ವಿಜಯೇಂದ್ರಗೆ ಟಿಕೆಟ್ ನೀಡದಿರಲು ಬಿಜೆಪಿಯ ವಂಶ ಪಾರಂಪರ್ಯ ವಿರೋಧಿ ನಿಲುವು ಕಾರಣವೇ?

First Published Apr 24, 2018, 1:59 PM IST
Highlights

ಜನಾರ್ದನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಅಮಿತ್ ಶಾ ಹೇಳಿದ ಕೆಲ ದಿನಗಳಲ್ಲಿಯೇ ರಾಮುಲು ನಾಮಪತ್ರ ಸಲ್ಲಿಸುವಾಗ ಯಡಿಯೂರಪ್ಪ ಮತ್ತು ರೆಡ್ಡಿ ಜೊತೆಜೊತೆಗೆ ವೇದಿಕೆ ಹತ್ತಿದ್ದು ಅಮಿತ್ ಶಾ ಟೀಮ್‌ಗೆ ತುಸು ಕಸಿವಿಸಿ ಉಂಟು ಮಾಡಿದ್ದು ನಿಜವಂತೆ. ಆದರೆ, ಬಿಜೆಪಿ ಗೆಲುವಿಗೆ ಯಡಿಯೂರಪ್ಪ ಏನೋ ಸ್ಥಳೀಯ ಪ್ರಯತ್ನ ಮಾಡುತ್ತಿದ್ದಾರೆ  ಎಂದು ಬಿಸಿ ತುಪ್ಪವನ್ನು ನುಂಗಿಕೊಂಡರಂತೆ.

ಬೆಂಗಳೂರು (ಏ. 24): ಜನಾರ್ದನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಅಮಿತ್ ಶಾ ಹೇಳಿದ ಕೆಲ ದಿನಗಳಲ್ಲಿಯೇ ರಾಮುಲು ನಾಮಪತ್ರ ಸಲ್ಲಿಸುವಾಗ ಯಡಿಯೂರಪ್ಪ ಮತ್ತು ರೆಡ್ಡಿ ಜೊತೆಜೊತೆಗೆ ವೇದಿಕೆ ಹತ್ತಿದ್ದು ಅಮಿತ್ ಶಾ ಟೀಮ್‌ಗೆ ತುಸು ಕಸಿವಿಸಿ ಉಂಟು ಮಾಡಿದ್ದು ನಿಜವಂತೆ. ಆದರೆ, ಬಿಜೆಪಿ ಗೆಲುವಿಗೆ ಯಡಿಯೂರಪ್ಪ ಏನೋ ಸ್ಥಳೀಯ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಸಿ ತುಪ್ಪವನ್ನು ನುಂಗಿಕೊಂಡರಂತೆ.

ಆದರೆ, ಇದೀಗ ಕಾಂಗ್ರೆಸ್ ಸಂವಿಧಾನ ಉಳಿಸಿ ಆಂದೋಲನ ಆರಂಭಿಸಿರುವಾಗ, ಅಮಿತ್ ಶಾ, ರಾಷ್ಟ್ರೀಯ ನೆಲೆಗಟ್ಟಿನಲ್ಲಿ ಬಿಜೆಪಿಯ ನಿಲುವಿಗೆ  ಬದ್ಧವಾಗಿರಲು ನಿರ್ಧರಿಸದರಂತೆ. ಹೀಗಾಗಿ ವಿಜಯೇಂದ್ರ  ಪ್ರಶ್ನೆ ಬಂದಾಗ ಗಟ್ಟಿ ಹಿಡಿದುಕೊಂಡ ಅಮಿತ್ ಶಾ, ಮುಖ್ಯಮಂತ್ರಿ ಅಭ್ಯರ್ಥಿಯ ಪುತ್ರನಿಗೆ ಟಿಕೆಟ್ ಕೊಟ್ಟರೆ ಉಳಿದ  ಕಡೆ ನಾವು ವಂಶಪಾರಂಪರ್ಯದ ಬಗ್ಗೆ ಏನು ಹೇಳೋಕೆ ಸಾಧ್ಯ?  ರಾಹುಲ್ ಗಾಂಧಿ ಅಂದರೆ ಸಂವಿಧಾನ ವಿರೋಧಿ ವಂಶಪಾರಂಪರ್ಯದ ಸಂಕೇತ ಎಂಬುದು ಈಗ ಬಿಜೆಪಿಯ ರಾಷ್ಟ್ರೀಯ ನಿಲುವು. ಈ ಹೊತ್ತಿನಲ್ಲಿ ಯಡಿಯೂರಪ್ಪ ಪುತ್ರನಿಗೆ  ಟಿಕೆಟ್ ಕೊಟ್ಟು ಈ ನಿಲುವು ಸಡಿಸಗೊಳಸಲಾಗದು ಎಂಬುದು ಶಾ ಅಭಿಮತವಂತೆ. ಆದರೆ, ಈ ಹಂತದಲ್ಲಿ ಯಡಿಯೂರಪ್ಪ ಈ ನಿರ್ಧಾರವನ್ನು ಹೇಗೆ ಒಪ್ಪಿಯಾರು? ಹೀಗಾಗಿ ಮೈಸೂರಿನಲ್ಲಿ ವಿಜಯೇಂದ್ರನಿಗೆ ಎಷ್ಟು ಬೆಂಬಲ ಇದೆ ಎಂದು ಹೈಕಮಾಂಡ್‌ಗೆ ತೋರಿಸುವ ಪ್ರಯತ್ನ ನಡೆದಿದೆ. ಈ ನಡುವೆ ವಿಜಯೇಂದ್ರ ಸ್ಪರ್ಧೆಗೆ ಆರ್ ಎಸ್‌ಎಸ್ ಒಲವಿಲ್ಲ. ಆದರೆ, ಬಿಎಸ್‌ವೈ ಪರವಾಗಿ ಪಕ್ಷದ ಅನೇಕ ನಾಯಕರು ಮತ್ತು ಲಿಂಗಾಯತ ಮಖಂಡರು ನಿಂತಿದ್ದಾರೆ. ಎಲ್ಲಿಗೆ ಹೋಗಿ ಮುಟ್ಟುತ್ತದೆ ಈ ಆಂತರಿಕ ಬಿಕ್ಕಟ್ಟು ಎಂದು  ಈಗಲೇ ಹೇಳಲು ಸಾಧ್ಯವಿಲ್ಲ. 

-ಪ್ರಶಾಂತ್ ನಾತು 

ಹೆಚ್ಚಿನ ರಾಜಕೀಯ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ 

click me!