ಕಸಗುಡಿಸುವ ಕೆಲಸಕ್ಕೆ ಎಂಜಿನಿಯರ್​ಗಳಿಂದ ಅರ್ಜಿ ಸಲ್ಲಿಕೆ

By Web DeskFirst Published Feb 6, 2019, 4:21 PM IST
Highlights

ಸರ್ಕಾರಿ ಕೆಲಸಕ್ಕೆ ಭಾರೀ ಡಿಮ್ಯಾಂಡ್ ಬಂದಿದೆ . ಯಾವ ಕೆಲಸ ಆದ್ರೇನು ಒಟ್ಟಿನಲ್ಲಿ ಸರ್ಕಾರಿ ನೌಕರಿ ಸಿಕ್ಕರೆ ಸಾಕಪ್ಪ ಎನ್ನುವ ಮಟ್ಟಿಗೆ ಇಂದಿನ ಯುವಕರ ಪರಿಸ್ಥಿತಿ. ಇದಕ್ಕೆ ಪೂರಕವೆಂಬಂತೆ ಸ್ವೀಪರ್ ಹುದ್ದೆಗೆ ಎಂ.ಟೆಕ್, ಬಿ.ಟೆಕ್, ಎಂಬಿಎ ಪದವಿ ಮುಗಿಸಿದವರು ಅರ್ಜಿ ಹಾಕಿದ್ದಾರೆ.

ಚೆನ್ನೈ, (ಫೆ.6):  ಸರ್ಕಾರಿ ಉದ್ಯೋಗಕ್ಕಾಗಿ ಪರದಾಡುತ್ತಿರುವ ಯುವ ಜನತೆ ಈಗ ಯಾವ ಕೆಲಸಕ್ಕೂ ಸಿದ್ಧ ಎನ್ನುವ ಪರಿಸ್ಥಿತಿಗೆ ಬಂದು ನಿಂತಿದ್ದಾರೆ.

ಹೆಚ್ಚು ವಿದ್ಯಾಭ್ಯಾಸ ಮಾಡಿದ್ದರೆ ಅದಕ್ಕೆ ತಕ್ಕಂತಹ ಸರ್ಕಾರಿ ಉದ್ಯೋಗ ಸಿಗಬೇಕು ಅಂತ ಯುವಕರು ನಿರೀಕ್ಷಿಸುತ್ತಾರೆ. 

ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್ 'B'ಹುದ್ದೆಗಳ ನೇಮಕಾತಿ

ಆದ್ರೆ ಎಂ.ಟೆಕ್​​​, ಬಿ.ಟೆಕ್​​ ಹಾಗೂ ಎಂಬಿಎ ಹಾಗೂ ಸ್ನಾತಕೋತ್ತರ ಪದವಿ ಮುಗಿಸಿದವರು ಸ್ವೀಪರ್ ಹಾಗೂ ಸ್ಯಾನಿಟರಿ ಕೆಲಸಗಳಿಗೆ ಅರ್ಜಿ ಹಾಕಿದ್ದಾರೆ.

ತಮಿಳುನಾಡು ವಿಧಾನಸಭೆಯ 14 ಸ್ವೀಪರ್ಸ್‌ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು, ಇದಕ್ಕೆ  4,600 ಇಂಜಿನಿಯರ್ಸ್‌, ಎಂಬಿಎ ಪದವಿ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಿದ್ದಾರೆ. 

ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಈ ಹುದ್ದೆಗಳಿಗೆ ಒಟ್ಟು 4,607 ಅರ್ಜಿಗಳು ಸಲ್ಲಿಕೆಯಾಗಿದ್ದು, ಇವುಗಳಲ್ಲಿ ಉದ್ಯೋಗ ವಿನಿಮಯದ ಅರ್ಜಿಗಳು ಸೇರಿವೆ. ಅರ್ಹತಾ ಮಾನದಂಡಗಳು ಇಲ್ಲದ 677 ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

click me!