mango irrigated with milk ಹಣ್ಣುಗಳ ರಾಜ ಮಾವಿನ ಹಣ್ಣಿನ ಸೀಸನ್ ಆರಂಭವಾಗಿದೆ. ಇದರ ನಡುವೆ ದುಧಿಯಾ ಮಾಲ್ದಾ ಹೆಸರಿನ ತಳಿಯ ಮಾವಿನ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಈ ಮಾವು ನೀರಿನಿಂದಲ್ಲ.. ಹಾಲಿನಿಂದ ಬೆಳೆಸುತ್ತಾರೆ.
ಬೆಂಗಳೂರು (ಮೇ.2): ಸಣ್ಣ ಗೊರಟು..ಹೆಚ್ಚು ಹಣ್ಣು, ಅತೀ ತಿಳಿಯಾದ ಸಿಪ್ಪೆ ಹೊಂದಿರುವ ಈ ಮಾವಿನ ಹಣ್ಣಿನ ಟೇಸ್ಟ್ ನಿಮ್ಮನ್ನು ಹುಚ್ಚರನ್ನಾಗಿ ಮಾಡುವುದು ಖಂಡಿತ. ಇದು ಪಾಟ್ನಾದ ವಿಶ್ವ ಪ್ರಸಿದ್ಧ ದುಧಿಯಾ ಮಾಲ್ಡಾ ಮಾವಿನ ವಿಶೇಷತೆ. ಮಾವಿನ ಸೀಸನ್ ಆರಂಭವಾಗಿರುವ ಬಗ್ಗೆ ವಿಶ್ವ ಪ್ರಸಿದ್ಧ ದುಧಿಯಾ ಮಾಲ್ಡಾ ಮಾವಿನ ವಿಚಾರವನ್ನು ನೀವು ತಿಳಿದುಕೊಳ್ಳಬೇಕು. ಪಾಟ್ನಾದ ಧಿಘಾ ಏರಿಯಾದಲ್ಲಿ ಬೆಳೆಸುವ ಈ ಮಾವಿನ ಹಣ್ಣು ಈಗ ಏಳು ಸಮುದ್ರವನ್ನು ದಾಟುತ್ತಿವೆ. ಹಣ್ಣುಗಳ ರಾಜ ಮಾವಿನ ಎಲ್ಲಾ ತಳಿಗಳಲ್ಲಿ ದುಧಿಯಾ ಮಾಲ್ದಾ ಅತ್ಯಂತ ವಿಶೇಷ ಥಳಿ ಎನಿಸಿದೆ. ದೇಶದ ರಾಷ್ಟ್ರಪತಿ, ಪ್ರಧಾನಮಂತ್ರಿಗೆ ಮಾತ್ರವಲ್ಲ ದುಧಿಯಾ ಮಾವಿನ ಪಾರ್ಸಲ್‌ಗಳು ವಿದೇಶಕ್ಕೂ ರವಾನೆಯಾಗುತ್ತದೆ. ಪಾಟ್ನಾದ ಬಿಹಾರ ವಿದ್ಯಾಪೀಠದಲ್ಲಿರುವ ಮಾವಿನ ತೋಟದ ವ್ಯವಸ್ಥಾಪಕ ಪ್ರಮೋದ್ ಕುಮಾರ್ ಮಾತನಾಡಿ, ಒಂದು ಕಾಲದಲ್ಲಿ ಈ ಮಾವಿನ ತೋಟವು ಇಡೀ ದಿಘಾ ಪ್ರದೇಶದಲ್ಲಿತ್ತು. ಆದರೆ, ಇಂದು ಕಾಂಕ್ರಿಟ್ ಕಾಡುಗಳು ರಚನೆಯಾಗುತ್ತಿದೆ. ಮಾವಿನ ತೋಟಗಳ ಸಂಖ್ಯೆ ಕುಗ್ಗಿದೆ. ದಿಘಾದ ಕೆಲವೇ ಕೆಲವು ಪ್ರದೇಶಗಳಲ್ಲಿ ಮಾತ್ರವೇ ಈ ಹಣ್ಣು ಬೆಳೆಸುತ್ತಾರೆ ಎಂದಿದ್ದಾರೆ.
ಹಾಲು ಹಾಕಿ ಬೆಳೆಸುವ ಹಣ್ಣು: ಲಕ್ನೋದ ನವಾಬ್ ಫಿದಾ ಹುಸೇನ್ ಅವರು ಪಾಕಿಸ್ತಾನದ ಇಸ್ಲಾಮಾಬಾದ್‌ನ ಶಾ ಫೈಸಲ್ ಮಸೀದಿ ಪ್ರದೇಶದಿಂದ ಈ ಮಾವಿನ ಸಸಿಯನ್ನು ತಂದು ಪಾಟ್ನಾದ ದಿಘಾದಲ್ಲಿ ನೆಟ್ಟರು ಎಂದು ಪ್ರಮೋದ್ ಕುಮಾರ್ ಹೇಳುತ್ತಾರೆ. ವಿಶೇಷ ಏನಂದ್ರೆ ನವಾಬ್ ಸಾಹೇಬರು ಬಹಳಷ್ಟು ಹಸುಗಳನ್ನು ಸಾಕಿದ್ದರು. ಇವುಗಳ ಕೊಡುವ ಹಾಲನ್ನು ಮಾರಾಟ ಮಾಡುತ್ತಿದ್ದರು. ದಿನದ ಕೊನೆಯಲ್ಲಿ ಉಳಿಯುವ ಹಾಲನ್ನು ಅವರು ಈ ಮಾವಿನ ಸಸಿಗಳಿಗೆ ಹಾಕುತ್ತಿದ್ದರು.
