ಪಕ್ಷದ ಒಳಗೂ ಹೊರಗೂ ಗುದ್ದಾಡಿ ಜಯನಗರ ಮತ್ತೆ ಪಡೆದುಕೊಂಡ ರಾಮಲಿಂಗಾರೆಡ್ಡಿ

First Published Jun 13, 2018, 2:14 PM IST
Highlights
  • ಪಕ್ಷದ ನಾಯಕರ ವಿರೋಧವನ್ನು ಮೆಟ್ಟಿ ನಿಂತು ಪುತ್ರಿಗೆ ಟಿಕೆಟ್ ಕೊಡಿಸಿದ್ದ ರಾಮಲಿಂಗ ರೆಡ್ಡಿ
  • ಪ್ರಭಾವಿ ನಾಯಕರು ಪ್ರಚಾರಕ್ಕೆ ಬರದಿದ್ದರೂ, ಸ್ವಂತ ಬಲದ ಮೇಲೆ ಕಾಂಗ್ರೆಸ್’ಗೆ ಜಯ ತಂದುಕೊಟ್ಟ ರೆಡ್ಡಿ 

ಬೆಂಗಳೂರು: ಕ್ಷೇತ್ರ ಪುರ್ನವಿಂಗಡಣೆಯಿಂದಾಗಿ 2 ಬಾರಿ ಜಯನಗರ ಕಳೆದುಕೊಂಡಿದ್ದ ರಾಮಲಿಂಗಾರೆಡ್ಡಿ ಮತ್ತೇ ಜಯನಗರ ಕ್ಷೇತ್ರವನ್ನು ಕೈವಶ ಮಾಡುವಲ್ಲಿ ಸಫಲರಾಗಿದ್ದಾರೆ.

ಎರಡು ಬಾರಿ ಕ್ಷೇತ್ರ ಪಡೆಯಲು ಪ್ರಯತ್ನ ಮಾಡಿ ವಿಫಲರಾಗಿದ್ದ ಕಾಂಗ್ರೆಸ್ ನಾಯಕರು ಇದೀಗ ಸೌಮ್ಯಾ ರೆಡ್ಡಿ ಮೂಲಕ ತಮ್ಮ ತೆಕ್ಕೆಗೆ ಪಡೆದುಕೊಂಡಿದ್ದಾರೆ. 5 ಬಾರಿ ಜಯನಗರ ಶಾಸಕರಾಗಿದ್ದ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಕ್ಷೇತ್ರ ಪುನರ್ವಿಂಗಡೆನೆ ಬಳಿಕ ಬಿಟಿಎಂ ಲೇಔಟ್’ಗೆ ವಲಸೆ ಹೋಗಿದ್ದರು. 

ಇದೀಗ ತಮ್ಮ ಪುತ್ರಿ ಸೌಮ್ಯ ರೆಡ್ಡಿ ಗೆಲ್ಲಿಸಿಕೊಳ್ಳುವಲ್ಲಿ  ಮಾಜಿ ಸಚಿವ ರಾಮಲಿಂಗ ರೆಡ್ಡಿ ಯಶಸ್ವಿಯಾಗಿದ್ದಾರೆ.  ಮಂಗಳವಾರ [ಜೂ.12] ಹುಟ್ಟುಹಬ್ಬ ಆಚರಿಸಿಕೊಂಡ ರಾಮಲಿಂಗ ರೆಡ್ಡಿವರಿಗೆ ಮಗಳು ಕೊಟ್ಟ ಇದು ಬರ್ತ್ ಡೇ ಗಿಫ್ಟ್ ಎಂದೇ ಹೇಳಬಹುದು.

ಪಕ್ಷದ ನಾಯಕರ ವಿರೋಧವನ್ನು ಮೆಟ್ಟಿ ನಿಂತು ಪುತ್ರಿಗೆ ಟಿಕೆಟ್ ಕೊಡಿಸುವಲ್ಲಿ ರೆಡ್ಡಿ ಸಫಲರಾಗಿದ್ದರು. ಪ್ರಭಾವಿ ನಾಯಕರು ಪ್ರಚಾರಕ್ಕೆ ಬರದಿದ್ದರೂ, ಸ್ವಂತ ಬಲದ ಮೇಲೆ ಕಾಂಗ್ರೆಸ್’ಗೆ  ಜಯ ತಂದುಕೊಟ್ಟಿದ್ದಾರೆ ಈ ಸಚಿವ. ಜಯನಗರ ಕ್ಷೇತ್ರ ಕೈ ವಶ ಮಾಡಿಕೊಳ್ಳುವ ಮೂಲಕ ಪಕ್ಷದಲ್ಲಿ ಮತ್ತೇ ಮುಂಚೂಣಿಗೆ ರಾಮಲಿಂಗ ರೆಡ್ಡಿ ಬಂದಿದ್ದಾರೆ.  

click me!