LIVE NOW
Published : Jan 26, 2026, 07:55 AM ISTUpdated : Jan 26, 2026, 11:23 PM IST

India News Live: 'ಮೊದಲ ಸಾಲಿನಲ್ಲಿ ಯಾಕೆ ಕೂರಿಸಿಲ್ಲ?' ಗಣರಾಜ್ಯೋತ್ಸವ ಪರೇಡ್‌ನಲ್ಲಿ ರಾಹುಲ್ ಗಾಂಧಿಗೆ 3ನೇ ಸಾಲಿನ ಆಸನ, ಕಾಂಗ್ರೆಸ್ ಕಿಡಿ

ಸಾರಾಂಶ

ನವದೆಹಲಿ (ಜ.26): ಈ ಬಾರಿ 77ನೇ ಗಣರಾಜ್ಯೋತ್ಸವವನ್ನು ವಂದೇ ಮಾತರಂ ಪರಿಕಲ್ಪನೆಯಲ್ಲಿ ಆಚರಿಸಲಾಗುತ್ತಿದ್ದು, ಪ್ರಜಾಪ್ರಭುತ್ವದ ಸಂಭ್ರಮ, ಸೇನಾ ಶಕ್ತಿ ಹಾಗೂ ವೈವಿಧ್ಯತೆಯ ಅನಾವರಣಕ್ಕೆ ಇಡೀ ದೇಶ ಸಾಕ್ಷಿಯಾಗಲಿದೆ. ಈ ವರ್ಷ ವಿದೇಶಿ ಅತಿಥಿಯಾಗಿ ಯುರೋಪಿಯನ್‌ ಕಮಿಷನ್‌ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇನ್ ಮತ್ತು ಯುರೋಪಿಯನ್‌ ಕೌನ್ಸಿಲ್‌ ಅಧ್ಯಕ್ಷ ಆಂಟೋನಿಯಾ ಕೋಸ್ಟಾ ಭಾಗಿಯಾಗಲಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

11:23 PM (IST) Jan 26

'ಮೊದಲ ಸಾಲಿನಲ್ಲಿ ಯಾಕೆ ಕೂರಿಸಿಲ್ಲ?' ಗಣರಾಜ್ಯೋತ್ಸವ ಪರೇಡ್‌ನಲ್ಲಿ ರಾಹುಲ್ ಗಾಂಧಿಗೆ 3ನೇ ಸಾಲಿನ ಆಸನ, ಕಾಂಗ್ರೆಸ್ ಕಿಡಿ

77ನೇ ಗಣರಾಜ್ಯೋತ್ಸವದಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ತವ್ಯ ಪಥದಲ್ಲಿ ಮೂರನೇ ಸಾಲಿನ ಆಸನ ನೀಡಿದ್ದು ತೀವ್ರ ವಿವಾದಕ್ಕೆ ಕಾರಣವಾಗಿದೆ. ವಿರೋಧ ಪಕ್ಷದ ನಾಯಕನಿಗೆ ಶಿಷ್ಟಾಚಾರದ ಪ್ರಕಾರ ಗೌರವ ನೀಡಿಲ್ಲ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

Read Full Story

11:10 PM (IST) Jan 26

ಮದುವೆ ಭರವಸೆಗೆ ತನು, ಮನ, ದೇಹ ನೀಡಿದ ಮಹಿಳೆಗೆ ಮೋಸ, ಧುರಂಧರ್ ನಟ ಅರೆಸ್ಟ್

ಮದುವೆ ಭರವಸೆಗೆ ತನು, ಮನ, ದೇಹ ನೀಡಿದ ಮಹಿಳೆಗೆ ಮೋಸ, , 10 ವರ್ಷ ಮದುವೆಯಾಗೋದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಕೈಕೊಟ್ಟಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾಳೆ. ಇದೀಗ ನಟ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

 

Read Full Story

10:08 PM (IST) Jan 26

ಮೊದಲ ರಾತ್ರಿಗೂ ಮೊದಲೇ ಮಗುವಿಗೆ ಜನ್ಮ ನೀಡಿದ ವಧು

ಉತ್ತರ ಪ್ರದೇಶದ ರಾಮ್‌ಪುರದಲ್ಲಿ, ಮದುವೆಯಾದ ಕೆಲವೇ ಗಂಟೆಗಳಲ್ಲಿ ನವವಿವಾಹಿತೆಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಅಚ್ಚರಿಯ ಘಟನೆ ನಡೆದಿದೆ. ಮದುವೆ ರಾತ್ರಿಯೇ ವಧು ಮಗುವಿಗೆ ಜನ್ಮ ನೀಡಿದ್ದು, ವರ ಸಿಹಿ ಹಂಚಿ ಸಂಭ್ರಮಿಸಿದ್ದಾನೆ.

