ತಾಲೂಕು ಕಚೇರಿ ಎದುರೇ ಧರಣಿ ಕುಳಿತ ಹರತಾಳು ಹಾಲಪ್ಪ

By Web DeskFirst Published Apr 29, 2019, 9:04 PM IST
Highlights

ಜನರಿಗೆ ಮರಳು ಸಿಗುತ್ತಿಲ್ಲ, ಆಡಳಿತ ತಮಗೆ ಬೇಕಾದವರಿಗೆ ಮರಳು ನೀಡಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಶಾಸಕರೆ ತಾಲೂಕು ಕಚೇರಿ ಮುಂದೆ ಧರಣಿ ಕುಳಿತಿದ್ದಾರೆ.

ಶಿವಮೊಗ್ಗ/ ಹೊಸನಗರ[ಏ. 29]   ಜನ ಸಾಮಾನ್ಯರಿಗೆ ಮನೆ ಕಟ್ಟಲು ಮರುಳು ನೀಡದೆ , ಪಟ್ಟಭದ್ರ ಹಿತಾಸಕ್ತಿಗಳ ಅನುಕೂಲಕ್ಕಾಗಿ ನೈಸರ್ಗಿಕವಾಗಿ ದೊರೆಯುವ ಮರುಳನ್ನು ಮಾಫಿಯಾ ಮಾಡಿಕೊಂಡು ಸಾರ್ವಜನಿಕರ ಕಿರಿಕಿರಿ ನೀಡಲಾಗುತ್ತಿದೆ ಎಂದು ಆರೋಪಿಸಿ ಶಾಸಕರೆ ಪ್ರತಿಭಟನೆಗೆ ಕುಳಿತಿದ್ದಾರೆ.

"

ಹೊಸನಗರ ತಾಲೂಕಿನ ದುಮ್ಮ ಗ್ರಾಮದಲ್ಲಿ ಗುತ್ತಿದಾರರು ಸಾವಿರಾರು ಟನ್ ಮರಳು ಸ್ಟಾಕ್ ಮಾಡಿದ್ದರೂ ಸಾರ್ವಜನಿಕರಿಗೆ ಮರಳು ವಿತರಣೆ ಮಾಡಿಲ್ಲ ಎಂದು ಆರೋಪಿಸಿ ತಾಲೂಕು ಕಚೇರಿ ಎದುರು ಶಾಸಕ ಹಾಲಪ್ಪ ಅಹೋರಾತ್ರಿ ಧರಣಿ ಕುಳಿತಿದ್ದಾರೆ.

ಹಾಲಪ್ಪ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿದ ಕಿಡಿಗೇಡಿಗಳು..ದೂರು ದಾಖಲು

ಹಾಲಪ್ಪ  ಜತೆ ಮಾಜಿ ಶಾಸಕರಾದ ಸ್ವಾಮಿ ರಾವ್, ದೇವಾನಂದ್,  ಯುವರಾಜ್ ಮಲ್ಲಿಕಾರ್ಜುನ್,  ಪ್ರಹ್ಲಾದ್ ಜಯನಗರ, ಮೇಣಸೆ ಆನಂದ್.ಎಂ ಎನ್ ಎಸ್,  ಗಣಪತಿ  ಧರಣಿ ಕುಳಿತಿದ್ದಾರೆ.

 

click me!