Naxal Encounter: ಛತ್ತೀಸ್‌ಗಢ ತೆಲಂಗಾಣ ಗಡಿಯಲ್ಲಿ ಗುಂಡಿನ ಚಕಮಕಿ : 6 ನಕ್ಸಲರ ಹತ್ಯೆ

By Suvarna NewsFirst Published Dec 27, 2021, 1:57 PM IST
Highlights
  • ತೆಲಂಗಾಣ -ಛತ್ತಿಸ್‌ಗಡ ಗಡಿಯಲ್ಲಿ ಗುಂಡಿನ ಚಕಮಕಿ
  • ಎನ್‌ಕೌಂಟರ್‌ನಲ್ಲಿ 6 ನಕ್ಸಲರ ಹತ್ಯೆ
  • ಕಿಸ್ತಾರಾಮ್ ವ್ಯಾಪ್ತಿಯ  ಅರಣ್ಯ ಪ್ರದೇಶದಲ್ಲಿ ಘಟನೆ

ಛತ್ತೀಸ್‌ಗಡ(ಡಿ.27): ತೆಲಂಗಾಣ (Telangana) ಮತ್ತು ಛತ್ತೀಸ್‌ಗಢದ ಗಡಿ ಪ್ರದೇಶದ ಕಿಸ್ತಾರಾಮ್ (Kistaram) ಪೊಲೀಸ್‌ ಠಾಣೆ ವ್ಯಾಪ್ತಿಯ  ಅರಣ್ಯ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಆರು ನಕ್ಸಲರು ಹತರಾಗಿದ್ದಾರೆ. ತೆಲಂಗಾಣ ಪೊಲೀಸರು, ಛತ್ತೀಸ್‌ಗಢ ಪೊಲೀಸರು ಮತ್ತು ಸಿಆರ್‌ಪಿಎಫ್‌ನ ಜಂಟಿ ಕಾರ್ಯಾಚರಣೆ ಇದಾಗಿದೆ ಎಂದು ತೆಲಂಗಾಣದ ಭದ್ರಾದ್ರಿ ಕೊಥಗುಡೆಂ (Bhadradri Kothagudem) ಜಿಲ್ಲೆಯ ಎಸ್‌ಪಿ ಸುನಿಲ್ ದತ್ (Sunil Dutt) ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಬೆಳಗ್ಗಿನ ಜಾವ ಸುಮಾರು 10.30 ರವರೆಗೂ, ನಕ್ಸಲ್ ವಿರೋಧಿ ಕಾರ್ಯಾಚರಣೆ  ಮುಂದುವರೆದಿದೆ ಮತ್ತು ಪೊಲೀಸ್ ತಂಡಗಳು ಘಟನೆ ನಡೆದ ಪ್ರದೇಶದಲ್ಲಿ ಸದ್ಯದ ಬೆಳವಣಿಗೆಯ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿವೆ. ತೆಲಂಗಾಣ ಗ್ರೇ ಹೌಂಡ್ಸ್ (Telengana Grey Hounds) ಮತ್ತು ನಕ್ಸಲರ ನಡುವೆ ಈ ಗುಂಡಿನ ಚಕಮಕಿ ನಡೆದಿದೆ. ಛತ್ತೀಸ್‌ಗಢದ ನಾರಾಯಣಪುರ (Narayanpur) ಜಿಲ್ಲೆಯಲ್ಲಿ ಎರಡು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಪೊಲೀಸರು ವಶಪಡಿಸಿಕೊಂಡ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ನಡೆದಿದೆ.

Naxal Surrender ತಮಿಳುನಾಡು ಪೊಲೀಸರಿಗೆ ಶರಣಾದ ನಕ್ಸಲ್ ಆಗಂಬೆಯ ಹೊಸಗದ್ದೆ ಪ್ರಭಾ ಯಾರು?

ಜಿಲ್ಲೆಯಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿರುವ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿ ಈ ಐಇಡಿಗಳನ್ನು ಹೂತಿಡಲಾಗಿತ್ತು. ಸುದ್ದಿ ಸಂಸ್ಥೆ ವರದಿಯ ಪ್ರಕಾರ, ನಕ್ಸಲರು ಅಬುಜ್ಮದ್ (Abujmad)ಮತ್ತು ಬಸ್ತಾರ್ ಪ್ರದೇಶ (Bastar regions)ಗಳಲ್ಲಿ ಸ್ಥಳೀಯರ ಬೆಂಬಲವನ್ನು ಕಳೆದುಕೊಳ್ಳುತ್ತಿರುವುದರಿಂದ ಧೃತಿಗೆಟ್ಟ ನಕ್ಸಲರು ಜಿಲ್ಲೆಯ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಈ ಐಇಡಿಗಳನ್ನು ಹೂತಿಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಕೆಲವು ತಿಂಗಳುಗಳಿಂದ, ಜಿಲ್ಲೆಯ ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಶೋಧವನ್ನು ತೀವ್ರಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಕಾರ್ಯಾಚರಣೆಯ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

