ನಿರ್ಭಯಾ ಸಾಮೂಹಿಕ ಅತ್ಯಾಚಾರದ ದೋಷಿ ಪವನ್ ತಿಹಾರ್ ಜೈಲಿಗೆ ಶಿಫ್ಟ್| ಅತಿ ಶೀಘ್ರದಲ್ಲಿ ಅಪರಾಧಿಗಳು ಗಲ್ಲಿಗೇರುವ ಸಾಧ್ಯತೆ| ತಿಹಾರ್‌ನ ನಂಬರ್ 3 ಜೈಲಿನಲ್ಲಿ ಗಲ್ಲಿಗೇರಿಸಲು ಸಿದ್ಧತೆ|
ಪಾಟ್ನಾ[ಡಿ.10]: ನಿರ್ಭಯಾ ಸಾಮೂಹಿಕ ಅತ್ಯಾಚಾರದ ದೋಷಿ ಪವನ್ ನನ್ನು ಮಂಡೋಲಿ ಜೈಲಿನಿಂದ ತಿಹಾರ್ ಜೈಲಿನ ನಂಬರ್ 2ಗೆ ಶಿಫ್ಟ್ ಮಾಡಲಾಗಿದೆ. ಈಗಾಗಲೇ ಈ ಜೈಲಿನಲ್ಲಿ ಪ್ರಕರಣದ ಮತ್ತಿವಬ್ಬರು ಅಪರಾಧಿಗಳಾದ ಅಕ್ಷಯ್ ಹಾಗೂ ಮುಕೇಶ್ ಕೂಡಾ ಇದ್ದಾರೆ. ಮತ್ತೊಬ್ಬ ಅಪರಾಧಿ ವಿನಯ್ ಶರ್ಮಾ ಇಲ್ಲಿನ ನಂಬರ್ 4 ಜೈಲಿನಲ್ಲಿ ಬಂಧಿಸಲಾಗಿದೆ.
ಈ ನಾಲ್ವರೂ ದೋಷಿಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ಇಡಲಾಗಿದ್ದು, ಸಿಸಿಟಿವಿ ಮೂಲಕ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ. ಜೈಲು ನಂಬರ್ 3ರಲ್ಲಿ ಗಲ್ಲು ಶಿಕ್ಷೆಗೆ ತಯಾರಿ ನಡೆಸಲಾಗುತ್ತಿದೆ. ಈಗಾಗಲೇ ಸ್ವಚ್ಛತಾ ಕಾರ್ಯ ಹಾಗೂ ಗಲ್ಲಿಗೇರಿಸಲು ಟ್ರಯಲ್ ಕೂಡಾ ಮಾಡಲಾಗಿದೆ. ಜೈಲು ನಂಬರ್ ಮೂರರಲ್ಲೇ ಗಲ್ಲಿಗೇರಿಸುವ ವೇದಿಕೆ ಹಾಗೂ ಹಲಗೆ ಇದೆ.
ನಿರ್ಭಯಾ ದೋಷಿಗಳ ಗಲ್ಲುಶಿಕ್ಷೆಗೆ ದಿನಗಣನೆ, ಡಿ.16 ರಂದು ನೇಣು ಫಿಕ್ಸ್ ..!
ಗಲ್ಲಿಗೇರಿಸಲು ವಿಶೇಷವಾದ ಹಗ್ಗಗಳ ತಯಾರಿ ಈಗಾಗಲೇ ಆರಂಭವಾಗಿದ್ದು, ಇದನ್ನು ತಯಾರಿಸಿಕೊಡಲು ಬಕ್ಸಾರ್ ಜೈಲಿಗೆ ಸೂಚನೆ ಕಳುಹಿಸಲಾಗಿದೆ. ಮೇಣ ಹಾಗೂ ಇನ್ನಿತರ ವಸ್ತುಗಳಿಂದ ವಿಶೇಷವಾಗಿ ತಯಾರಿಸುವ ಈ ಹಗ್ಗವನ್ನು ತೇವಾಂಶದಲ್ಲಿಡಲಾಗುತ್ತದೆ. ಇನ್ನು ಈ ನಾಲ್ವರು ಅಪರಾಧಿಗಳಲ್ಲಿ ವಿನಯ್ ಶರ್ಮಾ ಈಗಾಗಲೇ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದು, ಇರಿಶೀಲನೆ ಇನ್ನಷ್ಟೇ ನಡೆಯಬೇಕಿದೆ. ರಾಷ್ಟ್ರಪತಿ ಈ ಅರ್ಜಿಯನ್ನು ತಿರಸ್ಕರಿಸುವುದು ಬಹುತೇಕ ಖಚಿತವಾಗಿದ್ದು, ತಿರಸ್ಕೃತಗೊಂಡ ಬೆನ್ನಲ್ಲೇ ಗೃಹ ಸಚಿವಾಲಯ, ತಿಹಾರ್ ಜೈಲು ಸಿಬ್ಬಂದಿಗೆ ಗಲ್ಲು ಶಿಕ್ಷೆ ವಿಧಿಸುವ ಆದೇಶ ನೀಡಲಾಗುತ್ತದೆ.
