ಗ್ಯಾಸ್‌ ಚೇಂಬರ್‌ನಂತಾದ ದಿಲ್ಲಿ, ವಿಕೋಪಕ್ಕೆ ತಿರುಗಿದ ವಾಯಮಾಲಿನ್ಯ: ಶಾಲೆ ಆನ್‌ಲೈನ್‌!

By Kannadaprabha News  |  First Published Nov 15, 2024, 6:58 AM IST

ದಿಲ್ಲಿ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ 300 ವಿಮಾನಗಳ ಹಾರಾಟ ವಿಳಂಬವಾಗಿದೆ. ಈ ನಡುವೆ ದೆಹಲಿಯಲ್ಲಿ ಮಾಲಿನ್ಯ ತಡೆಗೆ ಕ್ರಮ ಜಾರಿ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ನ.18 ರಂದು ತುರ್ತಾಗಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸಮ್ಮತಿಸಿದೆ. 
 


ನವದೆಹಲಿ(ನ.15): ಚಳಿಗಾಲ ಆರಂಭವಾಗುತ್ತಿದ್ದಂತೆಯೇ ದೆಹಲಿಯಲ್ಲಿ ಮಾಲಿನ್ಯ ಮತ್ತಷ್ಟು ಗಂಭೀರವಾಗಿದ್ದು, ಗುರುವಾರದ ವಾಯುಗುಣಮಟ್ಟವು 428ಕ್ಕೆ ಕುಸಿದಿದೆ. ಹೀಗಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ತುರ್ತು ಕ್ರಮಗಳನ್ನು ಘೋಷಿಸಿರುವ ದೆಹಲಿಯ ಆಮ್ ಆತ್ಮ ಸರ್ಕಾರ, ಆನ್‌ಲೈನ್‌ನಲ್ಲೇ ಶಾಲೆ, ಕಟ್ಟಡ ನಿರ್ಮಾಣ/ಧ್ವಂಸ ಚಟುವಟಿಕೆ, ಡೀಸೆಲ್ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದೆ. 

ಶುಕ್ರವಾರ ಬೆಳಗ್ಗೆಯಿಂದಲೇ ಈ ಎಲ್ಲಾ ನಿರ್ಬಂಧಗಳು ಜಾರಿಗೆ ಬರಲಿವೆ. ದೆಹಲಿ ಅಷ್ಟೇ ಅಲ್ಲದೇ ನೆರೆಯ ಹರ್ಯಾಣ ಹಾಗೂ ಪಂಜಾಬಲ್ಲಿ ವಾಯುಗುಣಮಟ್ಟ 'ಗಂಭೀರ' ಮಟ್ಟಕ್ಕೆ ಇಳಿದಿದ್ದು, ಚಂಡೀಗಢದಲ್ಲಿ ವಾಯುಗುಣ ಮಟ್ಟ 427ಕ್ಕೆ ಕುಸಿದಿದೆ. ದಿಲ್ಲಿಯಲ್ಲಿ ಗುರುವಾರ ಈ ಸೀಸನ್‌ನ ಅತಿ ಕನಿಷ್ಠ ತಾಪಮಾನ 16 ಡಿಗ್ರಿ ದಾಖಲಾಗಿದೆ. ಅತಿಯಾದ ಹೊಗೆ ಮಾಲಿನ್ಯದಿಂದಾಗಿ ಗೋಚರತೆ ಶೂನ್ಯವಾಗಿದ್ದು, ನಗರವು 'ಗ್ಯಾಸ್ ಚೇಂಬ‌ರ್' ಆಗಿ ಪರಿವರ್ತನೆಯಾಗಿದೆ.
ದಿಲ್ಲಿ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ 300 ವಿಮಾನಗಳ ಹಾರಾಟ ವಿಳಂಬವಾಗಿದೆ. ಈ ನಡುವೆ ದೆಹಲಿಯಲ್ಲಿ ಮಾಲಿನ್ಯ ತಡೆಗೆ ಕ್ರಮ ಜಾರಿ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ನ.18 ರಂದು ತುರ್ತಾಗಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸಮ್ಮತಿಸಿದೆ. 