Read Full Story

09:15 PM (IST) Jan 26

ಗಣರಾಜ್ಯೋತ್ಸವಕ್ಕಾಗಿ ಕುರ್ಚಿಗಳ ಸಾಗಿಸುತ್ತಿದ್ದ ವೇಳೆ ಆಟೋರಿಕ್ಷಾದಿಂದ ಬಿದ್ದು 8ನೇ ಕ್ಲಾಸ್ ಬಾಲಕಿ ಸಾವು

ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಸರ್ಕಾರಿ ವಸತಿ ಶಾಲೆಯಲ್ಲಿ ಗಣರಾಜ್ಯೋತ್ಸವದ ಸಿದ್ಧತೆ ವೇಳೆ ಆಟೋರಿಕ್ಷಾದಿಂದ ಬಿದ್ದು 8ನೇ ತರಗತಿ ವಿದ್ಯಾರ್ಥಿನಿ ಸಂಗೀತಾ ಸಾವನ್ನಪ್ಪಿದ್ದಾಳೆ. ಈ ದುರಂತ ಘಟನೆಗೆ ಶಾಲಾ ಆಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪ ಕೇಳಿ ಬಂದಿದೆ.

Read Full Story

07:43 PM (IST) Jan 26

ಪತಿಯ ದೀರ್ಘಾಯಸ್ಸಿಗೆ ನವವಧು ಬೆಂಕಿ ಇಟ್ಕೊಬೇಕು! ವಿಚಿತ್ರ ಸಂಪ್ರದಾಯದ ಭಯಾನಕ ವಿಡಿಯೋ ವೈರಲ್​

ಮಿಥಿಲೆಯಲ್ಲಿ ಆಚರಿಸಲಾಗುವ ತೀಮಿ ದಾಗ್ನೆ ಎಂಬ ಸಂಪ್ರದಾಯದಲ್ಲಿ, ಪತಿಯ ದೀರ್ಘಾಯುಷ್ಯಕ್ಕಾಗಿ ನವವಧುವಿನ ಮೊಣಕಾಲಿಗೆ ಉರಿಯುವ ಬತ್ತಿಯಿಂದ ಸುಡಲಾಗುತ್ತದೆ. ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಈ ಹೆಣ್ಣಿನ ಶೋಷಣೆಯ ಕರಾಳ ಮುಖವನ್ನು ಈ ಆಚರಣೆ ಅನಾವರಣಗೊಳಿಸುತ್ತದೆ.

Read Full Story

07:41 PM (IST) Jan 26

ಪತ್ನಿ ಚಿಕಿತ್ಸೆಗಾಗಿ ಸೈಕಲ್‌ನ್ನೇ ಹಾಸಿಗೆ ಮಾಡಿ 300 ಕಿಮೀ ಸೈಕಲ್ ತುಳಿದ 75ರ ವೃದ್ಧ

ಒಡಿಶಾದ 75 ವರ್ಷದ ವೃದ್ಧರೊಬ್ಬರು, ತಮ್ಮ ಪಾರ್ಶ್ವವಾಯು ಪೀಡಿತ ಪತ್ನಿಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲದ ಕಾರಣ, ತಮ್ಮ ಮೂರು ಗಾಲಿಯ ಸೈಕಲ್‌ನಲ್ಲಿ 300 ಕಿಲೋ ಮೀಟರ್ ದೂರ ಪ್ರಯಾಣಿಸಿದ್ದಾರೆ. ಸಂಬಲ್‌ಪುರದಿಂದ ಕಟಕ್‌ಗೆ 9 ದಿನಗಳ ಕಾಲ ಸೈಕಲ್ ತುಳಿದು, ಚಿಕಿತ್ಸೆ ಕೊಡಿಸಿದ್ದಾರೆ.