Naxalism: ಹೊಸಗದ್ದೆ ಪ್ರಭಾ ಸರೆ, ಮಲೆನಾಡಿನ ನಕ್ಸಲ್ ಚಟುವಟಿಕೆಗೆ ಬಹುತೇಕ ಫುಲ್‌ಸ್ಟಾಪ್ 

ನಕ್ಸಲ್‌ ಪ್ರಭಾ ಪೊಲೀಸರಿಗೆ ಶರಣು
ಇತ್ತೀಚೆಗೆ ತಮಿಳುನಾಡಿನ ಪೊಲೀಸರಿಗೆ ನಕ್ಸಲ್‌ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಹೊಸಗದ್ದೆ ಪ್ರಭಾ(Hosagadde Prabha ) ಶರಣಾಗಿದ್ದಳು.  ಕಳೆದ 20 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕಾಡುಮೇಡು ಅಲೆಯುತ್ತಾ ನಕ್ಸಲ್ (Naxal) ಸಂಘಟನೆಯನ್ನು ಬಳಗೊಳಿಸುತ್ತಿದ್ದ ಬಿ. ಜಿ. ಕೃಷ್ಣಮೂರ್ತಿ ಪ್ರಭಾಳ ಗಂಡನಾಗಿದ್ದು, ಈತ ಕೇರಳ ಪೊಲೀಸರ ಕಾರ್ಯಾಚರಣೆ ವೇಳೆ ಸಿಕ್ಕಿಬಿದ್ದ ಬೆನ್ನಲ್ಲೇ ಇದೀಗ ಕೃಷ್ಣಮೂರ್ತಿ ಪತ್ನಿ ಎನ್ನಲಾದ  ಪ್ರಭಾ ಪೊಲೀಸರಿಗೆ ಶರಣಾಗಿದ್ದಳು.  ಪ್ರಭಾ ಶರಣಾಗತಿಯ ಮೂಲಕ ಕಟ್ಟರ್ ನಕ್ಸಲರು ಕೂಡ ತಮ್ಮ ಹಾದಿಯಲ್ಲಿ ಯಶಸ್ಸು ಸಿಗದು ಎಂಬುದನ್ನು ಸ್ಪಷ್ಟವಾಗಿ ಮನಗಂಡಂತೆ ಕಾಣುತ್ತಿದ್ದು, ಕಾಡಿನ ಹೋರಾಟಕ್ಕಿಂತ ನಾಡಿನ ನಡುವಿನ ಹೋರಾಟವೇ ಮೇಲು ಎಂದು ಭಾವಿಸಿದಂತೆ ಕಾಣುತ್ತಿದೆ. ಅಥವಾ ಕೃಷ್ಣಮೂರ್ತಿಯ ಬಂಧನದ ನಂತರ ಹೋರಾಟದಲ್ಲಿ ಗಟ್ಟಿತನ ಸಿಗುವುದು ಸಾಧ್ಯವೇ ಇಲ್ಲ ಎಂದು ಖಚಿತ ನಿಲುವಿಗೆ ಬಂದು ಈ ಶರಣಾಗತಿ ನಡೆದಿದೆಯೇ ಎಂಬ ಇನ್ನೊಂದು ಪ್ರಶ್ನೆಯೂ ಇಲ್ಲಿ ಮೂಡಿದೆ.

ಒಟ್ಟಾರೆಯಾಗಿ ಹೊಸಗದ್ದೆ ಪ್ರಭಾ ಶರಣಾಗತಿಯ ಮೂಲಕ ಮಲೆನಾಡಿನ ನಕ್ಸಲ್ ಚಟುವಟಿಕೆಗೆ ಬಹುತೇಕ ಫುಲ್‌ಸ್ಟಾಪ್ ಬಿದ್ದಂತಾಗಿದೆ. ಆದರೆ ಇಲ್ಲಿ ಇನ್ನೊಂದು ಗಮನಿಸಬೇಕಾದ ವಿಚಾರವೆಂದರೆ ನಕ್ಸಲ್ ಬಿ. ಜಿ. ಕೃಷ್ಣಮೂರ್ತಿ ಕೇರಳದ ವೈಯನಾಡು ಪ್ರದೇಶದಲ್ಲಿ ಪೊಲೀಸರ ಕಾರ್ಯಾಚರಣೆಯ ವೇಳೆ ಸೆರೆ ಸಿಕ್ಕರೆ, ಇತ್ತ ಆತನ ಸಂಗಾತಿ ಪ್ರಭಾ ತಮಿಳುನಾಡಿನ ಪೊಲೀಸರಿಗೆ ಶರಣಾಗಿದ್ದಾಳೆಂದರೆ ಈ ಇಬ್ಬರು ತಮ್ಮ ಸಂಗಾತಿಗಳೊಂದಿಗೆ ಕರ್ನಾಟಕ ತೊರೆದು ಬೇರೆ ಕಡೆ ಬೇರೂರಿ ಬಹಳ ಸಮಯವಾಗಿದೆ ಎಂಬುದು ಕೂಡ ಬೆಳಕಿಗೆ ಬಂದಂತಾಗಿದೆ.

click me!