ಬಸ್‌ನಲ್ಲೆ ಗಿಡ ಬೆಳೆಸುವ ಬಿಎಂಟಿಸಿ ಚಾಲಕ,ನಿರ್ವಾಹಕ!

By Web DeskFirst Published Jun 17, 2019, 10:01 AM IST
Highlights

ಪರಿಸರದ ಮೇಲೆ ಪ್ರೀತಿ ಇದ್ದರೆ ಹೇಗೆ ಬೇಕಾದರೂಪರಿಸರ ಪ್ರೇಮ ತೋರಿಸಬಹುದು. ಅದಕ್ಕೆ ಸಾಕ್ಷಿಬೆಂಗಳೂರಿನ ಬಿಎಂಟಿಸಿ ಕಂಡಕ್ಟರ್ ಕಮ್ ಡ್ರೈವರ್ಬಸವರಾಜ್ ಲಿಂಗಾಯತ್. ಅವರು ತಮ್ಮ ಬಸ್‌ನಲ್ಲಿಯೇ ೩೦ಕ್ಕೂ ಹೆಚ್ಚು ಗಿಡಗಳನ್ನುಬೆಳೆಸುತ್ತಿದ್ದಾರೆ. ಅವರ ಈ ಪುಟ್ಟ ಕೈ ತೋಟದಿಂದ ಪ್ರಯಾಣಿಕರು, ಸಹೋದ್ಯೋಗಿಗಳು ಫಿದಾ ಆಗಿದ್ದಾರೆ. ಈ ಮೂಲಕ ಬಸವರಾಜ್ ನೂರಾರು ಮಂದಿಯಲ್ಲಿ ಪರಿಸರ ಕಾಳಜಿ ಹುಟ್ಟುಹಾಕಿದ್ದಾರೆ.

ಮೇಘ ಎಂಎಸ್

ಡಿ ಪೋ 21. ಅದು ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಿಇಎಂಎಲ್ 5ನೇ ಹಂತದ ಡಿಪೋ. 225ಸಿ ನಂಬರಿನ ಬಸ್ಸೊಂದು ಪ್ರತಿದಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಟು ರಾಜರಾಜೇಶ್ವರಿ ನಗರದ ಮಾರ್ಗವಾಗಿ ಬಿಇಎಂಎಲ್ 5 ನೇ ಹಂತದ ಡಿಪೋ ಬಳಿಗೆ ಸಾಗುತ್ತದೆ. ಆ ಬಸ್ ಹತ್ತಿದರೆ ಸಾಕು ಅಚ್ಚರಿ ಎದುರಾಗುತ್ತದೆ. ಹಸಿರು ಗಿಡಗಳು ಸ್ವಾಗತಿಸುತ್ತವೆ. ಸುಮಾರು ಮೂವತ್ತಕ್ಕೂ ಹೆಚ್ಚು ಗಿಡಗಳಿವೆ ಅಲ್ಲಿ. 

ಯಾರಿಟ್ಟರು ಈ ಗಿಡಗಳನ್ನು ಎಂದು ಕೇಳಿದರೆ ಆ ಬಸ್ಸಿನ ಚಾಲಕ, ನಿರ್ವಾಹಕ ಬಸವರಾಜ್ ಲಿಂಗಾಯತ್ ನಗುತ್ತಾರೆ. ಅವರೇ ತಮ್ಮ ಸ್ವಂತ ಖರ್ಚಿನಲ್ಲಿ ಹಲವು ಬಗೆಯ ಸಸಿಗಳನ್ನು ಬಸ್‌ನಲ್ಲಿ ನೆಟ್ಟು ಪೋಷಿಸುತ್ತಿರುವುದು. 8 ವರ್ಷಗಳಿಂದ ಬಸ್ ಚಾಲನೆ ಮಾಡುತ್ತಿರುವ ಅನುಭವವುಳ್ಳ ಇವರು ಮೊದಲಿನಿಂದಲೂ ಹಸಿರೀಕರಣಕ್ಕೆ ಚಡಪಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರಿಗೂ ಅನುಕೂಲವಾಗುವಂತೆ ಬಸ್‌ನಲ್ಲಿ ಹಲವು ವ್ಯವಸ್ಥೆಗಳನ್ನು ಮಾಡುವ ಯೋಜನೆ ಹೊಂದಿದ್ದಾರೆ.