Read Full Story

07:23 PM (IST) Jan 26

ನಾಳೆ 16 ಸಾವಿರ ಉದ್ಯೋಗಿಗಳ ಕಿತ್ತು ಹಾಕಲಿದೆ ಅಮೇಜಾನ್, ಭಾರತದಲ್ಲೇ ಹೆಚ್ಚು

ನಾಳೆ 16 ಸಾವಿರ ಉದ್ಯೋಗಿಗಳ ಕಿತ್ತು ಹಾಕಲಿದೆ ಅಮೇಜಾನ್, ಜನವರಿ 27 ರಿಂದ ಅಮೇಜಾನ್ ಉದ್ಯೋಗ ಕಡಿತ ಆರಂಭಗೊಳ್ಳುತ್ತಿದೆ. ಈ ಬಾರಿ ಭಾರತದಲ್ಲೇ ಅತೀ ಹೆಚ್ಚು ಉದ್ಯೋಗ ಕಡಿತಗಳು ನಡೆಯಲಿದೆ ಅನ್ನೋ ಮಾತುಗಳು ಕೇಳಿಬಂದಿದೆ.

Read Full Story

04:49 PM (IST) Jan 26

ಪತ್ನಿ ಜೊತೆ ಮಲಗೇ ಇಲ್ಲ ಮಗು ಹೇಗೆ? ಯೋಧನ ಅರ್ಜಿಯಂತೆ DNA ಟೆಸ್ಟ್‌ಗೆ ಹೈಕೋರ್ಟ್ ಆದೇಶ

ಪತ್ನಿ ಜೊತೆ ಮಲಗೇ ಇಲ್ಲ ಮಗು ಹೇಗೆ? ಯೋಧನ ಅರ್ಜಿಯಂತೆ DNA ಟೆಸ್ಟ್‌ಗೆ ಹೈಕೋರ್ಟ್ ಆದೇಶ ನೀಡಿದೆ. ದೈಹಿಕ ಸಂಪರ್ಕ ನಡೆಸದೇ ಗರ್ಭಿಣಿ ಹೇಗೆ? ಪತ್ನಿ ತನಗೆ ಮೋಸ ಮಾಡಿದ್ದಾಳೆ ಎಂದು ವಿಚ್ಚೇದನಕ್ಕೂ ಅರ್ಜಿ ಸಲ್ಲಿಕೆಯಾಗಿದೆ.

 

Read Full Story

04:49 PM (IST) Jan 26

ಜೊತೆಗೆ ಮಲಗೋಕೆ ಗಂಡನ ಬಳಿಯೂ ಹಣ ಕೇಳಿದ ಹೆಂಡತಿ - ಕಾಸು ಕೊಟ್ಟು ಕೊಟ್ಟು ಸುಸ್ತಾಗಿ ಡಿವೋರ್ಸ್‌ಗೆ ಗಂಡನ ಅರ್ಜಿ

ಚೀನಾದಲ್ಲಿ ಪತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಲು ಪತ್ನಿಯೊಬ್ಬಳು ಹಣಕ್ಕೆ ಬೇಡಿಕೆಯಿಟ್ಟ ವಿಚಿತ್ರ ಘಟನೆ ನಡೆದಿದೆ. ಮೊದಲ ರಾತ್ರಿಯಿಂದಲೇ ಈ ಬೇಡಿಕೆ ಇಟ್ಟಿದ್ದರಿಂದ ಬೇಸತ್ತ ಪತಿ, ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾನೆ.

Read Full Story

04:02 PM (IST) Jan 26

ಒಂದೇ ಸಮಯ ಇಬ್ಬರ ಜೊತೆ ಮಂಚದಲ್ಲಿ ಪತ್ನಿ, ಮದ್ವೆಯಾದ 4 ತಿಂಗಳಿಗೆ ಬಯಲಾಯ್ತು ರಂಗಿನಾಟ

ಒಂದೇ ಸಮಯ ಇಬ್ಬರ ಜೊತೆ ಮಂಚದಲ್ಲಿ ಪತ್ನಿ, ಎಂಜಿನೀಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಜೊತೆ ಪತ್ನಿ ಹಾಸಿಗೆ ಹಂಚಿಕೊಂಡಿದ್ದು ನೋಡಿದ ಗಂಡ ಕೆರಳಿದ್ದಾನೆ. ಆಕ್ರೋಶಕ್ಕೆ ಕತೆ ಮುಗಿದಿದೆ. ಅಷ್ಟಕ್ಕೂ ಮಂಚದಲ್ಲಿ ನಡೆದಿದ್ದೇನು?

