ವೈವಾಹಿಕ ಜೀವನದಲ್ಲಿ ಪತ್ನಿ ಇಚ್ಚೆಗೆ ವಿರುದ್ಧ ಲೈಂಗಿಕ ಕ್ರಿಯೆ ಅತ್ಯಾಚಾರಕ್ಕೆ ಸಮ; ಹೈಕೋರ್ಟ್!

By Suvarna NewsFirst Published Aug 6, 2021, 9:11 PM IST
Highlights
  • ಪತ್ನಿ ಇಚ್ಚೆಗೆ ವಿರುದ್ಧ ಲೈಂಕಿಗ ಕ್ರಿಯೆ ನಡೆಸಿದರೆ ಅತ್ಯಾಚಾರ ಎಂದು ಪರಿಗಣನೆ
  • ವಿಚ್ಚೇದನಕ್ಕೆ ಈ ಕಾರಣವನ್ನು ಪರಿಗಣಿಸಲಿದೆ ಎಂದ ಕೇರಳ ಹೈಕೋರ್ಟ್
  • ಮಹತ್ವದ ತೀರ್ಪು ನೀಡಿದ ಕೇರಳ ಹೈಕೋರ್ಟ್

ಕೇರಳ(ಆ.06): ಐತಿಹಾಸಿಕ ತೀರ್ಪೊಂದು ಹೊರಬಿದ್ದಿದೆ. ಕೇರಳ ಹೈಕೋರ್ಟ್ ನೀಡಿದ ಆದೇಶ ಇದೀಗ ಕಾನೂನು ವ್ಯಾಪ್ತಿಯನ್ನು ವಿಸ್ತರಿಸಿದೆ. ವೈವಾಹಿಕ ಜೀವನದಲ್ಲಿ ಪತ್ನಿ ಇಚ್ಚೆಗೆ ವಿರುದ್ಧವಾಗಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದರೆ ಅತ್ಯಾಚಾರಕ್ಕೆ ಸಮ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ಈ ಕಾರಣವನ್ನು ವಿಚ್ಚೇದನಕ್ಕೆ ಪರಿಗಣಿಸಲಾಗುತ್ತದೆ ಎಂದಿದೆ.

ಅಕ್ರಮ ಸಂಬಂಧದ ವಿಡಿಯೋ ದೊಡ್ಡ ಪರದೆಯಲ್ಲಿ, ಮಹಿಳೆ ಆತ್ಮಹತ್ಯೆ

ವೈವಾಹಿಕ ಜೀವನದಲ್ಲಿ ಪತ್ನಿಯ ಸ್ವಾಯತತ್ತೆಯನ್ನು ಕಡೆಗಣಿಸುವ ಹಾಗೂ ಪತ್ನಿಯ ಇಚ್ಚೆಗೆ ವಿರುದ್ಧವಾಗಿ ನಡೆಸುವ ಲೈಂಗಿಕ ಕ್ರಿಯೆಯನ್ನು ವೈವಾಹಿಕ ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ. ಇಂತಹ ನಡವಳಿಕೆಗೆ ದಂಡ ವಿಧಿಸಲಾಗದಿದ್ದರೂ, ದೈಹಿಕ ಹಾಗೂ ಮಾನಸಿಕ ಚೌಕಟ್ಟಿನಲ್ಲಿ ಕ್ರೌರ್ಯದ ಅಡಿಯಲ್ಲಿ ವಿಚ್ಚೇದನಕ್ಕೆ ಪರಿಗಣಿಸಲಾಗುತ್ತದೆ ಎಂದು ಕೇರಳ ಹೈಕೋರ್ಟ್ ಹೇಳಿದೆ.

ನ್ಯಾಯಮೂರ್ತಿ ಎ ಮೊಹಮದ್ ಮುಸ್ತಾಕ್ ಮತ್ತು ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ವಿಭಾಗೀಯ ಪೀಠ ಈ ಕುರಿತು ಮಹತ್ವದ ಅದೇಶ ನೀಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ  ಸಲ್ಲಿಸಿದ್ದ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಈ ತೀರ್ಪು ನೀಡಿದೆ.

ಸೋಷಿಯಲ್‌ ಮೀಡಿಯಾದಲ್ಲಿ ರೊಮ್ಯಾಂಟಿಕ್‌ ಫೋಟೋ ಪೋಸ್ಟ್‌ ಮಾಡದ ಜೋಡಿಗಳೇ ಆದರ್ಶ ದಂಪತಿ!

ವೈದ್ಯನೊಬ್ಬ ತನ್ನ ಪತ್ನಿಯ ಜೊತೆ ಬಲವಂತವಾಗಿ ಲೈಂಗಿಕ ಕ್ರಿಯೆ ಬಳಸಿಕೊಂಡಿದ್ದ. ಪತ್ನಿಯ ತಾಯಿ ನಿಧನದಿಂದ ಆಘಾತಕ್ಕೊಳಗಾಗಿದ್ದ ಪತ್ನಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಈ ವೇಳೆ ವೈದ್ಯ ಪತ್ನಿಯನ್ನು ಬಲವಂತಾಗಿ ಹಾಗೂ ಅಸ್ವಾಭಾವಿಕ ಲೈಂಗಿಕವಾಗಿ ಬಳಸಿಕೊಂಡಿದ್ದ. ಇಷ್ಟೇ ಅಲ್ಲ ದಂಪತಿಗಳ ಪುತ್ರಿ ಮುಂದೆಯೇ ಸಂಭೋಗಿಸಲಾಗಿದೆ. ಇದರಿಂದ ತನ್ನ ಪತ್ನಿಯಿಂದ ತನಗೆ ವಿಚ್ಚೇದನ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಮನವಿ ಪುರಸ್ಕರಿಸಿದ ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

click me!