60 ಚಾನೆಲ್‌, 12ಕ್ಕೂ ಅಧಿಕ ಭಾಷೆ.. ಪ್ರಸಾರ ಭಾರತಿಯಿಂದ ಒಟಿಟಿ ಅನಾವರಣ, ನೆಟ್‌ಫ್ಲಿಕ್ಸ್‌-ಜಿಯೋಗೆ ಟಕ್ಕರ್‌ ಕೊಡುತ್ತಾ?

Published : Nov 21, 2024, 06:32 PM ISTUpdated : Nov 21, 2024, 06:35 PM IST
60 ಚಾನೆಲ್‌, 12ಕ್ಕೂ ಅಧಿಕ ಭಾಷೆ.. ಪ್ರಸಾರ ಭಾರತಿಯಿಂದ ಒಟಿಟಿ ಅನಾವರಣ, ನೆಟ್‌ಫ್ಲಿಕ್ಸ್‌-ಜಿಯೋಗೆ ಟಕ್ಕರ್‌ ಕೊಡುತ್ತಾ?

ಸಾರಾಂಶ

ಗೋವಾದಲ್ಲಿ ನಡೆದ 55 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಸಾರ ಭಾರತಿ ತನ್ನ OTT ಪ್ಲಾಟ್‌ಫಾರ್ಮ್ 'ವೇವ್ಸ್' ಅನ್ನು ಅನಾವರಣಗೊಳಿಸಿದೆ. ರಾಮಾಯಣ, ಮಹಾಭಾರತದಂತಹ ಕ್ಲಾಸಿಕ್ ಕಾರ್ಯಕ್ರಮಗಳ ಜೊತೆಗೆ ಸುದ್ದಿ, ಸಾಕ್ಷ್ಯಚಿತ್ರಗಳು ಮತ್ತು ಹಲವಾರು ಭಾಷೆಗಳಲ್ಲಿ ವಿಷಯಗಳನ್ನು ಒಳಗೊಂಡಿದೆ.

ಪಣಜಿ (ನ.21): ಗೋವಾದ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಅವರು ಗುರುವಾರ ಗೋವಾದಲ್ಲಿ ನಡೆದ 55 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಉದ್ಘಾಟನಾ ಸಮಾರಂಭದಲ್ಲಿ ಸರ್ಕಾರಿ ವಾಹಿನಿ ಪ್ರಸಾರ ಭಾರತಿಯ OTT ಪ್ಲಾಟ್‌ಫಾರ್ಮ್ 'ವೇವ್ಸ್' ಅನ್ನು ಅನಾವರಣ ಮಾಡಿದ್ದಾರೆ. ಇದರೊಂದಿಗೆ ಭಾರತದ ಐಕಾನಿಕ್ ಪಬ್ಲಿಕ್ ಬ್ರಾಡ್‌ಕಾಸ್ಟರ್ ದೂರದರ್ಶನ ಒಟಿಟಿ ವ್ಯಾಪ್ತಿಗೆ ಕಾಲಿಟ್ಟಿದೆ. ಪಿಐಬಿ ಹೇಳಿಕೆಯ ಪ್ರಕಾರ, ಡಿಡಿಯಲ್ಲಿ ಪ್ರಸಾರವಾದ ಕ್ಲಾಸಿಕ್‌ ಕಂಟೆಂಟ್‌ಗಳು ಸಮಕಾಲೀಕ ಕಾರ್ಯಕ್ರಗಳ ಸಮೃದ್ಧ ಮಿಶ್ರಣವನ್ನು ಒಟಿಟಿ ಒಳಗೊಂಡಿರಲಿದೆ. ಆಧುನಿಕ ಡಿಜಿಟಲ್‌ ಟ್ರೆಂಡ್‌ಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಡಿಡಿಯೊಂದಿಗಿನ ಹಳೆಯ ನೆನಪುಗಳನ್ನು ಪುನರುಜ್ಜೀವನಗೊಳಿಸುವ ಗುರಿಯನ್ನೂ ಇದು ಹೊಂದಿದೆ. ವೇವ್ಸ್‌ ಒಟಿಟಿಯಲ್ಲಿ ಡಿಡಿಯಲ್ಲಿ ಪ್ರಸಾರವಾಗಿ ದಾಖಲೆ ಬರೆದಿದ್ದ, ರಾಮಾಯಣ, ಮಹಾಭಾರತ, ಶಕ್ತಿಮಾನ್‌ ಹಾಗೂ ಹಮ್‌ ಲೋಗ್‌ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ.