 

Read Full Story

03:32 PM (IST) Jan 26

ಮಕ್ಕಳು ತಮ್ಮಿಷ್ಟದಂತ ಮದುವೆಯಾದರೆ ಇಡೀ ಕುಟುಂಬಕ್ಕೆ ಬಹಿಷ್ಕಾರದ ಶಿಕ್ಷೆ - ನಿರ್ಧಾರ ಕೈಗೊಂಡ ಗ್ರಾಮ

ಪ್ರೀತಿಸಿ ಅಥವಾ ತಮ್ಮಿಷ್ಟದ ಪ್ರಕಾರ ಮದುವೆಯಾಗುವ ಜೋಡಿಗಳಿಗೆ ಮಾತ್ರವಲ್ಲದೇ ಅವರ ಇಡೀ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಗ್ರಾಮಸ್ಥರು ಈ ಬಗ್ಗೆ ನಿರ್ಧಾರ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

03:11 PM (IST) Jan 26

ಕೆಲವೇ ತಿಂಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಆಗುತ್ತಾ? ತಜ್ಞರು ಕೊಟ್ಟ ಸೂಚನೆ ಏನು?

ಕೆಲವೇ ತಿಂಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಆಗುತ್ತಾ? ತಜ್ಞರು ಕೊಟ್ಟ ಸೂಚನೆ ಏನು? ಪ್ರತಿ ದಿನ ದಾಖಲೆಯ ಏರಿಕೆ ಕಾಣುತ್ತಿರುವ ಚಿನ್ನದ ಆತಂಕ ಕೆಲವೇ ದಿನಗಳಲ್ಲಿ ದೂರವಾಗುತ್ತಾ? ಖರೀದಿಸಲು ಬಯಸುವವರು ಸ್ವಲ್ಪ ಕಾಯಬೇಕಾ?

Read Full Story

02:14 PM (IST) Jan 26

ಮೂರೇ ಗಂಟೆಯ ಭಾರತ ಭೇಟಿಗೆ ಬಂದಿದ್ದ ಯುಎಇ ಅಧ್ಯಕ್ಷ, ಇದರ ಬೆನ್ನಲ್ಲೇ ಪಾಕ್‌ ಏರ್‌ಪೋರ್ಟ್‌ ಡೀಲ್‌ ಕ್ಯಾನ್ಸಲ್‌!

UAE Cancels Pakistan Airport Deal After President’s Quick India Trip ಯುಎಇ ಅಧ್ಯಕ್ಷ 900 ಭಾರತೀಯ ಕೈದಿಗಳ ಬಿಡುಗಡೆಗೆ ಅನುಮೋದನೆ ನೀಡಿದ್ದಾರೆ, ಈ ಕ್ರಮವನ್ನು ನವದೆಹಲಿಯ ಕಡೆಗೆ ಸೌಹಾರ್ದತೆಯ ಮಹತ್ವದ ಸೂಚಕವೆಂದು ವ್ಯಾಪಕವಾಗಿ ವ್ಯಾಖ್ಯಾನಿಸಲಾಗಿದೆ.

 

Read Full Story

01:19 PM (IST) Jan 26

ಗಂಡನ ಕಾರಿನಲ್ಲಿ ಗೋಮಾಂಸ ತುಂಬಿಸಿ ಭಜರಂಗದಳಕ್ಕೆ ಮಾಹಿತಿ ನೀಡಿದ ಪತ್ನಿ

ಗಂಡನಿಂದ ವಿಚ್ಛೇದನ ಪಡೆಯುವ ಉದ್ದೇಶದಿಂದ, ಮಹಿಳೆಯೊಬ್ಬಳು ತನ್ನ ಬಾಯ್‌ಫ್ರೆಂಡ್ ಜೊತೆ ಸೇರಿ ಪತಿಯ ಕಾರಿನಲ್ಲಿ ಗೋಮಾಂಸವಿಟ್ಟು ಆತನನ್ನು ಜೈಲಿಗಟ್ಟಲು ಸಂಚು ರೂಪಿಸಿದ್ದಾಳೆ. ಈ ಹಿಂದೆ ಇದೇ ರೀತಿ ಯತ್ನಿಸಿ ಆತನನ್ನು ಒಮ್ಮೆ ಜೈಲಿಗಟ್ಟಿದ್ದ ಆಕೆ ಆತ ವಾಪಸ್ ಬರುತ್ತಿದ್ದಂತೆ ಮತ್ತೊಂದು ಪ್ಲಾನ್ ಮಾಡಿದ್ದಾಳೆ.

