ರಾಕೆಟ್ ಮರುಪ್ರವೇಶದ ವೇಳೆ ಹೆಚ್ಚಿನ ಅವಶೇಷಗಳು ಮರು-ಪ್ರವೇಶದಲ್ಲಿ ಸುಟ್ಟುಹೋಗುತ್ತವೆ ಮತ್ತು ಯಾವುದೇ ಹಾನಿ ಉಂಟುಮಾಡುವ ಸಾಧ್ಯತೆ ಇರುವುದಿಲ್ಲ.
ಮಹಾರಾಷ್ಟ್ರ (ಏ. 04): ಶನಿವಾರದಂದು ಗುಜರಾತ್, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ರಾತ್ರಿ ಆಕಾಶದಲ್ಲಿ ಬೆಳಕಿನ ಗೆರೆಯೊಂದು ಕಂಡುಬಂದಿತ್ತು. ಅಮೆರಿಕಾ ವಿಜ್ಞಾನಿಗಳ ಪ್ರಕಾರ, ಉಲ್ಕಾಪಾತದಂತೆ ಕಾಣಿಸಿಕೊಂಡ ಈ ಗೆರೆಯು ವಾಸ್ತವವಾಗಿ ಚೀನಾದ ರಾಕೆಟ್ ಭೂಮಿಯ ವಾತಾವರಣಕ್ಕೆ ಮರುಪ್ರವೇಶಿಸಿದ ಅವಶೇಷವಾಗಿದೆ. ಫೆಬ್ರವರಿ 2021 ರಲ್ಲಿ ಉಡಾವಣೆಯಾದ ಚೀನಾದ ಚಾಂಗ್ ಝೆಂಗ್ 5 ಬಿ ರಾಕೆಟ್ (Chang Zheng 5B) ಶನಿವಾರ ಭೂಮಿಯ ವಾತಾವರಣವನ್ನು ಮರುಪ್ರವೇಶಿಸಿದ್ದು ಭಾರತದ ಮೇಲೆ ಆಕಾಶದಲ್ಲಿ ಸುಟ್ಟುಹೋಗಿದೆ.
ರಾಕೆಟ್ ಮರುಪ್ರವೇಶದ ವೇಳೆ ಹೆಚ್ಚಿನ ಅವಶೇಷಗಳು ಮರು-ಪ್ರವೇಶದಲ್ಲಿ ಸುಟ್ಟುಹೋಗುತ್ತವೆ ಮತ್ತು ಯಾವುದೇ ಹಾನಿ ಉಂಟುಮಾಡುವ ಸಾಧ್ಯತೆಯಿಲ್ಲ. ಮಹಾರಾಷ್ಟ್ರದ ಚಂದ್ರಾಪುರದ ಸಿಂಧೇವಾಹಿಯ ಲಾಡ್ಬೋರಿ ಗ್ರಾಮದಲ್ಲಿ ಚೀನಾದ ಈ ರಾಕೆಟ್‌ನ ಅವಶೇಷಗಳು ಪತ್ತೆಯಾಗಿವೆ.
undefined
ಇದನ್ನೂ ಓದಿ: ಬ್ರಹ್ಮಾಂಡದಲ್ಲಿ 136 ಜ್ಯೋತಿರ್ವರ್ಷ ದೂರದಲ್ಲಿ ಅಡಗಿದ್ದ ಮಸುಕಾದ ಗ್ಯಾಲಕ್ಸಿ ಪತ್ತೆ!
