ಹುಲಿಗಳ ಭೀಕರ ಕಾದಾಟ... ವಿಡಿಯೋ ವೈರಲ್

By Anusha KbFirst Published Nov 20, 2022, 3:45 PM IST
Highlights

ಹುಲಿಗಳೆರಡು ಭೀಕರವಾಗಿ ಕಾದಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. one_earth__one_life ಹೆಸರಿನ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದ್ದು, 50 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.

ಹುಲಿಗಳೆರಡು ಭೀಕರವಾಗಿ ಕಾದಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. one_earth__one_life ಹೆಸರಿನ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದ್ದು, 50 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಎರಡು ಹುಲಿಗಳ ಭಯಾನಕ ಕದನ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಆದರೆ ಈ ಘಟನೆ ಎಲ್ಲಿ ಸೆರೆ ಹಿಡಿಯಲಾಗಿದೆ ಎಂಬ ಬಗ್ಗೆ ವಿಡಿಯೋದಲ್ಲಿ ಉಲ್ಲೇಖವಿಲ್ಲ. 

ನೀವು ಗೂಳಿಗಳ, ಶ್ವಾನಗಳ, ಕಾದಾಟವನ್ನು ನೋಡಿರಬಹುದು ಆದರೆ ಎರಡು ಹುಲಿಗಳು ಕಾದಾಡುವುದನ್ನು(Tiger Fighting) ನೋಡಲು ಸಿಗುವುದು ಬಲು ಅಪರೂಪ. ಆದರೂ ಇಲ್ಲೊಂದು ಕಡೆ ಎರಡು ವ್ಯಾಘ್ರಗಳು ಭೀಕರವಾಗಿ ಕಾದಾಡುತ್ತಿರುವುದು ಕ್ಯಾಮರಾ ಕಣ್ಣಲ್ಲಿ ಸೆರೆ ಆಗಿವೆ. ಹೇಗೆ ಹುಲಿಗಳೆರಡು ಒಂದರ ಮೇಲೆ ಒಂದು ಮುಗಿ ಬೀಳುತ್ತಾ ಭಯಾನಕವಾಗಿ ಕಾದಾಡುತ್ತಿವೆ ಎಂಬುದನ್ನು ಈ ವಿಡಿಯೋ ತೋರಿಸುತ್ತಿದೆ. ಹಲವು ಸೆಕೆಂಡುಗಳವರೆಗೆ ಈ ಹುಲಿಗಳು ಭೀಕರವಾಗಿ ಕಾದಾಡಿ ನಂತರ ದೂರ ಸರಿದು ಹೋಗಿವೆ. ಯಾರೋ ಪ್ರವಾಸಿಗರು ಸಫಾರಿ ಜೀಪ್‌ನಲ್ಲಿ(Saffari jeep ಕುಳಿತುಕೊಂಡು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಕಾಮೆಂಟ್ ಮಾಡಿದ್ದು, ಇದು ತುಂಬಾ ಅಪರೂಪದ ದೃಶ್ಯ ಹಿಂದೆಂದೂ ಇಂತಹ ದೃಶ್ಯ ನೋಡಿರಲಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅವುಗಳ ಘರ್ಜನೆ ನನ್ನ ಮೈ ನವಿರೇಳುವಂತೆ ಮಾಡಿತ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 


ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ಸಾಕಷ್ಟು ವೀಡಿಯೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಕೆಲ ದಿನಗಳ ಹಿಂದೆ ತಬ್ಬಲಿ ಹುಲಿಮರಿಗೆ ಚಿಂಪಾಂಜಿಯೊಂದು ಆರೈಕೆ ಮಾಡುತ್ತಿರುವ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿತ್ತು.  ಅಮೆರಿಕಾದ ದಕ್ಷಿಣ ಕೆರೊಲಿನಾದ ಮಿರ್ಟಲ್ ಬೀಚ್ ಸಫಾರಿಯಲ್ಲಿ ಕಂಡು ಬಂದ ದೃಶ್ಯ ಇದಾಗಿದ್ದು, ಚಿಂಪಾಜಿಯೊಂದು ತನ್ನದಲ್ಲದ ಹುಲಿಯ ಮರಿಗಳನ್ನು ತನ್ನ ಮಕ್ಕಳಂತೆ ಆರೈಕೆ ಮಾಡುತ್ತಿದೆ. ತಾಯಿ ತೊರೆದ ಮುದ್ದಾದ ಮರಿಗಳಿಗೆ ಈ ಚಿಂಪಾಜಿ ಬಾಟಲ್ ಹಾಲು ನೀಡುತ್ತ ಮಡಿಲಲ್ಲಿ ಮಲಗಿಸಿಕೊಂಡು ಎತ್ತಿ ಆಡಿಸುತ್ತಾ ಮುದ್ದಾಡುತ್ತಿದೆ. ಹುಲಿ ಮರಿಗಳು ಕೂಡ ಈ ಚಿಂಪಾಜಿಯಲ್ಲೇ ತಮ್ಮ ತಾಯಿಯನ್ನು ಕಾಣುತ್ತಿವೆ. 