Read Full Story

01:05 PM (IST) Jan 26

ಸಿನಿಮಾ ಹಾಲ್​ನಲ್ಲಿ ಇದೇನಿದು? ಒಂದೇ ಸಲಕ್ಕೆ ಇಬ್ಬರ ಜೊತೆ ರೊಮಾನ್ಸ್​- ಆತಂಕಕಾರಿ ವಿಡಿಯೋ ವೈರಲ್​

ಸಿನಿಮಾ ಥಿಯೇಟರ್​ನಲ್ಲಿ ಯುವಕನೊಬ್ಬ ಇಬ್ಬರು ಯುವತಿಯರೊಂದಿಗೆ ಏಕಕಾಲದಲ್ಲಿ ರೊಮ್ಯಾನ್ಸ್​ನಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಡಿಜಿಟಲ್ ಯುಗದಲ್ಲಿ ಯುವಜನತೆಯ ವರ್ತನೆ ಮತ್ತು ಮಕ್ಕಳ ಭವಿಷ್ಯದ ಬಗ್ಗೆ ಪೋಷಕರಲ್ಲಿ ಮೂಡುತ್ತಿರುವ ಆತಂಕವನ್ನು ಎತ್ತಿ ತೋರಿಸುತ್ತದೆ.
Read Full Story

12:42 PM (IST) Jan 26

2021ರಲ್ಲಿ ರಾಮ ಮಂದಿರ, ಈ ಬಾರಿ ಕರ್ತವ್ಯಪಥದಲ್ಲಿ ಗಮನಸೆಳೆದ ಗಣೇಶೋತ್ಸವ!

Republic Day Parade 2026: 77ನೇ ಗಣರಾಜ್ಯೋತ್ಸವದಂದು ಕರ್ತವ್ಯ ಪಥದಲ್ಲಿ ನಡೆದ ಮೆರವಣಿಗೆಯಲ್ಲಿ ಮಹಾರಾಷ್ಟ್ರದ ಸ್ತಬ್ಧಚಿತ್ರವು ಗಣೇಶೋತ್ಸವವನ್ನು ಪ್ರದರ್ಶಿಸಿತು. ಗಣೇಶೋತ್ಸವದ ಸಾಂಸ್ಕೃತಿಕ ವೈಭವ, ಆರ್ಥಿಕ ವಹಿವಾಟು ಮತ್ತು ಸ್ವಾವಲಂಬಿ ಭಾರತ ಅಭಿಯಾನಕ್ಕೆ ನೀಡುವ ಕೊಡುಗೆಯನ್ನು ಬಿಂಬಿಸಿತು.

Read Full Story

12:33 PM (IST) Jan 26

ಡಿಜಿಟಲ್​ ಯುಗದ ಮಹಿಮೆ! 50 ಘಟಾನುಘಟಿ ಟಿವಿ ಚಾನೆಲ್​ಗಳು ಬಂದ್​- ಲೈಸೆನ್ಸ್​ ವಾಪಸ್​

ಡಿಜಿಟಲ್ ಮಾಧ್ಯಮಗಳ ಪ್ರಭಾವದಿಂದಾಗಿ ಟಿವಿ ಚಾನೆಲ್‌ಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ. ವೀಕ್ಷಕರ ಸಂಖ್ಯೆ ಕುಸಿತ ಮತ್ತು ಜಾಹೀರಾತು ಆದಾಯ ಡಿಜಿಟಲ್‌ಗೆ ವರ್ಗಾವಣೆ ಆಗುತ್ತಿರುವ ಕಾರಣ,   50 ಚಾನೆಲ್‌ಗಳು ತಮ್ಮ ಪರವಾನಗಿಯನ್ನು ವಾಪಸ್ ನೀಡಿ, ಬಾಗಿಲು ಮುಚ್ಚಲು ಮುಂದಾಗಿವೆ. ಇದರ ಡಿಟೇಲ್ಸ್​ ಇಲ್ಲಿದೆ.

