ಬಡವರು ಹೆಚ್ಚು ಮಕ್ಕಳ ಹೆರುತ್ತಾರೆ, ಆದ್ರೆ ಮುಸ್ಲಿಮರನ್ನೇ ಗುರಿ ಮಾಡೋದು ಏಕೆ : ಖರ್ಗೆ

By Kannadaprabha News  |  First Published May 1, 2024, 9:03 AM IST

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಎಲ್ಲರ ಸಂಪತ್ತು ಕಸಿದು, ಹೆಚ್ಚು ಮಕ್ಕಳ ಹೆರುವವರಿಗೆ ನೀಡುತ್ತಾರೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.


ಜಂಜ್ಗಿರ್‌-ಚಂಪಾ (ಛತ್ತೀಸ್‌ಗಢ): ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಎಲ್ಲರ ಸಂಪತ್ತು ಕಸಿದು, ಹೆಚ್ಚು ಮಕ್ಕಳ ಹೆರುವವರಿಗೆ ನೀಡುತ್ತಾರೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ. ಬಡವರು ಹೆಚ್ಚು ಮಕ್ಕಳನ್ನು ಹೆರುತ್ತಾರೆ. ಆದರೆ ಮೋದಿ ಕೇವಲ ಮುಸ್ಲಿಮರನ್ನೇ ಏಕೆ ಗುರಿ ಮಾಡುತ್ತಾರೆ ಎಂದು ಪ್ರಶ್ನಿಸುತ್ತಾರೆ.

ಛತ್ತೀಸ್‌ಗಢದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು,‘ಬಡವರು ಆಸ್ತಿ ಇಲ್ಲದ ಕಾರಣ ಹೆಚ್ಚು ಮಕ್ಕಳನ್ನು ಹೊಂದುತ್ತಾರೆ. ಆದರೆ ಪ್ರಧಾನಿ ಮೋದಿ ಮಾತ್ರ ಏಕೆ ಮುಸ್ಲಿಮರನ್ನು ಗುರಿ ಮಾಡುತ್ತಾರೆ? ಅವರು ಚುನಾವಣೆ ಬಂದಾಗ ಈ ರೀತಿಯ ಹಿಂದೂ ಮುಸ್ಲಿಂ ವಿಷಯವನ್ನು ತೆಗೆಯುತ್ತಾರೆ. ಅವರಿಗೆ ಎಲ್ಲರನ್ನು ಒಗ್ಗೂಡಿಸಿಕೊಂಡು ದೇಶ ನಡೆಸಲು ಆಗುವುದಿಲ್ಲ’ ಎಂದು ಕಿಡಿಕಾರಿದರು.

Tap to resize

Latest Videos

55 ವರ್ಷದ ಆಡಳಿತದಲ್ಲಿ ಕಾಂಗ್ರೆಸ್‌ ಮಂಗಳಸೂತ್ರಕ್ಕೆ ಕೈ ಹಾಕಿಲ್ಲ: ಖರ್ಗೆ

ಜಂಜ್ಗೀರ್‌-ಚಂಪಾ (ಛತ್ತೀಸ್‌ಗಢ): ಕಾಂಗ್ರೆಸ್‌ 55 ವರ್ಷ ಆಡಳಿತ ನಡೆಸಿದೆ. ಆದರೆ ಎಂದೂ ಮಹಿಳೆಯರ ಮಂಗಳಸೂತ್ರವನ್ನು ಕಿತ್ತುಕೊಂಡಿಲ್ಲ. ಇ.ಡಿ., ಐಟಿ ಅಧಿಕಾರವನ್ನು ದುರುಪಯೋಗ ಪಡೆಸಿಕೊಂಡಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಹಿಳೆಯರ ಮಂಗಳಸೂತ್ರ ಸೇರಿದಂತೆ ಜನರ ಸಂಪತ್ತನ್ನು ವಶಪಡಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ತಿರುಗೇಟು ನೀಡಿದರು.ಇಲ್ಲಿನ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಇಂಡಿಯಾ ಕೂಟ ಬಹುಮತ ಪಡೆಯುತ್ತದೆ ಎಂಬ ಹತಾಶೆಯಿಂದ ಪ್ರಧಾನಿ ಮೋದಿ ಕಾಂಗ್ರೆಸ್‌ ಪಕ್ಷದ ಮೇಲೆ ಇಲ್ಲಸಲ್ಲದ್ದನ್ನು ಹೇಳಿ ಮತದಾರರ ತಲೆ ಕೆಡುಸುತ್ತಿದ್ದಾರೆ ಎಂದು ಆಗ್ರಹಿಸಿದರು.

ಪ್ರಧಾನಿ ಮೋದಿಗೆ ಮಕ್ಕಳಿಲ್ಲ ಅಂದ್ರೆ ನಾವೇನು ಮಾಡೋಣ: ಮಲ್ಲಿಕಾರ್ಜುನ ಖರ್ಗೆ

ಬಿಜೆಪಿ 400 ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಪ್ರಯತ್ನಿಸುತ್ತಿರುವುದು ಬಡವರ ಕಲ್ಯಾಣಕ್ಕಾಗಿ ಅಲ್ಲ. ಅವರ ಹಕ್ಕುಗಳನ್ನು ಕಸಿದುಕೊಳ್ಳಲು ಎಂದು ಆರೋಪಿಸಿದರು.

ರಾಹುಲ್‌ ಗಾಂಧಿ, ಪ್ರಿಯಾಂಕಾ ಸ್ಪರ್ಧೆಗೆ ಕಾಂಗ್ರೆಸ್‌ ಸಮಿತಿ ಪಟ್ಟು

click me!