ಹುಲಿ ರಸ್ತೆ ದಾಟಲು ಟ್ರಾಫಿಕ್ ನಿಲ್ಲಿಸಿದ ಪೊಲೀಸ್ : ವಿಡಿಯೋ ವೈರಲ್‌

ಹೆಣ್ಣು ಹುಲಿಗಳು ಕೆಲವೊಮ್ಮೆ ತಮ್ಮ ಮರಿಗಳನ್ನು ತ್ಯಜಿಸುತ್ತವೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಎಲ್ಲಾ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಅದರ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಕಿರುಪುಸ್ತಕದಲ್ಲಿ ಪಟ್ಟಿ ಮಾಡಿರುವಂತೆ ಇದಕ್ಕೆ ಹಲವು ಕಾರಣಗಳಿವೆಯಂತೆ. ತಾಯಿ ಹುಲಿಯ ಸಾವಿನ ಹೊರತಾಗಿಯೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (National Tiger Conservation Authority) ಮಾರ್ಗಸೂಚಿಗಳ ಪ್ರಕಾರ, ಮರಿಗಳು ದುರ್ಬಲವಾಗಿದ್ದರೆ, ಅಸಮರ್ಥವಾಗಿದ್ದರೆ, ಗಾಯಗೊಂಡರೆ ಅಥವಾ ಅನಾರೋಗ್ಯದಿಂದ ಕೂಡಿದ್ದರೆ ಕೂಡ ತಾಯಿ ಹುಲಿಗಳು ಅವುಗಳನ್ನು ಬಿಟ್ಟು ಹೊರಟು ಹೋಗುವುದಂತೆ. ಕೆಲವು ಹೆಣ್ಣು ಹುಲಿಗಳು ಗಾಯದಿಂದಾಗಿ ಮರಿಗಳಿಗೆ ಆಹಾರ ನೀಡಲು ತಮ್ಮ ಅಸಮರ್ಥತೆಯಿಂದಾಗಿ ತಮ್ಮ ಮರಿಗಳನ್ನು ಬಿಡುತ್ತವೆಯಂತೆ. 

ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಅಂದಾಜು ಶೇ.18-20 ರಷ್ಟುಹೆಚ್ಚಳವಾಗಿದ್ದು, ಒಟ್ಟಾರೆ ಸಂಖ್ಯೆ 630ಕ್ಕೆ ಏರಿಕೆಯಾಗಿರುವ ಸಾಧ್ಯತೆಗಳಿವೆ. ಮೊದಲ ಸ್ಥಾನದಲ್ಲಿರುವ ಮಧ್ಯಪ್ರದೇಶಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಹುಲಿಗಳ ಸಾವು ಕಡಿಮೆ ಇದೆ. ಹೀಗಾಗಿ 2022ರ ಹುಲಿ ಗಣತಿಯಲ್ಲಿ ಕರ್ನಾಟಕ ಮತ್ತೆ ಮೊದಲ ಸ್ಥಾನಕ್ಕೇರಿ ‘ಹುಲಿಗಳ ರಾಜಧಾನಿ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ತಜ್ಞರು ವಿಶ್ವಾಸ ಹೊಂದಿದ್ದಾರೆ

.10 ವರ್ಷದಲ್ಲಿ ದೇಶದಲ್ಲಿ 1 ಸಾವಿರಕ್ಕೂ ಹೆಚ್ಚು ಹುಲಿಗಳ ಸಾವು..!

ಪ್ರತಿ ನಾಲ್ಕು ವರ್ಷಕ್ಕೊಮ್ಮೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ದೇಶಾದ್ಯಂತ ಹುಲಿಗಳ ಗಣತಿ ನಡೆಸುತ್ತದೆ. 2010ರ ಗಣತಿಯಲ್ಲಿ ರಾಜ್ಯದಲ್ಲಿ 308 ಹುಲಿಗಳು ಮತ್ತು 2014ರ ಗಣತಿಯಲ್ಲಿ 406 ಹುಲಿಗಳು ಪತ್ತೆಯಾಗಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿತ್ತು. ಆದರೆ, 2018ರ ಗಣತಿಯಲ್ಲಿ ಕರ್ನಾಟಕದಲ್ಲಿ 524, ಮಧ್ಯಪ್ರದೇಶದಲ್ಲಿ 526 ಹುಲಿಗಳು ಪತ್ತೆಯಾಗಿದ್ದು, ಕೇವಲ ಎರಡು ಹುಲಿಗಳ ಅಂತರದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ ಕೈತಪ್ಪಿತ್ತು.
 

click me!