Read Full Story

12:06 PM (IST) Jan 26

Republic Day - ಕರ್ತವ್ಯಪಥದಲ್ಲಿ ಆಪರೇಷನ್‌ ಸಿಂದೂರ್‌ ಫ್ಲೈಟ್‌ ಫಾರ್ಮೇಷನ್‌ ಜಗತ್ತಿಗೆ ತಿಳಿಸಿದ ಭಾರತ!

77ನೇ ಗಣರಾಜ್ಯೋತ್ಸವದಂದು ಕರ್ತವ್ಯಪಥದಲ್ಲಿ ನಡೆದ ಭವ್ಯ ಪರೇಡ್‌ನಲ್ಲಿ, ಭಾರತವು 'ಆಪರೇಷನ್ ಸಿಂಧೂರ್'ನ ರಹಸ್ಯವನ್ನು ಜಗತ್ತಿಗೆ ಅನಾವರಣಗೊಳಿಸಿತು. ಪಾಕಿಸ್ತಾನದ ಮೇಲಿನ ದಾಳಿಯಲ್ಲಿ ಬಳಸಲಾಗಿದ್ದ ರಫೇಲ್, ಸುಖೋಯ್-30 ಎಂಕೆಐ, ಮಿಗ್-29 ಹಾಗೂ ಜಾಗ್ವಾರ್ ಯುದ್ಧವಿಮಾನಗಳ ಮಿಶ್ರ ಫಾರ್ಮೇಷನ್‌ ಪ್ರದರ್ಶಿಸಿತು.

Read Full Story

12:05 PM (IST) Jan 26

85 ಶತಕೋಟಿ ಡಾಲರ್​ ಮೌಲ್ಯದ 1 ಸಾವಿರ ಟನ್​ ಚಿನ್ನದ ನಿಧಿ ಪತ್ತೆ! ಭೂಮಿಯೊಳಗೆ ಸಿಕ್ಕ ಅನ್ಯಗ್ರಹದ ಲೋಹಗಳು

ಚೀನಾದ ಹುನಾನ್ ಪ್ರಾಂತ್ಯದಲ್ಲಿ 85 ಶತಕೋಟಿ ಡಾಲರ್ ಮೌಲ್ಯದ ಬೃಹತ್ ಚಿನ್ನದ ನಿಧಿ ಪತ್ತೆಯಾಗಿದೆ. ಇದರ ಜೊತೆಗೆ, ಸ್ಪೇನ್‌ನಲ್ಲಿ ಕಂಚಿನ ಯುಗದ ನಿಧಿಯೊಂದಿಗೆ ಭೂಮಿಗೆ ಸೇರದ, ಅನ್ಯಗ್ರಹದಿಂದ ಬಂದ ಲೋಹಗಳು ಕೂಡ ಪತ್ತೆಯಾಗಿದ್ದು, ಸಂಶೋಧಕರನ್ನು ಅಚ್ಚರಿಗೊಳಿಸಿದೆ.
Read Full Story

11:27 AM (IST) Jan 26

ಅಶೋಕ ಚಕ್ರ ದೇಶದ ಜನರು ಒಟ್ಟಾಗಿ ನನಗೆ ನೀಡಿರುವ ಆಶೀರ್ವಾದ - ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ

ಭಾರತದ ಎರಡನೇ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು 77ನೇ ಗಣರಾಜ್ಯೋತ್ಸವದಂದು ರಾಷ್ಟ್ರಪತಿಗಳಿಂದ ಅಶೋಕ ಚಕ್ರ ಪ್ರಶಸ್ತಿ ಸ್ವೀಕರಿಸಿದರು. ಭಾರತದ ಜನರ ಸಾಮೂಹಿಕ ಆಶೀರ್ವಾದವೆಂದು ಬಣ್ಣಿಸಿದ ಅವರು, ಭವಿಷ್ಯದ ಮಾನವ ಬಾಹ್ಯಾಕಾಶ ಯಾತ್ರೆಗಳಿಗೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ.

Read Full Story

10:12 AM (IST) Jan 26

ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಪ್ರಧಾನಿ ನರೇಂದ್ರ ಮೋದಿ

ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೂ ಮುನ್ನ ಸಂಪ್ರದಾಯದ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಯುದ್ಧ ಸ್ಮಾರಕ್ಕೆ ಭೇಟಿ ನೀಡಿ, ಹುತಾತ್ಮ ಸೈನಿಕರಿಗೆ ನಮನ ಸಲ್ಲಿಸಿದರು. ಷುಷ್ಪನಮನ ಸಲ್ಲಿಸಿದ ಬಳಿಕ 2 ನಿಮಿಷ ಮೌನಾಚರಣೆ ಮಾಡಿದರು.

