ಮದುವೆಯಾಗೋದಾಗಿ ನಂಬಿಸಿ ಸೆಕ್ಸ್ ಮಾಡಿದ ಎಲ್ಲಾ ಪ್ರಕರಣ ರೇಪ್ ಅಲ್ಲ; ಹೈಕೋರ್ಟ್!

By Suvarna NewsFirst Published Dec 17, 2020, 6:58 PM IST
Highlights

ಮದುವೆಯಾಗೋದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ ಅದೆಷ್ಟೋ ಪ್ರಕರಣಗಳು  ಕೋರ್ಟ್ ಮೆಟ್ಟಿಲೇರಿವೆ. ಅದೆಷ್ಟೋ ಪ್ರಕರಣಗಳು  ಮಾನಕ್ಕೆ ಅಂಜಿ ಕಣ್ಣೀರಿನಲ್ಲಿ ಕೈತೊಳೆದಿವೆ. ಇದೀಗ ಹೀಗೆ ಮದುವೆಯಾಗೋದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ ಪ್ರಕರಣದ ಕುರಿತು ದೆಹಲಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ದೆಹಲಿ(ಡಿ.17): ಮದುವೆಯಾಗುವ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸುವ ಎಲ್ಲಾ ಪ್ರಕರಣಗಳು ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಮದುವೆಯ ನಂಬಿಕೆಯೊಂದಿಗೆ ಮಹಿಳೆ ಸುದೀರ್ಘ ದಿನಗಳ ಕಾಲ ಪುರುಷನ ಜೊತೆ ದೈಹಿಕ ಸಂಪರ್ಕ ಇಟ್ಟುಕೊಂಡಿದ್ದರೆ, ಇಂತಹ ಎಲ್ಲಾ ಪ್ರಕರಗಳು ರೇಪ್ ಪ್ರಕರಣ ಆಗಲು ಸಾಧ್ಯವಿಲ್ಲ ಎಂದಿದೆ.

ಬ್ರೇಕಪ್‌ ಬಳಿಕ ಸ್ತ್ರೀಯರು ರೇಪ್‌ ದೂರು ನೀಡ್ತಾರೆ: ಮಹಿಳಾ ಆಯೋಗ ಅಧ್ಯಕ್ಷೆ!

ಮದುವೆ ಭರವಸೆ ಇದ್ದರೂ ಅಥವಾ ಇಲ್ಲದಿದ್ದರೂ ಪುರುಷನ ಜೊತೆ ಸುದೀರ್ಘ ಕಾಲ ದೈಹಿಕ ಸಂಪರ್ಕ ಬೆಳೆಸಿದ ಎಲ್ಲಾ ಪ್ರಕರ ರೇಪ್ ಎಂದು  ಹಾಗೂ ಇಬ್ಬರೂ ಒಪ್ಪಿ ದೈಹಿಕ ಸಂಪರ್ಕ ಬೆಳೆಸಿದರೆ ಅದನ್ನು ಮದುವೆಯ ಭರವಸೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.  

ಒಂದು ತಿಂಗಳಿನಿಂದ ಪುರಷನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ ಮಹಿಳೆ ಕೊನೆಗೆ ಮದುವೆಯಾಗದೇ ಅತ್ಯಾಚಾರ ಮಾಡಲಾಗಿದೆ ಎಂದು ದೂರು ನೀಡಿದ್ದಳು ಈ   ಪ್ರಕರಣದ ಕೈಗೆತ್ತಿಕೊಂಡ ದೆಹಲಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ವಿವಾಹವಾಗುವ ಭರವಸೆಯೊಂದಿಗೆ ನಡೆಸುವ ಸೆಕ್ಸ್‌ನಲ್ಲಿ ಇಷ್ಟವಿಲ್ಲದಿದ್ದರೆ ತಿರಸ್ಕರಿಸಬಹುದು. ತಿರಸ್ಕರಿಸಿದ ಬಳಿಕ ಬಲವಂತದ ಸೆಕ್ಸ್ ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ ಎಂದು ಕೋರ್ಟ್ ಹೇಳಿದೆ.

ರೇಪಿಸ್ಟ್‌ಗಳಿಗೆ ಮರಣದಂಡನೆ ಫಿಕ್ಸ್; ಕಠಿಣ ಕಾನೂನಿಗೆ ಸಂಪುಟ ಒಪ್ಪಿಗೆ

2008ರಲ್ಲಿ ಪುರುಷನೊಂದಿಗೆ 4 ತಿಂಗಳು ದೈಹಿಕ ಸಂಪರ್ಕ ಬೆಳೆಸಿದ್ದಳು. ಮದುವೆಯಾಗೋದಾಗಿ ಭರವಸೆ ನೀಡಿದ್ದ ಕಾರಣಕ್ಕೆ ದೈಹಿಕ ಸಂಪರ್ಕ ಬೆಳೆಸಿದ್ದಳು. ಇನ್ನು ಆತನೊಂದಿಗೆ ಓಡಿ ಹೋಗಿದ್ದಳು. ಆದರೆ ಕೆಲ ದಿನಗಳಲ್ಲೇ ಮಹಿಳೆಯಿಂದ ಆತ ದೂರವಾಗಿದ್ದಾನೆ. ಹೀಗಾಗಿ ಮಹಿಳೆ ಅತ್ಯಾಚಾರ ಮಾಡಲಾಗಿದೆ ಎಂದು ದೂರು ನೀಡಿದ್ದಳು. ಈ ಪ್ರಕರಣದ ಕುರಿತು ದೆಹಲಿ ಹೈಕೋರ್ಚ್ ಮಹತ್ವದ ತೀರ್ಪು ನೀಡಿದೆ. 

ಆರೋಪಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಅನ್ನೋ ದೂರನ್ನು ಹೈಕೋರ್ಟ್ ವಜಾ ಮಾಡಿದೆ. ಇದನ್ನು ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಆರೋಪಿಗೆ ಕ್ಲೀನ್ ಚಿಟ್ ನೀಡಿದೆ. 

ಮದುವೆಯ ಭರವಸೆಯೊಂದಿಗೆ ಇಬ್ಬರು ಸುದೀರ್ಘ ದಿನಗಳ ವರೆಗೆ ದೈಹಿಕ ಸಂಪರ್ಕ ಬೆಳೆಸಿದರೆ, ಅಥವಾ ದೀರ್ಘ ಕಾಲದ ವರೆಗೆ ಅನ್ಯೋನ್ಯವಾಗಿದ್ದು, ದೈಹಿಕ ಸಂಪರ್ಕವನ್ನೂ ಬೆಳೆಸಿದ ಪ್ರಕರಣಗಳು ಅತ್ಯಾಚಾರವಲ್ಲ ಎಂದು ಹೈಕೋರ್ಟ್ ಹೇಳಿದೆ.

click me!