ಬಸವರಾಜ್ ತಮ್ಮ ಪುಟ್ಟ ಕೈ ತೋಟದ ಬಗ್ಗೆ ಹೇಳಿದ್ದು ಹೀಗೆ:

ಆಗ ರೌಡಿ ಈಗ ಸಾವಿರಾರು ಮಂದಿಗೆ ಆಶ್ರಯದಾತ

‘ಬಾಲ್ಯದಿಂದಲೂ ಕಣ್ಣಿಗೆ ತಂಪು ನೀಡುವ ಹಸಿರುವ ಎಂದರೆ ನನಗೆ ಜೀವ. ಮರ ಗಿಡಗಳೆಂದರೆ ತುಂಬಾ ಪ್ರೀತಿ. ನಾನು ಓದಿದ್ದು 10ನೇ ತರಗತಿ. ಚಿಕ್ಕಮಗಳೂರಿನಲ್ಲಿ ನಮ್ಮದು ತೆಂಗಿನ ತೋಟವಿದೆ. ಅಪ್ಪನಿಗೆ ತೋಟ ನೋಡಿಕೊಳ್ಳುವುದು ಕಷ್ಟವಾಗುತ್ತಿತ್ತು. ಹೀಗಿರುವಾಗ ನಾವು ಅವುಗಳಿಗೆ ನೀರು ಪೂರೈಸಲು ನಾವು ದೂರದ ಕೊಳ, ಕೆರೆಗಳಿಗೆ ಹೋಗಿ ಒಂದು ಉದ್ದದ ಕೋಲಿನ ಎರಡೂ ಕಡೆ ಕೊಡದಲ್ಲಿ ನೀರು ಹೊತ್ತುಕೊಂಡು(ಅಡ್ಡೆ) ತೆಂಗಿಗೆ ಹಾಕುತ್ತಿದ್ವಿ. ಇದರಿಂದ ಸುಮಾರು ೩೦೦ಕ್ಕೂ ಹೆಚ್ಚು ತೆಂಗು ಇಂದಿಗೂ ಚೆನ್ನಾಗಿ ಫಸಲು ನೀಡುತ್ತಿದೆ. ಚಿಕ್ಕಮಗಳೂರಿನ ರಸ್ತೆ ಬದಿಯಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ಗಿಡ, ಬೀಜಗಳನ್ನು ನೆಟ್ಟು ನೀರು ಹಾಕಿ ಬೆಳೆಸಿದ್ದು, ಅವುಗಳೀಗ ದೊಡ್ಡ ಮರಗಳಾಗಿ, ಹಣ್ಣುಗಳನ್ನು ನೀಡುತ್ತಿವೆ. ಊರಿಗೆ ಹೋದಾಗಲೆಲ್ಲ ಆ ಹಸಿರು ಮರ ಗಿಡಗಳನ್ನು ನೋಡಿ ಕಣ್ಣು ಖುಷಿಯಿಂದ ತಂಪಾಗುತ್ತದೆ.’

ಗಿಡ ನೆಡುವುದಕ್ಕೆ ಯಾವುದೇ ರೀತಿಯಲ್ಲಿ ಇನ್ನೊಬ್ಬರಿಂದ ಹಣ ಪಡೆಯುವುದಿಲ್ಲ. ಪ್ರತಿ ತಿಂಗಳ ಸಂಭಾವನೆಯಲ್ಲಿ ಇಂತಿಷ್ಟು ಎಂದು ಗಿಡಗಳಿಗಾಗಿ ಮೀಸಲಿಡುತ್ತೇನೆ. ಗಿಡಗಳು ಬಾಡದಂತೆ ನೋಡಿಕೊಳ್ಳಲಾಗುತ್ತದೆ. ಒಂದು ದಿನ ರಜೆಯಲ್ಲಿದ್ದರೂ ಇನ್ನೊಬ್ಬರು ನಾವೇ ನೋಡಿಕೊಳ್ಳುತ್ತೇವೆ ಎನ್ನುತ್ತಾರೆ. ಗಿಡ ನಲಿಯುತ್ತಿದ್ದರೆ ನಮಗೂ ಕೆಲಸ ಮಾಡಲು ಖುಷಿ, ಪ್ರಯಾಣಿಕರಿಗೂ ಖುಷಿ. ಪ್ರಯಾಣಿಕರೂ ಗಿಡಕ್ಕೆ ಹಾನಿಯಾಗದಂತೆ ನೋಡಿಕೊಳ್ಳುತ್ತಾರೆ. ಎಲ್ಲರೂ ಪರಿಸರದ ಬಗ್ಗೆ ಯೋಚಿಸಿದರೆ ನಮ್ಮ ಪರಿಸರ, ನಮ್ಮ ಆರೋಗ್ಯ ಎರಡನ್ನೂ ರಕ್ಷಿಸಬಹುದು.- ಬಸವರಾಜ್ ಲಿಂಗಾಯತ್
 