10:08 AM (IST) Jan 26

ಗಣರಾಜ್ಯೋತ್ಸದ ಶುಭ ಕೋರಿದ ಪ್ರಧಾನಿ ಮೋದಿ

 

 

10:05 AM (IST) Jan 26

ಕರ್ತವ್ಯಪಥ ಪರೇಡ್‌: ಏಷ್ಯಾನೆಟ್‌ ಸುವರ್ಣನ್ಯೂಸ್‌ LIVE

10:01 AM (IST) Jan 26

77ನೇ ಗಣರಾಜ್ಯೋತ್ಸವ ಸಂಭ್ರಮ - ಕರ್ತವ್ಯ ಪಥದಲ್ಲಿ ಅಲೆಅಲೆಯಾಗಿ ಮೊಳಗಲಿದೆ 'ವಂದೇ ಮಾತರಂ'

ದೇಶವು ತನ್ನ 77ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದು, ದೆಹಲಿಯ ಕರ್ತವ್ಯ ಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ವರ್ಷದ ಮೆರವಣಿಗೆಯು 'ವಂದೇ ಮಾತರಂ' ಮತ್ತು 'ಆತ್ಮನಿರ್ಭರ ಭಾರತ' ಥೀಮ್‌ನಡಿಯಲ್ಲಿ ನಡೆಯಲಿದೆ.

Read Full Story

09:43 AM (IST) Jan 26

ಹೆಂಡ್ತಿಯ ಕೂದಲು ಉದುರುತ್ತಿದೆ ಅನ್ನೋ ಕಾರಣಕ್ಕೆ ವಿಚ್ಛೇದನ ಕೊಟ್ಟ ಪತಿ!

Man Divorces Wife After 16 Years Due to Her Hair Loss in China 16 ವರ್ಷಗಳ ಕಾಲ ಮದುವೆಯಾಗಿದ್ದ ದಂಪತಿ ಇತ್ತೀಚೆಗೆ ಬೇರೆಬೇರೆಯಾಗಿದ್ದಾರೆ. ಹೆಂಡ್ತಿಯ ಕೂದಲು ವಿಪರೀತವಾಗಿ ಉದುರಿದ್ದ ಕಾರಣಕ್ಕೆ ವಿಚ್ಛೇದನ ನೀಡಿರುವುದಾಗಿ ಪತಿ ಹೇಳಿದ್ದಾನೆ.

Read Full Story

07:58 AM (IST) Jan 26

ಟಿ20 ವಿಶ್ವಕಪ್‌ ಆಡದಿದ್ರೆ ಕ್ರಿಕೆಟ್‌ ಭವಿಷ್ಯವೇ ಖತಂ: ಪಾಕಿಸ್ತಾನಕ್ಕೆ ಐಸಿಸಿ ಖಡಕ್ ವಾರ್ನಿಂಗ್!

ಟಿ20 ವಿಶ್ವಕಪ್ ಬಹಿಷ್ಕರಿಸುವ ಪೊಳ್ಳು ಬೆದರಿಕೆ ಹಾಕಿದ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಖಡಕ್ ಎಚ್ಚರಿಕೆ ನೀಡಿದೆ. ಒಂದು ವೇಳೆ ಟೂರ್ನಿಯಲ್ಲಿ ಆಡದಿದ್ದರೆ, ದ್ವಿಪಕ್ಷೀಯ ಸರಣಿ, ಪಿಎಸ್‌ಎಲ್‌ ಮತ್ತು ಏಷ್ಯಾಕಪ್‌ನಿಂದಲೂ ಹೊರಹಾಕುವುದಾಗಿ ಎಚ್ಚರಿಸಿದೆ.

 

Read Full Story

07:57 AM (IST) Jan 26

ಅಭಿಷೇಕ್-ಸೂರ್ಯಕುಮಾರ್ ಯಾದವ್ ಆರ್ಭಟಕ್ಕೆ ಕಿವೀಸ್‌ ಕಂಗಾಲು; ಭಾರತಕ್ಕೆ ಸತತ 9ನೇ ಟಿ20 ಸರಣಿ ಜಯ!

