ಪರಿಷತ್ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ'ಗಳು ಫೈನಲ್

First Published May 30, 2018, 5:07 PM IST
Highlights

ಸಿ.ಎಂ.ಇಬ್ರಾಹಿಂ ಹಾಗೂ ಕೆ. ಗೋವಿಂದರಾಜು ಅವರಿಗೆ ಪುನಃ ಅವಕಾಶ ನೀಡಲಾಗಿದೆ. ಭೈರತಿ ಸುರೇಶ್ ಈಗಾಗಲೇ ಹೆಬ್ಬಾಳ ಕ್ಷೇತ್ರದಿಂದ ವಿಧಾನ ಸಭೆಗೆ ಆಯ್ಕೆಯಾಗಿದ್ದಾರೆ. ಮೋಟಮ್ಮ ಹಾಗೂ ಎಂ.ಆರ್.ಸೀತಾರಾಂ ಕಾಂಗ್ರೆಸ್'ನಿಂದ ನಿವೃತ್ತರಾಗುವ ಇನ್ನುಳಿದ ಸದಸ್ಯರು.

ಬೆಂಗಳೂರು(ಮೇ.30): ಜೂನ್ 11 ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.
ಸಿ.ಎಂ.ಇಬ್ರಾಹಿಂ,  ಕೆ. ಗೋವಿಂದರಾಜ್, ಅರವಿಂದ್ ಕುಮಾರ್ ಎಸ್. ಅರಾಲಿ ಹಾಗೂ ಕೆ. ಹರೀಶ್ ಕುಮಾರ್ ಕಣಕ್ಕಿಳಿಯಲಿದ್ದಾರೆ. ಜೂನ್ 17ರಂದು 11 ಸದಸ್ಯರು ನಿವೃತ್ತರಾಗಲಿದ್ದು, ಅವರ ಸ್ಥಾನವನ್ನು ಭರ್ತಿ ಮಾಡಲು ಚುನಾವಣೆ ನಡೆಯಲಿದೆ.
ಸಿ.ಎಂ.ಇಬ್ರಾಹಿಂ ಹಾಗೂ ಕೆ. ಗೋವಿಂದರಾಜು ಅವರಿಗೆ ಪುನಃ ಅವಕಾಶ ನೀಡಲಾಗಿದೆ. ಭೈರತಿ ಸುರೇಶ್ ಈಗಾಗಲೇ ಹೆಬ್ಬಾಳ ಕ್ಷೇತ್ರದಿಂದ ವಿಧಾನ ಸಭೆಗೆ ಆಯ್ಕೆಯಾಗಿದ್ದಾರೆ. ಮೋಟಮ್ಮ ಹಾಗೂ ಎಂ.ಆರ್.ಸೀತಾರಾಂ ಕಾಂಗ್ರೆಸ್'ನಿಂದ ನಿವೃತ್ತರಾಗುವ ಇನ್ನುಳಿದ ಸದಸ್ಯರು.
ಬಿಜೆಪಿಯಿಂದ  ಬಿ.ಜೆ.ಪುಟ್ಟಸ್ವಾಮಿ, ಡಿ.ಎಸ್.ವೀರಯ್ಯ, ಸೋಮಣ್ಣ ಬೇವಿನಮದರ್, ರಘುನಾಥ ರಾವ್ ಮಲ್ಕಾಪುರೆ, ಭಾನುಪ್ರಕಾಶ್ ನಿವೃತ್ತರಾಗಲಿದ್ದು ಪಕ್ಷವು ಇನ್ನು ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಜೆಡಿಎಸ್‌ನಿಂದ ಸೈಯದ್ ಮುದೀರ್ ಆಗಾ ಅವರು ಸಹ ನಿವೃತ್ತಿರಾಗಲಿದ್ದಾರೆ.  ವಿಧಾನಸಭೆಯಲ್ಲಿ ಕಾಂಗ್ರೆಸ್ 78, ಬಿಜೆಪಿ 104, ಜೆಡಿಎಸ್‌ 37 ಸದಸ್ಯರನ್ನು ಹೊಂದಿದೆ.

click me!