ಸ್ಥಳೀಯರಿಗೆ ಶೇ.70ರಷ್ಟು ಉದ್ಯೋಗ ಮೀಸಲು

By Web DeskFirst Published Feb 6, 2019, 11:18 AM IST
Highlights

ಸ್ಥಳೀಯರಿಗೆ ಶೇ.70 ರಷ್ಟು ಉದ್ಯೋಗ ಒದಗಿಸುವುದನ್ನು ಸರ್ಕಾರ ಇದೀಗ ಕಡ್ಡಾಯ ಮಾಡಿದೆ. ಮಧ್ಯ ಪ್ರದೇಶದ ಕಾಂಗ್ರೆಸ್ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಭೋಪಾಲ್: ಕೈಗಾರಿಕೆಗಳು ಸ್ಥಳೀಯರಿಗೆ ಶೇ.70 ರಷ್ಟು ಉದ್ಯೋಗ ಒದಗಿಸುವುದನ್ನು ಮಧ್ಯ ಪ್ರದೇಶದ ಕಾಂಗ್ರೆಸ್ ಸರ್ಕಾರ ಕಡ್ಡಾಯಗೊಳಿಸಿದೆ. ಸ್ಥಳೀಯರಿಗೆ ಉದ್ಯೋಗ ನೀಡಿದರಷ್ಟೇ ಕೈಗಾರಿಕೆಗಳಿಗೆ ಪ್ರೋತ್ಸಾಹ ಧನ ಲಭ್ಯವಾಗಲಿದೆ.

ಡಿ.17ಕ್ಕೆ ಸಿಎಂ ಆಗಿ ಅಧಿಕಾರ ವಹಿಸಿಕೊಂಡಾಗಲೇ ಕಮಲ್‌ನಾಥ್ ಈ ಕ್ರಮ ಪ್ರಕಟಿಸಿದ್ದರು. ಚುನಾ ವಣೆ ನೀತಿ ಸಂಹಿತೆಯಲ್ಲಿ ಭರವಸೆ ನೀಡಿದಂತೆ ಕೈಗಾರಿಕೆಗಳು ಸ್ಥಳೀಯರಿಗೆ ಉದ್ಯೋಗ ನೀಡುವು ದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಕಮಲ್ ನಾಥ್ ಗುರುವಾರ ಟ್ವೀಟ್ ಮಾಡಿದ್ದಾರೆ. 

ಕೇಂದ್ರ ದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್‌ಗೆ ಇದರಿಂದ ಹೊಸ ಅಸ್ತ್ರ ದೊರೆತಂತಾಗಿದೆ.

click me!