ನ್ಯೂಜಿಲೆಂಡ್‌ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ, 5 ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಅಭಿಷೇಕ್ ಶರ್ಮಾ ಅವರ 14 ಎಸೆತಗಳ ಸ್ಫೋಟಕ ಅರ್ಧಶತಕ ಮತ್ತು ಸೂರ್ಯಕುಮಾರ್ ಉತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ ಐತಿಹಾಸಿಕ ಗೆಲುವು ದಾಖಲಿಸಿತು.

 

Read Full Story

07:57 AM (IST) Jan 26

ದೇಶದ ಮೊದಲ ಗಣರಾಜ್ಯೋತ್ಸವ ಸಂಭ್ರಮಕ್ಕೆ ಆಗಿದ್ದ ವೆಚ್ಚ ಎಷ್ಟು ? ಕುತೂಹಲಕಾರಿ ಸಂಗತಿಯಿದು

77ನೇ ಗಣರಾಜ್ಯೋತ್ಸವಕ್ಕೆ ದೇಶ ಸಜ್ಜಾಗಿದೆ. ದೇಶದ ಸೇನಾ, ಸಾಂಸ್ಕೃತಿಕ ಸಾಮರ್ಥ್ಯವನ್ನು ಜಗತ್ತಿನೆದುರಿಗೆ ತೆರೆದಿಡುವ ಕಾರ್ಯಕ್ರಮಕ್ಕೆ ಈ ಬಾರಿ ವಂದೇ ಮಾತರಂ ಪರಿಕಲ್ಪನೆ ಇನ್ನಷ್ಟು ಮೆರಗು ನೀಡಲಿದೆ.

 

Read Full Story

07:57 AM (IST) Jan 26

ಆರ್‌ಜೆಡಿ ನಂ.2 ಹುದ್ದೆ ತೇಜಸ್ವಿ ಪಾಲು

ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಬಿಹಾರ ವಿಪಕ್ಷ ನಾಯಕ ತೇಜಸ್ವಿ ಯಾದವ್‌ ಅವರನ್ನು ನೇಮಿಸಲಾಗಿದೆ. ಇದು ಪಕ್ಷದ ನಂ.2 ಹುದ್ದೆ ಆಗಿದ್ದು, ತನ್ಮೂಲಕ ತೇಜಸ್ವಿ ಅವರು ತಮ್ಮ ಉತ್ತರಾಧಿಕಾರಿ ಎಂದು ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್‌ ಪರೋಕ್ಷವಾಗಿ ಸಾರಿದ್ದಾರೆ.

 

Read Full Story

07:56 AM (IST) Jan 26

ಇಂದು ‘ವಂದೇ..’ ಪರಿಕಲ್ಪನೆಯಲ್ಲಿ 77ನೇ ಗಣರಾಜ್ಯ ದಿನ

ಈ ಬಾರಿ 77ನೇ ಗಣರಾಜ್ಯೋತ್ಸವವನ್ನು ವಂದೇ ಮಾತರಂ ಪರಿಕಲ್ಪನೆಯಲ್ಲಿ ಆಚರಿಸಲಾಗುತ್ತಿದ್ದು, ಪ್ರಜಾಪ್ರಭುತ್ವದ ಸಂಭ್ರಮ, ಸೇನಾ ಶಕ್ತಿ ಹಾಗೂ ವೈವಿಧ್ಯತೆಯ ಅನಾವರಣಕ್ಕೆ ಇಡೀ ದೇಶ ಸಾಕ್ಷಿಯಾಗಲಿದೆ.

 

Read Full Story

07:56 AM (IST) Jan 26

ಹಿರಿಯ ಪತ್ರಕರ್ತ ಮಾರ್ಕ್‌ ಟಲ್ಲಿ ನಿಧನ

ಬಿಬಿಸಿ ಭಾರತದ ಮುಖ್ಯಸ್ಥರಾಗಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಹೆಸರಾಂತ ಹಿರಿಯ ಪತ್ರಕರ್ತ, ಪದ್ಮಭೂಷಣ ಬ್ರಿಟಿಷ್‌ ಸಂಜಾತ ಭಾರತೀಯ ಪತ್ರಕರ್ತ ಮಾರ್ಕ್‌ ಟಲ್ಲಿ (90) ಅವರು ಭಾನುವಾರ ದೆಹಲಿಯಲ್ಲಿ ನಿಧನರಾದರು.

 

Read Full Story

More Trending News