ಬಸ್‌ನಲ್ಲಿ ಗಿಡ ಬೆಳೆಸುವ ಆಸಕ್ತಿ ಮೂಡಿದ್ದು ಹೀಗೆ!: 

10ನೇ ತರಗತಿ ನಂತರ ಕೆಲಸಕ್ಕೆ ಪ್ರಯತ್ನಿಸುವಾಗ ಸಿಕ್ಕಿದ್ದು ಬೆಂಗಳೂರಿನಲ್ಲಿ ಕೆಎಸ್‌ಆರ್‌ಟಿಸಿ ಡ್ರೈವರ್ ಕೆಲಸ. ಆಗ ಮೆಟ್ರೋಪಾಲಿಟನ್ ಸಿಟಿಯ ಜೀವನ ಶೈಲಿ, ಪ್ರಕೃತಿ ನಾಶ, ವಾಯು ಮಾಲಿನ್ಯ ಎಲ್ಲವನ್ನೂ ನೋಡಿ ಹಸಿರು ಮರುಕಳಿಸಲು ಮುಂದಾದರು ಬಸವರಾಜ್. ಬಿಎಂಟಿಸಿ ಬಸ್ ಡ್ರೈವರ್ ಕಂ ಕಂಡಕ್ಟರ್ ಆಗುವ ಮುನ್ನ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕೆಲಸ ಮಾಡ್ತಿದ್ದರು. ಗಿಡ ನೆಡಲು ಅಧಿಕಾರಿಗಳ ಪರ್ಮಿಷನ್ ತೆಗೆದುಕೊಂಡಾಗ ಮೊದಲು 4 ಪಾಟ್‌ಗಳಲ್ಲಿ ಮನೆಯೊಳಗೆ ಬೆಳೆಸುವ ಗಿಡಗಳನ್ನು ಬಸ್‌ನೊಳಗಿಟ್ಟು ಬೆಳೆಸಿದರು. ತದನಂತರ ಬಿಎಂಟಿಸಿ ಬಸ್‌ಗೆ ವರ್ಗಾವಣೆಯಾಯಿತು. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಇದ್ದ ಗಿಡಗಳನ್ನು ಆ ಬಸ್‌ನ ಡ್ರೈವರ್ ಹಾಗೂ ಕಂಡಕ್ಟರ್‌ಗೆ ನೋಡಿಕೊಳ್ಳಲು ಹೇಳಿ ಬಿಟ್ಟುಬಂದೆ. ಆದರೆ ಅವುಗಳನ್ನು ಸರಿಯಾಗಿ
ನೋಡಿಕೊಳ್ಳದೆ ಹಾಳು ಮಾಡಿಬಿಟ್ಟರು. ಈಗ ನಾನಿರುವಬಸ್‌ನಲ್ಲೇ ಗಿಡ ಬೆಳೆಸುವ ಕಾರ್ಯ ಮುಂದುವರಿಸಿದೆ ಎನ್ನುತ್ತಾರೆ ಬಸವರಾಜ್.

ಲಾಠಿಯನ್ನೇ ಕೊಳಲಾಗಿಸಿದ ಪೊಲೀಸ್‌ ಚಂದ್ರಕಾಂತ್‌!

ಗಿಡ ನೋಡಿಕೊಳ್ಳುವ ಬಗೆ:

ಪ್ರತಿ ನಿತ್ಯ ಕನಿಷ್ಠ ಐದು ಬಾರಿ ಒಂದು ಗುಟುಕಿನಷ್ಟು ನೀರು ಗಿಡಗಳಿಗೆ ಹಾಕಲಾಗುವುದು. ಅಲ್ಲದೆ ಬಸ್‌ನೊಳಗೆ ಎಂಜಿನ್ ಮೇಲೂ ಪಾಟ್‌ಗಳನ್ನು ಇಟ್ಟಿರುವುದರಿಂದ ಶಾಖ ಹೆಚ್ಚಾಗಿರುತ್ತದೆ. ಅದಕ್ಕಾಗಿಯೇ ಬಸ್ ಭಾಗ ಯಾವುದೇ ಹೂವಿನ ಗಿಡಗಳಿರದೆ, ಬಿಸಿಲು ತಡೆಯುವ, ಬಾಡದ ನಾನಾ ರೀತಿಯ ಶೋ ಗಿಡಗಳಿವೆ. ಬಸವರಾಜ್ ರಾಜರಾಜೇಶ್ವರಿ ನಗರದಲ್ಲೂ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಅವರ ಈ ಪರಿಸರ ಪ್ರೇಮ ನೂರಾರು ಮಂದಿಗೆ ಸ್ಫೂರ್ತಿಯಾಗಲಿ.