ಗ್ರಾಮದ ಪಂಚಾಯತ್ ಕಟ್ಟಡದ ಹಿಂದೆ ಬಿದ್ದಿದ್ದ 10x10 ಅಡಿ ಲೋಹದ ಉಂಗುರ ಸೇರಿದಂತೆ ಅನೇಕ ದೊಡ್ಡ ಲೋಹದ ತುಂಡುಗಳನ್ನು ಗ್ರಾಮಸ್ಥರು ಕಂಡುಕೊಂಡಿದ್ದಾರೆ. ಈ ಘಟನೆಯು ಗ್ರಾಮದ ಜನರಲ್ಲಿ ಕೆಲಕಾಲ ಭಯವನ್ನುಂಟು ಮಾಡಿತ್ತು. ಈ ಬಗ್ಗೆ ಟ್ವೀಟ್ ಮಾಡಿರುವ ಪತ್ರಕರ್ತರೊಬ್ಬರು ಪತ್ತೆಯಾದ ಅವಶೇಷಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
One more satellite fragments remains found in Sindevahi . This satellite piece have fallen in a Pawan Ghat lake. https://t.co/6XjkUCxKtD pic.twitter.com/PyIzuc9ZAs
— Praveen Mudholkar (@JournoMudholkar)
ಇಸ್ರೋ ಅಧಿಕಾರಿಗಳು ಯುನೈಟೆಡ್ ಸ್ಟೇಟ್ಸ್ ಸ್ಪೇಸ್ ಕಮಾಂಡ್ (USspacecom) ನಿಂದ ಎಚ್ಚರಿಕೆಗಳನ್ನು ಉಲ್ಲೇಖಿಸಿ CZ-3B R/B (ಲಾಂಗ್ ಮಾರ್ಚ್ ಉಡಾವಣಾ ವಾಹನದಿಂದ ಚೈನೀಸ್ ರಾಕೆಟ್ ಬಾಡಿ); ಸ್ಟಾರ್‌ಲಿಂಕ್ 1831 ಮತ್ತು ಕಾಸ್ಮಾಸ್-ಇರಿಡಿಯಮ್ ಉಪಗ್ರಹಗಳ ಘರ್ಷಣೆಯ ಅವಶೇಷಗಳಿಂದ ಎರಡು ಸಣ್ಣ ವಸ್ತುಗಳು, ಒಟ್ಟು ನಾಲ್ಕು ಬಾಹ್ಯಾಕಾಶ ಅವಶೇಷಗಳು ಶನಿವಾರ ಭೂಮಿಯ ವಾತಾವರಣವನ್ನು ಮರು-ಪ್ರವೇಶಿಸುವ ನಿರೀಕ್ಷೆಯಿದೆ ಎಂದು ತಿಳಿಸಿತ್ತು.
ಇದನ್ನೂ ಓದಿ: ಸೂರ್ಯನ ಅತ್ಯಂತ ಸ್ಪಷ್ಟ ಚಿತ್ರ ಸೆರೆಹಿಡಿದ ಯುರೋಪಿಯನ್ ಸೋಲಾರ್ ಆರ್ಬಿಟರ್!
ನೇತ್ರಾ ಯೋಜನೆ: ಭಾರತವು ತನ್ನ ನೇತ್ರಾ ಯೋಜನೆಯ ಮೂಲಕ ಬಾಹ್ಯಾಕಾಶ ವಸ್ತುಗಳ ವೀಕ್ಷಣಾ ಸೌಲಭ್ಯಗಳನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ, ಯುಎಸ್‌ಸ್ಪೇಸ್‌ಕಾಮ್‌ನಿಂದ ಪಟ್ಟಿ ಮಾಡಲಾದ 25,000 ಕ್ಕೂ ಹೆಚ್ಚು ದೊಡ್ಡ ವಸ್ತುಗಳನ್ನು ಟ್ರ್ಯಾಕ್ ಮಾಡಲು ಸಾಕಷ್ಟು ಮೂಲಸೌಕರ್ಯಗಳು - ರಾಡಾರ್‌ಗಳು ಮತ್ತು ಆಪ್ಟಿಕಲ್ ಸಂವೇದಕಗಳು ಬೇಕಾಗುತ್ತವೆ.
ಬಾಹ್ಯಾಕಾಶದಲ್ಲಿನ ಹೆಚ್ಚುತ್ತಿರುವ ವಸ್ತುಗಳ ಸಂಖ್ಯೆಯಿಂದಾಗಿ, ವಿಶೇಷವಾಗಿ ಕಡಿಮೆ-ಭೂಮಿಯ ಕಕ್ಷೆಯಲ್ಲಿ ಮರು-ಪ್ರವೇಶಗಳು ಹೆಚ್ಚು ಸಾಮಾನ್ಯವಾಗುತ್ತಿವೆ, ವಿಜ್ಞಾನಿಗಳು ಪ್ರಸ್ತುತ, ಎಲ್ಲಾ ಮರು-ಪ್ರವೇಶಗಳನ್ನು ಪತ್ತೆಹಚ್ಚಲು ಹಾಗೂ ವೀಕ್ಷಣಾ ಡೇಟಾವನ್ನು ಒದಗಿಸಲು USspacecom ಅವಲಂಬಿಸಿದ್ದಾರೆ. ಭಾನುವಾರ ಕೂಡ ಮತ್ತೊಂದು ಸ್ಟಾರ್‌ಲಿಂಕ್ 1859 ಮರು-ಪ್ರವೇಶದ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ತಿಳಿಸಿದ್ದರು.