Tap to resize

Latest Videos

undefined

ದಿಲ್ಲಿಯಲ್ಲಿ ಶಾಶ್ವತ ಪಟಾಕಿ ನಿಷೇಧಕ್ಕೆ ನಿರ್ಧರಿಸಿ; ಸರ್ಕಾರಕ್ಕೆ ಗಡುವು ನೀಡಿದ ಕೋರ್ಟ್‌

ಮಾಲಿನ್ಯ ತಡೆಗೆ 2 ಕ್ರಮಗಳ ಘೋಷಣೆ: 

ದೆಹಲಿಯಲ್ಲಿ ವಾಯುಮಾಲಿನ್ಯ ಗಂಭೀರ ಮಟ್ಟ ತಲುಪಿದ ಬೆನ್ನಲ್ಲೇ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ದೆಹಲಿ ಸರ್ಕಾರ, 'ಜಿಆರ್ ಎಪಿ-2' ಹಾಗೂ 'ಜಿಆರ್‌ಎಪಿ-3' ಪ್ಲಾನ್ ಜಾರಿಗೆ ತರುವುದಾಗಿ ಘೋಷಿಸಿದೆ. ಶುಕ್ರವಾರ ಬೆಳಗ್ಗೆ 8ರಿಂದ ಇವು ಜಾರಿಗೆ ಬರಲಿವೆ. 'ಜಿಆರ್‌ಎಪಿ-2' ಪ್ರಕಾರ ದೆಹಲಿ ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್ ಸಿಆರ್) ಕಲ್ಲಿದ್ದಲು, ಉರುವಲು ಹಾಗೂ ಡೀಸೆಲ್ ಜನ ರೇಟರ್‌ಸೆಟ್‌ಗಳ ಬಳಕೆ ಮೇಲೆ ನಿರ್ಬಂಧ ಬೀಳಲಿದೆ. 

'ಜಿಆರ್‌ಎಪಿ-3' ಪ್ರಕಾರ ಎನ್‌ಸಿಆರ್ ರಾಜ್ಯಗಳಿಂದ ಸಂಚರಿಸುವ ಎಲೆಕ್ನಿಕ್, ಸಿಎನ್‌ಜಿ ಮತ್ತು ಬಿಎಸ್-6 ಡೀಸೆಲ್ ಬಸ್ ಹೊರತಾದ ಅಂತಾರಾಜ್ಯ ಬಸ್‌ಗಳು ದೆಹಲಿ ಪ್ರವೇಶ ಮಾಡದಂತೆ ಸ್ಥಗಿತ; ಕಟ್ಟಡ ನಿರ್ಮಾಣ ಮತ್ತು ಧ್ವಂಸ ಚಟುವಟಿಕೆಗಳಿಗೆ ಪೂರ್ತಿ ತಡೆ; ಎಲ್ಲಾ ರೀತಿಯ ಗಣಿಗಾರಿಕೆ ಚಟುವಟಿಕೆಗಳಿಗೆ ಬ್ರೇಕ್; 5ನೇ ತರಗತಿವರೆಗಿನ ಮಕ್ಕಳಿಗೆ ಆನ್‌ಲೈನ್‌ನಲ್ಲೇ ತರಗತಿ; ಪ್ರಮುಖ ರಸ್ತೆಗಳಲ್ಲಿ ನೀರು ಸಿಂಪಡಣೆ; ದೆಹಲಿ, ಗುರುಗ್ರಾಮ, ಫರೀದಾಬಾದ್, ಗಾಜಿಯಾಬಾದ್ ಮತ್ತು ಗೌತಮ ಬುದ್ದ ನಗರ ಜಿಲ್ಲೆಗಳಲ್ಲಿ ಬಿಎಸ್ - 3 ಪೆಟ್ರೋಲ್ ವಾಹನ ಮತ್ತು ಬಿಎಸ್-4 ಡೀಸೆಲ್ ವಾಹನಗಳ ಸಂಚಾರಕ್ಕೆ ನಿರ್ಬಂಧ ಜಾರಿಯಾಗಲಿದೆ.