ಮುಂದಿನ ದಿನಗಳಲ್ಲಿ ಹಲವು ಯೋಜನೆ

ಈಗ ಬಸ್‌ನಲ್ಲಿ ೩೦ಕ್ಕೂ ಹೆಚ್ಚು ಗಿಡಗಳನ್ನು ಬೆಳೆಸುತ್ತಿರುವ ಬಸವರಾಜ್, ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಗಿಡಗಳನ್ನು ಇರಿಸಿಕೊಳ್ಳುವ ಯೋಚನೆ ಹೊಂದಿದ್ದಾರೆ. ಹಿಂದೆ ಕುಳಿತು ಪ್ರಯಾಣಿಸುವವರಿಗೆ ಮುಂದಿರುವ ಗಿಡಗಳನ್ನು ನೋಡಲು ಆಗುವುದಿಲ್ಲ. ಸೀಟಲ್ಲಿ ಕೂರುವವರ ತಲೆಯ ಮೇಲ್ಭಾಗದಲ್ಲಿ ಕಬ್ಬಿಣದ ಹುಕ್ಕಿನ ಸಹಾಯದಿಂದ ಪಾಟ್‌ನಲ್ಲಿ ಗಿಡಗಳನ್ನು ನೇತು ಹಾಕುವ ಯೋಜನೆ ಇದೆ. ಇದರೊಂದಿಗೆ ಬಸ್‌ನ ಮುಂದುಗಡೆ 20 ಲೀಟರ್ ಕ್ಯಾನ್‌ನ ನೀರು ಹಾಗೂ ಬಸ್ ಹಿಂಬದಿಯಲ್ಲಿ ಪ್ರತಿ ಸೀಟ್‌ನಲ್ಲೂ 10 ನೀರಿನ ಬಾಟಲ್ ಸೌಲಭ್ಯ ಮಾಡುವ ಗುರಿ ಹೊಂದಿದ್ದಾರೆ. ಅದಕ್ಕಾಗಿ ಕೆಲಸಗಳು ನಡೆಯುತ್ತಿದೆ. ಈ ರೀತಿಯ ಸೇವಾ ಮನೋಭಾದ ಕೆಲಸಗಳನ್ನು ನಡೆಸಲು ಮೇಲಧಿಕಾರಿಗಳಿಗೆ ಪರ್ಮಿಷನ್ ಕೇಳಿದ್ದು, ಅನುಮತಿ ದೊರೆತಲ್ಲಿ ತಕ್ಷಣವೇ ಜಾರಿಯಾಗಲಿದ್ದು, ಆಗ 60 ಕ್ಕೂ ಹೆಚ್ಚು ಗಿಡಗಳನ್ನು ಬಸ್‌ನೊಳಗೆ ಬೆಳೆಯುವುದನ್ನು ನೋಡಬಹುದು ಎನ್ನುತ್ತಾರೆ ಬಸವರಾಜ್. 

ಪರಿಸರದ ಮೇಲೆ ಪ್ರೀತಿ ಇದ್ದರೆ ಹೇಗೆ ಬೇಕಾದರೂ ಪರಿಸರ ಪ್ರೇಮ ತೋರಿಸಬಹುದು. ಅದಕ್ಕೆ ಸಾಕ್ಷಿ ಬೆಂಗಳೂರಿನ ಬಿಎಂಟಿಸಿ ಕಂಡಕ್ಟರ್ ಕಮ್ ಡ್ರೈವರ್ ಬಸವರಾಜ್ ಲಿಂಗಾಯತ್. ಅವರು ತಮ್ಮ ಬಸ್‌ನಲ್ಲಿಯೇ ೩೦ಕ್ಕೂ ಹೆಚ್ಚು ಗಿಡಗಳನ್ನು ಬೆಳೆಸುತ್ತಿದ್ದಾರೆ. ಅವರ ಈ ಪುಟ್ಟ ಕೈ ತೋಟದಿಂದ ಪ್ರಯಾಣಿಕರು, ಸಹೋದ್ಯೋಗಿಗಳು ಫಿದಾ ಆಗಿದ್ದಾರೆ. ಈ ಮೂಲಕ ಬಸವರಾಜ್ ನೂರಾರು ಮಂದಿಯಲ್ಲಿ ಪರಿಸರ ಕಾಳಜಿ ಹುಟ್ಟುಹಾಕಿದ್ದಾರೆ.
 


 

click me!