ನವಾಬ್ ಸಾಹೇಬರು ಬಹಳಷ್ಟು ಹಸುಗಳನ್ನು ಹೊಂದಿದ್ದರು ಎಂದು ನಂಬಲಾಗಿದೆ, ಅವರು ಉಳಿದ ಹಾಲಿನೊಂದಿಗೆ ಸಸ್ಯಗಳಿಗೆ ನೀರುಣಿಸುತ್ತಿದ್ದರು, ಒಂದು ದಿನ ಮರ ಬೆಳೆದು ಹಣ್ಣುಗಳು ಹೊರಬಂದಾಗ ಹಾಲಿನಂತಹ ವಸ್ತುವು ಹೊರಹೊಮ್ಮಿತು. ಅದರ ನಂತರ ಅದನ್ನು ದುಧಿಯಾ ಮಾಲ್ಡಾ ಎಂದೇ ಕರೆಯಲಾಗಿತ್ತು. ಪ್ರಮೋದ್ ಕುಮಾರ್ ಪ್ರಕಾರ, ಕಳೆದ ಋತುವಿನಲ್ಲಿ 33 ದೇಶಗಳಿಗೆ ಮಾವು ರಫ್ತು ಕಂಡಿದೆ.
ದೇಶದ ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ಎಲ್ಲ ನಾಯಕರಿಗೂ ಇಲ್ಲಿಂದ ಮಾವಿನ ಹಣ್ಣುಗಳನ್ನು ಕಳುಹಿಸಲಾಗುತ್ತದೆ. ಇದಲ್ಲದೇ ಅಮೇರಿಕಾ, ಇಂಗ್ಲೆಂಡ್, ಜಪಾನ್, ದುಬೈ ಸೇರಿದಂತೆ ಎಲ್ಲ ದೇಶಗಳಲ್ಲೂ ಈ ಮಾವಿನ ಹಣ್ಣಿಗೆ ಅಪಾರ ಬೇಡಿಕೆ ಇದೆ. ಜೂನ್ ವೇಳೆಗೆ ಈ ಮಾವುಗಳು ಹಣ್ಣಾಗಿ ತಿನ್ನಲು ಸಾಧ್ಯವಾಗುತ್ತದೆ. ಪ್ರತಿ ಕೆಜಿಗೆ 100 ರೂಪಾಯಿಯಂತೆ ಈ ಮಾವನ್ನು ಮಾರಾಟ ಮಾಡಲಾಗುತ್ತದೆ.
ಮಾವಿನ ಹಣ್ಣು ತಿಂದ್ರೆ ಶುಗರ್ ಲೆವೆಲ್ ಹೆಚ್ಚಾಗುತ್ತಾ? ರಸಭರಿತ ಹಣ್ಣನ್ನು ತಿನ್ನೋ ಮುನ್ನ ಗೊತ್ತಿರ್ಲಿ
''ಈ ಹಿಂದೆ ರಾಜಧಾನಿಯ ಬೋರಿಂಗ್ ಕೆನಾಲ್ ರಸ್ತೆಯಿಂದ ದಿಘಾ ಅರಣ್ಯದವರೆಗೆ ಮಾವಿನ ವನವಿತ್ತು, ಆದರೆ ಈಗ ಈ ಭಾಗದಲ್ಲಿ ಕಾಂಕ್ರೀಟ್ ಕಾಡು ನಿರ್ಮಾಣವಾಗಿದೆ. ಇದರಿಂದ ಮಾವಿನ ಕಾಡು ಕುಗ್ಗಿ ಹೋಗಿದೆ. ಕೆಲವು ಸ್ಥಳಗಳಲ್ಲಿ ಮಾತ್ರ ಪ್ರಸ್ತುತವಾಗಿದೆ. ದುಧಿಯಾ ಮಾಲ್ಡಾ ಮಾವು ರಾಜಭವನ, ಬಿಹಾರ ವಿದ್ಯಾಪೀಠ, ಸೇಂಟ್ ಕ್ಸೇವಿಯರ್ ಕಾಲೇಜು ಮತ್ತು ಕುರ್ಜಿ ಕುಟುಂಬ ಆಸ್ಪತ್ರೆಯಲ್ಲಿ ಕಂಡುಬರುತ್ತದೆ. ಬಿಹಾರ ವಿದ್ಯಾಪೀಠದಲ್ಲಿ ಸುಮಾರು 50 ದುಧಿಯಾ ಮಾಲ್ಡಾ ಮರಗಳಿವೆ, ಆದರೆ ಪಾಟ್ನಾದಲ್ಲಿ ಸುಮಾರು 1,000 ಮರಗಳು ಇನ್ನೂ ಉಳಿದಿವೆ. ಅದರಲ್ಲಿ ಅನೇಕ ಮರಗಳು ಆ ತುಂಬಾ ಹಳೆಯದವಾಗಿವೆ ಎನ್ನುತ್ತಾರೆ. ದುಧಿಯಾ ಮಾವು ಬಿಳಿಯಾಗಿ ಕಾಣುತ್ತದೆ. ಎಲ್ಲಾ ಮಾವುಗಳನ್ನು ಒಂದೇ ಸ್ಥಳದಲ್ಲಿ ಇರಿಸಿದರೆ, ಅವುಗಳಿಗಿಂತ ಬಿಳಿಯಾಗಿ ಕಾಣುವ ಹಣ್ಣು ದುಧಿಯಾ ಮಾಲ್ಡಾ.
ಮನೆ ಮನೆಗೆ ತಾಜಾ ಮಾವು ತಲುಪಿಸಲು ಸಿದ್ದವಾದ ಭಾರತೀಯ ಅಂಚೆ ಇಲಾಖೆ! ಆರ್ಡರ್ ಮಾಡೋದು ಹೇಗೆ?