ಗ್ಯಾಸ್ ಚೇಂಬರ್‌ಗೆ ಪ್ರವೇಶ- ಪ್ರಿಯಾಂಕಾ: 

ಮತ್ತೊಂದೆಡೆ ಕೇರಳದ ವಯನಾಡ್ ಚುನಾವಣೆ ಮುಗಿಸಿ ದಿಲ್ಲಿಗೆ ವಾಪಸಾದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಮಾತನಾಡಿ, 'ಸ್ವಚ್ಛ ವಾತಾವರಣ ಇದ್ದ ಕೇರಳದಿಂದ ದಿಲ್ಲಿಗೆ ಬರುತ್ತಿದ್ದಂತೆಯೇ ಗ್ಯಾಸ್ ಚೇಂಬರ್‌ ಪ್ರವೇಶಿಸಿದಂತಾಯಿತು' ಎಂದು ಬೇಸರಿಸಿದ್ದಾರೆ. ವಯನಾಡ್‌ನಲ್ಲಿ ವಾಯುಗುಣಮಟ್ಟ 'ಉತ್ತಮ ದರ್ಜೆ'ಯ 35 ಇತ್ತು ಎಂದಿದ್ದಾರೆ.

ಪಾಕಿಸ್ತಾನದಲ್ಲಿ ಭಾರೀ ವಾಯಮಾಲಿನ್ಯ: ತಿಂಗಳಲ್ಲಿ 18 ಲಕ್ಷ ಜನಕ್ಕೆ ಅನಾರೋಗ್ಯ

ವಾಯುಗುಣ ಹೀಗೆ ಅಳೆಯಿರಿ: 

0 ಮತ್ತು 50 ರ ನಡುವಿನ ವಾಯುಗುಣಮಟ್ಟ (ಎಕ್ಯುಐ) ಉತ್ತಮ, 51-100 ತೃಪ್ತಿದಾಯಕ, 101-200 ಮಧ್ಯಮ, 201-300, 301-400 .05 , 401-450 ಗಂಭೀರ, ಮತ್ತು 450ಕ್ಕಿಂತ ಹೆಚ್ಚಿದ್ದರೆ ಅತಿ ಗಂಭೀರ (ಗಂಭೀರ+) ಎಂದು ಪರಿಗಣಿಸಲಾಗುತ್ತದೆ.

ಮಾಲಿನ್ಯ ತಡೆಗೆ ಕಠಿಣ ಕ್ರಮ ಜಾರಿ 

• ವಾಯುಮಾಲಿನ್ಯ ತಡೆಯಲು ಸರ್ಕಾರದಿಂದ 2 ಕಠಿಣ ಕ್ರಮ 
• ಶುಕ್ರವಾರ ಬೆಳಗ್ಗೆಯಿಂದಲೇ 'ಜಿಆರ್‌ಎಪಿ-2' 'ಜಿಆರ್ ಎಪಿ-3' ಪದ್ಧತಿ ಜಾರಿಗೆ 
• ಶಾಲೆಗಳ ಬಾಗಿಲು ಬಂದ್, ಆನ್ ಲೈನ್‌ನಲ್ಲೇ ತರಗತಿಗೆ ಆದೇಶ 
• ಕಟ್ಟಡ ನಿರ್ಮಾಣ, ಧ್ವಂಸ ಚಟುವಟಿಕೆಗಳಿಗೆ ತಾತ್ಕಾಲಿಕ ನಿಷೇಧ ಜಾರಿಗೆ ನಿರ್ಧಾರ 
• ಡೀಸೆಲ್ ವಾಹನಗಳ ಸಂಚಾರ ನಿಯಂತ್ರಣ, ಜನರೇಟರ್ ಬಳಕೆಗೆ ನಿರ್ಬಂಧ

click me!