ಅದರೊಂದಿಗೆ ನ್ಯೂಸ್‌, ಡಾಕ್ಯುಮೆಂಟರಿಗಳು ಹಾಗೂ ಸ್ಥಳೀಯ ವಿಚಾರಗಳನ್ನು ಒಟಿಸಿ ನೀಡಲಿದೆ. ಹಿಂದಿ, ಇಂಗ್ಲಿಷ್, ಬೆಂಗಾಲಿ, ಮರಾಠಿ, ಕನ್ನಡ, ಮಲಯಾಳಂ, ತೆಲುಗು, ತಮಿಳು, ಗುಜರಾತಿ, ಪಂಜಾಬಿ, ಅಸ್ಸಾಮಿ ಮುಂತಾದ 12 ಕ್ಕೂ ಹೆಚ್ಚು ಭಾಷೆಗಳಲ್ಲಿ ಅಂತರರಾಷ್ಟ್ರೀಯ ದೃಷ್ಟಿಕೋನದೊಂದಿಗೆ ಭಾರತೀಯ ಸಂಸ್ಕೃತಿಯನ್ನು ಒಳಗೊಳ್ಳುವ ಅಂತರ್ಗತ ಭಾರತದ ಕಥೆಗಳೊಂದಿಗೆ 'ವೇವ್ಸ್' ತನ್ನ ದೊಡ್ಡ ಸಂಗ್ರಾಹಕ OTT ಆಗಿ ಪ್ರವೇಶಿಸಿದೆ.

ಒಟ್ಟಾರೆಯಾಗಿ 10 ಜಾನರ್‌ಗಳ ಇನ್ಫೋಎಂಟರ್‌ಟೇನ್‌ಮೆಂಟ್‌ ಇದರಲ್ಲಿ ಇದರೊಂದಿಗೆ ಅದರೊಂದಿಗೆ ವಿಡಿಯೋ ಆನ್‌ ಡಿಮಾಂಟ್‌, ಫ್ರೀ ಟು ಪ್ಲೇ ಗೇಮಿಂಗ್‌, ರೇಡಿಯೋ ಸ್ಟ್ರೀಮಿಂಗ್‌, ಲೈವ್‌ ಟಿವಿ ಸ್ಟ್ರೀಮಿಂಗ್‌, 65 ಲೈನ್‌ ಚಾನೆಲ್‌ಗಳು, ಹಲವಾರು ಆಪ್‌ ಇಂಟಿಗ್ರೇಷನ್‌ಗಳು, ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ಮೂಲಕ ಆನ್‌ಲೈನ್ ಶಾಪಿಂಗ್ ಬೆಂಬಲಿತ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಕೂಡ ಇದರಲ್ಲಿ ಇರಲಿದೆ.

ರಾಷ್ಟ್ರೀಯ ರಚನೆಕಾರ ಪ್ರಶಸ್ತಿ ಪುರಸ್ಕೃತರಾದ ಕಾಮಿಯಾ ಜಾನಿ, ಆರ್‌ಜೆ ರೌನಾಕ್, ಶ್ರದ್ಧಾ ಶರ್ಮಾ ಮತ್ತು ಇತರರು ಸೇರಿದಂತೆ ವಿಷಯ ರಚನೆಕಾರರಿಗೆ ವೇವ್ಸ್ ತನ್ನ ವೇದಿಕೆಯನ್ನು ನೀಡುತ್ತದೆ. ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್‌ಟಿಐಐ), ಅನ್ನಪೂರ್ಣ ಮತ್ತು ಎಎಎಫ್‌ಟಿಯಂತಹ ಚಲನಚಿತ್ರ ಮತ್ತು ಮಾಧ್ಯಮ ಕಾಲೇಜುಗಳ ವಿದ್ಯಾರ್ಥಿ ಪದವಿ ಚಲನಚಿತ್ರಗಳಿಗೆ ಇದು ತನ್ನ ಪೋರ್ಟಲ್ ಅನ್ನು ತೆರೆದಿದೆ.

Rameshwaram Cafe To Chumbak: ಗಂಡ-ಹೆಂಡ್ತಿ ಸೇರಿ ಆರಂಭಿಸಿದ ದೇಶದ 10 ಸ್ಟಾರ್ಟ್‌ಅಪ್‌ಗಳು!

ವೇದಿಕೆಯು ಅಯೋಧ್ಯೆಯಿಂದ ಪ್ರಭು ಶ್ರೀರಾಮ್ ಲಲ್ಲಾ ಆರತಿ ಲೈವ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ಮನ್ ಕಿ ಬಾತ್‌ನಂತಹ ಲೈವ್ ಈವೆಂಟ್‌ಗಳನ್ನು ಒಳಗೊಂಡಿದೆ.
WAVES ಅನಿಮೇಷನ್ ಕಾರ್ಯಕ್ರಮಗಳಾದ ಡಾಗ್ಗಿ ಅಡ್ವೆಂಚರ್, ಚೋಟಾ ಭೀಮ್, ತೆನಾಲಿರಾಮ್, ಅಕ್ಬರ್ ಬೀರ್ಬಲ್ ಮತ್ತು ಕೃಷ್ಣ ಜಂಪ್, ಫ್ರೂಟ್ ಚೆಫ್, ರಾಮ್ ದಿ ಯೋಧ, ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಂತಹ ಆಟಗಳನ್ನು ಸಹ ಹೊಂದಿದೆ.

ಭಾರತದ ಸೆಲಿಬ್ರಿಟಿಗಳ ಅತ್ಯಂತ ಶಾಕಿಂಗ್‌ ಅನೈತಿಕ ಸಂಬಂಧಗಳು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Viral Video: 62 ವರ್ಷದ ಹಿರಿಯ ನಟನನ್ನು ಮದುವೆಯಾದ್ರಾ ಬಾಲಿವುಡ್‌ ಬ್ಯೂಟಿ ಮಹಿಮಾ ಚೌಧರಿ?
ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