ನಿರ್ಭಯಾ ರೇಪಿಸ್ಟ್‌ಗಳಿಗೆ ಗಲ್ಲು: ವಾರದೊಳಗೆ ಹಗ್ಗ ತಯಾರಿಕೆಗೆ ಬಕ್ಸರ್ ಜೈಲಿಗೆ ಸೂಚನೆ!
ಬಳಿಕ ತಿಹಾರ್ ಸಿಬ್ಬಂದಿ ಕ್ಷಮಾದಾನ ಅರ್ಜಿ ತಿರಸ್ಕೃತಗೊಂಡಿದೆ ಎಂದು ನ್ಯಾಯಾಯಕ್ಕೆ ತಿಳಿಸಬೇಕು. ಈ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ವಿಚಾರಣಾ ನ್ಯಾಯಾಲಯ ಡೆತ್ ವಾರಂಟ್ ಜಾರಿಗೊಳಿಸುತ್ತದೆ. 2014ರಲ್ಲಿ ಶತ್ರುಘ್ನ ಚೌಹಾಣ್ ಪ್ರಕರಣದ ವೇಳೆ ಗಲ್ಲು ಶಿಕ್ಷೆಗೆ ಸಂಬಂಧಿಸಿದಂತೆ ಕೆಲ ಮಾರ್ಗಸೂಚಿಗಳನ್ನು ಜಾರಿಗೊಳಿಸಿತ್ತು. ಇದರ ಅನ್ವಯ ಡೆತ್ ವಾರಂಟ್ ಜಾರಿಯಾದ 14 ದಿನಗಳೊಳಗೆ ಗಲ್ಲು ಶಿಕ್ಷೆ ವಿಧಿಸಬೇಕು. ಡೆತ್ ವಾರಂಟ್ ಪ್ರತಿಯನ್ನು ಎಲ್ಲಾ ಅಪರಾಧಿಗಳಿಗೆ ನೀಡಬೇಕು. ಎಲ್ಲಾ ದೋಷಿಗಳ ಕುಟುಂಬ ಸದಸ್ಯರಿಗೂ ಈ ಕುರಿತು ಮಾಹಿತಿ ನೀಡಬೇಕು. ವಾರಂಟ್ ಜಾರಿಯಾದ ಕೂಡಲೇ ಅಪರಾಧಿಗಳನ್ನು condemned cell ನಲ್ಲಿಡಲಾಗುತ್ತದೆ.
ಗಲ್ಲು ಶಿಕ್ಷೆ ತಪ್ಪಿಸಿಕೊಳ್ಳಲು ನಿರ್ಭಯಾ ದೋಷಿ ಹೊಸ ತಂತ್ರ?
ಈ ಕೊಠಡಿಗೆ ಶಿಫ್ಟ್ ಆಗುತ್ತಿದ್ದಂತೆಯೇ ಅಪರಾಧಿಗಳು ಜೈಲಿನಲ್ಲಿರುವ ಇತರ ಕೈದಿಗಳಿಗಿಂತ ಭಿನ್ನರಾಗುತ್ತಾರೆ. ಇಲ್ಲಿ ಅಪರಾಧಿಗಳ ವಿಶೇಷ ಕಾಳಜಿ ವಹಿಸಲಾಗುತ್ತದೆ.
ಇನ್ನು ವಿನಯ್ ಶರ್ಮಾ ಹೊರತುಪಡಿಸಿ ಉಳಿದ ಮೂವರು ಡೆತ್ ವಾರಂಟ್ ವಿರೋಧಿಸಿ ಸುಪ್ರೀಂ ಮೆಟ್ಟಿಲೇರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಅಲ್ಲಿ ತಾವಿನ್ನೂ ಕ್ಷಮಾದಾನ ಅರ್ಜಿ ಸಲ್ಲಿಸಿಲ್ಲ ಎಂಬ ಕಾರಣ ನಿಡಬಹುದು. ಆದರೆ ತಿಹಾರ್ ಜೈಲು ಸಿಬ್ಬಂದಿ ತಾವು ಅಪರಾಧಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು 7 ದಿನಗಳ ಅವಕಾಶ ನೀಡಿದ್ದೆವು. ಈಗ ಕೊಟ್ಟ ಸಮಯ ಮುಗಿದಿದೆ, ಹೀಗಾಗಿ ಇವರ ಮನವಿಗೆ ಅರ್ಥವಿಲ್ಲ ಎಂದು ವಾದಿಸಬಹುದು.
ಹೀಗಿದ್ದರೂ ಡೆತ್ ವಾರಂಟ್ ಜಾರಿಯಾದ ಬಳಿಕವೂ ಅಪರಾಧಿಗಳಿಗೆ ಗಲ್ಲು ಶಿಕ್ಷೆಯಿಂದ ಪಾರಾಗಲು ಕಾನೂನಿನನ್ವಯ ದಾರಿಗಳಿವೆ. ಹೀಗಾಘಿ ಅಂತಿಮ ಆದೇಶ ಹೊರ ಬೀಳುವವರೆಗೂ ಗಲ್ಲು ಶಿಕ್ಷೆ ದಿನಾಂಕ ಮುಂದೆ ಹೋಗುವ ಸಾಧ್ಯತೆಗಳಿವೆ.
ನಿರ್ಭಯಾ ದೋಷಿಗಳಿಗೆ ಗಲ್ಲು ಶಿಕ್ಷೆಗೆ ಕ್ಷಣಗಣನೆ!