ಅಪರಿಚಿತ ಕಾರು ಡಿಕ್ಕಿ: ಬೆಂಗಳೂರು ವಿದ್ಯಾರ್ಥಿ ಸ್ಥಳದಲ್ಲೆ ಸಾವು

Nov 21, 2018, 7:42 PM IST

ಬೆಂಗಳೂರು ಹೊರವಲಯದ ಮಂಡೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬರು ದಾರುಣ ಸಾವಿಗೀಡಾಗಿದ್ದಾರೆ. ನ್ಯೂ ಬಾಲ್ಡ್ವೀನ್ ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದ ಸಂತೋಷ್ ರಸ್ತೆ ಅವಘಡಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಆನೇಕಲ್ ತಾಲೂಕಿನ  ಮಸನಹಳ್ಳಿ ನಿವಾಸಿಯಾಗಿದ್ದ ಸಂತೋಷ್ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಅಪರಚಿತ ಕಾರು ಅಪ್ಪಳಿಸಿದೆ.