮಕ್ಕಳನ್ನು ಶಾಲೆಗೆ ಕಳುಹಿಸಲು ಸಿದ್ಧಗೊಳಿಸುತ್ತಿರುತ್ತೇವೆ. ಆ ಸಮಯದಲ್ಲಿ ನೀರು ಬಿಡುವುದರಿಂದ ನೀರನ್ನು ಹಿಡಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಆ ಸಮಯದಲ್ಲಿ ನೀರು ಹಿಡಿದುಕೊಳ್ಳದಿದ್ದರೆ ಮತ್ತೆ ಇನ್ನು ಐದು ದಿನಗಳ ಕಾಲ ನೀರೇ ಸಿಗುವುದಿಲ್ಲ. ಸಿಕ್ಕರೂ ಅದು ವಾರವಿಡೀ ಸಾಕಾಗುವುದಿಲ್ಲ ಎಂದಿದ್ದಾರೆ. ನಮ್ಮ ಊರು ಕುಶಾಲನಗರ ಪುರಸಭೆಗೆ ಸೇರುವುದಕ್ಕೂ ಮೊದಲು ನೀರಿನ ಸಮಸ್ಯೆ ಎದುರಾದಾಗಲೆಲ್ಲಾ ಪಂಚಾಯಿತಿಯಿಂದ ಟ್ಯಾಂಕರ್ಗಳಲ್ಲಿ ಪೂರೈಸುತ್ತಿದ್ದರು. ಆದರೆ ಈಗ ತೀವ್ರ ಸಮಸ್ಯೆ ಎದುರಿಸಬೇಕಾಗಿದೆ ಎಂದು ಮಹಿಳೆ ಶಾಂತ ಹೇಳಿದ್ದಾರೆ.