BREAKING | ‘ಜಯ’ಭೇರಿ ಬಾರಿಸಿದ ಸೌಮ್ಯಾ ರೆಡ್ಡಿ; ಕಾಂಗ್ರೆಸ್ ತೆಕ್ಕೆಗೆ ಜಯನಗರ

Published : Jun 13, 2018, 11:24 AM ISTUpdated : Jun 13, 2018, 11:57 AM IST
BREAKING | ‘ಜಯ’ಭೇರಿ ಬಾರಿಸಿದ ಸೌಮ್ಯಾ ರೆಡ್ಡಿ; ಕಾಂಗ್ರೆಸ್ ತೆಕ್ಕೆಗೆ ಜಯನಗರ

ಸಾರಾಂಶ

ಭಾರೀ ಕುತೂಹಲ ಕೆರಳಿಸಿದ್ದ ಜಯನಗರ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿಗೆ ಒಲಿದ ವಿಜಯಮಾಲೆ ಬಿಜೆಪಿ ಅಭ್ಯರ್ಥಿ ಬಿ.ಎನ್. ವಿಜಯಕುಮಾರ್ ನಿಧನದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಚುನಾವಣೆ   

ಬೆಂಗಳೂರು: ಭಾರಿ ಕುತೂಹಲ ಕೆರಳಿಸಿದ್ದ ಜಯನಗರ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ 2889 ಅಂತರದಿಂದ ಜಯಗಳಿಸಿದ್ದಾರೆ.

ಅಂತಿಮ ಸುತ್ತಿನ ಮತ ಎಣಿಕೆ ಬಳಿಕ ಸೌಮ್ಯಾ ರೆಡ್ಡಿ 54457 ಮತ ಗಳಿಸಿದರೆ, ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಬಾಬು 51568 ಮತ ಗಳಿಸಿದ್ದಾರೆ. ತನ್ನ ಭ್ರಷ್ಟಾಚಾರ ವಿರೋಧಿ ಹೋರಾಟ ಹಾಗೂ ಸರಳ ರಾಜಕಾರಣದ ಮೂಲಕ ನಿರೀಕ್ಷೆ ಮೂಡಿಸಿದ್ದ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಠೇವಣಿ ಕಳೆದುಕೊಂಡಿದ್ದಾರೆ. ಕೇವಲ 1861 ಮತಗಳನ್ನು ಪಡೆಯುವ ಮೂಲಕ ಭಾರೀ ನಿರಾಸೆ ಮೂಡಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಬಿ.ಎನ್. ವಿಜಯಕುಮಾರ್ ನಿಧನದ ಹಿನ್ನೆಲೆಯಲ್ಲಿ ಜಯನಗರ ಚುನಾವಣೆಯನ್ನು ಮುಂದೂಡಲಾಗಿತ್ತು. ಆ ಬಳಿಕ ಬಿಜೆಪಿಯು, ಮೃತ ವಿಜಯ್ ಕುಮಾರ್ ಸಹೋದರ ಪ್ರಹ್ಲಾದ್ ಬಾಬುರನ್ನು ಕಣಕ್ಕಿಳಿಸಿತ್ತು. 

ಕಾಂಗ್ರೆಸ್ ಪ್ರಭಾವಿ ನಾಯಕ ಹಾಗೂ ಮಾಜಿ ಗೃಹಮಂತ್ರಿ ರಾಮಲಿಂಗ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದಾರೆ. ಜಯನಗರ ಕ್ಷೇತ್ರವನ್ನು ಗೆಲ್ಲುವುದರೊಂದಿಗೆ ವಿಧಾನಸಭೆಯಲ್ಲಿ ತನ್ನ ಬಲವನ್ನು 79ಕ್ಕೇರಿಸಿಕೊಂಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 78 ಸ್ಥಾನಗಳನ್ನು ಗಳಿಸಿತ್ತು.

ಸೌಮ್ಯಾ ರೆಡ್ಡಿ ವಿಧಾನಸಭೆ ಪ್ರವೇಶಿಸುವುದರೊಂದಿಗೆ, ಕಾಂಗ್ರೆಸ್ ಶಾಸಕಿಯರ ಸಂಖ್ಯೆ 5ಕ್ಕೇರಿದರೆ, ಸದನದಲ್ಲಿ ಒಟ್ಟು ಮಹಿಳಾ ಶಾಸಕಿಯರ ಸಂಖ್ಯೆ 8ಕ್ಕೇರಿದೆ. 

ಬಳಿಕ ನಡೆದ ರಾಜರಾಜೇಶ್ವರಿ ನಗರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ನಾಯ್ಡು ಜಯಗಳಿಸಿದ್ದರು. ಈ ನಡುವೆ ನಡೆದ ಅಪಘಾತವೊಂದರಲ್ಲಿ ಜಮಖಂಡಿ ಶಾಸಕ ಸಿದ್ದು ನ್ಯಾಮೆಗೌಡ ಮೃತಪಟ್ಟಿದ್ದರು.   

ಕಳೆದ ಜೂ. 11ರಂದು ಚುನಾವಣೆ ನಡೆದಿದ್ದು, ಶೇ.55 ಮತದಾನವಾಗಿತ್ತು.  ಜಯನಗರದ SSMRV ಕಾಲೇಜಿನ ಮತಕೇಂದ್ರದಲ್ಲಿ ಒಟ್ಟು 16 ಸುತ್ತಿನಲ್ಲಿ  ಮತ ಎಣಿಕೆ ಕಾರ್ಯ ನಡೆದಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟ್ರಂಪ್ ನಿರ್ಧಾರಕ್ಕೆ 20 ರಾಜ್ಯಗಳ ಸೆಡ್ಡು: ಅಮೆರಿಕದಲ್ಲೇ ಶುರುವಾಯ್ತು ಸಮರ!
ನಿರ್ಮಲಾ ಸೀತಾರಾಮನ್ ಭಾರತದ ನಂ.1 ಪ್ರಭಾವಿ ಮಹಿಳೆ: ವಿಶ್ವದ ಪ್ರಭಾವಿಗಳಲ್ಲಿ ಭಾರತದ ಮೂವರಿಗೆ ಸ್ಥಾನ